ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-09-2019

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2019, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 14-09-2019 ರಂದು ಫಿರ್ಯಾದಿ ಅನಿತಾ ಗಂಡ ಸಿದ್ದಪ್ಪಾ ಕೈಕಡಿ ವಯ: 23 ವರ್ಷ, ಜಾತಿ: ಎಸ್.ಸಿ ಕೋರವಾ, ಸಾ: ಇಮಾಮಬಾದ (ಹಳ್ಳಿ) ರವರ ಗಂಡನಾದ ಸಿದ್ದಪ್ಪಾ ತಂದೆ ಮಹೇಶ ಕೈಕಡಿ ವಯ: 25 ವರ್ಷ ರವರು ತಮ್ಮ ಹೋಲದಲ್ಲಿನ ಹತ್ತಿ ಬೆಳಗೆ ಔಷಧಿಯನ್ನು ಹೊಡಯಲು ತಮ್ಮೂರ ಧನರಾಜ ಮಾತಮನಶೇಟ್ಟಿ ಮತ್ತು ರಮೇಶ ಮೇತ್ರೆ ರವರೊಂದಿಗೆ ಹೋಗಿ ಔಷಧಿ ಹೊಡಯುವಾಗ ಗಂಡ ಸಿದ್ದಪ್ಪಾ ರವರ ಎಡಗಾಲಿನ ಹಿಮ್ಮಡಿ ಮೇಲೆ ಕಣ್ಣಿಗೆ ಹಾವು ಕಚ್ಚಿದ್ದರಿಂದ ಅವರಿಗೆ ಖಾಸಗಿ ಚಿಕಿತ್ಸೆ ಕುರಿತು ರತ್ನಾಪೂರಗೆ ಕರೆದೊಯ್ದು ನಂತರ ಅಲ್ಲಿಂದ ಮನೆಗೆ ಬಂದಿದ್ದು, ನಂತರ ದಿನಾಂಕ 16-09-2019 ರಂದು ಗಂಡ ಸಿದ್ದಪ್ಪ ರವರ ಕಾಲು ಉಬ್ಬಿದ್ದರಿಂದ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರಯಲ್ಲಿ ದಾಖಲು ಮಾಡಿದಾಗ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಿಗೆ ಹೋಗಲು ತಿಳಿಸಿದ್ದರಿಂದ ಅವರಿಗೆ ದಿನಾಂಕ 17-09-2019 ರಂದು ಹೈದ್ರಾಬಾದಗೆ ಅಂಬುಲೆನ್ಸದಲ್ಲಿ ತೆಗದುಕೊಂಡು ಹೋಗುವಾಗ ದಾರಿಯಲ್ಲಿ ಜಹಿರಾಬಾದ ಹತ್ತಿರ  ಮೃತ್ತಪಟ್ಟಿದ್ದು ಇರುತ್ತದೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 92/2019, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 17-09-2019 ರಂದು ಫಿರ್ಯಾದಿ ಶಾಹಿಸ್ತಾ ಬೇಗಂ ಗಂಡ ಮಹ್ಮದ ಎಕ್ಬಾಲ, ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಗವಾನ ಚೌಕ ಹತ್ತಿರ ಬೀದರ ರವರು ಮತ್ತು ನಾದನಿ ಅಜಮತ್ ಬೇಗಂ ಗಂಡ ಅಬ್ದುಲ ಖುದ್ದುಸ ವಯ 33 ವರ್ಷ, ಸಾ: ಪನ್ಸಾಲ ತಾಲೀಮ ಬೀದರ ಮತ್ತು ಅತ್ತೆ ಕುಬರಾ ಬೀ ಗಂಡ ಶೇಕ್ ಮೆಹಬೂಬ ಸಾಬ ಮೂವರು ಕೂಡಿ ಅತ್ತೆಯಾದ ಕುಬರಾ ಬೀ ಇವರಿಗೆ ಬೀದರ ಕಾಮತ ಹೊಟೆಲ ಹತ್ತಿರ ಇರುವ ರಾಜಶೇಖರ ಕುಲಕರ್ಣಿ ಆಸ್ಪತ್ರೆಗೆ ತೋರಿಸಿಕೊಂಡು ಮರಳಿ ಗವಾನ ಚೌಕ ಹತ್ತಿರ ಇರುವ ಮನೆಗೆ ಬರಲು ಆಟೋ ನಂ. ಕೆಎ-38/1252 ನೇದ್ದರಲ್ಲಿ ಕುಳಿತು ಬರುತ್ತಿರುವಾಗ ಕನ್ನಡಾಂಬೆ ವೃತ್ತ ದಾಟಿ ಆಮಂತ್ರಣ ಹೊಟೆಲ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಕನ್ನಡಾಂಬೆ ವೃತ್ತದ ಕಡೆಯಿಂದ ಅಪರಿಚಿತ ಆಟೋ ಚಾಲಕನು ತನ್ನ ಆಟೋವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರು ಕುಳಿತ ಆಟೋದ ಬಲಭಾಗಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಓಡಿ ಹೋಗಿರುತ್ತಾನೆ, ಪರಿಣಾಮ ಆಟೋ ಒಳಗಿದ್ದ ನಾದನಿ ಅಜಮತ ಬೇಗಂ ಇವಳ ಎದೆಗೆ, ತಲೆಯ ಹಿಂದೆ ಭಾರಿ ಗುಪ್ತಗಾಯ, ಸೊಂಟದ ಎಡಭಾಗಕ್ಕೆ ತರಚಿದ ಗಾಯವಾಗಿರುತ್ತದೆ, ಫಿರ್ಯಾದಿ ಮತ್ತು ಅತ್ತೆಗೆ ಸಾದಾ ಗಾಯವಾಗಿದ್ದು ನಾವು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ, ನಂತರ ನಾದನಿಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ಅಜಮತ ಬೇಗಂ ಇವಳು ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 18-09-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 108/2019, ಕಲಂ. 279, 338, 304(ಎ) ಐಪಿಸಿ :-

ದಿನಾಂಕ 17-09-2019 ರಂದು ಶಕುಂತಲಾ ಪಾಟೀಲ್ ವಸತಿ ಶಾಲೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ-65 ಸೋಲಾಪುರ – ಹೈದ್ರಾಬಾದ ರೋಡಿನ ಮೇಲೆ ಹೈದ್ರಾಬಾದ ಕಡೆಯಿಂದ ಟ್ಯಾಂಕರ್ ಸಂ. ಎಂ.ಹೆಚ್-04/ಎಫ್.ಡಿ-1550 ನೇದರ ಚಾಲಕನಾದ ಜಯಪ್ರಕಾಶ ತಂದೆ ರಾಮಶಬದ ವಿಶ್ವಕರ್ಮ ಸಾ: ಸುಖಿಪೂ,  ಜಿಲ್ಲಾ: ಆಜಮಗಡ ಉತ್ತರ ಪ್ರದೇಶ ಇವನು ತನ್ನ ಟ್ಯಾಂಕರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ರೋಡಿನ ಎಡಗಡೆಗೆ ಬಂದು ಸಿಗ್ನಲ್ ಹಾಕದೇ ಒಮ್ಮೇಲ್ಲೆ ಬ್ರೇಕ್ ಹಾಕಿ ನಿಲ್ಲಿಸಿದ್ದು ಅದೇ ಸಮಯಕ್ಕೆ ಫಿರ್ಯಾದಿ ಪ್ರಭು ತಂದೆ ಗಣಪತಿ ಕೆಳಕೇರಿ ಸಾ: ಸಿಂಧನಕೇರಾ, ತಾ: ಚಿಟಗುಪ್ಪಾ, ಜಿಲ್ಲಾ: ಬೀದರ ರವರ ಮಗನಾದ ಮಗ ರಾಹುಲ ತಂದೆ ಪ್ರಭು ಕೆಳಕೇರಿ ಸಾ: ಸಿಂಧನಕೇರಾ ಇವನು ತನ್ನ ಮೋಟಾರ್ ಸೈಕಲ್ ಸಂ. ಕೆಎ-39/ಎಲ್-5865 ನೇದರ ಮೇಲೆ ಶಿವಕುಮಾರ ಇವನಿಗೆ ಕೂಡಿಸಿಕೊಂಡು ಸಿಂಧನಕೇರಾ ಗ್ರಾಮದಿಂದ ಹುಮನಾಬಾದ ಕಡೆಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-65 ಸೋಲಾಪುರ – ಹೈದ್ರಾಬಾದ ರೋಡಿನ ಮೇಲೆ ಶಕುಂತಲಾ ಪಾಟೀಲ್ ವಸತಿ ಶಾಲೆಯ ಎದುರುಗಡೆ ರೋಡಿನ ಮೇಲೆ ತನ್ನ ಮೋಟಾರ್ ಸೈಕಲ್ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಟ್ಯಾಂಕರ ಚಾಲಕನು ಒಮ್ಮೇಲ್ಲೆ ಬ್ರೇಕ್ ಮಾಡಿದರಿಂದ ಟ್ಯಾಂಕರನ ಹಿಂದಿನ ಎಡಗಡೆಯ ಭಾಗಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ  ತನ್ನ ಮೋಟಾರ್ ಸೈಕಲ್ ಮೇಲಿಂದ ರೋಡಿನ ಮೇಲೆ ಬಿದ್ದಿದ್ದರಿಂದ ರಾಹುಲ ಇವನಿಗೆ ತೀವ್ರ ರಕ್ತಗಾಯಗಳು ಆಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ಶಿವಕುಮಾರ ಇವನಿಗೆ ತೀವ್ರ ಗುಪ್ತಗಾಯಗಳು ಆಗಿರುತ್ತವೆ ಅಂತ ಫಿರ್ಯಾದಿಯವರು ನೀಡಿದ ಲಿಖಿತ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 105/2019, ಕಲಂ. 3 & 4 ಇ.ಸಿ ಕಾಯ್ದೆ :-

ದಿನಾಂಕ 17-09-2019 ರಂದು ಫಿರ್ಯಾದಿ ರವಿ ಸೂರ್ಯವಂಶಿ ಆಹಾರ ನಿರೀಕ್ಷಕರು ತಹಸೀಲ್ ಕಛೇರಿ ಬಸವಕಲ್ಯಾಣ ರವರು ತಹಸೀಲ್ ಕಛೇರಿ ಬಸವಕಲ್ಯಾಣದಲ್ಲಿರುವಾಗ ಮೋಬೈಲ್ ಮೂಲಕ ಮಾಹಿತಿ ಬಂದಿದ್ದೆನೆಂದರೆ ಅನಧಿಕೃತವಾಗಿ ಅಶೋಕ ಲೆಲ್ಯಾಂಡ ಲಾರಿ ನಂ. ಕೆ.ಎ-56/3605 ನೇದರಲ್ಲಿ ಪಿ.ಡಿ.ಎಸ್ ಅಕ್ಕಿ ಲೋಡ ಮಾಡಿಕೊಂಡು ಮುಂಬೈಗೆ ಸಾಗಾಟ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾದಿಯವರು ನೀಲಮ್ಮಾ ಆಹಾರ ಶಿರಸ್ತೆದಾರ ಮತ್ತು ರಾಜೇಶ್ವರಿ ಎಸ್.ಡಿ.ಎ ಆಹಾರ ಶಾಖೆ ಬಸವಕಲ್ಯಾಣ ಮತು ಇಬ್ಬರು ಪಂಚರನ್ನು ಬರಮಾಡಿಕೊಂಡು ಮಿನಿ ವಿಧಾನ ಸೌಧ ಬಸವಕಲ್ಯಾಣದಿಂದ ಹೊರಟು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯ ಹತ್ತಿರ ನಿಂತಿರುವಾಗ ಹುಮನಾಬಾದ ಕಡೆಯಿಂದ ಬಾತ್ಮಿಯಂತೆ ಲಾರಿ ನಂ ಕೆ.ಎ-56/3605 ನೇದರ ಚಾಲಕ ಅರೋಪಿ ಮಹ್ಮದ ಇಮ್ರಾನ್ ತಂದೆ ಸರ್ದಾರಮಿಯಾ ಶೇಖ್ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ತ್ರೀಪೂರಾಂತ ಬಸವಕಲ್ಯಾಣ ಇತನು ಚಲಾಯಿಸಿಕೊಂಡು ಬರುವಾಗ ಫಿರ್ಯಾದಿಯು ಲಾರಿ ನಿಲ್ಲಿಸಲು ಕೈ ಸನ್ನೆ ಮಾಡಿದಾಗ ಲಾರಿ ಚಾಲಕ ಲಾರಿ ನಿಲ್ಲಿಸಿದಾಗ ಫಿರ್ಯದಿಯವರು ಲಾರಿಯನ್ನು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆ ಕಂಪೌಂಡ ಒಳಗಡೆ ತೆಗೆಕೊಳ್ಳಲು ಸೂಚಿಸಿದಾಗ ಲಾರಿಯನ್ನು ಠಾಣೆಯ ಆವರಣದೊಳಗೆ ತೆಗೆದುಕೊಂಡಾಗ ಲಾರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಿದಾಗ ಅವನು ಅಕ್ಕಿ ತುಂಬಿದ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಸದರಿ ಲೋಡಿಗೆ ಸಂಬಂಧಿಸಿದ ದಾಖಲಾತಿಗಳನ್ನು ಹಾಜರಪಡಿಸಲು ಸೂಚಿಸಿದಾಗ ಚಾಲಕ ದಾಖಲಾತಿಗಳನ್ನು ಹಾಜರ ಪಡಿಸಿದ್ದು ಸೂಕ್ತದಾಖಲೆಗಳು ಇರಲಿಲ್ಲ, ಲಾರಿಯಲ್ಲಿದ್ದ ಅಕ್ಕಿ ಲೋಡ ಪರಿಶೀಲಿಸಿ ನೋಡಲು ಅಂದಾಜು 50 ಕೆ.ಜಿ ತೂಕದ ಒಟ್ಟು 500 ಗೋಣಿ ಚೀಲಗಳು ಇದ್ದು ಅಕ್ಕಿ ಪರೀಶಿಲಿಸಿ ನೋಡಲು ಪಿ.ಡಿ.ಎಸ್. ಅಕ್ಕಿಗೆ ಹೋಲುವ ಅಕ್ಕಿ ಇದ್ದುದ್ದರಿಂದ ಒಟ್ಟು 7,07,500/- ರೂ. ಬೆಲೆಯ ಅಕ್ಕಿ ಮತ್ತು 15 ಲಕ್ಷ ಬೆಲೆಯ ಲಾರಿಯನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 109/2019, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 17-09-2019 ರಂದು ಬಾಜೋಳಗಾ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಎಂದು ಕೂಗಿ ಕೂಗಿ ಹೇಳಿ ಜನರಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಸುದರ್ಶನರೆಡ್ಡಿ ಪಿ.ಎಸ್.ಐ ಖಟಕಚಿಂಚೊಳಿ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಜೋಳಗಾ ಕ್ರಾಸಗೆ ಹೊಗಿ ಬಸ್ ನಿಲ್ದಾಣದ ಹತ್ತಿರ ಮರೆಯಾಗಿ ನಿಂತು ನೊಡಲು ಬಾಜೋಳಗಾ ಕ್ರಾಸ್ ಹತ್ತಿರ ಇರುವ  ಬಸ್ ನಿಲ್ದಾಣದ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿ ರಾಜೇಶ ತಂದೆ ಜನಾರ್ಧನ ಮಾನತೆ ವಯ: 35 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ದಾಡಗಿ ಇತನು ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತ ಕೂಗಿ ಕೂಗಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಅವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವನ ಅಂಗ ಜಡ್ತಿ ಮಾಡಲು ಅವನಿಂದ ಮಟಕಾ ಆಟದಿಂದ ಬಂದ 1860/- ನಗದು ಹಣ ಮತ್ತು ಒಂದು ಬಾಲ ಪೇನ್, ಒಂದು ಮಟಕಾ ಚೀಟಿ ನೇದ್ದವುಗಳನ್ನು ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.