ಹುಮನಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 35/2020 ಕಲಂ 279,337,304 (A) IPC R/w 177 IMV Act

ದಿನಾಂಕ: 23/05/2020 ರಂದು 2200 ಗಂಟೆಗೆ ಫಿರ್ಯಾದಿ ಶ್ರೀ ಜಗನ್ನಾಥ ತಂದೆ ಶಿವರಾಯ ಫಾತ್ಮಾಪೂರ ಸಾ: ಖಾನಾಪೂರ ತಾ: ಚಿಂಚೋಳಿ ಜಿಲ್ಲಾ: ಕಲಬುರಗಿ ಇವರು ಪೊಲೀಸ ಠಾಣೆಗೆ ಹಾಜರಾಗಿ ನೀಡಿದ ಸಾರಾಂಶವೆನೆಂದರೆ ದಿನಾಂಕ: 23/05/2020 ರಂದು ಮಧ್ಯಾಹ್ನ ನಮ್ಮ ಭಾವ ಅರ್ಜುನ ತಂದೆ ಶರಣಪ್ಪಾ ಮೋಳಕೇರಾ ಸಾ: ಮುಚಳಂಬ ತಾ: ಬಸವಕಲ್ಯಾಣ ರವರು ತನ್ನ ಮೋಟಾರ್ ಸೈಕಲ್ ಸಂಖ್ಯೆ: MH-14/JC-0216. ನೇದರ ಮೇಲೆ ಜೋಳ ಮತ್ತು ಬೆಳೆಗಳನ್ನು ತೆಗೆದುಕೊಂಡು ಮುಚಳಂಬ ಗ್ರಾಮದಿಂದ ನಮ್ಮೂರ ಖಾನಾಪೂರಕ್ಕೆ ಬಂದು ಜೋಳ ಬೆಳೆಗಳನ್ನು ನಮಗೆ ಕೊಟ್ಟು ಸಾಯಂಕಾಲ ನನ್ನ ಇಬ್ಬರೂ ಮಕ್ಕಳಾದ ಕಲ್ಯಾಣಿ ವಯ: 05 ವರ್ಷ ಮತ್ತು ಪ್ರದೀಪ ವಯ: 03 ರವರುಗಳಿಗೆ ತನ್ನ ಮೋಟಾರ್ ಸೈಕಲ್ ಮೇಲೆ ಕೂಡಿಸಿಕೊಂಡು ನಮ್ಮೂರದಿಂದ ಮಚಳಂಬ ಕಡೆಗೆ ಬಂದಿರುತ್ತಾನೆ. ದಿನಾಂಕ: 23/05/2020 ರಂದು ರಾತ್ರಿ ನಾನು ಮನೆಯಲ್ಲಿದ್ದಾಗ ರಮೇಶ ತಂದೆ ಶಿವರಾಜ ಕಲ್ಲೂರ ಸಾ: ಹುಮನಾಬಾದ ರವರು ನಮ್ಮ ಭಾವ ಅರ್ಜುನ ಇವನ ಫೋನದಿಂದ ನನಗೆ ಫೋನ್ ಮಾಡಿ ತಿಳಿಸಿದೇನೆಂದರೆ ಹುಮನಾಬಾದನ ಬಸ್ ಡಿಪೋ ಹತ್ತಿರ ರೋಡಿನ ಮೇಲೆ ರಸ್ತೆ ಅಪಘಾತದಲ್ಲಿ ನಿಮ್ಮ ಮಗ ಕಲ್ಯಾಣಿ ಇವನು ಮೃತ ಪಟ್ಟಿದ್ದು, ಇನ್ನೋಬ್ಬ ಮಗ ಪ್ರದೀಪ ಮತ್ತು ಅರ್ಜುನ ರವರುಗಳು ಗಾಯಗೊಂಡಿದ್ದು ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ತಿಳಿಸಿದ ಕೂಡಲೇ ನಾನು ನಮ್ಮ ಸಂಬಂಧಿಕರೊಂದಿಗೆ ಮನೆಯಿಂದ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಬಂದು ನನ್ನ ಮಗ ಕಲ್ಯಾಣಿ ಇವನ ಮೃತ ದೇಹವನ್ನು ನೋಡಿ ಅಲ್ಲೇ ಇದ್ದ ರಮೇಶ ಕಲ್ಲೂರ ರವರಿಗೆ ಕೇಳಲಾಗಿ ಅವರು ತಿಳಿಸಿದೇನೆಂದರೆ ಇಂದು ಸಾಯಂಕಾಲ ನಾನು ಮತ್ತು ನಮ್ಮೂರ ವಿನೋದ ತಾಳಂಪಳ್ಳಿ ಇಬ್ಬರೂ ವಾಯು ವಿವಾರ (ವಾಕಿಂಗ್) ಮಾಡುತ್ತಾ ಮನೆಯಿಂದ ಮಾಣಿಕ ನಗರಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ರಾತ್ರಿ 7:00 ಗಂಟೆಯ ಸುಮಾರಿಗೆ ಬಸ್ ಡಿಪೋದ ಹತ್ತಿರ ಬಂದಾಗ ಅದೇ ಸಮಯಕ್ಕೆ ಹುಮನಾಬಾದ ಕಡೆಯಿಂದ ಅರ್ಜುನ ಇವನು ತನ್ನ ಮೋಟಾರ್ ಸೈಕಲ್ ಸಂಖ್ಯೆ: MH-14/JC-0216. ನೇದರ ಪೆಟ್ರೋಲ್ ಟ್ಯಾಂಕ್ ಮೇಲೆ ನಿಮ್ಮ ಇಬ್ಬರೂ ಮಕ್ಕಳಾದ ಕಲ್ಯಾಣಿ ಮತ್ತು ಪ್ರದೀಪ ಇವರಿಗೆ ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಟಾಟಾ ಏಸ್ ವಾಹನಕ್ಕೆ ಓವರ್ ಟೆಕ್ ಮಾಡಲು ಹೋಗಿ ಎದುರಿನಿಂದ ಅಂದರೆ ಮಾಣಿಕ ನಗರ ಕಡೆಯಿಂದ ರೋಡಿನ ಬದಿಯಲ್ಲಿ ಬರುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದು ಅಪಾಘತ ಪಡೆಸಿ ತನ್ನ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾರೆ. ನಂತರ ನಾನು ಹೋಗಿ ನೋಡಲಾಗಿ ಕಲ್ಯಾಣಿ ಇವನಿಗೆ ಹಣೆಗೆ ತೀವ್ರ ರಕ್ತಗಾಯ ಮತ್ತು ಗಟಾಯಿಗೆ ತೀವ್ರ ಗುಪ್ತಗಾಯ ಆಗಿರುತ್ತದೆ. ಪ್ರದೀಪ ಇವನಿಗೆ ನೋಡಲಾಗಿ ಹಣೆಯ ಎಡಗಡೆಗೆ ತರಚಿದ ಗಾಯ ಮತ್ತು ತಲೆಗೆ ಗುಪ್ತಗಾಯ ಆಗಿರುತ್ತದೆ. ಅರ್ಜುನ ಇವನಿಗೆ ನೋಡಲಾಗಿ ತಲೆಗೆ ಗುಪ್ತಗಾಯ ಮತ್ತು ಎಡಗೈಗೆ ತರಚಿದ ಗಾಯಗಳು ಆಗಿರುತ್ತವೆ. ನಂತರ ಮೂರು ಜನ ಗಾಯಾಳುಗಳಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು 7:15 ಗಂಟೆಯ ಸುಮಾರಿಗೆ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿದಾಗ ಚಿಕಿತ್ಸೆ ಕಾಲಕ್ಕೆ ಕಲ್ಯಾಣಿ ಇವನು ಮೃತ ಪಟ್ಟಿರುತ್ತಾನೆ ಕಲ್ಯಾಣಿ ಮತ್ತು ಪ್ರದೀಪ ರವರುಗಳ ಹೆಸರು ಮತ್ತು ವಿಳಾಸವನ್ನು ಅರ್ಜುನ ಅವನಿಂದ ಕೇಳಿ ತಿಳಿದುಕೊಂಡಿರುತ್ತೇನೆ ಅಂತ ತಿಳಿಸಿರುತ್ತಾರೆ. ಕಾರಣ ಈ ಬಗ್ಗೆ ಮೋಟಾರ್ ಸೈಕಲ್ ಸಂಖ್ಯೆ: MH-14/JC-0216. ನೇದರ ಚಾಲಕ ಅರ್ಜುನ ತಂದೆ ಶರಣಪ್ಪಾ ಮೋಳಕೇರಾ ಸಾ: ಮುಚಳಂಬ ತಾ: ಬಸವಕಲ್ಯಾಣ ಇವನ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಕೊಳ್ಳಳು ವಿನಂತಿ ಇರುತ್ತದೆ ಅಂತ ಕೊಟ್ಟ ದೂರನಿ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

ಔರಾದ (ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 48/2020 ಕಲಂ  143 147 148 341 324 504 ಜೊತೆ 149 ಐಪಿಸಿ ಮತ್ತು ಕಲಂ 3(1)(r) SC/ST Act 1989

                         ದಿನಾಂಕ 23-05-2020 ರಂದು 0045 ಗಂಟೆಗೆ ಫಿರ್ಯಾದಿ ಸಂತೋಷ ತಂದೆ ಶೇಷೆರಾವ ರಾಠೋಡ ಸಾ:ಎಕಂಬಾ ರವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದು ನಿಡಿದ್ದು ಸಾರಾಂಶವೇನೆಂದರೆ ದಿನಾಂಕ 21-05-2020 ರಂದು ರಾತ್ರಿ ವೇಳೆಗೆ ರಂಜಿತ ತಂದೆ ಸುಧಾಮ ರಾಠೋಡ ಇತನೊಂದಿಗೆ ಸುಧಾಮ ತಂದೆ ನಾಮದೇವರಾವ ರವರೊಂದಿಗೆ ಜಗಳವಾಗಿರುತ್ತದೆ. ಈ ಕಾರಣ ದಿನಾಂಕ 22-05-2020 ರಂದು ಅಂದಾಜು 9.30 ಪಿಎಂ ಗಂಟೆಗೆ 1. ತೊಫೀಕ ತಂದೆ ವಹೀದಸಾಬ   2. ಸುಧಾಮ ತಂದೆ ನಾಮದೇವರಾವ , 3. ಮಹಾದೇವ ತಂದೆ ನಾಮದೇವರಾವ, 4. ಯಾದವ ತಂದೆ ನಾಮದೇವರಾವ, 5. ಪಾಂಡು ತಂದೆ ರಾಮಜಿ ಜಾಧವ , 6. ವಾಸುದೇವ ತಂದೆ ರಾಮಜಿ ಜಾಧವ ಮತ್ತು ಅವರ ನಂಟನಾದ ರವರು ಅಕ್ರಮ ಕೂಟ ರಚಿಸಿಕೊಂಡು ಕೈಗಳಲ್ಲಿ ಕಲ್ಲು ಬಡಿಗೆಗಳು ಹಿಡಿದುಕೊಂಡು  ರಂಜಿತನ ಮನೆಯ ಮುಂದೆ ಬಂದು ಅವರಿಗೆ ಎ ಸೂಳೆ ಮಕ್ಕಳಗೆ ನಿನ್ನೆ ನಮ್ಮೊಂದಿಗೆ ಜಗಳ ಮಾಡಿರುತ್ತಿರಿ ಎಂದು ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅವರಿಗೆ ಅಲ್ಲಿಂದ ಬಿಡಿಸಿಕೊಳ್ಳಲು ಹೋಗಿ ಅವರಿಗೆ ಅಲ್ಲಿಂದ ಕಳುಹಿಸುತ್ತಿದ್ದಾಗ ತೋಫೀಕ ಇತನು ಈ ಸೂಳೆ ಮಗ ಮಧ್ಯದಲ್ಲಿ ಬರುತ್ತಿದ್ದಾನೆ ಈತನಿಗೆ ಮೊದಲು ಹೊಡೆಯಿರಿ ಎಂದಾಗ ನನಗೆ ಸುಧಾಮ ಇತನು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ಮಹಾದೇವ ಇತನು ಬಡಿಗೆಯಿಂದ ನನ್ನ ಬಲಗೈ ಮೇಲೆ ಮೊಣಕೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ಯಾದವ ಇತನು ಕಲ್ಲಿನಿಂದ ನನ್ನ ಹೊಟ್ಟೆಯಲ್ಲಿ ಹೊಡೆದಿರುತ್ತಾನೆ. ಪಾಂಡು ಹಾಗೂ ವಾಸುದೇವ ರವರ ನನಗೆ ಹಿಡಿದು ಎಳೇದಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತ ನೀನು ಎದರು ಬರಬೇಡ ಎಂದಿರುತ್ತಾರೆ. ತೋಫಿಕ ಇತನು ನನಗೆ ಹಿಡಿದು ನೂಕಿಹಾಕಿರುತ್ತಾನೆ. ಈ ಜಗಳವನ್ನು ಅಲ್ಲೆ  ಇದ್ದ ಪ್ರಕಾಶ ತಂದೆ ಸಕ್ಕಾರಾಮ ಜಾಧವ ಮತ್ತು ಧನಾಜಿ ತಂದೆ ಮೊತಿರಾಮ ಜಾಧವ ಹಾಗೂ ಇತರರು ನೋಡಿ ಬಿಡಿಸಿಕೊಂಡಿರುತ್ತಾರೆ. ಆದ್ದರಿಂದ ನಮಗೆ ಹೊಡೆದು ಜಗಳ ಮಾಡಿದ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿ.ಅಂತ ಕೊಟ್ಟ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 86/2020 ಕಲಂ 342, 324, 323, 504, 506  ಜೊತೆ  34 ಐಪಿಸಿ ಮತ್ತು  3(1)(r), 3(2)(v-a) SC/ST  POA ACT 1989 :-

ದಿನಾಂಕ 14/05/2020 ರಂದು ಅಂದಾಜು ರಾತ್ರಿ 9-35 ಗಂಟೆಗೆ ಫಿರ್ಯಾದಿ ಅನಿಲಕುಮಾರ ಈತನ ಮೇಲೆ ವಿನಾ ಕಾರಣ ಮನೆಯ ಓನರ ಹಲ್ಲೇ ನಡೆಸಿದ್ದು, ಫಿರ್ಯಾದಿಯು ಮೂರು(3) ತಿಂಗಳಿಂದ ಅನೀಲ ಪಾಟೀಲ ಅವರ ಮನೆಯಲ್ಲಿ ಬಾಡಿಗೆಗಾಗಿ ಇದ್ದೆನೆ  ನನ್ನ ಪಾಡಿಗೆ ನಾವಿರುವಾಗ ದಿನಾಂಕ 15/05/2020 ರಂದು ಸಮಯ ರಾತ್ರಿ 10 ಗಂಟೆಗೆ ಮನೆಯ ಓನರ ಕಾಲ ಮಾಡಿ ಮನೆಗೆ ಬಾ ಅಂತ ಕರೆದರು ಮನೆಯ ಓನರ ಅನೀಲ ಪಾಟೀಲ್ ಅವರ ಹೆಂಡತಿ ಕೂಡಾ ಹೆಸರು ವಿಜಯಲಕ್ಷ್ಮಿ ಅವರು ಕರೆದರು ಆಗ ನಾನು ಊಟ ಮಾಡುತ್ತಾ ಇದ್ದೆ ಯಾಕೆ ಅಂತ ಕಾರಣ ಕೇಳಿದ್ದಾಗ ನನ್ನ ಗಂಡ ನಿನ್ನನು ಕರೆತಾ ಇದ್ದಾರೆ ಅಂತ ಹೇಳಿದಳು ಆಗ ನಾನು ಊಟ ಮಾಡ್ತಾ ಇದ್ದೆ ಬರಕಾಗಲ್ಲ ಅಂತ ಹೇಳಿದರು ಸಹ ಪದೆ ಪದೆ ಕರಿತಾ ಇದ್ದು ಅದಕ್ಕೆ ನಾನು ಯಾಕೆ ಕರಿತಾ ಇದ್ದಾರೆ ಅಂತ ಅವರ ಮನೆಗೆ ಹೋದೆ ಆಗ ಅವರ ಮನೆಯಲ್ಲಿ ಮನೆಯ ಓನರ ಅನೀಲ ಪಾಟೀಲ್ ಅವರ ಭಾವ ಮತ್ತು ಇನ್ನೋಬ್ಬ ಮುಸ್ಲಿಂ ವ್ಯಕ್ತಿ ಮೂವರು ಸರಾಯಿ ಕುಡಿತಾ ಇದ್ರು ನಾಣು ಹೋದ ಮೇಲೆ ಅನೀಲ ಪಾಟೀಲ್ ರವರು ಯಾಕೋ ಹೋಲೆಯಾ ಸುಳಿ ಮಗನೆ ನಾನು ಮನೆ ಓನರ ಕರಿತಾ ಕರೆದರು ಬರಲ್ಲಾ ಅಂತಿಯಾ ಎಷ್ಟೋ ಸೋಕ್ಕು ನಿನಗೆ ಅಂತ ನಿನು ಹೋಲಿಯಾ ಅಂತ ಗೋತ್ತಿದ್ರು ನಿನಗೆ ನನ್ನ ಮನೆಯಲ್ಲಿ ಬಾಡಿಗೆ ಕೊಟ್ಟಿದ್ದನೆ ಅದಕ್ಕೆ ನಾನು ಕರೆದರು ಬರಲ್ಲಾ ಅಂತಿಯಾ ಅಂತ ಹೇಳಿ ಅಲ್ಲೇ ಇದ್ದ ಕರಾಟೆಯ ಲಾಂಚ ತೆಗೆದುಕೊಂಡು ನನ್ನ ಎಡಕೈ ಮೇಲೆ ಕೇಳಗೆ ರಕ್ತ ಬರುವ ಹಾಗೆ ಹೋಡೆದ್ರು ಎದೆಗೆ ನನ್ನ ಬೆನ್ನಿನ ಮೇಲೆ ಮೋಳಕಾಲು ಮೇಲೆ ಹೋಡೆದ್ರು ಅವರ ಭಾವ ಕೈ ಮುಷ್ಠಿಮಾಡಿ ನನ್ನ ಕೆನ್ನೆಯ ದವಡೆ ಮೇಲೆ ಹೊಡೆದ್ರು ಇನ್ನೊಬ್ಬ ಮುಸ್ಲಿಂ ವ್ಯಕ್ತ್ಯಿ ಕಾಲಿನಿಂದ ನನ್ನ ತೊಡ್ಡಿನ ಮೇಲೆ ಗುಪ್ತಗಾಯ ಮಾಡಿಸಿಕ್ಕಾ ಪಟ್ಟೆ ಹೋಡೆದ್ರು ಇದರ ಶಬ್ದ ಕೇಳಿ ನನ್ನ ಹೆಂಡತಿ ಓಡಿ ಬಂದು ಹೋಡಿಬೇಡಿ ಅಂತ ಕೇಳಿಕೊಂಡ್ರು ಹೋಲಸು ಮಾತುಗಳಿಂದ ಬೈದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ನೋವು ತಾಳಲಾರದೆ ಅವರ ಕೈಯಿಂದ ಬಿಡಸಿಕೊಂಡು ಹೋರಗೆ ಓಡಿ ಬಂದೆ ಮತ್ತೆ ವಾಪಸ ಮನೆಗೆ ಹೋದಾಗ ಮತ್ತೆ ಸಲಿಕೆಯಿಂದ ಮನೆ ಓನರ ಎಡ ಕಪಾಳದಲ್ಲಿ ಹೋಡೆದ್ರು ಮನೆಯಿಂದ ಹೋರಗೆ ಓಡಿಸಿದ್ದು ನನ್ನ ಹೆಂಡತಿ ಅಲ್ಲೆ ಅವರ ಮನೆಯಲ್ಲಿ ಇದ್ದಳು ಹೊರಗೆ ಬಂದ ಮೇಲೆ ನಾನು 100 ಕಾಲ ಮಾಡಿದೆ ಅವರು ಅವರು ಯಾರು ನನ್ನ ಸಹಾಯಕ್ಕೆ ಬರಲ್ಲಿಲ್ಲಮತ್ತೆ ನಾನು 108 ಕಾಲ್ ಮಾಡಿದೆ ನೋವು ತಾಳಲಾರದೆ ಕುಂತಾಗ 108 ಅಂಬುಲೇನ್ಸ ಅವರು ನಮ್ಮ ಮನೆಯ ಹತ್ರ ಬಂದ್ರು ನಾನು ತಿರುಗಿ ಮನೆಗೆ ನನ್ನ ಹೆಂಡತಿಗೆ ಕರಿಯಕ್ಕೆ ಹೋದ್ದಾಗ ನನ್ನ ಹೆಂಡತಿಗೆ ಅವರು ಮನೆಲಿ ಕೂಡಿ ಹಾಕಿ ಗೇಟಿಗೆ ಮತ್ತು ಮನೆಗೆ ಬೀಗ ಹಾಕಿದ್ದರು ನಾನು ಕರೆದರು ನನ್ನ ಹೆಂಡತಿಗೆ ಅವರು ಬಿಡಲೇ ಇಲ್ಲ ಅಂಬುಲೇನ್ಸ ಮನೆಯ ಹತ್ತಿರ ಬಂದಾಗ ಮನೆಯ ಓನರ ಅನೀಲ ಪಾಟೀಲ್ ರವರು ಅಂಬುಲ್ಸೆನ ಇ.ಎಮ್.ಟಿ. ಬೇದರಿಕೆ ಹಾಕಿದರು ನಾನು ಸರಕಾರಿ ಆಸ್ಪತ್ರೆಗೆ ಬಂದು ಅಡಮಿಟ ಆದೇ. ಎರಡು ದಿವಸವಾದರು ನನ್ನ ಹೆಂಡತಿ ನನ್ನ ಹತ್ತಿರ ಬರಲೆ ಇಲ್ಲ ದಿನಾಂಕ 16/05/2020 ರಂದು ನನ್ನ ಹೆಂಡತಿಗೆ ಬೇದರಿಕೆ ಹಾಕಿ ಅವರ ಮನೆಯಲ್ಲಿ ಒಂದು ಪತ್ರ ಬರೆಸಿಕೊಂಡಿದಾರಂತೆ ಅದೆನೆಂದರೆ ನನ್ನ ಗಂಡನ ಮೇಲೆ ಯಾವುದೆ ರೀತಿ ಹಲ್ಲೇ ನಡೆಸಿಲ್ಲಾ ಯಾವುದೆ ಜಾತಿ ನಿಂದನೆ ಮಾಡಿಲ್ಲಾ ಅಂತ ನನ್ನ ಹೆಂಡತಿ ಆಸ್ಪತ್ರೆಗೆ ನನ್ನ ಗಂಡನ ಹತ್ತಿರ ಹೋಗತಿನಿ ಅಂದ್ರು ನಿನ್ನ ಗಂಡನಿಗು ನನಗು ಯಾವುದೆ ರೀತಿ ಸಂಭಂಧ ಇಲ್ಲಾ ನಿನ್ನಗೆ ಈಗ ಠಾಣೆಗೆ ಕರೆದುಕೊಂಡು ಹೋಗುತ್ತಿನಿ ಆಗ ನೀನು ಪಿ.ಎಸ್.ಐ. ಹತ್ರ ನನ್ನ ಗಂಡನ ಮೇಲೆ ಯಾವುದೆ ರೀತಿಯ ಹಲ್ಲೇ ನಡೆಸಿಲ್ಲಾ ಯಾವಿದೆ ಜಾತಿ ನಿಂದನೆ ಮಾಡಿಲ್ಲಾ ಅಂತಾ ಜೀವ ಬೇದ್ರಿಕೆ ಹಾಕಿದ್ರು ನೀನಿ ಈ ರೀತಿ ಹೇಳದಿದ್ರೆ ನಿನ್ನ ಗಂಡನಿಗೆ ಸುಪಾರಿ ಕೊಟ್ಟು ಹೊಡಿಯಾಕೆ ಹೇಳತಿನಿ ನೋಡತಿಯಾ ನನ್ನ ತಾಕತ್ತು ಅಂತ ಪದೆ ಪದೆ ಚಿತ್ರಹಿಂಸೆ ಕೊಡತಾ ಇದ್ರು ಆಗ ದಿನಾಂಕ 16/05/2020 ರಂದು ಮನೆಯ ಓನರ ಅನೀಲ ಪಾಟೀಲ್ ಅವನ ಭಾವ( ಹಲ್ಲೇ ನಡೆಸಿದ್ದ ವ್ಯಕ್ತಿ) ಇಬ್ಬರು ನನ್ನ ಹೆಂಡತಿಗೆ ಗಾಂಧಿ ಗಂಜ ಪೊಲೀಸ ಠಾಣೆಗೆ ಕರೆದುಕೊಂಡು ಹೋಗಿ ಪಿ.ಎಸ್.ಐ ಹತ್ರ ಕೇಸ ವಾಪಸ ತೆಗೆದುಕೊಳ್ಳವದಾಗಿ ಒತ್ತಾಯಿಸಿದ್ದು ಅದಕ್ಕೆ ಪಿ.ಎಸ್.ಐ ಆಯಿತು ಅಂತ ಹೇಳಿದ್ದು ಆಗ ನಾನು ನನ್ನ ಹೆಂಡತಿ ದಿಕ್ಕು ತೊಚದೆ ನಾನಿರು ಆಸ್ಪತ್ರೆಗೆ ಬಂದು ನಡೆದ ಘಟನೆ ವಿವರವಾಗಿ ತಿಳಿಸಿದ್ದಾಳೆ ಅನೀಲ್ ಪಾಟೀಲ ಅವರ ಭಾವ ಇನ್ನೋಬ್ಬ ಮುಸ್ಲಿಂ ವ್ಯಕ್ತಿ ಕೂಡಿಕೊಂಡು ಲಾಂಚದಿಂದ ಹೋಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿದ್ದು ಜಾತಿ ನಿಂದನೆ ಮಾಡಿದ್ದು ನನ್ನ ಹೆಂಡತಿ ಮೂರೂ(3) ದಿವಸಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಒತ್ತಾಯದಿಂದ ನಿನ್ನ ಗಂಡನಿಗೆ ಹಲ್ಲೆ ಮಾಡಿಲ್ಲ ಜಾತಿ ನಿಂದನೆ ಮಾಡಿಲ್ಲಾ ಬರೆಸಿಕೊಂಡು ಇದು ಪಿ.ಎಸ್.ಐ.ಗೆ ಹೇಳಿ ಅಂತ ಕರೆದುಕೊಂಡು ಠಾಣೆಗೆ ಹೋಗಿದ್ದಾಗ ಅಲ್ಲಿ ನನ್ನ ಗಂಡ ಎಲ್ಲಿ ಅಂತ ಕೇಳಿದ್ದಾಗ ಅವನು ಇಲ್ಲಿಲ ಆಸ್ಪತ್ರೆಯಿಂದ ಬರುತಾಯಿಂದ್ದಾನೆ ಅಂತ ಹೇಳಿ ಠಾಣೆಯಲ್ಲಿ ಬಿಟ್ಟು ಹೋದನು ನಂತರ ನನ್ನ ಹೆಂಡತಿ ಆಸ್ಪತ್ರೆಗೆ ಬಂದು ಎಲ್ಲಾ ವಿಷಯ ತಿಳಿದ್ದು ಈ ಮೂವರ ಮೇಲೆ ಪ್ರಕರಣ ದಾಖಲ ಮಾಡಿಕೊಂಡು ವಿನಂತಿ ಮತ್ತು ಸಿ.ಸಿ. ಕ್ಯಾಮರಾ ಸಾಕ್ಷಿ ಆಗಿರುತ್ತದೆ. ನನ್ನ ಹೆಂಡತಿ ಚಿನ್ನಮ್ಮಾ ಬರೆದಿರುತ್ತಾರೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದು ದೂರು ನಿಡುತ್ತೆನೆ ಅಂತ ತಿಳಿಸಿದ್ದೆ ಆದರೆ ನನಗೆ ಆರಾಮಾಗದ ಕಾರಣದಿಂದಿ ಇಲ್ಲಿಗೆ ಕರೆಯಿಸಿ ದೂರು ನಿಡಿರುತ್ತೆನೆ ಅಂತ ಕೊಟ್ಟ ದೂರು ಸಾರಾಂಸದ ಮೇರೆಗೆ ಪ್ರಕರಣ ದಾಖಲಸಿ ತನಿಖೆ ಕೈಕೊಳ್ಳಲಾಯಿತ್ತು

 

 ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 87/2020 ಕಲಂ 379 ಐಪಿಸಿ :-

ದಿನಾಂಕ 23/05/2020 ರಂದು 18-00 ಗಂಟೆಗೆ ಫಿಯರ್ಾದಿ ಶಿವಕುಮಾರ ತಂದೆ ಸಿದ್ರಾಮಪ್ಪಾ ಮುದ್ದಾಣಿ ಸಾ|| ಶ್ರೀ ನಗರ ಬೀದರ ರವರು ದೂರು ಸಲ್ಲಿಸಿದ್ದು ಅದರ ಸಾರಾಂಶವೆನೆಂಧರೆ ಫಿಯರ್ಾದಿಯು ಮೇಡಿಕಲ್ದಲ್ಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು, ಫಿಯರ್ಾದಿಯ ತಮ್ಮನಾದ ಬಸವಣಪ್ಪಾ ಇವರ ಹೆಸರಿಗೆ ಇರುವ ಫ್ಯಾಶನ ಪ್ರೋ ಮೋಟಾರ ಸೈಕಲ್ ನಂಬರ ಕೆ.ಎ.32 ಇಎಫ್-7476  ನೇದ್ದು ಫಿಯರ್ಾದಿಯೆ  ಉಪಯೋಗಿಸುತ್ತಿದ್ದು. ಹೀಗಿರುವಾಗ ದಿನಾಂಕ 12/05/2020 ರಂದು ಎಂದಿನಂತೆ ಫಿಯರ್ಾದಿಯು ಮೇಡಿಕಲ್ದಲ್ಲಿ ಕೆಲಸಕ್ಕೆ ಹೋಗಿ ಕೆಲಸ ಮಾಡಿ ಮರಳಿ ರಾತ್ರಿ ಅಂದಾಜು 10 ಗಂಟೆಗೆ  ಬೀದರ ನಗರದ ಅಮಲಾಪೂರ ರೋಡಿಗೆ ಇರುವ ಶ್ರೀ ನಗರದಲ್ಲಿರುವ ನಮ್ಮ ಮನೆಗೆ ಬಂದು ಮೋಟಾರ ಸೈಕಲ್ ನಂ ಕೆ.ಎ32ಇಎಫ್-7476  ನೇದ್ದರ ಮೇಲೆ ಬಂದು ಮೊಟಾರ ಸೈಕಲ್ ಮನೆಯ ಮುಂದೆ ನಿಲ್ಲಿಸಿದ್ದು ಇರುತ್ತದೆ.  ದಿನಾಂಕ 13/05/2020 ರಂದು ಮುಂಜಾಣೆ 6 ಗಂಟೆಯ ಸುಮಾರಿಗೆ ಫಿಯರ್ಾದಿಯು ಎದ್ದು ನೋಡಲು ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರ ಸೈಕಲ ನಂ ಕೆ.ಎ.32 ಇಎಫ್-7476 ನೇದ್ದು ಕಾಣದೆ ಇರವದರಿಂದ ಅಕ್ಕ ಪಕ್ಕದಲ್ಲಿ ಹುಡುಕಾಡಲಾಗಿ ನನ್ನ ಮೋಟಾರ ಸೈಕಲ್ ಸಿಕ್ಕಿರುವದಿಲ್ಲಾ. ಕಾರಣ ಮೋಟಾರ ಸೈಕಲ್ ನಂ ಕೆ.ಎ.32 ಇಎಫ್-7476 ನೇದ್ದು ದಿನಾಂಕ 12/05/2020 ರ ರಾತ್ರಿ 10 ಗಂಟೆಯಿಂದ ದಿನಾಂಕ 13/05/2020 ರ ಬೆಳ್ಳಿಗೆ 6 ಗಂಟೆಯ ಅವಧಿಯಲ್ಲಿ ಯಾರೋ ಅಪರಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ನನ್ನ ಮೋಟಾರ ಸೈಕಲ್ ನೇದ್ದು  ಇಲ್ಲಿಯ ವರೆಗೆ ಬೀದರ ನಗರದ  ಸೂತ್ತಮುತ್ತ ಹುಡುಕಾಡಿ ಸಿಗದೆ ಇರುವದರಿಂದ ಇಂದು ಠಾಣೆಗೆ ಬಂದು ದೂರು ನಿಡುತ್ತಿದ್ದನೆ, ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ. ನನ್ನ ಮೋಟಾರ ಸೈಕಲ ನೋದ್ದರ ಇಂಜಿನ ನಂಬರ HA10ENEHC56781 ಚೇಸ್ಸಿ ನಂಬರ  MBLHA10A6EHC43947 ನೇದ್ದು ಇರುತ್ತದೆ. ಅಂತ ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಪ್ರಕರಣ ಸಂಖ್ಯೆ : 33/2020 ಕಲಂ 379 ಐಪಿಸಿ :-

ದಿನಾಂಕ 18-03-2020 ರಂದು 1130 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀ ಅರುಣಕುಮಾರ ತಂದೆ ಭೀಮಶ್ಯಾ ಬೆನಜರ್ಿ ವಯ 29 ವರ್ಷ ಜಾತಿ ಎಸ್.ಸಿ ಹೊಲಿಯ ಉ;ಬೀದರ ಸ್ವೀಮಿಂಗಪೂಲನಲ್ಲಿ ಜೀವ ರಕ್ಷಕ ಸಾ:ಸಂಗೊಳಗಿ ಗ್ರಾಮ ತಾ:ಜಿ;ಬೀದರ  ಇವರು ತನ್ನ ಹಿರೊ ಸ್ಪಲೆಂಡರ್ ಪ್ಲಸ್ ದ್ವಿಚಕ್ರ ವಾಹನ.ನಂ.ಕೆ.ಎ.38-ಯ-1574 ಇದರ ಅ.ಕಿ.25000/-ರೂ ನೇದನ್ನು ಬೀದರ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ನಿಲ್ಲಿಸಿ ಬೀದರ ಉಪ ನೋಂದಣಾ ಕಛೇರಿಗೆ ಹೋಗಿ ಮರಳಿ 1330 ಗಂಟೆಯ ಸುಮಾರಿಗೆ ಕಛೇರಿಗೆ ಹೊರಗೆ ಬಂದು ನೋಡಲಾಗಿ ಅವರ ದ್ವಿಚಕ್ರವಾಹನವನ್ನು ಇರಲಿಲ್ಲಾ.  ಸದರಿ ದ್ವಿಚಕ್ರ ವಾಹನವನ್ನು ದಿನಾಂಕ 18-03-2020 ರಂದು 1130 ಗಂಟೆಯಿಂದ 1330 ಗಂಟೆಯ ಅವಧಿಯಲ್ಲಿ ಯಾರೂ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಇರುವ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂಖ್ಯೆ : 10/2020 ಕಲಂ 174 ಸಿ.ಆರ್.ಪಿ.ಸಿ :-

ಫಿರ್ಯಾದಿ ವಿನೋದಕುಮಾರ ತಂದೆ ಬಸವರಾಜ ಫೂಲಾರಿ, ವಯ 26 ವರ್ಷ, ಉದ್ಯೋಗ ಎಲ್.ಐ.ಸಿ ಯಲ್ಲಿ ಅಸಿಸ್ಟೆಂಟ ಕೆಲಸ ಸಾ; ಲಿಂಗಾಯತ, ಸಾ: ಶಿವನಗರ ಮಹಾದೇವ ಕಾಲೋನಿ ಬೀದರ ಇವರು ಮೋದಲನೆ ಮಹಡಿ ಕಟ್ಟಲು ಪ್ರಾರಂಭಮಾಡಿದ್ದು ಅದಕ್ಕೆ ಫಿಯರ್ಾದಿಯ ತಂದೆಯವರು ದಿನಾಲು ನೀರು ಹೊಡೆಯುತ್ತಿದ್ದರು. ಅದರಂತೆಯೇ ಇಂದು ದಿನಾಂಕ 23/05/2020 ರಂದು ಸಾಯಂಕಾಲ 5;30 ಗಂಟೆ ಸುಮಾರಿಗೆ ಫಿಯರ್ಾದಿಯ ತಂದೆ ಗೊಡೆಗೆ ನೀರು ಹೊಡೆಯುತ್ತಿದ್ದರು. ಅಂದಾಜು ಸಾಯಂಕಾಲ 6;00 ಪಿ.ಎಮ. ಗಂಟೆ ಸುಮಾರಿಗೆ ಪೈಪಿನಿಂದ ನೀರು ಹೊಡೆಯುತ್ತಾ ಕಟ್ಟಡದ ಅಂಚಿಗೆ ಬಂದು ಆಕಸ್ಮಿಕವಾಗಿ ಒಮ್ಮೇಲೆ ಕಾಲು ಜಾರಿ ಕೇಳಗೆ ಬಿದ್ದಿದ್ದು ಆ ಸಮಯಕ್ಕೆ ನಾನು ಕೇಳಗಿನ ಟ್ಯಾಂಕಿನಲ್ಲಿ ನೀರು ಎಷ್ಟಿದೆ ಎಂದು ನೋಡಲು ಹೋಗಿದ್ದು ತಕ್ಷಣವೆ ಅವರು ಬಿದ್ದಿದ್ದನ್ನು ನೋಡಿ ನಾನು ಮತ್ತು ನನ್ನ ತಾಯಿ ಹಾಗೂ ಅಕ್ಕಪಕ್ಕದವರು ಕೂಡಿಕೊಂಡು ಬೀದರ ಸಕರ್ಾರಿ ಆಸ್ಪತ್ರೆಗೆ ತಂದಿದ್ದು ಅವರಿಗೆ ತಲೆ ಹಿಂದೆ ರಕ್ತಗಾಯವಾಗಿದ್ದು ಆಸ್ಪತ್ರೆಗೆ ತಂದ ನಂತರ ಅವರನ್ನು ಪರೀಕ್ಷಿಸಿದ ವೈಧ್ಯರು ಅವರು ಮೃತ್ತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಫಿಯರ್ಾದಿಯ ತಂದೆ ಯಾದ ಬಸವರಾಜ ಫೂಲಾರಿ ರವರು ಇಂದು ದಿನಾಂಕ 23/05/2020 ರಂದು ಸಾಯಂಕಾಲ 6 ಪಿ.ಎಮ ಗಂಟೆ ಸುಮಾರಿಗೆ ಮನೆಗೆ ನೀರು ಹೊಡೆಯುವಾಗ ಒಂದನೆ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಭಾರಿ ರಕ್ತಗಾಯ ಗೊಂಡು ಮೃತ್ತಪಟ್ಟಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇಲ್ಲ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ..

 

ಹುಲಸೂರ ಪೊಲೀಸ್ ಠಾಣೆ ಯು.ಡಿ.ಆರ್ ಸಂಖ್ಯೆ : 9/2020 ಕಲಂ. 174 (ಸಿ) ಸಿ.ಅರ.ಪಿ.ಸಿ :-

ದಿನಾಂಕ 23/05/2020 ರಂದು 1645 ಗಂಟೆಗೆ ಫಿಯರ್ಾದಿ ನಾನು ನೀಲಮ್ಮ ಗಂಡ ಮಹಾದು ಗಂಪಲೆ ವಯ: 58 ವರ್ಷ ಜಾತಿ: ಕಬ್ಬಲಿಗ ಉ: ಕೂಲಿಕೆಲಸ ಸಾ|| ಹಸನಾಳ (ನದಿವಾಡಿ) ತಾ|| ನಿಲಂಗಾ ಜಿ|| ಲಾತೂರ ರವರು ಠಾಣೆಗೆ ಹಾಜರಾಗಿ ಮೌಖಿಕ ಫಿಯರ್ಾದು ಹೇಳಿಕೆಯನ್ನು ಮರಾಠಿ ಭಾಷೆಯಲ್ಲಿ ಹೇಳಿರುವುದನ್ನು ಶ್ರೀಮತಿ ಕಲಾವತಿ ಗಂಡ ಭೀಮಣ್ಣ ಜಮಾದಾರ ಸಾ|| ಹುಲಸೂರ ರವರು ಕನ್ನಡದಲ್ಲಿ ಹೇಳಿ ಟೈಪ್ ಮಾಡಿಸಿದ್ದು ಸಾರಾಂಶವೇನೆಂದರೆ, ನನಗೆ 4 ಜನ ಹೆಣ್ಣು ಮಕ್ಕಳು ಮತ್ತು 6 ಜನ ಗಂಡು ಮಕ್ಕಳಿರುತ್ತಾರೆ. ನನ್ನ 4 ನೇಯ ಮಗಳಾದ ಪುಷ್ಪಾ ವಯ: 38 ವರ್ಷ ಇವಳಿಗೆ ಖಂಡಾಳ ಗ್ರಾಮದ ಮಲ್ಲಿಕಾಜರ್ುನ ತಂದೆ ಬಸಪ್ಪಾ ಕೋಳಿ ವಯ: 45 ವರ್ಷ ಜಾತಿ: ಕಬ್ಬಲಿಗ ಇವರೊಂದಿಗೆ ಸುಮಾರು 16 ವರ್ಷಗಳ ಹಿಂದೆ ನಮ್ಮೂರಲ್ಲಿ ನಮ್ಮ ಸಂಪ್ರದಾಯದ ಪ್ರಕಾರ ಎರಡನೆ ಮದುವೆ ಮಾಡಿಕೊಟ್ಟಿರುತ್ತೆವೆ. ಮಲ್ಲಿಕಾಜರ್ುನ ರವರ ಮೊದಲನೆ ಹೆಂಡತಿ ಸುಮಾರು 17 ವರ್ಷಗಳ ಹಿಂದೆ ತೀರಿಕೊಂಡಿದ್ದು ಇವಳಿಗೆ ಯಲ್ಲಾಲಿಂಗ ವಯ: 20 ವರ್ಷ ಮತ್ತು ಮಹಾದೇವ ವಯ: 18 ವರ್ಷ ಅಂತ ಎರಡು ಗಂಡು ಮಕ್ಕಳಿರುತ್ತಾರೆ. ನನ್ನ ಮಗಳಾದ ಪುಷ್ಪ ಇವಳಿಗೆ ಅನಿತಾ ವಯ: 16 ವರ್ಷ ಮತ್ತು ಶೀತಲ ವಯ: 14 ವರ್ಷ ಎಂಬ ಎರಡು ಹೆಣ್ಣು ಮಕ್ಕಳಿರುತ್ತಾರೆ. ದಿನಾಂಕ 23/05/2020 ರಂದು ಮುಂಜಾನೆ 0830 ಗಂಟೆಗೆ ನನ್ನ ಮೊಮ್ಮಗಳಾದ ಶೀತಲ ಇವಳು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನನ್ನ ತಾಯಿಯಾದ ಪುಷ್ಪಾ ಇವಳು ಇಂದು ಮುಂಜಾನೆ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ಅಂತ ತಿಳಿಸಿದ ಮೇರೆಗೆ ಫಿಯರ್ಾದಿಯು ತನ್ನ ಗಂಡ ಮತ್ತು ಮಕ್ಕಳ್ಳೊಂದಿಗೆ  ಖಂಡಾಳ ಗ್ರಾಮಕ್ಕೆ ಹೊಗಿ ನೋಡಲಾಗಿ ನನ್ನ ಮಗಳಾದ ಪುಷ್ಪಾ ಇವಳು ಮೃತಪಟ್ಟಿದ್ದು ನಿಜವಿರುತ್ತದೆ. ನಾವೆಲ್ಲರೂ ಶೀತಲ ಇವಳಿಗೆ ವಿಚಾರಿಸಲಾಗಿ ತಿಳಿಸಿದ್ದೇನೆಂದರೆ, ನನ್ನ ಅಕ್ಕಳಾದ ಅನೀತಾ ಇವಳು ಆರಾಮ ಇಲ್ಲದ ಕಾರಣ ಇಂದು ಮುಂಜಾನೆ ಮನೆಯಲ್ಲಿ ಮಲಗಿಕೊಂಡಿದ್ದಳು.  ನಾನು ಇಂದು ಮುಂಜಾನೆ 0715 ಗಂಟೆಯ ಸುಮಾರಿಗೆ ಎದ್ದು ನನ್ನ ತಾಯಿಯೊಂದಿಗೆ ಮಾತನಾಡಿ  ಮನೆಯ ಹೊರಗೆ ಕಸ ಗುಡಿಸಲು ಹೋಗಿರುತ್ತೆನೆ. ನನ್ನ ಇಬ್ಬರು ಅಣ್ಣಂದಿರಾದ ಯಲ್ಲಾಲಿಂಗ ಮತ್ತು ಮಹಾದೇವ ಇಬ್ಬರು ಮನೆಯ ಹೊರಗೆ ಕುಳಿತಿದ್ದು. ನನ್ನ ತಂದೆಯಾದ ಮಲ್ಲಿಕಾಜರ್ುನ ರವರು ಕುರಿಗಳು ಮೇಯಿಸಲು ಹೊಲಕ್ಕೆ ಹೋಗಿದ್ದರು. ನಾನು ಕಸ ಗುಡಿಸಿ ಮನೆಯ ಒಳಗೆ ಹೋಗಿ ಬಾಗಿಲು ತಟ್ಟೆ ಮುಚ್ಚಿರುವದನ್ನು ನೋಡಿ ತಟ್ಟೆಗೆ ನೂಕಿದಾಗ ತಟ್ಟೆ ತೆರೆಯಲಿಲ್ಲ. ಬಾಗಿಲ ಸಂದಿಯಿಂದ ನೋಡಲು ನಮ್ಮ ತಾಯಿ ಮನೆಯ ಒಳಗಡೆ ನೇಣು ಹಾಕಿಕೊಂಡಿರುವದನ್ನು ಕಂಡು ನಾನು ಒಮ್ಮೆಲೆ ಚೀರಿದಾಗ ನನ್ನ ಅಣ್ಣಂದಿರಾದ ಯಲ್ಲಾಲಿಂಗ, ಮಹಾದೇವ ಹಾಗೂ ನನ್ನ ಅಕ್ಕಳಾದ ಅನೀತಾ ಇವಳು ಮತ್ತು ನಮ್ಮ ಪಕ್ಕದ ಮನೆಯ ಭೀಮಣ್ಣ ತಂದೆ ಬಾಬುರಾವ ಕೋಳಿ ವಯ: 44 ವರ್ಷ ರವರು ಬಂದಾಗ ಅವರಿಗೆ ವಿಷಯ ತಿಳಿಸಿದಾಗ ಅವರು ಮನೆಯ ತಟ್ಟೆಗೆ ಜೋರಾಗಿ ಒದ್ದಾಗ ತಟ್ಟೆ ತೆರೆದಿದ್ದು ಒಳಗೆ ಹೋಗಿ ನೋಡಲಾಗಿ ನನ್ನ ತಾಯಿ ಪುಷ್ಪಾ ಇವಳು ಮನೆಯಲ್ಲಿರುವ ಮಾಳಿಗೆಯ ಕಟ್ಟಿಗೆಯ ಸರಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡಿರುವದನ್ನು ಕಂಡು ನಾವೇಲ್ಲರೂ ಕೂಡಿಕೊಂಡು ನಮ್ಮ ತಾಯಿ ಪುಷ್ಪಾ ಇವಳ ಕಾಲು ಎತ್ತಿ ಹಿಡಿದು ಹಗ್ಗ ಕೊಯ್ದು ಕೆಳಗೆ ಇಳಿಸಿ ನೋಡಲಾಗಿ ನಮ್ಮ ತಾಯಿ ಪುಷ್ಪಾ ಇವಳು ಮೃತ ಪಟ್ಟಿದ್ದಳು. ಈ ಘಟನೆ ಇಂದು ಮುಂಜಾನೆ 0720 ರಿಂದ 0745 ಗಂಟೆಯ ಅವದಿಯಲ್ಲಿ ನಡೆದಿರುತ್ತದೆ. ನನ್ನ ತಾಯಿ ಪುಷ್ಪಾ ಇವಳು ನನ್ನ ತಂದೆಯಾದ ಮಲ್ಲಿಕಾಜರ್ುನ ರವರು ಕೆಲವು ದಿನಗಳಿಂದ ಆಗಾಗ ಸರಾಯಿ ಕುಡಿದು ಕೆಲಸ ಮಾಡದೆ ತಿರುಗಾಡುತ್ತಿರುವುದನ್ನು ನೋಡಿ, ನೀನು ಹೀಗೆ ತಿರುಗಾಡಿದರೆ ನನ್ನ ಹೆಣ್ಣು ಮಕ್ಕಳ ಗತಿಯೇನು ಅವರಿಗೆ ವಿದ್ಯಾಭ್ಯಾಸ ಮತ್ತು ಮದುವೆ ಹೇಗೆ ಮಾಡಿಸುವುದು ಹೇಗೆ, ನೀನು ಕೆಲಸ ಮಾಡು ಅಂತ ಹೇಳುತ್ತಿದಳು. ಇದೆ ವಿಷಯದ ಕುರಿತು ನನ್ನ ತಾಯಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂದು ತಿಳಿಸಿರುತ್ತಾಳೆ. ನಾವೇಲ್ಲರೂ ಮೃತ ಪುಷ್ಪಾ ಇವಳಿಗೆ ನೋಡಲಾಗಿ ಕುತ್ತಿಗೆ ಸುತ್ತಲೂ ಕಂದು ಗಟ್ಟಿದ ಗಾಯವಿರುತ್ತದೆ.     ನನ್ನ ಮಗಳಾದ ಪುಷ್ಪಾ ಇವಳು ತನ್ನ ಗಂಡನಾದ ಮಲ್ಲಿಕಾಜರ್ುನ ಈತನು ಸುಮಾರು ತಿಂಗಳಿಂದ ಆಗಾಗ ಸರಾಯಿ ಕುಡಿದು ಕೆಲಸ ಮಾಡದೆ ತಿರುಗಾಡುತ್ತಿರುವದನ್ನು ನೋಡಿ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ವಿಚಾರ ಮಾಡಿ ಬೇಜಾರು ಮಾಡಿಕೊಂಡು ಇಂದು ದಿನಾಂಕ 23/05/2020 ರಂದು ಮುಂಜಾನೆ 0720 ರಿಂದ 0745 ಗಂಟೆಯ ಅವದಿಯಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆಂದು ಗೊತ್ತಾಗಿರುತ್ತದೆ. ನೀಡಿದ ಹೇಳಿಕೆಯ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳಲಾಗಿದೆ.

ಧನ್ನೂರ ಪೊಲೀಸ ಠಾಣೆ ಯು.ಡಿ.ಆರ್ ಸಂಖ್ಯೆ : 05/2020 ಕಲಂ 174 ಸಿ.ಆರ್.ಪಿ.ಸಿ :-

ದಿನಾಂಕ 23-05-2020 ರಂದು 0830 ಗಂಟೆಗೆ ಕಣಜಿ ಗ್ರಾಮದಲ್ಲಿ ಸುರೇಶ ತಂದೆ ಕಲ್ಯಾಣರಾವ ಸೂಸೆಟ್ಟಿ ರವರು ನೇಣು ಹಾಕಿಕೊಂಡು ಮ್ರತ ಪಟ್ಟಿರುತ್ತಾನೆಂದು ಸುದ್ದಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿ, ಮ್ರತನ ಮನೆಗೆ ಭೇಟಿ ನೀಡಿ ಮ್ರತನ ಹೆಂಡತಿಯಾದ ಶ್ರೀಮತಿ ಫುಜಾಶ್ರೀ ಗಂಡ ದಿ. ಸುರೇಶ ಸೂಸೆಟ್ಟಿ ವಯ 25 ಜಾ. ಲಿಂಗಾಯ್ತ  ಸಾ, ಕಣಜಿ ರವರನ್ನು ಭೇಟಿ ಮಾಡಿ ವಿಚಾರಿಸಿ ಅವರು ಕೊಟ್ಟ ದೂರಿನ ಸಾರಾಂಶವೇನೆಂದರೆ, ನನಗೆ 1) ಸುಮೀತ  3 ವರ್ಷ 2) 1 ವರ್ಷದ ದು ಹೆಣ್ಣು ಮಗು ಇರುತ್ತದೆ. ನನ್ನ ಮಾವನವರು ಈ ಮೊದಲೇ ತಿರಿಕೊಂಡಿದ್ದು ನಮ್ಮ ಅತ್ತೆ  ಸರಸ್ವತಿ ಅಂತಾ ಇದ್ದು ಅವರ ಹೆಸರಿನಲ್ಲಿ ನಮ್ಮ ಗ್ರಾಮದಲ್ಲಿ ಒಂದು ಮನೆ ಮತ್ತು ಗ್ರಾಮದ ಶೀವಾರದಲ್ಲಿ ಅಂದಾಜು 6 ಎಕರೆಯಷ್ಟು ಜಮೀನು ಇದ್ದು ಅದನ್ನು ನನ್ನ ಗಂಡನವರೇ ಸಾಗುವಳಿ ಮಾಡಿಕೊಂಡು ಬರುತ್ತಿದ್ದರು. ನನ್ನ ಗಂಡನವರು ಹೊಲದ ಸಾಗುವಳಿ ಸಂಬಂಧ ಎಸ್,ಬಿ.ಹೆಚ್./ಎಸ್.ಬಿ.ಐ ಮತ್ತು ಸಹಕಾರ ಕ್ರಷಿ ಪತ್ತಿನ ಬ್ಯಾಂಕ ಹಾಗೂ ಡಿಸಿಸಿ ಬ್ಯಾಂಕದಲ್ಲಿ ಸುಮಾರು 4 ಲಕ್ಷದಷ್ಟು ಸಾಲ ಮಾಡಿದ್ದು ಅದನ್ನು ನಾವು ಹೇಗೆ ತೀರಿಸುವುದು ಅಂತಾ ನನ್ನ ಗಂಡನವರು  ನನ್ನ ಹತ್ತಿರ ಹಾಗೂ ಅವರ ತಾಯಿಯವರ ಹತ್ತಿರ ಹೇಳಿಕೊಳ್ಳುತ್ತಿದ್ದರು. ನಾನು ಸುಮಾರು  2 ದಿವಸಗಳಿಂದ ನಾನು ನನ್ನ ಚಿಕ್ಕ ಮಗುವಿಗೆ ಆರಾಮವಿಲ್ಲದ ಕಾರಣ ನಾನು ನನ್ನ ತವರು ಮನೆ ಹಲಬರ್ಗಾಕ್ಕೆ ಬಂದು ತವರು ಮನೆಯಲ್ಲಿ ಉಳಿದುಕೊಂಡಿದ್ದೆ. ಸದ್ಯ ಮನೆಯಲ್ಲಿ ನನ್ನ ಗಂಡ ಮತ್ತು ನಮ್ಮ ಅತ್ತೆ ಸರಸ್ವತಿ ಇಬ್ಬರೇ ಇದ್ದರು. ನಿನ್ನೆ ದಿನಾಂಕ 22/05/2020 ರಂದು ನಮ್ಮ ಅತ್ತೆಯವರ ಸಂಬಂಧಿ ಸಾಯಗಾಂವ ಗ್ರಾಮದವರಿದ್ದು ಅವರು ಕಣಜಿ ಗ್ರಾಮಕ್ಕೆ ಬಂದು ನಮ್ಮ ಅತ್ತೆಯವರನ್ನು 2 ದಿವಸ ತಮ್ಮ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದು ಆಗ ನನ್ನ ಗಂಡ ಒಬ್ಬರೆ ಮನೆಯಲ್ಲಿ ಇದ್ದರು.  ದಿನಾಂಕ 23/05/2020 ರಂದು ಮುಂಜಾನೆ 0800 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಶ್ರೀ ಸುನಿಲಕಿಮಾರ ಸೋನಜಿ ರವರು ನನಗೆ ಫೋನ ಮಾಡಿ ನಿನ್ನ ಗಂಡ ಸುರೇಶ ಈತನು ನಿಮ್ಮ ಮನೆಯಲ್ಲಿ ನೇಣು ಹಾಕಿಕೋಂಡು ಮ್ರತಪಟ್ಟಿರುತ್ತಾನೆಂದು ಸುದ್ದಿ ತಿಳಿಸಿದ ಮೇಲೆ ನಾನು, ನಮ್ಮ ತಾಯಿ, ತಂದೆ ರವೆಲ್ಲರು ಕೂಡಿ ನನ್ನ ತವರು ಮನೆಯಿಂದ ಕಣಜಿ ಗ್ರಾಮಕ್ಕೆ ಬಂದು ನಮ್ಮ ಮನೆಗೆ ಹೋಗಿ ನೋಡಲು ನಮ್ಮ ಮನೆಯ ಹಿಂದಿನ  ಕೋಣೆಯ ಛತ್ತಿಗೆ ಬಿಟ್ಟಿರುವ ಕಬ್ಬೀಣದ ಕೊಂಡಿಗೆ ಬಿಳಿ ನೂಲಿನ ಹಗ್ಗದಿಂದ ತನ್ನ ಕುತ್ತಿಗೆ ನೇಣು ಹಾಕಿಕೊಂಡು ಮ್ರತಪಟ್ಟು ಜೋತು ಬಿದ್ದಿತ್ತು. ದಿನಾಂಕ 22/05/2020 ರಂದು ರಾತ್ರಿ 11 ಪಿಎಂ ಗಂಟೆಯಿಂದ  ಇಂದು ದಿನಾಂಕ 23/05/2020 ರ ಮುಂಜಾನೆ 6 ಎ.ಎಂ ಗಂಟೆಯ ಮಧ್ಯ ಅವಧೀಯಲ್ಲಿ ಹೊಲದ ಸಾಗುವಳಿ ಸಂಬಂಧ ಎಸ್,ಬಿ.ಹೆಚ್./ಎಸ್.ಬಿ.ಐ ಮತ್ತು ಸಹಕಾರ ಕ್ರಷಿ ಪತ್ತಿನ ಬ್ಯಾಂಕ ಹಾಗೂ ಡಿಸಿಸಿ ಬ್ಯಾಂಕದಲ್ಲಿ ಸುಮಾರು 4 ಲಕ್ಷದಷ್ಟು ಸಾಲ ಮಾಡಿದ್ದು ಹೇಗೆ ತಿರಿಸುವುದು ತಾನು ಸಾಯಬೇಕೆಂದು ಮನಸ್ಸಿಗೆ ಬೇಜಾರುಮಾಡಿಕೊಂಡು ನಮ್ಮ ಮನೆಯ ಛತ್ತಿಗೆ ಬಿಟ್ಟಿರುವ ಕಬ್ಬೀಣದ ಕೊಂಡಿಗೆ ಬಿಳಿ ನೂಲಿನ ಹಗ್ಗದಿಂದ ತನ್ನ ಕುತ್ತಿಗೆ ನೇಣು ಹಾಕಿಕೊಂಡು ಮ್ರತಪಟ್ಟಿದ್ದು ಖಚಿತಪಡಿಸಿಕೊಂಡಿದ್ದು ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವ ರೀತಿಯ ಸಂಶಯ ಇರುವುದಿಲ್ಲಾ. ನನ್ನ ಗಂಡ ಸಾಲದ ಬಾದೆಯಿಂದ ತಾನು ಸಾಯಬೇಕೆಂದು  ನೇಣು ಹಾಕಿಕೊಂಡು ಮ್ರತಪಟ್ಟಿದ್ದು ನಿಜವಿರುತ್ತದೆ. ಅಂತ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಕೆ ಕೈಕೊಳ್ಲಾಗಿದೆ

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಪ್ರಕರಣ ಸಂಖ್ಯೆ :- 64/2020 ಕಲಂ ಹುಡುಗಿ ಕಾಣೆ :-

ದಿನಾಂಕ : 23/05/2020 ರಂದು ಮದ್ಯಾಹ್ನ 1300 ಗಂಟೆಗೆ ಫಿಯರ್ಾದಿ ಶ್ರೀಮತಿ ಶ್ರೀದೇವಿ ಗಂಡ ರಮೇಶ ರಾಯಪ್ಪನೋರ ಸಾ: ನಿಂಬೂರ ರವರು ಠಾಣೆಗೆ ಹಾಜರಾಗಿ ಫಿರ್ಯಾದು ಕೊಟ್ಟ ಸಾರಾಂಶವೆನೆಂದ್ದರೆ, ಫಿಯರ್ಾದಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಇರುತ್ತಾರೆ. ಫಿಯರ್ಾದಿಯ ಮಗಳಾದ ಸುವರ್ಣ ವಯ: 21 ವರ್ಷ ಇವಳು ಹುಮನಾಬಾದ ರಾಮನ್ ರಾಜ ಮಹಿಳಾ ಕಾಲೇಜನಲ್ಲಿ ಬಿ.ಕಾಂ 4 ನೇ ಸೇಮಿಸ್ಟರನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ದಿನಾಲು ಗ್ರಾಮದಿಂದ ಬಸ್ಸಿನಲ್ಲಿ ಹೋಗಿ ಬರುವುದು ಮಾಡುತ್ತಿರುತ್ತಾಳೆ. ಈಗ ಲಾಕ್ ಡೌನ ಇರುವುದರಿಂದ ಕಾಲೇಜು ರಜೆ ಇದ್ದುದ್ದರಿಂದ ಸದ್ಯ ಮನೆಯಲ್ಲಿಯೆ ಇರುತ್ತಾಳೆ. ನಮ್ಮ ಮನೆಯಲ್ಲಿ ನಾನು ನನ್ನ ಮಗಳಾದ ಸುವರ್ಣ ಮತ್ತು ಎರಡು ಜನ ಗಂಡು ಮಕ್ಕಳು ಎಲ್ಲರು ವಾಸವಾಗಿರುತ್ತೇವೆ. ದಿನಾಂಕ: 20/05/2020 ರಂದು ರಾತ್ರಿ 1000 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ನಾನು ನನ್ನ ಮಗಳಾದ ಸುವರ್ಣ ಮತ್ತು ಇಬ್ಬರು ಗಂಡು ಮಕ್ಕಳು ಎಲ್ಲರು ಊಟ ಮಾಡಿ ನಮ್ಮ ಮನೆಯಲ್ಲಿ ರಾತ್ರಿ 11:00 ಗಂಟೆ ಸುಮಾರಿಗೆ ಒಂದೆ ರೂಮನಲ್ಲಿ ಮಲಗಿಕೊಂಡಿರುತ್ತೇವೆ. ನಂತರ ದಿನಾಂಕ: 21/05/2020 ರಂದು ರಾತ್ರಿ 01:00 ಗಂಟೆ ಸುಮಾರಿಗೆ ನಾನು ಮೂತ್ರ ವಿಸರ್ಜನೆಗೆ ಎದ್ದಾಗ ನಮ್ಮ ರೂಮನಲ್ಲಿ ಮಲಗಿಕೊಂಡಿದ್ದ ನನ್ನ ಮಗಳಾದ ಸುವರ್ಣ ಇವಳು ಕಾಣದ ಕಾರಣ ನಾನು ನಮ್ಮ ಮಗಳು ಎಲ್ಲಿಗೆ ಹೋಗಿರಬಹುದು ಅಂತ ನಾನು ಮತ್ತು ನನ್ನ  ಮಗನಾದ ರಾಜು ಇಬ್ಬರು ನಮ್ಮ ಮನೆಯಲ್ಲಿ ಮತ್ತು ಮನೆಯ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ನೋಡಲು ನನ್ನ ಮಗಳು ಎಲ್ಲಿಗೆ ಹೋಗಿರುತ್ತಾಳೆ ಅಂತ ಗೊತ್ತಾಗಿರುವುದಿಲ್ಲಾ. ನಂತರ ದಿನಾಂಕ: 21/05/2020 ರಂದು ಬೆಳಿಗೆ ನಾನು ಸದರಿ ವಿಷಯ ನಮ್ಮ ಮನೆಯಲ್ಲಿ ತಿಳಿಸಿ ಗ್ರಾಮದ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಲು ಮತ್ತು ಎರಡು ದಿವಸ ನಮ್ಮ ಸಂಬಂಧಿಕರ ಮನೆಗಳಿಗೆ ಫೋನ್ ಮಾಡಿ ತಿಳಿದುಕೊಳ್ಳಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ. ಕಾಣೆಯಾದ ನನ್ನ ಮಗಳ ಚಹರೆ ಪಟ್ಟಿ ಇಂತಿದೆ ತೆಳ್ಳನೆಯ ಮುಖ ಸಾಧಾರಣ ಮೈಕಟ್ಟು, ನೇರವಾದ ಮೂಗು, ಗೋಧಿ ಮೈಬಣ್ಣಾ ಹೊಂದಿದ್ದು, ಮೈಮೇಲೆ ಕಪ್ಪು ಬಣ್ಣದ ಟಾಪ್ ಮತ್ತು ಚುಡಿದಾರ ಧರಿಸಿರುತ್ತಾಳೆ. ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ. ನನ್ನ ಮಗಳಾದ ಸುವರ್ಣ ಇವಳು ದಿನಾಂಕ: 20/05/2020 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ: 21/05/2020 ರಂದು ರಾತ್ರಿ 01:00 ಗಂಟೆ ಮದ್ಯಾವಧಿಯಲ್ಲಿ ನಮ್ಮ ಮನೆಯಿಂದ ಯಾರಿಗು ಹೇಳದೆ ಕೇಳದೆ ಹೋಗಿ ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ತಿಳಿದುಕೊಳ್ಳಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಆದ್ದರಿಂದ ನನ್ನ ಮಗಳನ್ನು ಹುಡುಕಿಕೊಡಲು ವಿನಂತ ಅಂತ ಕೊಟ್ಟ ಫಿಯರ್ಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.