ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 30-05-2020

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 74/2020 ಕಲಂ 457, 380 ಐಪಿಸಿ :-

ದಿನಾಂಕ 29/05/2020 ರಂದು 1430 ಗಂಟೆಗೆ ಫಿಯರ್ಾದಿ ಅಶೋಕ ತಂದೆ ಲಕ್ಷ್ಮಣ ಸಿಂಧೆ, ವಯ 55 ವರ್ಷ  ಉ. ಒಕ್ಕಲುತನ, ಸಾ. ಮೋಳಕೇರಾ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ  ಇವರಿಗೆ   1] ಲಕ್ಷ್ಮಣ, 2] ಶಿವಕುಮಾರ, 3] ಅಜಯ 4] ಅಕ್ಷಯ ಮತ್ತು 5] ಭಾಗ್ಯಶ್ರೀ ಅಂತಾ ಒಟ್ಟು 5 ಜನ ಮಕ್ಕಳಿರುತ್ತೇವೆ. ದಿನಾಂಕ 28/05/2020 ರಂದು ರಾತ್ರಿ 9.00 ಗಂಟೆಗೆ ಎಲ್ಲರು ಊಟ ಮಾಡಿಕೊಂಡು ಮನೆಗೆ ಕೀಲಿ ಹಾಕಿಕೊಂಡು ಮಲಗಿಕೊಳ್ಳಲು ಮನೆಯ ಮೇಲೆ ಹೋಗಿರುತ್ತಾರೆ.  ಇವರ ಪತ್ನಿ ಲಕ್ಷ್ಮಿ ಇವರು ಮುಂಜಾನೆ 5.00 ಗಂಟೆಗೆ ಎದ್ದು ಕೆಳಗೆ ಬಂದು ನೋಡಲು ನಮ್ಮ ಮನೆಗೆ ಹಾಕಿದ ಕೀಲಿಯ ಕೊಂಡಿ ಮುರಿದಿದ್ದರಿಂದ ಒಳಗೆ ಹೋಗಿ ನೋಡಲು   ಮನೆಯ ದೇವರ ಮನೆಯಲ್ಲಿ ಇಟ್ಟ ಅಲಮಾರಿ ಇರಲಿಲ್ಲ ನಂತರ ಇವರೆಲ್ಲರು ಕೂಡಿ ಹುಡಕಾಡಿ ನೋಡಲು ಅಂದಾಜು 400 ಮೀಟರ ದೂರು ಊರು ಹೋರಗಡೆ ಬಿಸಾಗಿದ್ದು ್ಮ ಅಲಮಾರಿ ಚೇಕ ಮಾಡಿ ನೋಡಲು ಅಲಮಾರಿಯಲ್ಲಿ ಇಟ್ಟ 1] ಒಂದು ಗ್ರಾಂ ಬಂಗಾರದ ಸಣ್ಣ ಮಗುವಿನ ಉಂಗರು ಅ.ಕಿ 4000/- ರೂಪಾಯಿ ಮತ್ತು 3 ಗ್ರಾಂ ಬಂಗಾರದ ಕಿವಿಯಲ್ಲಿ ಒಲೆ ಅ.ಕಿ 12,000/- ರೂಪಾಯಿ ನೇದ್ದವು ಇರಲಿಲ್ಲ ದಿನಾಂಕ 28/05/2020 ರಂದು ರಾತ್ರಿ 9.30 ಗಂಟೆಯಿಂದ ಮುಂಜಾನೆ 4.00 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಕೀಲಿಯಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಇದ್ದ ಅಲಮಾರಿ ತೆಗೆದುಕೊಂಡು ಹೋಗಿ ಅದರಲ್ಲಿ ಇದ್ದ ಒಟ್ಟು 4 ಗ್ರಾಂ ಬಂಗಾರ ಅಂದಾಜು ಕಿಮ್ಮತ್ತು 16,000/- ರೂಪಾಯಿ ನೇದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/2020 ಕಲಂ 174 ಸಿಆರ್.ಪಿ.ಸಿ :-

ದಿನಾಂಕ 29/05/2020 ರಂದು 1730 ಗಂಟೆಗೆ ಗಂಟೆಗೆ ಶ್ರೀಮತಿ ಜಗದೇವಿ ಗಂಡ ಬಸವರಾಜ ಶಟಗೊಂಡೆ ಸಾ|| ಅಲಿಯಂಬರ ಗ್ರಾಮ ರವರು ಖದ್ದಾಗಿ ಠಾಣೆಗೆ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನಂದರೆ ದಿನಾಂಕ 29/05/2020 ರಂದು ಮುಂಜಾನೆ 11:00 ಗಂಟೆಯ ಸುಮಾರಿಗೆ ಇವರ ಗಂಡ ಬಸವರಾಜ ರವರು ತಮ್ಮ ಮನೆ ಹಿಂದೆ ಇರುವ ನಮ್ಮ ಹೊಲ ಸರ್ವೆ ನಂ 314 ನೇದರ ಜಮೀನಿನಲ್ಲಿ ಕಸ ಆಯಲು ಹೊಲಕ್ಕೆ ಹೊಗಿರುತ್ತಾರೆ. ಸಾಯಂಕಾಲ 4 : 00 ಗಂಟೆಯ ಸುಮಾರಿಗೆ ಜೋರಾದ ಮಳೆ ಬಂದು ಗುಡುಗು ಸಿಡಿಲು ಆಗಿ ಘದರಿಸುತ್ತಿರುವಾಗ ಸಿಡಿಲಿನ ಜೋರಾದ ಶಬ್ದ ಕೇಳಿ ಗಾಬರಿಗೊಂಡ ಫಿರ್ಯಾದಿ ಮತ್ತು ಮಕ್ಕಳಾದ ವಿಕ್ರಮ ಮತ್ತು ಲಕ್ಷ್ಮಣ ಹಾಗು ಮೈದೂನ ಸೂನೀಲ್ ಶೆಟಗೊಂಡ ರವರು ಮನೆ ಹಿಂದುಗಡೆ ನಿಂತು ನೋಡಲು   ಹೊಲ ಸರ್ವೆ ನಂ 314 ನೇದರ ಜಮೀನಿನ ಕಟ್ಟೆಗೆ ಇರುವ ಹುಣಸೆಮರದ ಕೆಳಗೆ ಇವರ ಗಂಡ ಬಸವರಾಜ ರವರು ನೇಲದ ಮೇಲೆ ಬಿದ್ದಿದ್ದನ್ನು ಕಂಡು ತಕ್ಷಣ ಅವರ ಹತ್ತಿರ ಹೋಗಿ ನೋಡಲು ನನ್ನ ಗಂಡನ ಎದೆಯ ಮೇಲೆ ಮತ್ತು ಮುಗಿನ ಮೇಲೆ ಸಿಡಿಲು ಬಡಿದು ಸುಟ್ಟಗಾಯವಾಗಿ ಅವರು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಯು.ಡಿ.ಆರ್ ಸಂಖ್ಯೆ 08/2020 ಕಲಂ 174 ಸಿಆರ್.ಪಿ.ಸಿ :-

ದಿನಾಂಕ: 29-05-2020 ರಂದು 1815 ಗಂಟೆಗೆ ಫಿರ್ಯಾದಿ ಅಶೋಕ ತಂದೆ ನರಸಿಂಗ್ ಸಿಂಗಾಡೆ ವಯ: 51 ವರ್ಷ, ಸಾ: ಹಿಪ್ಪಳಗಾಂವ ರವರು ನೀಡಿದ ಹೇಳಿಕೆ ಸಾರಾಂಶವೆನೆಂದರೆ ಫಿರ್ಯಾದಿಗೆ ಮಗನಾದ ಮಾರುತಿ ವಯ: 24 ವರ್ಷ, ಇವನು ಮತ್ತು ಗ್ರಾಮದ ಶಿವಕುಮಾರ ಮಡಿವಾಳ ಕೂಡಿಕೊಂಡು ಕುಶನೂರ ಶಿವಾರದಲ್ಲಿರುವ ತಮ್ಮ ಹೋಲಕ್ಕೆ ಮಧ್ಯಾಹ್ನ ಹೋಗಿದ್ದು ಬಿಸಿಲು ತಾಪವಿದ್ದಿದ್ದರಿಂದ ಇವರುಗಳು ಹಿಪ್ಪಳಗಾಂವ ಶಿವಾರದಲ್ಲಿರುವ ಪಕ್ಕದ ವಸಂತರಾವ ದೇಸಾಯಿ ರವರ ಹೋಲದಲ್ಲಿದ್ದ ಮಾವಿನ ಮರದ ಕೇಳಗೆ ಹೋಗಿ ಮಲಗಿಕೊಂಡಿದ್ದು  ಸಾಯಂಕಾಲ ಅಂದಾಜು 1700 ಗಂಟೆ ಸುಮಾರಿಗೆ ಮಿಂಚು ಗುಡುಗಿನಿಂದ ಮಳೆ ಬಂದಿರುತ್ತದೆ ಫಿರ್ಯಾದಿ ಮತ್ತು ಶಿವಕುಮಾರ ಮಡಿವಾಳ ರವರು ಎದ್ದು ಮರದಿಂದ ಆಚೆಗೆ ಬಂದು ಮಕ್ಕಳಿಗೆ ನಡೆಯಿರಿ ಮನೆಗೆ ಹೋಗೋಣ ಅನ್ನುತ್ತಾ ಮುಂದೆ ಬಂದಾಗ 1730 ಗಂಟೆ ಸುಮಾರಿಗೆ ಫಿರ್ಯಾದಿ ಮಗನಾದ ಮಾರುತಿ ವಯ: 24 ವರ್ಷ, ಇವನ ಆಕಸ್ಮಿಕವಾಗಿ ಸಿಡಿಲು ಬಡಿದು ಎದೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.