BIDAR DISTRICT DAILY CRIME UPDATE 26-02-2021
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-02-2021 ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 13/2021, ಕಲಂ. 279, 338 ಐಪಿಸಿ ಜೊತೆ 187 ಐ.ಎಮ್.ವಿ ಕಾಯ್ದೆ :- ದಿನಾಂಕ 25-02-2021 ರಂದು ಫಿರ್ಯಾದಿ ಆಕಾಶ ತಂದೆ ರಮೇಶ ಹತ್ತೆರ್ಗೆ ವಯ: 23 ವರ್ಷ, ಜಾತಿ: ಲಿಂಗಾಯತ, ಸಾ: ಮಂಠಾಳ, ತಾ: ಬಸವಕಲ್ಯಾಣ ರವರ ಸಂಬಂಧಿಕರಾದ ಸುಶಿಲಾಬಾಯಿ ಗಂಡ ಅಣ್ಣೆಪ್ಪಾ ಉಜಳಂಬೆ ವಯ: 70 ವರ್ಷ ಸಾ: ಚಿಟ್ಟಾ(ಕೆ) ಗ್ರಾಮ ಇವರು ತಮ್ಮ ಮೊಮ್ಮಗಳಾದ ಈಶ್ವರಿ ತಂದೆ ಚಂದ್ರಕಾಂತ [...]