ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-09-2019

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 164/2019, ಕಲಂ. 379 ಐಪಿಸಿ :-
ಫಿರ್ಯಾದಿ ಕೆ. ಚಂದ್ರಶೇಖರ ವರ್ಮಾ ವಯ: 38 ವರ್ಷ, ಜಾತಿ: ಕ್ಷತ್ರಿಯ, ಸಾ: ಬೆಂಗಳೂರು, ಸದ್ಯ: ಬೀದರ ರವರು ರಿಲೈನ್ಸ ಜೆ.ಸಿ.ಎನ್ ಸೈಟ್ ನಂ. 61 ಹಳ್ಳದಕೇರಿ ಹೈದ್ರಾಬಾದ ರೋಡ್ ಸೆಂಟ್ ಜೋಸೆಪ್ ಹೈಸ್ಕೂಲ ಎದರುಗಡೆ ಇರುವ ಸೈಟ್‍ನಲ್ಲಿ ಸರ್ವರ್ ರೂಮ್‍ನಲ್ಲಿ ಬಳಸುವ ಎಲೆಟ್ರಿಕಲ್ ಕಾಪರ್ ಕೇಬಲ್ ವೈರ್‍ನ್ನು ಇಟ್ಟಿದ್ದು ಇರುತ್ತದೆ, ಅದನ್ನು ದಿನಾಂಕ 24-08-2019 ರಂದು ಯಾರೋ ಅಪರಿಚಿತ ಕಳ್ಳರು ಕಾಫರ ವೈರ್‍ನ್ನು (ಅ.ಕಿ 1,30,588/- ರೂ.) ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 11-09-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 33/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 11-09-2019 ರಂದು ಫಿರ್ಯಾದಿ ಶಿವರಾಜ ತಂದೆ ಗುಂಡಪ್ಪಾ ಸಾ: ರಾಜಗೀರಾ ಫಿರ್ಯಾದಿ ನಾಗಮ್ಮ ಗಂಡ ಶಿವರಾಜ ಮನ್ನಳ್ಳಿ ವಯಃ 60 ವರ್ಷ ಜಾತಿಃ ಲಿಂಗಾಯತ ಉಃ ಮನೆ ಕೆಲಸ ಸಾಃ ರಾಜಗೀರಾ ಹೇಳೀಕೆ ಪಡೆಯಲಾಗಿ ಇತನ ಹೇಳಿಕೆಯ ಸಾರಾಂಶವೆನೆಂದರೆ. ದಿನಾಂಕ 11/09/2019 ರಂದು ಗಂಟೆಗೆ ನನಗೆ ಆರಾಮ ಇಲ್ಲದ ಕಾರಣ ಚಿಕಿತ್ಸೆ ಕುರಿತು ನನ್ನ ಗಂಡನಾದ ಶಿವರಾಜ ತಂದೆ ಗುಂಡಪ್ಪಾ ಮ್ನನಳ್ಳಿ ವಯಃ 65 ವರ್ಷ ಜಾತಿಃ ಲಿಂಗಾಯತ ಉಃ ಒಕ್ಕಲುತನ ಸಾಃ ರಾಜಗೀರಾ ಅವರು ನನಗೆ ಕರೆದುಕೊಂಡು ಒಂದು ಖಾಸಗಿ ಆಟೋದಲ್ಲಿ ಮನ್ನಳ್ಳಿ ಗ್ರಾಮದ ಖಾಸಗಿ ಆಸ್ಪತ್ರೆ ಡಾಃಕಾಂತರೆಡ್ಡಿ ರವರ ಆಸ್ಪತ್ರೆಯಲ್ಲಿ ತಂದು ಬಿಟ್ಟು ನನ್ನ ಗಂಡನು ಸದ್ಯ ವೈದ್ಯರು ಇರದ ಕಾರಣ ನನಗೆ ಮನ್ನಳ್ಳಿಯ ಎಸ್.ಬಿ.ಐ ಬ್ಯಾಂಕ್‍ದಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆ ಅಂತ ನನಗೆ ಹೇಳಿ ಹೋಗಿರುತ್ತಾರೆ. ನಾನು ಆಸ್ಪತ್ರೆಯ ಪಕ್ಕದಲ್ಲಿದ್ದ ಮೆಡಿಕಲ್ ಹತ್ತಿರ ಕುಳಿತಿರುತ್ತೇನೆ. ನನ್ನ ಗಂಡ ಕಾಂತರಡ್ಡಿ ಆಸ್ಪತ್ರೆ ಮುಂದೆ ಇರುವ ರೋಡ ದಾಟಿ ಮೈಲಾರ ಮಲ್ಲಣ್ಣಾ ಮೊಬೈಲ್ ಶಾಪ್ ಮುಂದೆ ರೋಡ್ ದಾಟುವಾಗ ಮನ್ನಳ್ಳಿ ಗ್ರಾಮದ ಬಸ್ ನಿಲ್ದಾಣ ಕಡೆಯಿಂದ ಒಂದು ಮೋಟಾರ ಸೈಕಲ್ ನಂ ಕೆಎ-38 ಕ್ಯೂ-8937 ನೇದರ ಚಾಲಕ ಅತಿ ವೇಗ ಹಾಗೂ ನಿಷ್ಕಾಳಜಿತದಿಂದ ನಡೆಸಿಕೊಂಡು ಬಂದು ಒಮ್ಮೇಲೆ 11:20 ಗಂಟೆಯ ಸುಮಾರಿಗೆ ನನ್ನ ಗಂಡನಿಗೆ ಡಿಕ್ಕಿ ಮಾಡಿ ಓಡಿ ಹೋಗಿರುತ್ತಾನೆ. ನನ್ನ ಗಂಡ ಕೆಳಗೆ ಬಿದ್ದಿದ್ದು ಸ್ಥಳಕ್ಕೆ ಹೋಗಿ ನನ್ನ ಗಂಡನಿಗೆ ನೋಡಿದ್ದಾಗ ನನ್ನ ಗಂಡನು ವಾಂತಿ ಮಾಡಿಕೊಂಡಿದ್ದು, ಇವರು ಮಾತಾನಾಡುವ ಸ್ಥಿತಿಯಲ್ಲಿರಲಿಲ್ಲ ಮತ್ತು ಇವರಿಗೆ ತಲೆಯ ಹಿಂಭಾಗಕ್ಕೆ ಹತ್ತಿ ಭಾರಿ ಗುಪ್ತಗಾಯವಾಗಿರುತ್ತದೆ. ಅದೇ ಸಮಯಕ್ಕೆ ನಮ್ಮೂರ ಕೇಶಗೊಂಡ ತಂದೆ ಶರಣಪ್ಪಾ ಮೆತ್ರೆ ಸಾಃ ರಾಜಗೀರಾ ಮತ್ತು ಜೊತೆ ರಮೇಶ ತಂದೆ ಮಾರುತಿ ಸಾಃ ರಾಜಗೀರಾ ಬಂದು ಕೇಶಗೊಂಡನ ತನ್ನ ಆಟೋದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ್ ಮಾಡಿರುತ್ತಾರೆ. ನನ್ನ ಗಂಡನಿಗೆ ಡಿಕ್ಕಿ ಮಾಡಿ ಓಡಿ ಹೋದ ಮೋ/ಸೈ ನಂ ಕೆಎ-38 ಕ್ಯೂ-8937 ಚಾಲಕನ ಬಗ್ಗೆ ವಿಚಾರಿಸಲಾಗಿ ಆತನ ಹೆಸರು ಮೀರನ್ ತಂದೆ ಫಕ್ರೂದ್ದಿನ್ ಸಾಃ ಮನ್ನಳ್ಳಿ ಅಂತ ಗೊತ್ತಾಗಿರುತ್ತದೆ. ಕಾರಣ ಓಡಿ ಹೋದ ಮೋಟಾರ ಸೈಕಲ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ. ಅಂತಾ ಇತ್ಯಾದಿ ಹೇಳಿಕೆ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಮರಳಿ ಠಾಣೆಗೆ ದಿನಾಂಕ 11-09-2019 ರಂದು 15:00 ಗಂಟೆಗೆ ಬಂದು ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 33/2019 ಕಲಂ 279, 338, ಐಪಿಸಿ ಜೋತೆ 187 ಐಎಂವಿ ಅಕ್ಟ್ ನೇದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 102/2019, 279, 338 ಐ.ಪಿ.ಸಿ :-
ಇಂದು ದಿನಾಂಕ 11/09/2019 ರಂದು 11:30 ಗಂಟೆಗೆ ನಾನು ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಎಮ್ ಎಲ್ ಸಿ ಇರುವ ಬಗ್ಗೆ ಮಾಹೀತಿ ಬಂದ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಯಲ್ಲಿದ್ದ ಗಾಯಾಳು ರಾಮದಾಸ ತಂದೆ ಲಕ್ಷ್ಮಣರಾವ ಭೂಸಾರೆ ವಯ-50 ಜಾ-ಮರಾಠ ಸಾ-ಉಮರ್ಗಾ ಈತನನ್ನು ಕಂಡು ಗಾಯಾಳು ಜೋತೆ ಹಾಜರಿದ್ದ ಫಿರ್ಯಾದಿ ಶೇಖ ಪಾಶಾಮಿಯ್ಯಾ ತಂದೆ ಅಲ್ಲಾವುದ್ದೀನ ಶೇಖ ವಯ: 42 ವರ್ಷ ಜಾ; ಮುಸ್ಲಿಂ ಉ: ಒಕ್ಕಲುತನ ಸಾ: ಜೆಕಾಪೂರ ಕಾಲೋನಿ ಉಮರ್ಗಾ ಜಿ: ಉಸ್ಮನಾಬಾದ ರವರು ಕೊಟ್ಟ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ನಾನು ಈ ಮೇಲೆ ನಮೂದು ಮಾಡಿದ ವಿಳಾಸದವನಿದ್ದು ನನ್ನ ಹೆಸರಿನಲ್ಲಿ ಮಹಿಂದ್ರಾ ಬುಲೇರೂ ಪೀಕಪ ಗೂಡ್ಸ ವಾಹನ ನಂ-ಎಂಎಚ್-25-ಪಿ-4071 ನೇದ್ದು ಇದ್ದು ಅದರ ಮೇಲೆ ರಾಮದಾಸ ತಂದೆ ಲಕ್ಷ್ಮಣರಾವ ಭೂಸಾರೆ ವಯ-50 ಜಾ-ಮರಾಠ ಸಾ-ಉಮರ್ಗಾ ಈತನು ಚಾಲಕ ಅಂತ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿರುವಾಗ ಇಂದು ದಿನಾಂಕ 11/09/2019 ರಂದು 11:00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಬೊಲೆರೂ ಪೀಕಪ ಗೂಡ್ಸ ವಾಹನ ರಾ-.ಹೇ.ನಂ-65 ರ ಮೇಲೆ ರಸ್ತೆ ಅಪಘಾತವಾಗಿರುತ್ತದೆ ಅಂತಾ ವಿಷಯ ಗೋತ್ತಾಗಿದ್ದು ನಾನು ಬಂದು ನೋಡಲು ವಿಷಯ ನಿಜವಿದ್ದು. ನಮ್ಮ ಚಾಲಕ ರಾಮದಾಸನಿಗೆ ಘಟನೆಯ ಬಗ್ಗೆ ವಿಚಾರಿಸಲು ತಿಳಿಸಿದೆನೆಂದರೆ, ನಾನು ಗೂಡ್ಸ ವಾಹನದಲ್ಲಿ ಉಮರ್ಗಾದಿಂದ ಟಮಾಟೋ ಲೋಡ ತುಂಬಿಕೊಂಡು ಮನ್ಯಾಖೇಳಿಗೆ ಹೋಗುತ್ತಿದ್ದಾಗ ರಾ-ಹೇ,ನಂ-65 ರ ಮೇಲೆ ತಡೋಳಾ ಭವಾನಿ ಮಂದಿರ ಹಾಜಿಸಾಬ ಬಸವಕಲ್ಯಾಣ ರವರ ಹೊಲದ ಹತ್ತಿರ ನಾನು ಬುಲೇರೋ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂದಿನ ಬಲಗಡೆ ಟೈರ ಒಡೆದು ವಾಹನ ಪಲ್ಟಿ ಆಗಿರುತ್ತದೆ. ವಾಹನ ಪಲ್ಟಿಯಾಗಿದರಿಂದ ನನಗೆ ಬಲ ಮೋಣಕೈ ಹತ್ತಿರ ಭಾರಿ ರಕ್ತ ಮತ್ತು ಗುಪ್ತಗಾಯ ಹಾಗೂ ಸೊಂಟದಲ್ಲಿ ಗುಪ್ತಗಾಯವಾಗಿರುತ್ತದೆ. ನಂತರ ನಾನು 108 ಅಂಬುಲೇನ್ಸದಲ್ಲಿ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಕುರಿತು ಸೇರಿಕ ಆಗಿರುತ್ತೇನೆ ಅಂತಾ ತಿಳಿಸಿರುತ್ತಾನೆ. ಕಾರಣ ಬೊಲೆರೋ ಪೀಕಪ ಗೂಡ್ಸ ವಾಹನ ನಂಬರ-ಎಮ್.ಎಚ್-25-ಪಿ-4071 ನೇದ್ದು ನಿಷ್ಕಾಳಜಿತನದಿಂದ ಚಲಾಯಿಸಿ ಪಲ್ಟಿ ಮಾಡಿದ ರಾಮದಾಸ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ಹೇಳಿಕೆ ಫಿರ್ಯಾದು ಪಡೆದುಕೊಂಡು 15:00 ಗಂಟೆಗೆ ಠಾಣೆಗೆ ಬಂದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 102/2019 ಕಲಂ 279, 338 ಐ.ಪಿ.ಸಿ ನೇದ್ದರಲ್ಲಿ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.