ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 28-06-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 102/2020 ಕಲಂ 379 ಐಪಿಸಿ :-

ದಿನಾಂಕ 27/06/2020 ರಂದು 1800 ಗಂಟೆಗೆ ಫಿರ್ಯಾದಿ ಪ್ರಶಾಂತ ತಂದೆ  ಕಾಶಿನಾಥ ಸಾ/ ವಿದ್ಯಾನಗರ ಕಾಲೋನಿ  ಬೀದರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಯ ಹೊಂಡಾ ಎಕ್ಟಿವಾ 5 ಜಿ ಬಿಳಿ  ಬಣ್ಣದ  ನಂ ಕೆಎ-38-ಡಬ್ಲ್ಯೂ-6310  , ಚಾಸಿಸ್ ನಂ. ಎಮ್ಇ4ಜೆಎಫ್50ಬಿಬಿಕೆಜಿ114826  ಇಂಜೀನ್ ನಂ. ಜೆಎಫ್0ಇಜಿ1114855 ಅಂ.ಕಿ: 49000/- ರೂ. ಇದ್ದು   ದಿನಾಂಕ 22/06/2020 ರಂದು ರಾತ್ರಿ 2200 ಗಂಟೆಯ ಸುಮಾರಿಗೆ  ಮನೆಯ ಮುಂದೆ ನಿಲ್ಲಿಸಿ  ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಿದ್ದು ದಿನಾಂಕ. 23-06-2020 ರಂದು  ಮುಂಜಾನೆ. 0700 ಗಂಟೆಯ ಸುಮಾರಿಗೆ ಎದ್ದು ಹೊರಗೆ ಬಂದು ನೋಡಲಾಗಿ  ಮೋಟಾರ ಸೈಕಲವನ್ನು ಇರಲಿಲ್ಲಾ ಫಿರ್ಯಾದಿ ಮತ್ತು ಗೆಳೆಯರು ಸೇರಿ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟಾರ ಸೈಕಲ ಇಲ್ಲಿಯವರೆಗೆ ಸಿಕ್ಕಿರುವದಿಲ್ಲಾ ಕಾರಣ ನನ್ನ ಎಕ್ಟಿವಾ 5 ಜಿ ಮೋಟಾರ ಸೈಕಲವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನೂತನ ನಗರ ಠಾಣೆ ಅಪರಾಧ ಸಂಖ್ಯೆ 70/2020 ಕಲಂ 379 ಐಪಿಸಿ :-

ದಿನಾಂಕ 27/06/2020  ರಂದು 2030 ಗಂಟೆಗೆ ಫಿರ್ಯಾದಿ ಶ್ರೀ. ನಾಗೇಶ ಚಿಕಲಿಂಗೆ ತಂದೆ ಬಸವರಾಜ ವಯ:29 ವರ್ಷ ಜಾತಿ:ಲಿಂಗಾಯತ ಉ:ಮಾಕರ್ೆಟಿಂಗ ಕೆಲಸ ಸಾ/ಸಿದ್ದಾರೆಡ್ಡಿ ಲೆಔಟ ನೌಬಾದ ಬೀದರ  ರವರು ಠಾಣೆಗೆ ಹಾಜರಾಗಿ   ಲಿಖಿತ  ದೂರು ನೀಡಿದರ ಸಾರಾಂಶವೆನೆಂದರೆ   ಬಜಾಜ ಪಲ್ಸಾರ 150 ಸಿಸಿ  ಮೋಟರ ಸೈಕಲ  ನಂ ಟಿಎಸ್1-ಇಎಸ್8703  ನೇದನ್ನು    ದಿನಾಂಕ 23/06/2020  ರಂದು ರಾತ್ರಿ 00:30 ಎ.ಎಮ್. ಗಂಟೆಗೆ   ಮೊಟರ ಸೈಕಲನ್ನು   ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದು ್ದ, 06:30 ಗಂಟೆಯ ಸಮಯಕ್ಕೆ ಎದ್ದು ನೋಡಿದಾಗ   ಮೊಟರ ಸೈಕಲ ಇದ್ದಿರುವದಿಲ್ಲ.   ಮನೆಯ ಅಕ್ಕ ಪಕ್ಕದಲ್ಲಿ  ನೊಡಿದಾಗ ಎಲ್ಲಿಯೂ ಕಾಣಲಿಲ್ಲ.  ದಿನಾಂಕ 23/06/2020 ರಂದು ರಾತ್ರಿ 00:30  ಎ.ಎಮ. ರಿಂದ 06:30 ಎ..ಎಮ್. ಗಂಟೆಯ ಅವಧಿಯಲ್ಲಿ  ಸಿದ್ದಾರೆಡ್ಡಿ ಲೇಔಟ ನೌಬಾದನಲ್ಲಿ ಇರುವ ನಮ್ಮ ಮನೆಯ ಮುಂದೆ  ನಿಲ್ಲಿಸಿದ  ನನ್ನ ಬಜಾಜ ಪಲ್ಸಾರ   ಮೋಟರ ಸೈಕಲ  ನಂ ಟಿ.ಎಸ್.11ಇಎಸ್.8703  ನೇದನ್ನು ಕಳ್ಳತನ ಮಾಡಿಕೊಂಡು  ಹೋದ ಅಪರಿಚಿತ ಕಳ್ಳರ  ವಿರುಧ್ಧ ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಬೇಕೆಂದು ವಿನಂತಿ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಖಟಕಚಿಂಚೊಳ್ಳಿ ಪೊಲಿಸ್ ಠಾಣೆ ಅಪರಾಧ ಸಂಖ್ಯೆ 48/2020 ಕಲಂ 379 ಐಪಿಸಿ:-

ದಿನಾಂಕ; 27/06/2020 ರಂದು 1600 ಗಂಟೆಗೆ  ಫಿರ್ಯಾದಿ ಶ್ರೀ ಭೀಮಾಶಂಕರ ತಂದೆ ಶರಣಪ್ಪಾ ಬೀಚಕುಂದೆ ವಯ- 28 ವರ್ಷ ಜಾತಿ- ಲಿಂಗಾಯತ ಉ- ಸೈಟ್ ಇಂಜಿನಿಯರ ಸಾ- ಭಾಲ್ಕಿ ರವರ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದರ ಸಾರಂಶವೆನೆಂದರೆ  ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಘೋಡವಾಡಿಯಿಂದ ಹೋನ್ನಳಿ ರಸ್ತೆ ಸುಧಾರಣೆ ಕಾಮಗಾರಿಯನ್ನು ಟೆಂಡರ ಮೂಲಕ ಕೈಗೊಳ್ಳಲಾಗುತ್ತಿದೆ  ಸದರಿ ಕಾಮಗಾರಿಯು ಪ್ರಗತಿಯಲ್ಲಿದ್ದು ದಿನಾಂಕ: 10/06/2020 ರಂದು ನಮ್ಮ ಕಂಪನಿಯ 06 ವಾಹಾನಗಳು ಗೌಸೊದ್ದಿನ ತಂದೆ ಶಮಶೊದ್ದಿನ ಮು-ಘೋಡವಾಡಿ ರವರ  ಗೊರ್ಟಾ ಶಿವಾರದಲ್ಲಿ ಇರುವ ಹೋಲದಲ್ಲಿ ರಾತ್ರಿ 08:00 ಪಿ,ಎಮ್ ಗಂಟೆಗೆ  ನಿಲ್ಲಿಸಲಾಗಿರುತ್ತದೆ  ದಿನಾಂಕ: 11/06/2020 ರಂದು ಬೆಳ್ಳಿಗೆ ಸುಮಾರು 07:20 ಗಂಟೆಗೆ ಕಾಮಗಾರಿ ಪುನಃ ಪ್ರಾರಂಭಿಸಲು ವಾಹನಗಳ ನಿಲ್ಲಿಸಿರುವ ಸ್ಥಳಕ್ಕೆ ಹೋದಾಗ 06 ವಾಹನಗಳ ಇಂಧನದ ಟ್ಯಾಂಕಗಳ ಬೀಗವನ್ನು ಮುರಿದು ಎಸೆಯಲಾಗಿದ್ದು 06 ವಾಹಾನಗಳ್ಳಿ ಸುಮಾರು 700 ಲೀಟರ (ಡೀಜಲ್) ಇಂಧನ ಯಾರೋ ಅಪರಿಚೀತ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ 1 ಲೀಟರ ಡೀಜಲ ಬೇಲೆ 70.37 ಇದ್ದು 700 ಲೀಟರ ಡೀಜಲನ ಒಟ್ಟು ಬೇಲೆ 49259/- ಇರುತ್ತದೆ    ಆದರಿಂದ ಮಾನ್ಯರೆ ಈ ಕಳುವಿನ ಬಗ್ಗೆ ತನಿಖೆ ಮಾಡಿ ಸೂಕ್ತ ಕಾನೂನ ಕ್ರಮ ಕೈಗೊಳ್ಳಲು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.