ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 28-03-2020

 

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 21/2020 ಕಲಂ 457, 380 ಐಪಿಸಿ :-

 

ದಿನಾಂಕ 27/03/2020 ರಂದು 19:45 ಗಂಟೆಗೆ ಫಿರ್ಯಾದಿ ಶ್ರೀ ಶರಣಯ್ಯಾ ಮಠಪತಿ  ಮುಖ್ಯ ಯೋಜನಾಧೀಕಾರಿಗಳು ಜಿಲ್ಲಾ ಪಂಚಾಯತ ಬೀದರ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಜಿಲ್ಲಾ ಪಂಚಾಯತ (ಯೋಜನಾ ಶಾಖೆ) ಯಲ್ಲಿಯ ಬಿ.ಆರ್.ಜಿ.ಎಫ್ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಪಿ.ಡಿ.ಓ ರವರುಗಳಿಗೆ ಸರಬರಾಜು ಮಾಡಲು ಸರಕಾರದಿಂದ ಬಂದ ಮೊಬೈಲ್ಗಳು ಎಲ್ಲಾ ಪಿ.ಡಿ.ಓ ರವರುಗಳಿಗೆ ಸರಬರಾಜು ಮಾಡಿದ ನಂತರ ಉಳಿದ 3 ಹೊಸ ಹೆಚ್.ಟಿ.ಸಿ (ಊಖಿಅ) ಕಂಪನಿಯ ಮೊಬೈಲ್ಗಳು ಯೋಜನಾ ಶಾಖೆಯಲ್ಲಿಯ ಅಲಮಾರಿಯಲ್ಲಿ ಇಟ್ಟಿದ್ದು ಅವುಗಳ ಐಎಂಇಐ ನಂ. 1) 358667065446554, & 358667065425660 2) 358667065446555 & 358667063362630 3) 358667065391660 & 358667063393635 ಇವಳಗಳ ಒಂದೊಂದರ ಅಂ.ಕಿ. 12,000/-ರೂ ಇರುತ್ತದೆ. ಹೀಗೆ 3 ಮೊಬೈಲ್ ಗಳ ಅಂ. ಮೊತ್ತ 36,000/-ರೂ ಆಗಿರುತ್ತದೆ. ದಿನಾಂಕ 21/03/2020 ರಂದು ರಾತ್ರಿ 7:00 ರಿಂದ 7:30 ರ ವರೆಗೆ ಯೋಜನಾ ಶಾಖೆಯ ಸಿಬ್ಬಂಧಿಗಳು ಕಛೇರಿಯಿಂದ ಮನೆಗೆ ತೆರಳಿರುತ್ತಾರೆ.  ಕಛೇರಿಯ ಜವಾನರಾದ   ಮೊಹ್ಮದ ಯುನುಷ ತಂದೆ ಮೊಹ್ಮದ ಇಸ್ಮಾಯಿಲ್ ರವರಿಗೆ ಬಿಗ ಹಾಕಿಕೊಳ್ಳಲು ಹೇಳಿ ಹೋದೇವು ಮರುದಿನ ಅಂದರೆ ದಿನಾಂಕ 22/03/2020 ರಂದು ರವಿವಾರ ವಾಗಿರುತ್ತದೆ. ನಂತರ ದಿನಾಂಕ 23/03/2020 ರಂದು (ಸೋಮವಾರ) ಬೆಳಿಗ್ಗೆ 10:00 ಗಂಟೆಗೆ ಯಥಾ ಸ್ಥಿತಿ ಕಛೇರಿ ಕೆಲಸಕ್ಕೆ ಅಧೀಕಾರಿಗಳು ಬಂದಿರುತ್ತಾರೆ. ಕಛೇರಿ ಕೆಲಸಕ್ಕೆ ಬಂದು ಟೇಬಲ್ಗಳ ಡ್ರಾ ತೆಗೆಯುವಾಗ ಕಳ್ಳತನವಾಗಿರುವುದು ಸಂಶಯವಾಗಿರುತ್ತದೆ. ಅದನ್ನು ಪರಿಶೀಲಿಸಿದ ಅಧೀಕಾರಿಗಳು ಶ್ರೀ ಪಂಡಿತ ಶರ್ಮಾ ಸಹಾಯಕ ಸಾಂಖ್ಯಿಕ ಅಧಿಕಾರಿ ಮತ್ತು ಶ್ರೀ ಬಾಲಾಜಿ ಪಿ.ಡಿ.ಓ ನಿಯೋಜನೆ ರವರು ಯೋಜನಾ ಶಾಖೆಯ ಮುಖ್ಯಸ್ಥರಿಗೆ ತಿಳಿಸಿರುತ್ತಾರೆ. ನಂತರ ಮುಖ್ಯ ಯೋಜನಾಧೀಕಾರಿಗಳು ನನಗೆ ಮೋಬೈಲ್ ಕಳ್ಳತನವಾಗಿರುವ ಬಗ್ಗೆ ವಿಷಯ ತಿಳಿಸಿರುತ್ತಾರೆ. ನಮ್ಮ ಕಛೇರಿಯಲ್ಲಿ ದ್ದ ಅಲಮಾರಿ ಬೀಗ ತೆಗೆದು ಮತ್ತು ಟೇಬಲ್ ಡ್ರಾ ಒಡೆದು ಡ್ರಾದಲ್ಲಿದ್ದ ದಾಖಲೆ ಕಡತಗಳು ಚಿಲ್ಲಾಪಿಲ್ಲಿ ಮಾಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಭಾಲ್ಕಿ ನಗರ ಪೊಲಿಸ್ ಠಾನೆ ಅಪರಾಧ ಸಂಖ್ಯೆ  91/2020 ಕಲಂ 32, 34 ಕೆ.ಇ ಎಕ್ಟ :-

 

ದಿನಾಂಕ 27/03/2020 ರಂದು 13:15 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗ ಬಸವನಗರದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಸಂಬಂಧಪಟ್ಟ ಇಲಾಖೆಯಿಂದ ಯಾವದೆ ಅನುಮತಿ ಲೈಸನ್ಸ ಇಲ್ಲದೆ ಮಧ್ಯ ಮಾರಾಟ ಮಾಡುತಿದ್ದಾನೆ ಅಂತಾ ಖಚೀತ ಮಾಹಿತಿ ಬಂದ ಮೇರೆಗೆ ಹೋಗಿ ದಾಳಿ ಮಾಡಿ ರಿತೀಕ ತಂದೆ ಸೋಪಾನ ಕಸಬೆ ವಯ: 21 ವರ್ಷ ಜಾತಿ; ಮಾಂಗರವಾಡಿ ಉ: ಕೂಲ ಕಸಬು ಸಾ: ಬಸವನಗರ ಭಾಲ್ಕಿ ಅಂತಾ ತಿಳಿಸಿದನು ಓಡಿ ಹೋದವನ ಹೆಸರು ವಿಚಾರಿಸಲು ವಸಂತ ತಂದೆ ಮಧುಕರ ಕಸಬೆ ಸಾ: ಬಸವನಗರ ಅಂತಾ ತಿಳಿಸಿದನು ನಂತರ ಅವನ ವಶದಲ್ಲಿದ್ದ ಚೀಲ ಪರಿಶೀಲಿಸಿ ನೋಡಲು ಅದರಲ್ಲಿ ಓರಿಜಿನಲ್ ಚಾಯ್ಸ್ ಎಂಬ ಹೆಸರಿನ 90 ಎಂ.ಎಲ್ ವುಳ್ಳ 98 ಪೇಪರ ಪಾಕೇಟಗಳು ಇದ್ದು ಒಂದೋಂದರ ಬೆಲೆ 30 ರೂ 32 ಪೈಸೆ ಇರುತ್ತದೆ ಮತ್ತು ಯು.ಎಸ್ ವ್ಹಿಸ್ಕಿ ಎಂಬ ಹೆಸರಿನ 90 ಎಂ.ಎಲ್ ವುಳ್ಳ 96 ಪ್ಲಾಸ್ಟಿಕ ಬಾಟಲಿಗಳು ಇದ್ದು ಒಂದೋಂದರ ಬೆಲೆ 30 ರೂ 32 ಪೈಸೆ ಇರುತ್ತದೆ ಎಲ್ಲ ಸೇರಿ ಅ:ಕಿ: 5882 ರೂದಷ್ಟು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂಖ್ಯೆ 38/2020 ಕಲಂ 32, 34 ಕೆ.ಇ. ಕಾಯ್ದೆ :-

 

ದಿನಾಂಕ 27-03-2020 ರಂದು ರಾತ್ರಿ 2200 ಗಂಟೆಗೆ ಫಿಯರ್ಾದಿ ಶ್ರೀ ಮಹಾಂತೇಶ ಲಂಬಿ ಪಿ.ಎಸ್.ಐ ಹಳ್ಳಿಖೇಡ (ಬಿ) ಪೊಲೀಸ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ,  ಅಮೀರಾಬಾದ ವಾಡಿ ಗ್ರಾಮ ಶಿವಾರ ನಯೂಮ್ ದಜರ್ಿ ಸಾ: ಹಳ್ಳಿಖೇಡ (ಬಿ) ರವರ ಹೊಲದಲ್ಲಿರುವ ಕೋಳಿ ಫಾರ್ಮ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ರವಿಕುಮಾರ ತಂದೆ ಶಿವರಾಜ ಸಂಗೋಳಗಿ ವಯ: 19 ವರ್ಷ ಜಾತಿ: ಕುರುಬುರ ಉ: ಕೂಲಿ ಕೆಲಸ ಸಾ: ಶಕ್ಕರಗಂಜವಾಡಿ ಇವನ ವಶದಿಂದ 1] 180 ಎಮ್.ಎಲ್ ವುಳ್ಳ ಒಟ್ಟು 21 ಇಂಪೇರಿಯಲ್ ಬ್ಲೂ ವಿಸ್ಕಿ ಸರಾಯಿ ತುಂಬಿದ ಬಾಟಲಗಳು ಇದ್ದು, ಒಂದು ಬಾಟಲಿನ ಅ.ಕಿ 162.19/- ರೂ ಇರುತ್ತದೆ. ಹೀಗೆ ಒಟ್ಟು 21 ಸರಾಯಿ ಬಾಟಲಗಳ ಅ.ಕಿ -3,405.99/- ರೂ ಇದ್ದು, ಇವುಗಳ ಸೀರಿಯಲ್ ನಂಬರ 9739023913, 9739023919 ರಿಂದ 9739023936 ಮತ್ತು 9739023889 ಹಾಗೂ 9739023891 ಇರುತ್ತವೆ. 2] 180 ಎಮ್.ಎಲ್ ಉಳ್ಳ ಒಟ್ಟು 7 ಓಟಿ ವಿಸ್ಕಿ ಸರಾಯಿ ತುಂಬಿದ ಪೋಚುಗಳಿದ್ದು, ಒಂದು ಪೋಚಿನ ಅ.ಕಿ 74.13/- ರೂ ಇರುತ್ತದೆ, ಒಟ್ಟು 7 ಪೋಚುಗಳ ಅ.ಕಿ 518.91/- ರೂ ಇದ್ದು, ಇವುಗಳ ಸೀರಿಯಲ್ ನಂ: 9852471130, 9852471131, 9852471132, 9852471135, 9852471139, 9852471142, 9852471143 ಇರುತ್ತವೆ. ಮತ್ತು 3] 750 ಎಮ್.ಎಲ್. ಉಳ್ಳ ಒಂದು ಖೊಡಾಸ್ ಎಕ್ಸ್.ಎಕ್ಸ್.ಎಕ್ಸ್. ರಮ್ ಅ.ಕಿ 306.78/- ರೂ ಇದ್ದು, ಇದರ ಬ್ಯಾಚ್ ನಂಬರ 379 ಸೀರಿಯಲ್ ನಂ: 0384329365 ಇರುತ್ತದೆ, ಹೀಗೆ ಎಲ್ಲವುಗಳ ಒಟ್ಟು ಅ.ಕಿ 4,231.68/- ರೂ ನೇದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.