ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 31-03-2020

 

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 22/2020 ಕಲಂ279.304(ಎ)  ಐ.ಪಿ.ಸಿ ಜೋತೆ 187 ಐ,ಎಂ,ವಿ ಕಾಯ್ದೆ:-

 

ದಿನಾಂಕ 30/03/2020 ರಂದು 15:15 ಗಂಟೆಗೆ ಫಿರ್ಯಾದಿ ಶ್ರೀ ಸುಮೀತ್ ತಂದೆ ಪ್ರತಾಪಸಿಂಗ್ ಭಾರತಿ ವಯ:20 ವರ್ಷ ಜಾ: ರಾಜಪೂತ ಉ:ವಿದ್ಯಾಭ್ಯಾಸ ಸಾ: ಮನೆ ನಂ 87 ಎಲ್.ಐ.ಜಿ ಹುಡ್ಕೊ ಕೆ.ಹೆಚ್.ಬಿ ಕಾಲೂನಿ ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ  ಸಾರಾಂಶವೆನೆಂದರೆ  ದಿನಾಂಕ 30/03/2020 ರಂದು ಮಧ್ಯಾಹ್ನ 12:00 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ಫಿರ್ಯಾದಿ ತಂದೆಯವರು ಬೆನಕನಳ್ಳಿ ಗ್ರಾಮಕ್ಕೆ ಭವಾನಿ ಮಾತಾ ದರ್ಶನ್ ಮಾಡಿಕೊಂಡು ಬರುತ್ತೇನೆ ಅಂತ ಹೇಳಿ ನಮ್ಮ ಮೊಟಾರ ಸೈಕಲ್ ನಂ ಕೆಎ-38/ಕ್ಯೂ-1734 ನೇದ್ದರ ಮೇಲೆ ಕುಳಿತು ಹೋದರು ನಂತರ ಮದ್ಯಾಹ್ನ 2:45 ಗಂಟೆ ಸುಮಾರಿಗೆ   ಓಣಿಯ ಸಮರ್ಪನ್ ತಂದೆ ದಾಸ ಸೂರ್ಯವಂಶಿ ರವರು ನನ್ನ ತಂದೆಯವರ ಮೊಬೈಲ್ದಿಂದ ನನ್ನ ಮೋಬೈಲ್ ಗೆ ಫೋನ್ ಕರೆ ಮಾಡಿ ತಿಳಿಸಿದೇನೆಂದರೆ ನಾನು ಈಗ ನಮ್ಮ ಸಂಬಂಧಿಕರ ಮನೆಗೆ ಬೆನಕನಳ್ಳಿಗೆ ಹೋಗಿ ಮರಳಿ ಜ್ಞಾನ್ ಸುಧಾ ಶಾಲೆ ಕಡೆಯಿಂದ ಬೀದರಕ್ಕೆ ಬರುವಾಗ ನನ್ನ ಮೊಟಾರ ಸೈಕಲ ಮುಂದೆ ನಿಮ್ಮ ತಂದೆಯವರು ಸಹ ತಮ್ಮ ಮೊಟಾರ ಸೈಕಲ ನಂ ಕೆಎ-38/ಕ್ಯೂ-1734 ನೇದ್ದರ ಮೇಲೆ ಬೀದರ ಕಡೆಗೆ ಹೋಗುತ್ತಿದ್ದರು ಅಂದಾಜು ಮಧ್ಯಾಹ್ನ 2:00 ಗಂಟೆ ಸುಮಾರಿಗೆ ನಿಮ್ಮ ತಂದೆಯವರು ಬೆನಕನಳ್ಳಿ ಕ್ರಾಸ್ ಮೇಲೆ ರಿಂಗ್ ರೋಡಿಗೆ ಹೋದಾಗ ಜಹಿರಾಬಾದ ಕಡೆಯಿಂದ ಒಂದು ಗೂಡ್ಸ ವಾಹನ್ ಸಂಖ್ಯೆ ಕೆಎ-38/ಎ-1034 ನೇದ್ದರ ಚಾಲಕನು ತನ್ನ ಗೂಡ್ಸ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ನಿಮ್ಮ ತಂದೆಯವರ ಮೊಟಾರ ಸೈಕಲಗೆ ಡಿಕ್ಕಿ ಪಡಿಸಿ ತನ್ನ ಗೂಡ್ಸ್ ವಾಹನ್ ಘಟನೆ ಸ್ಥಳದಲ್ಲಿಯೆ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ   ಮೊಟಾರ ಸೈಕಲ ನಿಲ್ಲಿಸಿ ಹತ್ತಿರ ಹೋಗಿ ನೋಡಲು ನಿಮ್ಮ ತಂದೆಯವರ ತಲೆಯಲ್ಲಿ ಭಾರಿ ಗುಪ್ತ ಗಾಯ ಹಾಗೂ ತರಚೀದ ರಕ್ತಗಾಯ ವಾಗಿದ್ದು ಮತ್ತು ಬಲಗಡೆ ಹಣೆಯ ಮೇಲೆ ಬಲಕಣ್ಣಿ ಹತ್ತಿರ, ತಲೆಯ ಮೇಲ್ಭಾಗದಲ್ಲಿ, ಮುಗಿನ ಮೇಲೆ, ಎಡಕಣ್ಣಿ ಕೆಳಭಾಗದಲ್ಲಿ, ಎಡಗಡೆ ಗಟಾಯಿಗೆ, ಎರಡು ಕೈಗಳ ಮುಂಗೈ ಹತ್ತಿರ ಮತ್ತು ಎಡಗಾಲ ಮೊಳಕಾಲ ಹತ್ತಿರ ತರಚಿದ ಗಾಯಗಳು ಆಗಿದ್ದು, ನಾನು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಬೀದರ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ದಾರಿಯಲ್ಲಿ ಅಂದಾಜು 2:30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 56/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 30/03/2020 ರಂದು 07-00 ಗಂಟೆಗೆ ಪಿ.ಎಸ್.ಐ ಗಾಂಧಿ ಗಂಜ ಠಾಣೆರವರಾಸ ಶ್ರೀ ಮಂಜನಗೌಡ ಪಾಟೀಲ್ ರವರಿಗೆ ಖಚಿತ ಬಾತ್ಮಿ ಬಂದದ್ದೆನೆಂದರೆ ಬೀದರ ನಗರದ ಜಂಗಲಕೊಯಿ ಗೌಳಿವಾಡಾದಲ್ಲಿರು ಬಾಳೆ ಹಣ್ಣಿನ ಗೋದಾಮ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸಂಬಂದ ಪಟ್ಟ ಇಲಾಖೆಯಿಂದ ಅನುಮತಿ ಪಡೆಯದೆ ಸರಾಯಿಯುಳ್ಳ ಪಾಕೇಟಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ ಬಂದ  ಮೆರೆಗೆ ಸಿಬ್ಬಂದಿಯೊಂದಿಗೆ ಹೋಗಿ   ದಾಳಿ ನಡೆಯಿಸುವಷ್ಟರಲ್ಲಿ ಒಬ್ಬ ವ್ಯಕ್ತಿ ಅಲ್ಲಿಂದ ಓಡಿ ಹೋಗಿದ್ದು ಅಲ್ಲಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಅನ್ವರ ತಂದೆ ಅಬ್ದುಲ್ ರಹಿಮಾನ ಖಸಾಬ ವಯ 35 ವರ್ಷ ಉ|| ಅಟೋ ಚಾಲಕ ಸಾ|| ಲಾಡಗೇರಿ ಬೀದರ ಅಂತ ತಿಳಿಸಿ ಅವನ ಬಳಿ ಇದ್ದ ಕೈ ಚೀಲದಲ್ಲಿ ಮತ್ತು ಕಾಟನದಲ್ಲಿ ಎನಿದೆ ಅಂತಾ ವಿಚಾರಿಸಲು  ಕೈ ಚೀಲದಲ್ಲಿ 90 ಎಂ ಎಲ್ ಒರಿಜನಲ ಚಾಯಿಸಿ ಡಿಲೆಕ್ಸ ವಿಸ್ಕಿ ಸರಾಯಿ ಪಾಕೆಟಗಳು ಮತ್ತು ಕಾಟನದಲ್ಲಿ 180 ಎಮ್.ಎಲ್.ನ ಓಲ್ಡ ಟವೇರನ್ ವಿಸ್ಕಿ ಪಾಕೇಟಗಳುಇರುತ್ತವೆ ಅಂತ ತಿಳಿಸಿದ್ದು, ಅವುಗಳನ್ನು ಮಾರಾಟ ಮಾಡಲು ಸಂಬಂದ ಪಟ್ಟ ಇಲಾಖೆಯಿಂದ ಅನುಮತಿ ಪಡೆದ ಬಗ್ಗೆ ವಿಚಾರಿಸಲು ಸಂಬಂದ ಪಟ್ಟ ಇಲಾಖೆಯಿಂದ ಯಾವುದೆ ರೀತಿಯ ಅನುಮತಿ ಪಡೆಯದೆ ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು. ಸದರಿ ಕೈ ಚೀಲದಲ್ಲಿರುವ ಸರಾಯಿ ಪಾಕೇಟಗಳು ಹೊರಗೆ ತಗೆದು  ಪರಿಶಿಲಿಸಿ ನೋಡಲು 90 ಎಂ ಎಲ ನ 50 ಒರಿಜನ ಚಾಯಿಸಿ ಡಿಲೆಕ್ಸ ವಿಸ್ಕಿ ಪೌಚಗಳು ಇದ್ದು   ಅವುಗಳ ಒಂದರ ಕಿಮ್ಮತ್ತು 30 ರೂಪಾಯಿ 32 ಪೈಸಿ ಇದ್ದು 50  ಓರಿಜನ ಚಾಯಿಸಿ ವಿಸ್ಕಿ ಡಿಲೆಕ್ಸ ಪೌಚಗಳ ಒಟ್ಟು ಕಿಮ್ಮತ್ತು ರೂ: 1,516/- ರೂ ಇರುತ್ತವೆ. ಕಾಟನದಲ್ಲಿರುವ ಸರಾಯಿ ಪಾಕೇಟಗಳು ಹೊರಗೆ ತಗೆದು  ಪರಿಶಿಲಿಸಿ ನೋಡಲು 180 ಎಂ ಎಲ ನ 40 ಒಲ್ಡ ಟಾವೆರನ ವಿಸ್ಕಿ ಪೌಚಗಳು ಇದ್ದು   ಅವುಗಳ ಒಂದರ ಕಿಮ್ಮತ್ತು 73  ರೂಪಾಯಿ 13 ಪೈಸಿ ಇದ್ದು   40 ಒಲ್ಡ ಟಾವೆರನ ವಿಸ್ಕಿ ಪೌಚಗಳು  ಒಟ್ಟು ಕಿಮ್ಮತ್ತು ರೂ: 2,925=02/- ರೂ ಇರುತ್ತವೆ.  ಅಂತ ಅಮಿನ ಸಾಹೇಬರು ಲೆಕ್ಕಮಾಡಿ ತಿಳಿಸಿರುತ್ತಾರೆ. ಆವನ ಕೀಸೇಯಲ್ಲಿ ನೋಡಲು ನಗದು ಹಣ 200=00ರೂ ಇದ್ದವು, 90 ಎಂ ಎಲ ನ 50 ಒರಿಜನ ಚಾಯಿಸಿ ಡಿಲೆಕ್ಸ ವಿಸ್ಕಿ ಪೌಚಗಳು  ಮತ್ತು 180 ಎಂ ಎಲ ನ 40 ಒಲ್ಡ ಟಾವೆರನ ವಿಸ್ಕಿ ಪೌಚಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂಖ್ಯೆ 41/2020 ಕಲಂ 457, 380 ಐಪಿಸಿ :-

 

ದಿನಾಂಕ : 30/03/2020 ರಂದು ಫಿರ್ಯಾದಿ ಶ್ರೀಮತಿ ಅಸ್ಮಾ ಜಬೀನ್ ರವರು ಕನ್ನಡದಲ್ಲಿ ಟೈಪ ಮಾಡಿದ ಒಂದು ದೂರು ಅಜರ್ಿ ಸಲ್ಲಿಸಿದನ್ನು ಸ್ವೀಕರಿಸಿಕೊಂಡು ನೋಡಲು ಸಾರಾಂಶವೆನೆಂದ್ದರೆ, ನಾನು ಶ್ರೀಮತಿ ಅಸ್ಮಾ ಜಬೀನ ಗಂಡ ತೋಫಿಕ ಅಹ್ಮದ ಹುಮನಾಬಾದ ವಯ-32 ವರ್ಷ ಜಾತಿ ಮುಸ್ಲಿಂ ಉ-ಮನೆ ಕೆಲಸ ಸಾ-ಹುಮನಾಬಾದ ಸದ್ಯ ಹಳ್ಳಿಖೇಡ[ಬಿ] ಪಟ್ಟಣದ ನಿವಾಸಿ ಮದುವೆಯಾಗಿ 12 ವರ್ಷ ಆಗಿದ್ದು ಗಂಡ ಉಮಾನ ದೇಶದ ಮಸ್ಕತನಲ್ಲಿ ಎಲೆಕ್ಟ್ರೀಕಲ್ ಇಂಜೀನಿಯರ ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ಈಗ 10 ವರ್ಷದಿಂದ ಫಿಯರ್ಾದಿ ತವರೂರಾದ ಹಳ್ಳಿಖೇಡ[ಬಿ] ಪಟ್ಟಣದಲ್ಲಿ ಟೀಚರ್ ಕಾಲೋನಿಯಲ್ಲಿ ಮನೆ ಮಾಡಿಕೊಂಡು ನನ್ನ ಇಬ್ಬರು ಹೆಣ್ಣು ಮಕ್ಕಳ ಜೋತೆ ವಾಸವಾಗಿರುತ್ತೇನೆ. ದಿನಾಂಕ-5/03/2020 ರಂದು ಮುತ್ತಂಗಿ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಲಗ್ನ ಇದ್ದುದರಿಂದ ನಾನು ನಮ್ಮ ತಾಯಿಯಾದ ರಫೀಕ್ ಹುನ್ನಿಸಾ ಹಾಗೂ ನನ್ನ ತಂಗಿಯಾದ ಶಾಹೀಸ್ತಾ ನಿಶಾತ ಮತ್ತು ಮೌಸಿಯಾದ ಜಕೀಯಾ ಬೇಗಂ ಎಲ್ಲರು ಲಗ್ನಕ್ಕೆ ಹೋಗಿ ನಂತರ ಅಂದು ರಾತ್ರಿ ಎಲ್ಲರು ನಮ್ಮ ಮನೆಗೆ ಬಂದಿದ್ದು, ಆ ದಿವಸ ಎಲ್ಲರು ತಮ್ಮ ಮೈಮೇಲೆ ಹಾಕಿಕೊಂಡಿದ್ದ ಅಂದರೆ ನನ್ನ ಮೈಮೇಲೆ ಇದದ್ದ 1] 4 ತೋಲೆಯ ಬಂಗಾರದ ರಾಣಿ ಹಾರ ಅ.ಕಿ- 1,20,000/- 2] 3 ತೊಲೆಯ ಬಂಗಾರದ ನೆಕಲೇಸ್ ಅ.ಕಿ- 90,000/- 3] ಒಂದೂವರೆ ತೊಲೆಯ ಒಂದು ಬಂಗಾರದ ನೆಕಲೇಸ್ ಅ.ಕಿ-  45,000/- 4] 5 ಗ್ರಾಂ.ನ 4 ಬಂಗಾರದ ಉಂಗುರುಗಳು ಅ.ಕಿ- 60,000/- 5] 7 ಗ್ರಾಂ.ನ ಬಂಗಾರದ ಒಂದು ಬ್ರಾಸಲೇಟ ಅ.ಕಿ- 21,000/- 6] ಎರಡೆರಡು ಗ್ರಾಂ.ನ 2 ಬಂಗಾರದ ಬ್ರಾಸಲೇಟಗಳೂ ಅ.ಕಿ- 12,000/- 7] 8 ಗ್ರಾಂ.ನ 4 ಬಂಗಾರದ ಕಿವಿ ರಿಂಗಗಳು ಅ.ಕಿ-24,000/- 8] 7 ಗ್ರಾಂ.ನ ಒಂದು ಲಾಕೇಟ ಅ.ಕಿ- 21,000/- 9] ಎರಡೆರಡು ಗ್ರಾಂ. ನ ಎರಡು ಉಂಗುರುಗಳು ಅ.ಕಿ-12,000/- ಹಾಗೂ ನನ್ನ ತಂಗಿಯಾದ ಶಾಹೀಸ್ತಾ ನಿಶಾತ ರವರ 1] 12 ಗ್ರಾಂ. ನ ಒಂದು ಬ್ರಾಸಲೇಟ್ ಅ.ಕಿ- 36,000/- 2] 13 ಗ್ರಾಂ. ನ ಒಂದು ನಕಲೇಸ್ ಅ.ಕಿ- 39,000/- 3] 5 ಗ್ರಾಂ. ನ ಕಿವಿಯ ರಿಂಗಗಳು ಅ.ಕಿ- 15,000/- 4] ಒಂದು ತೊಲೆಯ ಲಾಕೇಟ್ ಅ.ಕಿ-30,000/- 5] 2 ಗ್ರಾಂ. ನ ಒಂದು ಉಂಗುರು ಅ.ಕಿ- 6,000/- 6] ಒಂದೊಂದು ಗ್ರಾಂ.ನ ಎರಡು ಕಿವಿಯ ರಿಂಗಗಳು ಅ.ಕಿ- 6,000/- ಹಾಗೂ ನನ್ನ ಮೌಸಿಯಾದ ಜಕೀಯಾ ಬೇಗಂ ರವರ 1] 11 ಗ್ರಾಂ.ನ ಒಂದು ಲಾಕೇಟ್ ಅ.ಕಿ- 33,000/- 2] ಎರಡುವರೆ ಗ್ರಾಂ.ನ ಒಂದು ಉಂಗುರು ಅ.ಕಿ-7,500/- 3] 2 ಗ್ರಾಂ. ನ ಒಂದು ಉಂಗುರು ಅ.ಕಿ- 6,000/- 4] ಒಂದೂವರೆ ಗ್ರಾಂ.ನ ಒಂದು ಉಂಗುರು ಅ.ಕಿ- 4,500/- ಎಲ್ಲವನ್ನು ನಮ್ಮ ಮನೆಯಲ್ಲಿ ಕಬ್ಬಿಣದ ಅಲಮಾರಿಯಲ್ಲಿ ಹಾಕಿ ಲಾಕ್ ಮಾಡಿ ಇಟ್ಟಿರುತ್ತೇವೆ. ಅಂದು ರಾತ್ರಿ ಎಲ್ಲರು ನಮ್ಮ ಮನೆಯಲ್ಲಿಯೆ ಮಲಗಿಕೊಂಡಿದ್ದು, ನಂತರ ಮರುದಿವಸ ಅವರು ತಮ್ಮ ಬಂಗಾರ ನಮ್ಮ ಮನೆಯ ಅಲಮಾರಿಯ ಲಾಕರನಲ್ಲಿಯೆ ಇಟ್ಟು ಹೋಗಿರುತ್ತಾರೆ. ದಿನಾಂಕ: 28/03/2020 ರಂದು ರಾತ್ರಿ ಸಮಯದಿಂದ ದಿನಾಂಕ: 30/03/2020 ರಂದು ಮುಂಜಾನೆ 06:00 ಗಂಟೆಯ ಮದ್ಯಾವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.