ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-03-2020

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂಖ್ಯೆ 39/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 28-03-2020 ರಂದು ರಾತ್ರಿ 2030 ಗಂಟೆಗೆ ಫಿಯರ್ಾದಿ ಶ್ರೀ ಮಹಾಂತೇಶ ಲಂಬಿ ಪಿ.ಎಸ್.ಐ ಹಳ್ಳಿಖೇಡ (ಬಿ) ಪೊಲೀಸ ಠಾಣೆ ರವರು  ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಹಳ್ಳಿಖೇಡ (ಬಿ) ಪಟ್ಟಣದ ಸರಕಾರಿ ಪ್ರೌಡ ಶಾಲೆ ಹತ್ತಿರ ಇರುವ ಶಿವ ಖಾನಾವಳಿ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಹೋಗಿ ದಾಳಿ ಮಾಡಿ  ದಾಳಿ ಮಾಡಿ  ಮಹಾಂತಯ್ಯಾ ತಂದೆ ಶಿವಕುಮಾರ ಹಾಲಾ ವಯ: 25 ವರ್ಷ ಜಾ: ಸ್ವಾಮಿ ಉ: ವ್ಯಾಪಾರ ಸಾ: ಹಳ್ಳಿಖೇಡ ಇವನ ಹತ್ತಿರ ಇದ್ದ ಚೀಲ ತೆರೆದು ನೋಡಲು ಅದರಲ್ಲಿ 1] 180 ಎಮ್.ಎಲ್ ಉಳ್ಳ ಒಟ್ಟು 14 ಓಟಿ ವಿಸ್ಕಿ ಸರಾಯಿ ತುಂಬಿದ ಪೋಚುಗಳಿದ್ದು, ಒಂದು ಪೋಚಿನ ಅ.ಕಿ 74.13/- ರೂ ಇರುತ್ತದೆ, ಒಟ್ಟು 14 ಪೋಚುಗಳ ಅ.ಕಿ 1,037.82/- ರೂ ಇದ್ದು, ಇವುಗಳ ಸೀರಿಯಲ್ ನಂ: 9858730515, 9858730523, 9858730531, 9858730537, 9858730541, 9858730542, 9858730545, 9858730547, 9858730548, 9858730549, 9858730550, 9858730555 ಇರುತ್ತವೆ ಎರಡು ಪೋಚುಗಳಿಗೆ ನಂಬರ ಇರುವುದಿಲ್ಲಾ. 2] 90 ಎಮ್.ಎಲ್ ಉಳ್ಳ ಒಟ್ಟು 12 ಓಟಿ ವಿಸ್ಕಿ ಸರಾಯಿ ತುಂಬಿದ ಪ್ಲಾಸ್ಟೀಕ್ ಬಾಟಲಗಳಿದ್ದು, ಒಂದು ಬಾಟಲಿನ ಅ.ಕಿ 30.32/- ರೂ ಇರುತ್ತದೆ, ಒಟ್ಟು 12 ಬಾಟಲಗಳ ಅ.ಕಿ 363.84/- ರೂ ಇದ್ದು, ಇವುಗಳ ಸೀರಿಯಲ್ ನಂ: 5980368078, 5980368085, 5980368029, 5980368028, 5980368004, 5980368069, 5980368006, 5980368091, 5980368005, 5980368076, 5980368089, 5980368093 ಇರುತ್ತವೆ. ಹೀಗೆ ಎಲ್ಲವುಗಳ ಒಟ್ಟು ಅ.ಕಿ 1,401.66/- ರೂ ಇರುತ್ತದೆ. ಮತ್ತು ಸದರಿಯವನ ಅಂಗ ಜಡ್ತಿ ಮಾಡಿ ನೋಡಲು ಅವನ ಹತ್ತಿರ ಒಟ್ಟು 3200/- ರೂ. ಇದ್ದವು. ಇವುಗಳ ಬಗ್ಗೆ ವಿಚಾರಿಸಲು ಸರಾಯಿ ಮಾರಾಟ ಮಾಡಿದ ಹಣ ಇರುತ್ತವೆ ಅಂತ ತಿಳಿಸಿರುತ್ತಾನೆನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 13/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 28-03-2020 ರಂದು 1415 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಎಕಲಾರ ಗ್ರಾಮದ ಬೀರಪ್ಪಾ ನಗರದಲ್ಲಿರುವ ಉಮಾಕಾಂತ ತಂದೆ ಶಂಕರೆಪ್ಪಾ ರವರ ಕಿರಾಣಾ ಅಂಗಡಿಯ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ನಶೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವರನ್ನು ಹಿಡಿದುಕೊಂಡು ಅವರಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1] ಸ್ವಾಮಿ ಮಹಾದೇವ ತಂದೆ ಶರಣಯ್ಯಾ ಎಡೂರೆ ವಯ 54 ವರ್ಷ ಜಾತಿ ಸ್ವಾಮಿ ಉ: ಕೂಲಿಕೆಲಸ ಸಾ: ಎಕಲಾರ ಗ್ರಾಮ ತಾ: ಔರಾದ(ಬಿ) ಅಂತ ತಿಳಿಸಿದನು. ಅವನ ಅಂಗ ಝಡ್ತಿ ಮಾಡಲಾಗಿ ಅವನ ಹತ್ತಿರ 500/- ರೂ. ಮುಖ ಬೆಲೆಯುಳ್ಳ ಒಂದು ನೋಟು, 10/- ರೂ . ಮುಖಬೆಲೆಯುಳ್ಳ ಒಂದು ನೋಟು ಒಟ್ಟು 510/- ರೂಪಾಯಿಗಳು ಸಿಕ್ಕಿರುತ್ತವೆ. 2] ಹಣಮಂತ ತಂದೆ ಮಾಣಿಕ ಅಂಬೆಸಿಂಗೆ ವಯ 41 ವರ್ಷ ಜಾತಿ ಕುರುಬ ಉ: ಕೂಲಿಕೆಲಸ ಸಾ: ಎಕಲಾರ ಗ್ರಾಮ ತಾ: ಔರಾದ(ಬಿ) ಅಂತ ತಿಳಿಸಿದ್ದು, ಇವನ ಅಂಗ ಝಡ್ತಿ ಮಾಡಲಾಗಿ ಇತನ ಹತ್ತಿರ 500/- ರೂ. ಮುಖಬೆಲೆಯ ಒಂದು ನೋಟು ಹಾಗೂ 20 ರೂಪಾಯಿ ಮುಖಬೆಲೆಯ ಒಂದು ನೋಟು ಒಟ್ಟು 520/- ರೂಪಾಯಿಗಳು ಸಿಕ್ಕಿರುತ್ತವೆ. 3] ಶಂಕರ ತಂದೆ ಮಾಣಿಕ  ತುಕಗೊಂಡಾ ವಯ 32 ವರ್ಷ ಜಾತಿ ಕುರುಬ ಉ: ಕೂಲಿಕೆಲಸ ಸಾ: ಎಕಲಾರ ಗ್ರಾಮ ಇವನ ಅಂಗ ಝಡ್ತಿ ಮಾಡಲಾಗಿ ಇತನ ಹತ್ತಿರ 100/- ರೂ. ಮುಖಬೆಲೆಯ ಎರಡು ನೋಟುಗಳು ಒಟ್ಟು 200/- ರೂಪಾಯಿಗಳು ಮತ್ತು ಒಂದು ರೆಡಮಿ ಕಂಪನಿಯ ಮೊಬಾಯಿಲ್ ಅ.ಕಿ. 3,000/- ರೂ. ಬೆಲೆವುಳ್ಳದ್ದು ದೊರೆತ್ತಿರುತ್ತದೆ. 4] ತುಕಾರಾಮ ತಂದೆ ದಶರಥ ವಮರ್ಾ ವಯ 50 ವರ್ಷ ಜಾತಿ ಹೊಲಿಯಾ ಉ: ಒಕ್ಕಲುತನ ಸಾ: ಎಕಲಾರ ಗ್ರಾಮ ಇವನ ಅಂಗ ಝಡ್ತಿ ಮಾಡಲಾಗಿ ಇತನ ಹತ್ತಿರ 50/- ರೂ. ಮುಖಬೆಲೆಯ ಎರಡು ನೋಟುಗಳು ಒಟ್ಟು 100/- ರೂ. ಮತ್ತು ಒಂದು ನೊಕಿಯಾ ಕಂಪನಿಯ ಮೊಬಾಯಿಲ್ ಅ.ಕಿ. 300/- ರೂ. ಬೆಲೆವುಳ್ಳದ್ದು ದೊರೆತ್ತಿರುತ್ತದೆ. 5] ಸೂರ್ಯಕಾಂತ ತಂದೆ ಉಮಾಕಾಂತ ಶಟೆಪ್ಪಾ ವಯ 28 ವರ್ಷ ಜಾತಿ ಲಿಂಗಾಯತ ಉ: ಒಕ್ಕಲುತನ ಸಾ: ಎಕಲಾರ ಗ್ರಾಮ ಇವನ ಅಂಗ ಝಡ್ತಿ ಮಾಡಲಾಗಿ ಇತನ ಹತ್ತಿರ 500/- ರೂ. ಮುಖಬೆಲೆಯ ಒಂದು ನೋಟು, 50/- ಮುಖ ಬೆಲೆಯ ಒಂದು ನೋಟು ಒಟ್ಟು 550/- ರೂ. ಮತ್ತು ಒಂದು ಕೂಲಪ್ಯಾಡ್ ಕಂಪನಿಯ ಮೊಬಾಯಿಲ್ ಅ.ಕಿ. 2,500/- ರೂ. ಬೆಲೆವುಳ್ಳದ್ದು ದೊರೆತ್ತಿರುತ್ತದೆ 6] ಸಂಜುಕುಮಾರ ತಂದೆ ತುಕಾರಾಮ ಸಿಂದೆ ವಯ 45 ವರ್ಷ ಜಾತಿ ಹೊಲಿಯಾ ಉ: ಕೂಲಿಕೆಲಸ ಸಾ: ಎಕಲಾರ ಗ್ರಾಮ ಇವನ ಅಂಗ ಝಡ್ತಿ ಮಾಡಲಾಗಿ ಇತನ ಹತ್ತಿರ 50/- ರೂ. ಮುಖಬೆಲೆಯ ಎರಡು ನೋಟುಗಳು ಒಟ್ಟು 100/- ರೂ. ಮತ್ತು ಒಂದು ಕಾರ್ಬನ ಕಂಪನಿಯ ಮೊಬಾಯಿಲ್ ಅ.ಕಿ. 300/- ರೂ. ಬೆಲೆವುಳ್ಳದ್ದು ದೊರೆತ್ತಿರುತ್ತದೆ ಮತ್ತು ಎಲ್ಲರ ಮಧ್ಯದಲ್ಲಿ ನಡುವೆ 50/- ಮುಖಬೆಲೆಯ ಒಂದು ನೋಟು ಹಾಗೂ 10/- ರೂ. ಮುಖ ಬೆಲೆಯ 04 ನೋಟುಗಳು ಒಟ್ಟು 90/- ರೂ. ಇರುತ್ತವೆ. ಹೀಗೆ ಎಲ್ಲಾ ಸೇರಿ 2,070/- ರೂಪಾಯಿಗಳು, ನಾಲ್ಕು(4) ಮೊಬಾಯಿಲಗಳ ಅ.ಕಿ. 6,100/- ನೇದವುಗಳನ್ನು ಹಾಗೂ ಆಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷದಲ್ಲಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಾಗಿದೆ.

 

ಸಂತಪೂರ ಠಾಣೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 23/2020 ಕಲಂ 32, 34 ಕೆ.ಇ. ಕಾಯ್ದೆ:-

ದಿನಾಂಕ 28/03/2020  ರಂದು 2230 ಗಂಟಗೆ  ಶ್ರೀ ಪ್ರಭಾಕರ್ ಪಾಟೀಲ್ ಪಿ,ಎಸ್,ಐ ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಹಾಗೂ ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲು ಒಬ್ಬ ಆರೋಪಿತನಿಗೆ ತಂದು ಹಾಜರ ಪಡಿಸಿದ್ದು ಅದನು ಸ್ವಿಕರಿಸಿಕೊಂಡು ಓದಿ ನೋಡಿದ್ದು ಇಂದು ದಿನಾಂಕ 28/03/2020 ರಂದು 1800 ಗಂಟೆಗೆ ಖಚಿತ ಬಾತ್ಮಿ ಬಂದಿದ್ದು ಎನೆಂದರೆ ಕೌಠಾ(ಬಿ) ಗ್ರಾಮದ  ಸೂರ್ಯಕಾಂತ ಬೆಳ್ಳೂರೆ ಇವರ ಕಿರಾಣಿ ಅಂಗಡಿಯ ಮುಂದೆ ಬಸವೆಶ್ವರ ಚೌಕ ಹತ್ತಿರ ಸ್ವಲ್ಪ ದೂರದಲ್ಲಿ ಒಬ್ಬ ವ್ಯೆಕ್ತಿಯು ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ,ಡಿ,ಎಸ್,ಪಿ ಭಾಲ್ಕಿ ಹಾಗೂ ಸಿ,ಪಿ,ಐ ಔರಾದ(ಬಿ) ರವರ ಮಾರ್ಗದರ್ಶನದಲ್ಲಿ ನಮ್ಮ ಪೋಲಿಸ ಸಿಬ್ಬಂದಿಯವರಾದ ಅಶೋಕ ಎ.ಎಸ್.ಐ ಮತ್ತು ಜ್ಞಾನೆಶ್ವರ ಸಿ,ಪಿ,ಸಿ 1910. ರವರೊಂದಿಗೆ 1830 ಗಂಟೆಗೆ ಠಾಣೆಯಿಂದ ಒಂದು ಖಾಸಗಿ ವಾಹನ ಮಾಡಿಕೊಂಡು ನೇದರಲ್ಲಿ ಕುಳಿತು ಹೋರಟು 1930 ಗಂಟೆಗೆ ಕೌಠಾ(ಬಿ) ಗ್ರಾಮದ ಚರ್ಚ ಓಣಿಯ ಚರ್ಚ ಶಿಂಬಲ್ ಹತ್ತಿರ ಹೋಗಿ ಅಲ್ಲಿ ಇಬ್ಬರೂ ಪಂಚರಾದ 1) ಶ್ರೀ ಜಗನಾಥ ತಂದೆ ಬಿರಗೊಂಡಾ ಜಂಬಗೆ ವ. 38 ವರ್ಷ ಜಾ/ ಎಸ್ ಟಿ ಗೊಂಡ ಉ/ ಒಕ್ಕಲುತನ ಸಾ/ ಕೌಠಾ(ಬಿ) 2) ಶ್ರೀ ಧನರಾಜ ತಂದೆ ಭಿಮರಾವ ಧರಣೆ ವ/ 40 ವರ್ಷ ಜಾ/ ಲಿಂಗಾಯತ ಉ/ ಕಿರಾಣಿ ಅಂಗಡಿ ವ್ಯಾಪಾರ ಸಾ/ ಕೌಠಾ(ಕೆ) ಇವರಿಗೆ ಬರ ಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ಅವರೊಂದಿಗೆ ನಡೆದುಕೊಂಡು ಹೋಗಿ ಅಲ್ಲಿ ಒಂದು ಮನೆಯ ಹಿಂದೆ ಹೋಗಿ ಮರೆಯಾಗಿ ನಿಂತು ನೋಡಿದ್ದು ಒಬ್ಬ ವ್ಯೆಕ್ತಿಯು ಬಸವೇಶ್ವರ ಚೌಕ ಹತ್ತಿರ  ಸ್ವಲ್ಪ ದೂರದಲ್ಲಿ  ಎರಡು ಖಾಖಿ ಬಣ್ಣದ ಕಾಟನವನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನು ಖಚಿತ ಪಡಿಸಿಕೊಂಡು 20.00 ಗಂಟೆಗೆ ದಾಳಿ ಮಾಡುವಾಗ ಸಾರ್ವಜನಿಕರೂ ನಮ್ಮಗೆ ನೋಡಿ ಓಡಿ ಹೋದರೂ ನಂತರ ಸರಾಯಿ ಮಾರಾಟ ಮಡುತ್ತಿದ್ದ ವ್ಯೆಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸೂರ್ಯಕಾಂತ ತಂದೆ ಮಲ್ಲಿಕಾಜರ್ುನ ಬೆಳ್ಳುರೆ ವ.21 ವರ್ಷ ಜಾ/ ಲಿಂಗಾಯತ ಉ/ ಕಿರಾಣಿ ಅಂಗಡಿ ಸಾ/ ಕೌಠಾ(ಬಿ) ಅಂತ ತಿಳಿಸಿದ್ದು ಅವನ ಹತ್ತಿರ ಎರಡು ಕಾಟನ ಇದ್ದು ಅದನ್ನು ಪಂಚರ ಸಮಕ್ಷಮ ಹಾಗೂ ನಮ್ಮ ಸಿಬ್ಬಂದಿಯವರ ಸಮಕ್ಷಮ ಪರಿಶಿಲಿಸಿ ನೋಡಿದ್ದು 1) ಎರಡು ಕಾಟನದಲ್ಲಿ 90 ಎಮ್ ಎಲ್ ವುಳ ಓರಜನಲ್ ಚೌಯಿಸ್ ಸರಾಯಿ ಪಾಕೇಟಗಳು 173 ಒಂದಕ್ಕೆ 30.32 ಪೈಸ್-/ ರೂ ಒಟ್ಟು 5245=00 ರೂ ಆಗಬಹುದು ಸದರಿ ಆರೋಪಿತನಿಗೆ ಅಂಗ ಶೋಧನಾ ಮಾಡಿದಾಗ ಅವನ ಹತ್ತಿರ ನಗದು ಹಣ 580-/ರೂ ಸರಾಯಿ ಮಾರಾಟ ಮಾಡಿದ ಹಣ ಸಿಕ್ಕಿದ್ದು .ಅನಧಿಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಮಾರಾಟ ಮಾಡಲು ಇಟ್ಟಿದು ಸೂರ್ಯಕಾಂತ ಇತನಿಗೆ  ವಿಚಾರಿಸಿದ್ದು ತನ್ನ ಹತ್ತಿರ ಸರಕಾರದ ಯಾವುದಾದರು ಅನುಮತಿ ಪತ್ರ ಇದೆಯೇ ? ಹೇಗೆ ಅಂತ ಕೆಳಿದಾಗ ನನ್ನ ಹತ್ತಿರ ಯಾವುದೆ ಅನುಮತಿ ಪತ್ರ ಇರುವದಿಲ್ಲ ನಾನು 4-5 ದೀವಸಗಳ ಹಿಂದೆ ವಡಗಾಂವ ವೈನ್ಸದಿಂದ ತಂದು ನನ್ನ ಕಿರಾಣಿ ಅಂಗಡಿಯಲ್ಲಿ ಇಟ್ಟಿರುತ್ತನೆ ಇಂದು ಕಿರಾಣಿಯ ಅಂಗಡಿಯಿಂದ ಹೋರಗೆ ತಂದು ಮಾರಾಟ ಮಾಡುತ್ತಿದ್ದೆನೆ ಅಂತ ತಿಳಿಸಿದ್ದು ನಂತರ ಜಪ್ತಿ ಮಾಡಿದ ಮುದ್ದೆ ಮಾಲಿನಲ್ಲಿನಿಂದ ಒಟ್ಟು ಐದು ಪಾಕೇಟಗಳು ರಸಾಯನಿಕ ಪರೀಕ್ಷೆ ಕುರಿತು ತೆಗೆದು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಅವುಗಳ ಬಾಯಿ ಹೊಲೇದು ಅದರ ಮೇಲೆ ಎಸ್ ಎಂ ಎಂಬ ಇಂಗ್ಲೀಷ ಅಕ್ಷರದ ಶೀಲ ಹಾಕಿ ಅದರ ಮೇಲೆ ಪಂಚರ ಸಹಿ ಮಾಡಿದ ಚೀಟಿ ಅಂಟಿಸಿ ಇರುತ್ತದೆ ಸದರಿ ಆರೋಪಿತರ ವಿರುದ್ದ ಕ್ರಮ ಕೈ ಕೋಳಲು ಸೂಚಿಸಲಾಗಿದೆ .ಸದರಿ ಜ್ಞಾಪನ ಪತ್ರದ ಸಾರಂಶದ ಮೇರಗೆ ಸಂತಪೂರ ಠಾನೆ ಗುನ್ನೆ ನಂ 23/2020 ಕಲಂ 32.34. ಕೆ ಇ ಎಕ್ಟ ನೇದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನ್ನು