ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-10-2019

 

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 72/2019, ಕಲಂ. 279, 338, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 27-10-2019 ರಂದು ಫಿರ್ಯಾದಿ ಸದಾನಂದ ತಂದೆ ಜೀತಪ್ಪಾ ಜಾಡಗೆ ವಯ: 27 ವರ್ಷ, ಜಾತಿ: ಎಸ್.ಸಿ ಮಾದಿಗಾ, ಸಾ: ಯರನಳ್ಳಿ ಗ್ರಾಮ ರವರು ತನ್ನ ಮೊಟಾರ ಸೈಕಲ ನಂ. ಕೆಎ-36/ಆರ್-5901 ನೇದ್ದರ ಮೇಲೆ ತನ್ನ ಸೊದರ ಸೊಸೆಯಾದ ಕುಮಾರಿ ಭಾಗ್ಯಲಕ್ಷ್ಮಿ ವಯ: 14 ವರ್ಷ ಇವಳಿಗೆ ಕೂಡಿಸಿಕೊಂಡು ತಮ್ಮೂರಿಂದ ಬಿಟ್ಟು ಅಷ್ಟೂರ್ ಗ್ರಾಮಕ್ಕೆ ಹೋಗಲು ಬೀದರಗೆ ಬಂದು ಬೀದರದಿಂದ ತಾಜಲಾಪೂರ ಮಾರ್ಗವಾಗಿ ಅಷ್ಟೂರ ಗ್ರಾಮಕ್ಕೆ ಹೋಗುವಾಗ ಅಷ್ಟೂರ ಕ್ರಾಸ ಹತ್ತಿರ ರಿಂಗ ರೋಡಿನ ಮೇಲೆ ಹೋದಾಗ ಚಿಕ್ಕಪೇಟ ಕಡೆಯಿಂದ ಒಂದು ಬಿಳಿ ಬಣ್ಣದ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿಯ ಬಲಗಡೆ ಹಣೆಗೆ ಬಾವು ಬಂದು ತರಚಿದ ಗಾಯ, ಬಲಗಣ್ಣಿನ ಕೆಳಗಡೆ ತರಚಿದ ಗಾಯ, ಎಡಗಾಲ ಮೋಳಕಾಲ ಮೇಲೆ ತರಚಿದ ಗಾಯವಾಗಿರುತ್ತದೆ ಮತ್ತು ಭಾಗ್ಯಲಕ್ಷ್ಮಿ ಇವಳಿಗೆ ಎಡಗಡೆ ಹಣೆಯ ಮೇಲೆ ರಕ್ತಗಾಯ, ಎಡಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ, ಆಗ ಸದರಿ ಕಾರ ಚಾಲಕನು ಇಬ್ಬರಿಗೂ ಅದೇ ಕಾರಿನಲ್ಲಿ ಚಿಕಿತ್ಸೆ ಕುರಿತು ಹಾಕಿಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ತಂದು ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಕಾರ ನಂಬರ ನೋಡಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 121/2019, ಕಲಂ. 379 ಐಪಿಸಿ :-

ಫಿರ್ಯಾದಿ ಶಬ್ಬಿರಮಿಯ್ಯಾ ತಂದೆ ಸತ್ತಾರಸಾಬ ಡೊಳೆ ವಯ: 60 ವರ್ಷ, ಜಾತಿ: ಮುಸ್ಲಿಂ, ಸಾ: ಉಡಬಾಳ ರವರ ಹತ್ತಿರ 29 ಆಡುಗಳು ಇರುತ್ತವೆ, ಅವುಗಳನ್ನು ಫಿರ್ಯಾದಿಯವರ ಮಗನಾದ ಕುತಬೊದ್ದಿನ ದಿನಾಲು ಮುಂಜಾನೆ ಆಡುಗಳನ್ನು ಹೊಡೆದುಕೊಂಡು ಹೋಲಗಳಿಗೆ ಹೋಗಿ ಮೇಯಿಸಿಕೊಂಡು ಮನೆಗೆ ತಂದು ಆಡುಗಳ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಮನೆಯಲ್ಲಿ ಮಲಗುತ್ತಾನೆ, ಹೀಗಿರುವಾಗ ದಿನಾಂಕ 26-10-2019 ರಂದು ಆಡುಗಳನ್ನು ತಂದು ಅವುಗಳ ಕೊಟ್ಟಿಗೆಯಲ್ಲಿ ಹಾಕಿ ಪ್ರತಿನಿತ್ಯದಂತೆ ಊಟ ಮಾಡಿ 2100 ಗಂಟೆಗೆ ಮಲಗಿದ್ದು, ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳಲು 4 ಆಡುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, 0400 ಗಂಟೆಯ ಸುಮಾರಿಗೆ ಎದ್ದು ನೋಡಿದಾಗ ಉಳಿದ ಆಡುಗಳು ಚಿರಾಡುವ ಶಬ್ದ ಕೇಳಿ ಹೋಗಿ ನೋಡಲು 4 ಆಡುಗಳು ಕಾಣುತ್ತಿಲ್ಲಾ, ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ, ಸದರಿ ಆಡುಗಳ ಬೆಲೆ 20,000/- ರೂ. ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-10-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.