ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 30-03-2020
ಬೀದರ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 13/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ 29/03/2020 ರಂದು ರಾತ್ರಿ 2000 ಗಂಟೆಗೆ ಸವಿತಾ ಪ್ರಿಯಾಂಕ ಪಿ.ಎಸ.ಐ ಬೀದರ ಗ್ರಾಮೀಣ ಠಾಣೆ ರವರು ಪೆಟ್ರೊಲಿಂಗ ಕರ್ತವ್ಯದ ಮೇಲೆ ಕಮಠಾಣಾ ಹತ್ತಿರ ಇದ್ದಾಗ ಬಕಚೌಡಿ ಗ್ರಾಮದಲ್ಲಿ ಬಕಚೌಡಿ ಗ್ರಾಮದ ಸೈಲೇಶ ತಂದೆ ವೈಜಿನಾಥ ಮಡಕೆ ಮತ್ತು ಅವನ ಅಣ್ಣ ಸುಶೀಲ ತಂದೆ ವೈಜಿನಾಥ ಮಡಕೆ ಸಾ|| ಬಕಚೌಡಿ ರವರು ತಮ್ಮ ಕೊಟ್ಟಿಗೆಯ ಹತ್ತಿರ ರಸ್ತೆಯ ಮೇಲೆ ಕೋರೋನಾ ವೈರಸ್ ತಡೆಗಟ್ಟುವ ನಿಮಿತ್ಯ ಜಿಲ್ಲೆಯಲ್ಲಿ ಸರಾಯಿ ಮಾರಾಟ ನಿಷೇಧ ಇದ್ದರು ಸಹ ಅಕ್ರಮವಾಗಿ ಸರಾಯಿ ಮಾರಾಟ ,ಮಾಡಲು ಸಾಗಾಟ ಮಾಡುತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ಕಾರಣ ಸದರಿಯವರ ಮೇಲೆ ಕಲಂ 32,34 ಕೆ.ಈ ಎಕ್ಟ ನೇದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 55/2020 ಕಲಂ 87 ಕೆ.ಪಿ ಕಾಯ್ದೆ :-
ದಿನಾಂಕ 29/03/2020 ರಂದು 1905 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ರಾಮನಗರ ಕಾಲೋನಿಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತಿದ್ದ ಬಗ್ಗೆ ಮಾಹಿತಿ ಬಂದಿದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ರಾಮನಗರ ಕಾಲೋನಿಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೇಂದ್ರಿಯ ವಿದ್ಯಾಲಯದ ಹತ್ತಿರ ನಿಲ್ಲಿಸಿ ಕೆಳಗಡೆ ಇಳಿದು ಮರೆಯಾಗಿ ನಿಂತು ನೋಡಲು 7 ಜನರು ರೋಡಿನ ಪಕ್ಕ ಖುಲ್ಲಾ ಜಾಗೆಯಲ್ಲಿ ಲೈಟಿನ ಬೆಳಕಿನಲ್ಲಿ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟ ಆಡುತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿಎಸ್ಐ ಹಾಗೂ ಸಿಬ್ಬಂದಿಯವರು ಕೂಡಿ 1930 ಗಂಟೆಗೆ ದಾಳಿ ಮಾಡಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ಮಹ್ಮದ ಖಾಜಾ ತಂದೆ ಅಬ್ದುಲ ಮಾಜಿದ ವಯ:27 ಉ: ಪ್ಲಂಬರ್ ಕೆಲಸ ಸಾಃ ಚಿದ್ರಿ ಗ್ರಾಮ ಅಂತ ತಿಳಸಿ ಅವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 210/-ರೂ. 2) ಮಹ್ಮದ ಅಜರುದ್ದಿನ್ ತಂದೆ ಮಹ್ಮದ ಅಮಜತ ಅಲಿ ವಯಃ32 ವರ್ಷ ಉಃ ಖಾಸಗಿ ಕೆಲಸ ಸಾಃ ಚಿದ್ರಿ ಬೀದರ ಅಂತ ತಿಳಿಸಿದ್ದು ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 90/-ರೂ. 3) ಮಹ್ಮದ ಯುಸುಫ್ ತಂದೆ ಮಹ್ಮದ ಖಾಜಾ ವಯಃ28 ವರ್ಷ, ಉಃಕೂಲಿ ಕೆಲಸ ಸಾಃ ಚಿದ್ರಿ ಬೀದರ ಅಂತ ತಿಳಿಸಿದ್ದು ಈತನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 160/-ರೂ. 04) ಪ್ರಥ್ವಿರಾಜ ತಂದೆ ಶರಣಪ್ಪಾ ಜ್ಯೋತಿ ವಯಃ33 ವರ್ಷ, ಜಾತಿಃಎಸ್ಸಿ ಹೊಲೆಯ, ಉಃಕೂಲಿ ಕೆಲಸ ಸಾಃ ಬುತ್ತಿ ಬಸವಣ್ಣ ಹತ್ತಿರ ಚಿದ್ರಿ ಬೀದರ ಈತನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 180/-ರೂ. 05) ಮಹ್ಮದ ಅಫ್ರೋಜ ತಂದೆ ಮಹ್ಮದ ಮುಷ್ತಾಕ ವಯಃ33 ವರ್ಷ, ಉಃಪೇಂಟರ್ ಕೆಲಸ ಸಾಃ ಮಲಗೊಂಡ ಕಾಲೋನಿ ಚಿದ್ರಿ ಬೀದರ ಈತನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 240/-ರೂ. 06) ಆದಿಲ್ ಅಹ್ಮದ ತಂದೆ ತಂದೆ ಖಲೀಲ ಅಹ್ಮದ ವಯಃ33 ವರ್ಷ, ಉಃಪ್ಲಂಬರ್ ಕೆಲಸ ಸಾಃಚಿದ್ರಿ ಬೀದರ ಈತನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 330/- ರೂ. 07) ಮಹ್ಮದ ಯುಸುಫ್ ತಂದೆ ಅಬ್ದುಲ್ ವಾಹಬ ವಯ:33 ವರ್ಷ, ಉಃಕೂಲಿ ಕೆಲಸ ಸಾಃ ಚಿದ್ರಿ ಬೀದರ ಈತನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 110/-ರೂ. ಹಾಗು ಇವರೆಲ್ಲರ ಮಧ್ಯದಲ್ಲಿ ಇದ್ದ 52 ಇಸ್ಪೀಟ್ ಎಲೆಗಳು ಮತ್ತು ನಗದು ಹಣ 280/-ರೂ. ಹೀಗೆ ಒಟ್ಟು 52 ಇಸ್ಪೀಟ್ ಎಲೆಗಳು ಮತ್ತು ಒಟ್ಟು ರೂ. 1600/- ರೂ. ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಕೊಳ್ಳಲಾಗಿದೆ
ಹುಲಸೂರ ಠಾಣೆ ಅಪರಾಧ ಸಂಖ್ಯೆ 18/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ 29/03/2020 ರಂದು 1020 ಗಂಟೆಗೆ ಪಿಎಸ್ಐ ರವರು ಪೊಲೀಸ ಠಾಣೆಯಲ್ಲಿರುವಾಗ ಬೇಲೂರ ಮುಚ್ಚಳಂಬ ರಸ್ತೆಯ ಬೇಲೂರ ಗ್ರಾಮದ ಗುರಲಿಂಗ ಶಿವಾಚಾರ್ಯ ಮಠದ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸಾರಾಯಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಇಬ್ಬರು ವ್ಯಕ್ತಿಗಳು ಸಾಗಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅವರಲ್ಲಿ ಒಬ್ಬ ವ್ಯಕ್ತಿ ಓಡಿ ಹೋಗಿದ್ದು ಇನ್ನೊಬ್ಬ ವ್ಯಕ್ತಿಗೆ ಹಿಡಿದುಕೊಳ್ಳಲಾಯಿತ್ತು. ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಸಂಜು ತಂದೆ ಕಾಶಿನಾಥ ಗೊಡಬೋಲೆ ವಯ 45 ವರ್ಷ, ಜಾತಿ ಹೊಲಿಯಾ ಉ: ಕೂಲಿ ಕೆಲಸ ಸಾ: ಬೇಲೂರ ಅಂತ ತಿಳಿಸಿರುತ್ತಾನೆ. ಓಡಿ ಹೋದ ವ್ಯಕ್ತಿಯ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಶಿವಕುಮಾರ ತಂದೆ ಶರಣಪ್ಪಾ ಹೊಳ್ಳೆ ವಯ 28 ವರ್ಷ, ಜಾತಿ ಲಿಂಗಾಯತ, ಉ: ಒಕ್ಕಲುತನ ಸಾ: ಬೇಲೂರ ಅಂತ ತಿಳಿಸಿರುತ್ತಾನೆ. ಸಂಜು ಈತನಿಗೆ ಕಾಟನ ಬಾಕ್ಸ್ ದಲ್ಲಿ ಎನು ಇದೆ ಅಂತ ವಿಚಾರಿಸಲಾಗಿ ಓಲ್ಡ್ ಟಾವರಿನ ವಿಸ್ಕಿ 180 ಎಮ್.ಎಲ್ ನ ವಿಸ್ಕಿಯ ಸಾರಾಯಿ ಇರುತ್ತದೆಂದು ತಿಳಿಸಿದಾಗ ಈ ಬಗ್ಗೆ ಸರಕಾರದಿಂದ ಪರವಾನಿಗೆ ಮತ್ತು ಲೈಸನ್ಸ್ ಇದೆ ಅಂತ ವಿಚಾರಿಸಲಾಗಿ ನಾನು ಮತ್ತು ಶಿವಕುಮಾರ ತಂದೆ ಶರಣಪ್ಪಾ ಹೊಳ್ಳೆ ಸಾ: ಬೇಲೂರ ಇಬ್ಬರು ಓಲ್ಡ್ ಟಾವರಿನ ವಿಸ್ಕಿ 180 ಎಮ್.ಎಲ್ ನ ವಿಸ್ಕಿಯ ಸಾರಾಯಿ ನಮ್ಮ ಅಧಿನದಲ್ಲಿಟ್ಟುಕೊಂಡು ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲು ಸಾಗಾಟ ಮಾಡಲು ನಿಂತಿರುವುದಾಗಿ ತಿಳಿಸಿದ ಮೇರೆಗೆ ಪಂಚರ ಸಮಕ್ಷಮದಲ್ಲಿ ಕಾಟನ ಬಾಕ್ಸ ತೆರೆದು ನೋಡಲಾಗಿ ಅದರಲ್ಲಿ ಓಲ್ಡ್ ಟಾವರಿನ ವಿಸ್ಕಿ 180 ಎಮ್.ಎಲ್ ನ 25 ಟೇಟ್ರಾ ಪ್ಯಾಕವುಳ್ಳ ಪೌಚಗಳಿದ್ದು ಒಂದರ ಬೆಲೆ 74.13 ರೂಪಾಯಿ ಇರುತ್ತದೆ. ಹೀಗೆ ಒಟ್ಟು ಅಂದಾಜು 1853 ರೂಪಾಯಿ ಬೆಲೆ ಬಾಳುವ ಒಟ್ಟು 25 ಓಲ್ಡ್ ಟಾವರಿನ ವಿಸ್ಕಿ 180 ಎಮ್.ಎಲ್ ನ ವಿಸ್ಕಿಯ ಟೇಟ್ರಾ ಪ್ಯಾಕವುಳ್ಳ ಪೌಚಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂಖ್ಯೆ 40/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ : 29-03-2020 ರಂದು ಸಾಯಂಕಾಲ 1730 ಗಂಟೆಗೆ ಫಿಯರ್ಾದಿ ಶ್ರೀ ಮಹಾಂತೇಶ ಲಂಬಿ ಪಿ.ಎಸ್.ಐ ಹಳ್ಳಿಖೇಡ (ಬಿ) ಪೊಲೀಸ ಠಾಣೆ ರವರು ಖಚಿತ ಮಾಹಿತಿ ಮೇರೆಗೆ ಶಿವಾಜಿರಾವ ಪಾಟೀಲ್ ರವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 4 ಜನರು ಗೋಲಾಕಾರವಾಗಿ ಕುಳಿತು 2 ಮೋಟಾರ ಸೈಕಲಗಳನ್ನು ಅಡ್ಡಲಾಗಿ ಹಚ್ಚಿಕೊಂಡು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಇಸ್ಫೀಟ್ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ 4 ಜನರನ್ನು ಹಿಡಿದುಕೊಂಡರು. ಅವರುಗಳ ಹೆಸರು 1] ಬಾಬು ತಂದೆ ಹಣಮಂತಪ್ಪಾ ಕುಂಬಾರ ವಯ: 60 ವರ್ಷ ಜಾತಿ: ಕುಂಬಾರ ಉ: ಬಿ.ಎಸ್.ಎಸ್.ಕೆ ನೌಕರ ಸಾ: ಅಮೀರಾಬಾದ ವಾಡಿ ಅಂತ ತಿಳಿಸಿದ್ದು, ಅವನ ಮುಂದೆ 3,000/- ರೂಪಾಯಿ, 2] ವಿಜಯಕುಮಾರ ತಂದೆ ನಾಗಪ್ಪಾ ಖಾಶಾಂಪೂರ ವಯ: 43 ವರ್ಷ ಜಾತಿ: ಕಬ್ಬಲಿಗ ಉ: ಒಕ್ಕಲುತನ ಸಾ: ಹಳ್ಳಿಖೇಡ (ಬಿ) ಅಂತ ತಿಳಿಸಿದ್ದು, ಅವನ ಮುಂದೆ 800/- ರೂಪಾಯಿ 3] ಎಮ್.ಡಿ ಫಾರೂಕ್ ತಂದೆ ಅಬ್ದುಲ್ ಹಮೀದ ಧನಾಶ್ರೀ ವಯ: 63 ವರ್ಷ ಜಾತಿ: ಮುಸ್ಲಿಂ ಉ: ಬಿ.ಎಸ್.ಎಸ್.ಕೆ ನಿವೃತ್ತ ನೌಕರ ಸಾ: ಹಳ್ಳಿಖೇಡ (ಬಿ) ಅಂತ ತಿಳಿಸಿದ್ದು, ಅವನ ಮುಂದೆ 650/- ರೂಪಾಯಿ, 4] ರಾಜಪ್ಪಾ ತಂದೆ ಅಡೇಪ್ಪಾ ಪಡಸಲಗೆ ವಯ: 55 ವರ್ಷ ಜಾತಿ: ಸ್ವಾಮಿ ಉ: ಒಕ್ಕಲುತನ ಸಾ: ಹಳ್ಳಿಖೇಡ (ಬಿ) ಅಂತ ತಿಳಿಸಿದ್ದು, ಅವನ ಮುಂದೆ 700/- ರೂಪಾಯಿ ಮತ್ತು ಎಲ್ಲರ ಮುಂದೆ ನಡುವೆ ನೋಡಲು ಒಟ್ಟು 850/- ರೂ. ಹಾಗು 52 ಇಸ್ಪಿಟ ಎಲೆಗಳು ಇದ್ದವು. ಹಾಗೂ ಇವರ ಪಕ್ಕದಲ್ಲಿ ಅಡ್ಡಲಾಗಿ ನಿಲ್ಲಿಸಿದ ಮೋಟಾರ ಸೈಕಲ್ಗಳು ನೋಡಲು 1] ಒಂದು ಹಿರೋ ಫ್ಯಾಶನ್ ಪ್ರೋ ಮೋಟಾರ ಸೈಕಲ್ ನಂ: ಕೆಎ-39/ಎಲ್-4821 ಇದ್ದು, ಇದರ ಅ.ಕಿ 30,000/- ರೂ. ಮತ್ತು 2] ಒಂದು ಪಲ್ಸರ್-180 ಡಿ.ಟಿ.ಎಸ್ ಮೋಟಾರ ಸೈಕಲ್ ನಂ: ಕೆಎ-38/ಜೆ-5986 ಇದ್ದು, ಇದರ ಅ.ಕಿ 40,000/- ರೂ. ಇರುತ್ತವೆ. ಹೀಗೆ 4 ಜನರ ಮಧ್ಯೆ ಮತ್ತು ಅವರುಗಳ ಮುಂದೆ ಇದ್ದ ಒಟ್ಟು ನಗದು ಹಣ 6,000/- ರೂ. ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ..