ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-06-2020

 

ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ನಂ. 13/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 26-07-2020 ರಂದು ಫಿರ್ಯಾದಿ ರಮೇಶ ಢಗೆ, ಸಿಹಚಸಿ-806, ನೂತನ ನಗರ ಪೊಲೀಸ್ ಠಾಣೆ ಬೀದರ ರವರು 0600 ಗಂಟೆಯಿಂದ ಬೀದರ ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಬೀಟ ನಂ. 2 ರಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಬೆಳಿಗ್ಗೆ 0730 ಗಂಟೆಯ ಸುಮಾರಿಗೆ ಬೀದರ ಕೇಂದ್ರ ಬಸ ನಿಲ್ದಾಣದ ಮಧ್ಯದ ಗೇಟಿನ ಬಳಿ ಒಬ್ಬ ಪುರುಷ ವ್ಯಕ್ತಿಯ ಮೃತದೇಹ ಮಲಗಿಕೊಂಡ ಸ್ಥಿತಿಯಲ್ಲಿ ಬಿದ್ದಿರುತ್ತದೆ ಎಂದು ಸಾರ್ವಜನಿಕರಿಂದ ಸುದ್ದಿ ತಿಳಿದು ಫಿರ್ಯಾದಿಯು ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ಒಬ್ಬ ಪುರುಷ ವ್ಯಕ್ತಿ ವಯಸ್ಸು ಅಂದಾಜು 55-60 ವರ್ಷ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಮುಖದ ಮೇಲೆ ಬಿಳಿ ದಾಡಿ ಇರುತ್ತವೆ, ಸದರಿ ವ್ಯಕ್ತಿ ಅನಾರೋಗ್ಯದಿಂದಲೋ ಅಥವಾ ಇನ್ನಾವುದೋ ಕಾರಣಕ್ಕೋ ದಿನಾಂಕ 25, 26-07-2020 ರ ರಾತ್ರಿ ವೇಳೆಯಲ್ಲಿ ಬೀದರ ಕೇಂದ್ರ ಬಸ ನಿಲ್ದಾಣದ ಮಧ್ಯದ ಗೇಟಿನ ಬಳಿಯಲ್ಲಿ ಮೃತಪಟ್ಟಿದ್ದು ಆತನು ಯಾವ ಕಾರಣದಿಂದಾಗಿ ಮೃತಪಟ್ಟಿರುತ್ತಾನೆಂಬ ಬಗ್ಗೆ ತಿಳಿದಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 61/2020, ಕಲಂ. 379 ಐಪಿಸಿ :-

ಘೋಡವಾಡಿಯಿಂದ ಹೋನ್ನಳಿ ರಸ್ತೆ ಸುಧಾರಣೆ ಕಾಮಗಾರಿಯನ್ನು ಟೆಂಡರ ಮೂಲಕ ಕೈಗೊಳ್ಳಲಾಗುತ್ತಿದೆ  ಸದರಿ ಕಾಮಗಾರಿಯು ಪ್ರಗತಿಯಲ್ಲಿದ್ದು ದಿನಾಂಕ 10-06-2020 ರಂದು 2000 ಗಂಟೆಗೆ ಫಿರ್ಯಾದಿ ಭೀಮಾಶಂಕರ ತಂದೆ ಶರಣಪ್ಪಾ ಬಿಚಕುಂದೆ ಸಾ: ಭಾಲ್ಕಿ ರವರ ಕಂಪನಿಯ 06 ವಾಹಾನಗಳು ಗೌಸೊದ್ದಿನ ತಂದೆ ಶಮಶೊದ್ದಿನ ಸಾ: ಘೋಡವಾಡಿ ರವರ ಗೊರ್ಟಾ ಶಿವಾರದಲ್ಲಿರುವ ಹೋಲದಲ್ಲಿ ನಿಲ್ಲಿಸಲಾಗಿರುತ್ತದೆ, ನಂತರ ದಿನಾಂಕ 11-06-2020 ರಂದು 0720 ಗಂಟೆಗೆ ಕಾಮಗಾರಿ ಪುನಃ ಪ್ರಾರಂಭಿಸಲು ವಾಹನಗಳು ನಿಲ್ಲಿಸಿರುವ ಸ್ಥಳಕ್ಕೆ ಹೋದಾಗ 06 ವಾಹನಗಳ ಇಂಧನದ ಟ್ಯಾಂಕಗಳ ಬೀಗವನ್ನು ಮುರಿದು ಎಸೆಯಲಾಗಿದ್ದು 06 ವಾಹಾನಗಳಲ್ಲಿನ ಸುಮಾರು 700 ಲೀಟರ (ಡೀಜಲ್) ಇಂಧನ ಯಾರೋ ಅಪರಿಚೀತ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ಡೀಜಲ ಬೇಲೆ 49,259/- ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 113/2020, ಕಲಂ. 379 ಐಪಿಸಿ :-

ದಿನಾಂಕ 08-07-2020 ರಂದು 2200 ಗಂಟೆಗೆ ಫಿರ್ಯಾದಿ ರಾಕೇಶ ತಂದೆ ಶಾಮರಾವ ಎರನಳ್ಳಿ ವಯ: 27 ವರ್ಷ, ಜಾತಿ: ಕುರುಬ, ಸಾ: ವಿದ್ಯಾನಗರ 5ನೇ ಕ್ರಾಸ ಬೀದರ ತನ್ನ ಮಾವ ಸತೀಶ ವಡ್ಡಿ ಸಾ: ಹಾರೂರಗೇರಿ ಬೀದರ ಇವರ ಮನೆಗೆ ಊಟಕ್ಕೆಂದು ತನ್ನ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ. ಕೆಎ-38/ಡಬ್ಲು-4346 ನೇದರ ಮೇಲೆ ಬಂದು ಮನೆಯ ಮುಂದೆ ಸದರಿ ವಾಹನವನ್ನು ನಿಲ್ಲಿಸಿ ಊಟ ಮಾಡಿ ಅಲ್ಲಿಯೇ ಮಲಗಿಕೊಂಡಾಗ ದಿನಾಂಕ 09-07-2020 ರಂದು 12:00 ಗಂಟೆಯಿಂದ 0300 ಗಂಟೆಯ ಅವಧಿಯಲ್ಲಿ ಸದರಿ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಎಲ್ಲಾ ಕಡೆ ಹುಡುಕಾಡಿ ಪತ್ತೆ ಆಗಿರುವುದಿಲ್ಲ, ಕಳುವಾದ ವಾಹನದ ವಿವರ 1) ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ. ಕೆಎ-38/ಡಬ್ಲು-4346, 2) ಇಂಜಿನ್ ನಂ. ಡಿ.ಹೆಚ್.ವಾಯ್.ಕೆ.ಸಿ.28961, 3) ಚಾಸಿಸ್ ನಂ. ಎಂ.ಡಿ.2.ಎ.11.ಸಿ.ವಾಯ್.7.ಕೆ.ಸಿ.ಸಿ.68969, 4) ಮಾಡಲ್ 2019, 5) ಬಣ್ಣ: ಕಪ್ಪು ಬಣ್ಣ ಹಾಗೂ ಅ.ಕಿ 95,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-07-2020 ರಂದು ಪ್ರಕರನ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 114/2020, ಕಲಂ. 379 ಐಪಿಸಿ :-

ದಿನಾಂಕ 25-07-2020 ರಂದು 2200 ಗಂಟೆಗೆ ಫಿರ್ಯಾದಿ ಶಂಕರ ತಂದೆ ಮಾರುತಿ ಕೊಮಟಿ ವಯ: 22 ವರ್ಷ, ಜಾತಿ: ಕೊಮಟಿ, ಸಾ: ವಿದ್ಯಾನಗರ 11ನೇ ಕ್ರಾಸ ಬೀದರ ರವರು ತನ್ನ ದಿನನಿತ್ಯದ ಕೆಲಸ ಮುಗಿಸಿಕೊಂಡು ಮನೆಗೆ ಬಂದು ತನ್ನ ಬಜಾಜ್ ಪಲ್ಸರ್ ಎನ್.ಎಸ್ 200 ದ್ವಿಚಕ್ರ ವಾಹನ ಸಂ. ಕೆಎ-38/ಡಬ್ಲು-9899, ಇಂಜಿನ್ ನಂ. ಜೆ.ಎಲ್.ವಾಯ್.ಸಿ.ಕೆ.ಇ.02773, ಚಾಸಿಸ್ ನಂ. ಎಂ.ಡಿ.2.ಎ.36.ಎಫ್.ವಾಯ್.9.ಕೆ.ಸಿ.ಇ.43709, ಮಾಡಲ್ 2019, ಬಣ್ಣ: ಬಿಳಿ, ಅ.ಕಿ 1,10,000/- ರೂ. ನೇದನ್ನು ತನ್ನ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೊಗಿ ಊಟ ಮಾಡಿಕೊಂಡು ಪುನಃ 2330 ಗಂಟೆಗೆ ಮನೆಯ ಹೊರಗಡೆ ಬಂದು ನೋಡಲಾಗಿ ಸದರಿ ವಾಹನ ಇರಲಿಲ್ಲಾ, ನಂತರ ಫಿರ್ಯಾದಿಯು ಓಣಿಯಲ್ಲಿ, ಅಕ್ಕಪಕ್ಕದ ಜನರಿಗೆ ವಿಚಾರಿಸಲು ಯಾವುದೇ ಮಾಹಿತಿ ಸಿಕ್ಕಿರುವದಿಲ್ಲಾ ಹಾಗೂ ಅಮಲಾಪುರ, ಚಿಟ್ಟಾ, ಶಾಹಪುರಗೇಟ, ಇರಾನಿ ಗಲ್ಲಿ, ಚಿದ್ರಿ ಎಲ್ಲಾ ಕಡೆ ಹುಡುಕಾಡಿದರು ಸದರಿ ವಾಹನ ಪತ್ತೆ ಆಗಿರುವದಿಲ್ಲಾ, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 62/2020, ಕಲಂ. 32, 34 ಕೆ. ಕಾಯ್ದೆ :-

ದಿನಾಂಕ 26-07-2020 ರಂದು ಮನ್ನಾಎಖ್ಖೇಳ್ಳಿ ಗ್ರಾಮದ ಹಳೆ ಐ.ಬಿ ಹತ್ತಿರ ಒಬ್ಬ ವ್ಯಕ್ತಿ ತೆಲಂಗಾಣದಿಂದ ಕೈ ಹೆಂಡ ತೆಗೆದುಕೊಂಡು ಬಂದು ತನ್ನ ಲಾಭಕ್ಕಾಗಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾನೆಂದು ಶೀವರಾಜ ಪಾಟಿಲ್ ಪಿಎಸಐ (ಅವಿ) ಮನ್ನಾಎಖೇಳ್ಳಿ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮನ್ನಾಎಖ್ಖೇಳ್ಳಿ ಬಸ್ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನೋಡಲಾಗಿ ಬಾತ್ಮೀಯಂತೆ ಹಳೆ ಐಬಿ ಕಂಪೌಂಡ ಬಲ ಭಾಗದ ಡಿಸಿಸಿ ಬ್ಯಾಂಕಗೆ ಹೋಗುವ ಸಾರ್ವಜನಿಕ ರಸ್ತೆ ಮೇಲೆ ಆರೋಪಿ ಲಕ್ಷ್ಮಣ ತಂದೆ ರಾಮಲು ಗಂಗಾರಪಿ ವಯ: 32 ವರ್ಷ, ಜಾತಿ: ಬುರಬುರೇ ಸಾ: ಹಳೆ ಐಬಿ ಹತ್ತಿರ ಜೋಪಾಡಿ ಪಟ್ಟಿ ಮನ್ನಾಎಖ್ಖೇಳ್ಳಿ ಇತನು ಪ್ಲಾಸ್ಟೀಕ ಕವರನಲ್ಲಿನ ಬಿಳಿ ದ್ರಾವಣವನ್ನು ಜಗ್ಗಿನಲ್ಲಿ ಹಾಕಿ ಸಾರ್ವನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿರುವುದ್ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದಾಗ ಕುಡಿಯಲು ಬಂದವರು ಓಡಿ ಹೋಗಿದ್ದು, ನಂತರ ಆರೋಪಿಗೆ ಹಿಡಿದು ಸದರಿ ಸ್ಥಳ ಪರಿಶೀಲಿಸಲಾಗಿ ಒಂದು ಚೀಲದಲ್ಲಿ ಪ್ಲಾಸ್ಟೀಕ ಡಬ್ಬಲ ಕ್ಯಾರಿ ಬ್ಯಾಗನಲ್ಲಿ ಕಟ್ಟಿದ್ದ ಒಟ್ಟು 20 ಲೀಟರ ಹೆಂಡ ಇದ್ದು ಇದರ ಬಗ್ಗೆ ವಿಚಾರಿಸಲಾಗಿ ಪಕ್ಕದ ತೆಲಂಗಾಣ ರಾಜ್ಯದಿಂದ ಮಾರಾಟ ಮಾಡಲು ತಂದಿವುದಾಗಿ ಮತ್ತು ಇದು ಕೈ ಹೆಂಡ ಇರುತ್ತದೆ ಅಂತಾ ತಿಳಿಸಿದ್ದು, ನಂತರ ಅವನ ಅಂಗ ಜಡ್ತಿ ಮಾಡಲು ಹೆಂಡ ಮಾರಾಟದಿಂದ ಬಂದ ಒಟ್ಟು  200/- ರೂ. ಸಿಕ್ಕಿದ್ದು, ನಂತರ ಸದರಿ ಹೆಂಡ ಹಾಗೂ ಹಣವನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 49/2020, ಕಲಂ. 279, 337, 338 ಪಿಸಿ :-

ದಿನಾಂಕ 26-07-2020 ರಂದು ಫಿರ್ಯಾದಿ ಸೂರ್ಯಕಾಂತ ತಂದೆ ಕಲ್ಲಪ್ಪ ಕುದರೆ, ವಯ: 40 ವರ್ಷ, ಜಾತಿ: ಎಸ್.ಸಿ(ಹೊಲಿಯ), ಸಾ: ಖೇರ್ಡಾ (ಬಿ), ತಾ: ಬಸವಕಲ್ಯಾಣ ರವರು ಮನ್ನಾಎಖೆಳ್ಳಿ ಗ್ರಾಮಕ್ಕೆ ಹೋಗಲು ತನ್ನ ಚಿಕ್ಕಪ್ಪನ ಮಗನಾದ ಓಂಕಾರ ತಂದೆ ಸಿದ್ರಾಮ ಕುದರೆ, ವಯ: 30 ವರ್ಷ ಈತನನ್ನು ಕರೆದುಕೊಂಡು ಮೋಟರ ಸೈಕಲ ನಂ. ಕೆಎ-56/ಹೆಚ್-1570 ನೇದ್ದರ ಮೇಲೆ ಮನ್ನಾಏಖೆಳ್ಳಿಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ತಮ್ಮ ಗ್ರಾಮಕ್ಕೆ ಅದೇ ಮೋಟಾರ ಸೈಕಲ ಮೇಲೆ ಬರುವಾಗ ರಾ.ಹೇ. ನಂ. 65 ರೋಡಿನ ಮೇಲೆ ಹುಮನಾಬಾದದಿಂದ ಬಂಗ್ಲಾ ಕಡೆಗೆ ಬರುತ್ತಿರುವಾಗ ತಾಜ್ ಧಾಭಾ ಹತ್ತಿರ ಇರುವ ತಿರುವಿನಲ್ಲಿ ಓಂಕಾರ ಈತನು ಮೋಟರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಮೋಟಾರ ಸೈಕಲನ ವೇಗ ಕಂಟ್ರೋಲ್ ಮಾಡದೇ ರೋಡಿನ ಮಧ್ಯದಲ್ಲಿರುವ ಡಿವೈಡರಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಹಣೆಯ ಎಡಭಾಗ ಹಾಗೂ ಬಲಗಾಲ ಮೊಳಕಾಲ ಕೆಳಗೆ ಕೋಯ್ದ ರಕ್ತಗಾಯವಾಗಿರುತ್ತದೆ  ಹಾಗೂ ಓಂಕಾರ ಈತನಿಗೆ ಹಣೆಯ ಮೇಲೆ, ತೆಲೆಯ ಮುಂಭಾಗ ಭಾರಿ ರಕ್ತಗಾಯ, ಮೂಗಿಗೆ  ಭಾರಿ ರಕ್ತಗಾಯ, ಬಲಗೈ ಮೊಳಕೈ ಹತ್ತಿರ ಭಾರಿ ಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿ ಸೇರಿದ ಜನರೆಲ್ಲರೂ 108 ಅಂಬುಲೇನ್ಸ ಕರೆಯಿಸಿ ಗಾಯಗೊಂಡ ಇಬ್ಬರಿಗೂ ಅದರಲ್ಲಿ ಹಾಕಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 55/2020, ಕಲಂ. 279, 337, 338 ಐಪಿಸಿ :-

ದಿನಾಂಕ 26-07-2020 ರಂದು ಆರೋಪಿ ಶರದ ತಂದೆ ಶಂಕರರಾವ ಕಾಳಬಾ ವಯ: 32 ವರ್ಷ, ಜಾತಿ: ಮರಾಠಾ, ಸಾ: ಬೇಟಬಾಲಕುಂದಾ ಇತನು ಫಿರ್ಯಾದಿ ಮಾರುತಿ ತಂದೆ ದೇವರಾವ ಮೇತ್ರೆ, ವಯ: 50 ವರ್ಷ, ಜಾತಿ: ಕುರುಬ, ಸಾ: ಬೇಟಬಾಲಕುಂದಾ ರವರ ತಮ್ಮನಾದ ನಿರ್ವತಿ ಈತನಿಗೆ ಮೋಟಾರ ಸೈಕಲ್ ನಂ. ಕೆ.ಎ-56/ಇ-2106 ನೇದರ ಮೇಲೆ ಹಿಂದೆ ಕುರಿಸಿಕೊಂಡು ಬಸವಕಲ್ಯಾಣ-ಹುಲಸೂರ ರೋಡ ಮಾನಾಜಿರಾವ ಬಿರಾದಾರ ಇವರ ಹೊಲದ ಹತ್ತಿರ ರಸ್ತ್ತೆಯ ಮೇಲೆ ತಾನು ಚಲಾಯಿಸುತ್ತಿರುವ ಮೋಟಾರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಮೋಟಾರ ಸೈಕಲ್ ಹತೋಟಿ ತಪ್ಪಿ ರೋಡಿನ ಮೇಲೆ ಬಿದ್ದುದ್ದರಿಂದ ನಿರ್ವತಿ ಇತನಿಗೆ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯ, ಮುಖಕ್ಕೆ, ಕಣ್ಣಿಗೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಬರುತ್ತಿತ್ತು ಮತ್ತು ಎಡಗೈ ಮೊಳಕೈಗೆ ತರಚಿದ ರಕ್ತಗಾಯವಾಗಿ ಮುರ್ಚ್ಚೇ ಹೋಗಿರುತ್ತಾನೆ ಹಾಗೂ ಆರೋಪಿ ಶರದ ಇವನಿಗೆ ಎಡ ಭುಜಕ್ಕೆ  ಗುಪ್ತಗಾಯ, ಎರಡು ಮುಂಗೈ ಮೇಲೆ, ಎಡಗೈ ಮೊಳಕೈ ಕೆಳಗೆ ತರಚಿದ ರಕ್ತಗಾಯ ಮತ್ತು ಎಡಗಾಲ ಹೆಬ್ಬಟಿಗೆ ರಕ್ತಗಾಯ, ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ, ನಂತರೆ ಇಬ್ಬರಿಗೂ 108 ಅಂಬುಲೆನ್ಸದಲ್ಲಿ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.