ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-01-2020

ಹಳ್ಳಿಖೇಡ (ಬಿ)  ಪೊಲೀಸ್ ಠಾಣೆ ಅಪರಾಧ ಸಂಖ್ಯೆ 10/2021 ಕಲಂ 420 ಐಪಿಸಿ :-

ದಿನಾಂಕ : 28/01/2021 ರಂದು ಸಾಯಂಕಾಲ 1815 ಗಂಟೆಗೆ ಫಿರ್ಯಾದ ಶ್ರೀಮತಿ ಬೀಬಿ ಫಾತಿಮಾ ಗಂಡ ಅಲಿಮೋದ್ದಿನ್ ಪಟೇಲ್ ನಾನು ಬೀಬಿ ಫಾತಿಮಾ ಗಂಡ ಅಲಿಮೋದ್ದಿನ್ ಪಟೇಲ್ ಬಿರಾದಾರ ಸಾ: ವಡ್ಡನಕೇರಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆಇವರ ಮಗನಾದ ಗೌಸ ಪಟೇಲ್ ವಯ: 18 ವರ್ಷ ಇವನು ಹುಟ್ಟಿದಾಗಿನಿಂದ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥನಿರುತ್ತಾನೆ. ಹೀಗಾಗಿ ಆವಾಗಾವಾಗ  ಮನೆಯಿಂದ ನಮಗೆ ಹೇಳದೆ ಕೇಳದೆ ಹೋಗಿ ನಂತರ ಒಂದೆರಡು ದಿವಸದಲ್ಲಿ ಮತ್ತೆ ಮನೆಗೆ ವಾಪಸ ಬರುತ್ತಿದ್ದನು.  ಇವರ ಗಂಡ ದಿನಾಂಕ: 24/01/2021 ರಂದು ಸುರಪೂರ ಮುಂಬೈ ರೂಟ್ ಬಸ್ ಮೇಲೆ ಕರ್ತವ್ಯಕ್ಕೆ ಹೋಗಿರುತ್ತಾರೆ.   ಮನೆಯಲ್ಲಿ ಫಿರ್ಯಾದಿ ಮತ್ತು ಇವರ ಮೂರು ಜನ ಮಕ್ಕಳಿದ್ದು ಹೀಗಿರುವಾಗ ದಿನಾಂಕ: 25/01/2021 ರಂದು ಮುಂಜಾನೆ 1000 ಗಂಟೆ ಸುಮಾರಿಗೆ ನನ್ನ ಮಗ ಗೌಸ್ ಪಟೇಲ್ ಅವನು   ಮನೆಯಿಂದ   ಹೇಳದೆ ಕೇಳದೆ ಹೋರಗಡೆ ಹೋಗಿದ್ದು, ನಂತರ ಮಧ್ಯಾಹ್ನ 1:00 ಗಂಟೆಯಾದರು ಮನೆಗೆ ಬರದ ಕಾರಣ ನಾನು ನನ್ನ ಮಗ ಎಲ್ಲಿಗೆ ಹೋಗಿರುತ್ತಾನೆ ಅಂತ  ಮನೆಯ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ನಂತರ ಮನ್ನಾಏಖ್ಖೆಳಿಯಿಂದ ಹುಮನಾಬಾದಕ್ಕೆ ಹೋಗುವ ಒಂದು ಕ್ರೂಸರ್ ನಿಂತಿದ್ದು, ಕ್ರೂಸರನಲ್ಲಿ ಅಳುತ್ತಾ ಕುಳಿತಾಗ ಒಬ್ಬ ಅಪರಿಚಿತ ಹೆಣ್ಣು ಮಗಳು ಕ್ರೂಸರ ವಾಹನದಲ್ಲಿ ಜೊತೆಯಲ್ಲಿ ಅಂದಾಜು 12 ವರ್ಷದ ಒಂದು ಹುಡುಗಿಯನ್ನು ಕರೆದುಕೊಂಡು ಬಂದು ಇವರ ಎದುರಿಗೆ ಸೀಟಿನ್ ಮೇಲೆ ಕುಳಿತಿದ್ದು, ಕ್ರೂಸರ್ ಮನ್ನಾಏಖ್ಖೆಳಿಯಿಂದ ಬಿಟ್ಟ ನಂತರ ಸ್ವಲ್ಪ ಮುಂದೆ ಬಂದ ಮೇಲೆ ಆ ಹೆಣ್ಣು ಮಗಳು ಫಿರ್ಯಾದಿಗೆ ಕೈಕೆ ವಾಸ್ತೆ ರೋರಿ ಅಮ್ಮಾಅಂತ ವಿಚಾರಿಸಲು ಫಿರ್ಯಾದಿಯು ಹಮಾರೆ ಬಚ್ಚೆ ಆಜ ಸುಭೆ ಹಮಾರೆ ಘರಸೆ ಗಯಾ ಅಭಿತಕ್ ನಹೀ ಆಯಾ ಧೂಂಡೆ ತೋಬಿ ನಹಿ ಮಿಲಾಹ ಕಾಹಾ ಗಯಾ ಕೀ ಕ್ಯಾ ನಹೀ ಕಿ ನಹೀ ಮಾಲೂಮ ಔರ ಮೇರಾ ಬಚ್ಚಾ ಧಿಮಾಕ್ಸೆ ಬೀ ಥೋಡಾ ಕಮ್ ಜೋರ ಹೈ ಅಂತ ಅಂದಾಗ ಅವಳು ಮೈ ದರ್ಗಾಕು ಜಾರಿ ಹು ದರ್ಗಾಕಿ ಕಸಾಮ ಖುರಾ ಕಿ ಕಸಾಮ ಮೇರಿ ಭೇಟಿಕಿ ಕಸಾಮ ಮೈ ಝೂಟ್ ನಹೀ ಬೋಲರಿ ತುಮಾರೆ ಬಚ್ಚೆಕೋ ಧವಾ ದೆತಿಹು ಸಬ್ ಕಮ್ ಹೋತೆ ಔರ್ ತುಮಾರೆ ಬಚ್ಚೆ ಶ್ಯಾಮ ತಲಕ್ ಘರಕೋ ಆತಾ ಅಂತ ಅಂದಳು. ಆಗ ಫಿರ್ಯಾದಿಯು ಅವಳಿಗೆ ಏಂಹಿಚ್ ಜೋಕುಚ್ ಧವಾ ದೆದೋ ತುಮಾರಿ ಜೋ ಕುಚ್ ಹೈ ಓ ಹಧಿಯಾ ದೆದೆತು ಅಂತ ಅಂದಾಗ ಅವಳು ಯಾಹ ನಹೀ ತುಮಾರೆ ಘರಮೇ ಆಕೆ ದಿಯಾತೋ ಕಮ್ ಹೋತಾ ಧೆಕೆ ಧೇನಾ ಪಡತಾ ಅಂತ ಅಂದಾಗ ಫಿರ್ಯಾದಿಯು ಅವಳ ಮೇಲೆ ಭರವಸೆ ಮಾಡಿ ಅವಳನ್ನು ಮನೆಗೆ ಕರೆದುಕೊಂಡು  ಸಾಯಂಕಾಲ 4:00 ಗಂಟೆ ಸುಮಾರಿಗೆ ಬಂದಾಗ ಮನೆಗೆ ಬಂದ 10 ನಿಮಿಷದಲ್ಲಿ ಇವರ ಮಗ ಗೌಸ್ ಪಟೇಲ್ ಅವನು ಮನೆಗೆ ಬಂದಿರುತ್ತಾನೆ. ಹೀಗಾಗಿ ಫಿರ್ಯಾದಿಗೆ ಸಹ ಆ ಹೆಣ್ಣು ಮಗಳ ಮೇಲೆ ನಂಬಿಕೆ ಬಂದಿರುತ್ತದೆ. ಆ ದಿವಸ ಅವಳು ಮಗನಿಗೆ ಕೈಮೈ ಮುಟ್ಟಿ ನೋಡಿ ಮಂತರಿಸಿರುತ್ತಾಳೆ. ಆಮೇಲೆ ಹೊತ್ತು ಹೋಗಿದ್ದರಿಂದ ಅವಳು ನಾನು ಈ ದಿವಸ ರಾತ್ರಿ ಇಲ್ಲೆ ಉಳಿದುಕೊಂಡು ನಾಳೆ ಮುಂಜಾನೆ ಮಂತ್ರ ಓದಿ ನಿನ್ನ ಮಗನಿಗೆ ಗುಣ ಪಡಿಸಿ ಹೋಗುತ್ತೇನೆ ಅಂತ ಹೇಳಿದ್ದರಿಂದ ಅವಳ ಮಾತಿಗೆ ನಂಬಿ ತಮ್ಮ ಮನೆಯಲ್ಲಿಯೆ ಇಟ್ಟುಕೊಂಡಿರುತ್ತೇನೆ. ನಂತರ ದಿನಾಂಕ: 26/01/2021 ರಂದು ಮುಂಜಾನೆ 8:30 ಗಂಟೆ ಸುಮಾರಿಗೆ ಆ ಹೆಣ್ಣು ಮಗಳು ಈಗ ನಿಮ್ಮ ಮನೆಯಲ್ಲಿ ಒಂದು ಮಾಂತ್ರಿಕ ಪೂಜೆ ಮಾಡುತ್ತೇನೆ ಆ ಪೂಜಾ ಮಾಡಿದರೆ ನಿಮ್ಮ ಮಗ ಪೂತರ್ಿಯಾಗಿ ಗುಣಮುಖ ಆಗುತ್ತಾನೆ. ಅದಕ್ಕೆ ಬಂಗಾರ ಮತ್ತು ಬೆಳ್ಳಿಯ ಆಭಾರಣಗಳು ಹಾಗೂ ಒಂದು ನಾರಿಯಲ್ ಮತ್ತು ನಿಂಬೂ ಹಾಗೂ ಬಂಗಡಿ ಬೇಕಾಗುತ್ತವೆ ಅಂತ ತಿಳಿಸಿದ ಮೇರೆಗೆ ಫೀರ್ಯಾದಿಯು ತನ್ನ ಹತ್ತಿರ ಇದ್ದ 3 ತೊಲೆಯ ಬಂಗಾರದ ಆಭರಣಗಳು ಮತ್ತು 30 ತೊಲೆಯ ಬೆಳ್ಳಿ ಆಭರಣಗಳು ಒಂದು ನಾರಿಯಲ್ ಮತ್ತು ನಿಂಬೂ ಹಾಗೂ ಬಂಗಡಿಗಳು ಒಂದು ತಾಟಿನಲ್ಲಿ ಹಾಕಿಕೊಟ್ಟಾಗ ಆ ಹೆಣ್ಣು ಮಗಳು ನನಗೆ ಪೂಜೆಕ್ಕೆ ಇಷ್ಟೆ ಬಂಗಾರ ಮತ್ತು ಬೆಳ್ಳಿ ಸಾಕಾಗುವುದಿಲ್ಲಾ ಇನ್ನು ಹೆಚ್ಚಿಗೆ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಬೇಕಾಗುತ್ತವೆ ನಿಮ್ಮ ಅಕ್ಕಪಕ್ಕದ ಮನೆಯವರಿಂದ ತೆಗೆದುಕೊಂಡು ಬರುವಂತೆ ಮತ್ತು ಪೂಜಾ ಆದ ನಂತರ ಅವರಿಗೆ ವಾಪಸ್ ಕೊಡುವಂತೆ ತಿಳಿಸಿದ್ದು, ಅದರಂತೆ ಫಿರ್ಯಾದಿಯು 1] ಶಾಕೀರಾ ಗಂಡ ಹುಸೇನ್ ಪಟೇಲ್ ರವರ ಹತ್ತಿರ 11 ಗ್ರಾಂ ಬಂಗಾರದ ಆಭರಣ(ಕೋರಳಿನ ಗಲ್ಸೇರಿ) ಮತ್ತು 30 ತೊಲಿ ಬೆಳ್ಳಿಯ ಕಾಲಿನ 2 ಚೈನಗಳು 2] ಶೇಮಿಮ ಬೇಗಂ ಗಂಡ ಚಾಂದ ಪಟೇಲ್ ರವರ ಹತ್ತಿರ 15 ಗ್ರಾಂ ಬಂಗಾರದ ಗುಂಡಿನ ಸರ ಹಾಗೂ 30 ತೊಲಿ ಬೆಳ್ಳಿಯ ಕಾಲಿನ 2 ಚೈನಗಳು 3] ಸುವರ್ಣ ಗಂಡ ಮಲ್ಲಿಕಾಜರ್ುನ ಮೇತ್ರೆ ರವರ ಹತ್ತಿರ 25 ತೊಲಿ ಬೆಳ್ಳಿಯ ಕಾಲಿನ 2 ಚೈನಗಳು 4] ಕನಿಸಾ ಬೇಗಂ ಗಂಡ ಪಪ್ಪು ಖುರೇಷಿ ರವರ ಹತ್ತಿರ 20 ಗ್ರಾಂ ಬಂಗಾರದ ನೇಕ್ಲಿಸ್ 5] ರೈಸಾ ಬೇಗಂ ಗಂಡ ನಯಿಮೋದ್ದಿನ್ ಖುರೇಷಿ ರವರ ಹತ್ತಿರ 30 ಗ್ರಾಂ ಬಂಗಾರದ 2 ನೇಕ್ಲಿಸ್ 6] ಶಹಾಜನ್ ಬೇಗಂ ಗಂಡ ಮೋಸಿನ್ ಶೇರಿಕರ ರವರ ಹತ್ತಿರ 11 ಗ್ರಾಂ ಬಂಗಾರದ ಆಭರಣ(ಕೋರಳಿನ ಗಲ್ಸೇರಿ) ಹಾಗೂ 30 ತೊಲಿ ಬೆಳ್ಳಿಯ ಕಾಲಿನ 2 ಚೈನಗಳು 7] ಸಾಲಿಯಾ ಬೇಗಂ ಗಂಡ ಅಮೀರ ಪಟೇಲ್ ಬಿರಾದಾರ ರವರ ಹತ್ತಿರ 10 ಗ್ರಾಂ ಬಂಗಾರದ ಆಭರಣ (ಕೋರಳಿನ ಗಲ್ಸೇರಿ), 10 ಗ್ರಾಂ ಬಂಗಾರದ ಗುಂಡಿನ ಸರ ಹಾಗೂ 30 ತೊಲಿಯ ಬೆಳ್ಳಿಯ ಕಾಲಿನ 2 ಚೈನಗಳು 8] ಮಾಲಾನ ಬೀ ಗಂಡ ಸಲಿಂ ಪಟೇಲ್ ಬಿರಾದಾರ ರವರ ಹತ್ತಿರ 6 ಗ್ರಾಂ ಬಂಗಾರದ ಕಿವಿಯ 2 ರಿಂಗಗಳು ಹಾಗೂ ನಮ್ಮ ಮನೆಯಲ್ಲಿನ 2 ತೊಲಿ 8 ಗ್ರಾಂ. ದ ಬಂಗಾರದ ಆಭರಣಗಳು(ಒಂದು ಕೊರಳಿನ ಸೇವನ್ ಪೀಸ್-7 ಗ್ರಾಂ, ಒಂದು ಕೋರಳಿನ ಗಲ್ಸೇರಿ 15 ಗ್ರಾಂ ಮತ್ತು 6 ಗ್ರಾಂ. ನ ಕಿವಿಯ 2 ರಿಂಗಗಳು) ಹಾಗೂ 30 ತೊಲಿಯ ಬೆಳ್ಳಿಯ ಕಾಲಿನ 2 ಚೈನಗಳು ಹೀಗೆ ಒಟ್ಟು 14 ತೊಲಿ 1 ಗ್ರಾಂ ಬಂಗಾರದ ಆಭರಣಗಳು ಮತ್ತು 1 ಕೆಜಿ 750 ಗ್ರಾಂ ಬೆಳ್ಳಿಯ ಆಭರಣಗಳು ಪೂಜೆಗೆಂದು ತಂದು ಕೊಟ್ಟಿದ್ದು, ಆಗ ಬೆಳ್ಳಿಯ ಆಭರಗಳು ಮತ್ತು ಬಂಗಾರದ ಆಭರಣಗಳು ಹಾಗೂ ನಾರಿಯಲ್ ಮತ್ತು ನಿಂಬೂ ಹಾಗೂ ಬಂಗಡಿಗಳು ಎಲ್ಲಾ ಬಟ್ಟೆಯಲ್ಲಿ ಸಪರೇಟ್ ಆಗಿ ಕಟ್ಟಿ ತಾಟಿನಲ್ಲಿ ಇಟ್ಟಿರುತ್ತೇನೆ. ಆಗ ಅವಳು ಏನೋ ಮಂತ್ರ ಹಾಕಿದಂತೆ ಮಾಡಿ ಅದರ ಮೇಲೆ ಕುಂಕುಮ್ ಅರಸಿನ್ ಹಾಕಿ ಮಂತರಿಸಿ ಅದರ ಮೇಲೆ ಒಂದು ಹೊಸ ಸೀರೆ ಮುಚ್ಚಿರುತ್ತಾಳೆ. ನಂತರ ಫಿರ್ಯಾದಿಗೆ ಇದು ಇಲ್ಲೆ ನಿಮ್ಮ ಮನೆಯಲ್ಲಿಯೆ ಇರಲಿ ನಿನು ನನ್ನ ಜೊತೆ ದರ್ಗಾಕೆ ಬರಬೇಕು ಅಲ್ಲಿ ನಾನು ನಿನಗೆ ಜಡಿ ಬೂಟಿ ದವಾ ಕೊಡುತ್ತೇನೆ ಅದು ತೆಗೆದುಕೊಂಡು ಬಂದ ನಂತರ ನೀನು ತಾಟಿನಲ್ಲಿ ಮಂತರಿಸಿ ಇಟ್ಟಿದ್ದ ಬೆಳ್ಳಿ ಬಂಗಾರದ ಒಡವೆಗಳನ್ನು ಯಾರಿಂದ ತೆಗೆದುಕೊಂಡು ಬಂದಿದ್ದಿ ಅವರಿಗೆ ವಾಪಸ ಕೊಡು ಅಂತ ಹೇಳಿ ಫಿರ್ಯಾದಿಗೆ ಜೊತೆಯಲ್ಲಿ ಜಹೀರಾಬಾದಕ್ಕೆ ಮುಂಜಾನೆ 9:30 ಗಂಟೆಗೆ ವಡ್ಡನಕೇರಾ ಗ್ರಾಮದಿಂದ ಕರೆದುಕೊಂಡು ಹೋಗಿರುತ್ತಾಳೆ. ಜಹೀರಾಬಾದನಲ್ಲಿರುವ ಒಂದು ದರ್ಗಾಕ್ಕೆ ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಕರೆದುಕೊಂಡು ಹೋಗಿ ನನಗೆ ದರ್ಗಾದಲ್ಲಿ ಖುರಾಣ ಓದುತ್ತಾ ಕೂಡು ಅಂತ ಹೇಳಿ ತಾನು ಜಡಿ ಬೂಟಿ ಧವಾ ತೆಗೆದುಕೊಂಡು ಬರುತ್ತೇನೆ ಅಂತ ಹೇಳಿ ಹೋದವಳು ನಂತರ ಸಮಯವಾದರು ವಾಪಸ ಬಂದಿರುವುದಿಲ್ಲಾ. ಆಗ ನಾನು ಅವಳು ವಾಪಸ್ ಬರದ ಕಾರಣ ದಾರಿ ನೋಡಿ ನಂತರ ನಾನು ಜಹೀರಾಬಾದದಿಂದ ನಮ್ಮೂರಿಗೆ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಬಂದು ನಮ್ಮ ಮನೆಯಲ್ಲಿ ತಾಟಿನಲ್ಲಿ ಮಂತರಿಸಿ ಇಟ್ಟಿದ್ದ ಆಭರಣಗಳನ್ನು ತಾಟಿನ ಮೇಲಿನ ಬಟ್ಟೆಗಳನ್ನು ತೆಗೆದು ನೋಡಲು ಅದರಲ್ಲಿ ಇಟ್ಟಿದ್ದ ಬೆಳ್ಳಿಯ ಮತ್ತು ಬಂಗಾರದ ಆಭರಣಗಳ ಗಂಟು ಇದ್ದಿರುವುದಿಲ್ಲಾ. ಅದರಲ್ಲಿ ಬರಿ ನಾರಿಯಲ್ ಬಂಗಡಿ ಹಾಗೂ ನಿಂಬೂಗಳು ಇದ್ದವು. ನಮ್ಮ ಮನೆಗೆ ಬಂದ ಅಪರಿಚಿತ ಹೆಣ್ಣು ಮಗಳು ಅಂದಾಜು 40-45 ವಯಸ್ಸಿನವಳು ಇರುತ್ತಾಳೆ. ಅವಳ ಹೆಸರು ವಿಳಾಸ ನಾನು ತಿಳಿದುಕೊಂಡಿರುವುದಿಲ್ಲಾ. ನನ್ನ ಮಗನನ್ನು ಗುಣ ಪಡಿಸುವುದಾಗಿ ಹೇಳಿ ಮಾಂತ್ರಿಕ ಪೂಜೆ ಮಾಡಲು ಬೆಳ್ಳಿಯ ಮತ್ತು ಬಂಗಾರದ ಆಭರಣಗಳು ಇಡುವಂತೆ ನನಗೆ ಹೇಳಿ ನಂಬಿಸಿ ನಾನು ಅವಳ ಮೇಲೆ ನಂಬಿಕೆ ಇಟ್ಟು ಪೂಜೆಗೆಂದು ಒಟ್ಟು 14 ತೊಲಿ 1 ಗ್ರಾಂ ಬಂಗಾರದ ಆಭರಣಗಳು ಒಟ್ಟು ಅ.ಕಿ-7,05,000/- ಹಾಗೂ 1 ಕಿಲೋ 750 ಗ್ರಾಂ ಬೆಳ್ಳಿಯ ಆಭರಣಗಳ ಒಟ್ಟು ಅ.ಕಿ-1,05,000/- ರೂಪಾಯಿ ಬೆಲೆ ಬಾಳುವುದು ಹೀಗೆ ಒಟ್ಟು 8,10,000/- ರೂಪಾಯಿ ಬೆಲೆ ಬಾಳುವ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಇಟ್ಟಿದ್ದು, ಅವುಗಳನ್ನು ಗೊತ್ತಾಗದಂತೆ ತಾಟಿನಿಂದ ತೆಗೆದುಕೊಂಡು ಹೋಗಿ ಮೋಸ ಮಾಡಿದ ಅಪರಿಚಿತ ಹೆಣ್ಣು ಮಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಇದ್ದ ಫಿರ್ಯಾದು ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.