ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-04-2021

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 47/2021 ಕಲಂ 505(1),(ಬಿ) 341 ಐಪಿಸಿ ಮತ್ತು ಸೇಕ್ಷನ್ 5(2) ಕರ್ನಾಟಕ ಎಪಿಡೆಮಿಕ್ ಕಾಯ್ದೆ 2020 ಜೋತೆ 34 ಐಪಿಸಿ :-    

ದಿನಾಂಕ: 26-04-2021 ರಂದು ಡಾ: ವಿ.ಜಿ. ರೆಡ್ಡಿ ಡಿ.ಎಚ್.. ಬೀದರ ರವರು ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ: 17-04-2021 ರಂದು  ರೋಗಿಗಳ ತುರ್ತು ಚಿಕಿತ್ಸೆ ಸಲುವಾಗಿ ಯಾದಗಿರಿ ಡಿ.ಎಚ್.. ರವರಿಂದ  ಒಟ್ಟು  100 ರೆಮ್ಡಿಸಿವರ್ ಇಂಜೆಕ್ಷನ್ ಬಾಟಲಗಳು ಸ್ವೀಕರಿಸಿದ್ದು ಇರುತ್ತದೆ.  ನಂತರ ದಿನಾಂಕ: 25-05-2021 ರಂದು 1200 ಗಂಟೆಗೆ ಯಾದಗಿರ ಡಿಎ.ಎಚ್.. ಸರ್ಕಾರಿ ವಾಹನದ ಚಾಲಕನ ಮೂಲಕ 50 ರೆಮ್ಡಿಸಿವರ್ ಇಂಜೆಕ್ಷನ್ ಬಾಟಲಗಳನ್ನು ತೆಗೆದುಕೊಂಡು ಹೋಗುವಾಗ ಇರುವ ಸತ್ಯವನ್ನು ಅರಿಯದೆ ವಿಶ್ವಕಲಾ (ನ್ಯೂಸ್ 24) ಮತ್ತು ವಿಶ್ವಕುಮಾರ (ರಾಜ್.ಟಿ.ವಿ.) ಹೆಸರಿನ ವ್ಯಕ್ತಿಗಳು ಸುಮಾರು 1330 – 1400 ಗಂಟೆಯ ವರೆಗೆ ವಾಹನವನ್ನು ಅಕ್ರಮವಾಗಿ ತಡೆದು ಘಟನೆಯ ವೀಡಿಯೊ ಮಾಡಿ ಅದನ್ನು ತಮ್ಮ ಸುದ್ದಿ ಚಾನೆಲಗಳಲ್ಲಿ ಮತ್ತು ವಾಟ್ಸಪ್ ನಲ್ಲಿ ನಕಲಿ ಸುದ್ದಿಗಳನ್ನು ಪ್ರಕಟಿಸಿದ್ದು, ಯಾಗದಗಿರಿಗೆ  ಅಕ್ರಮ ಸಾಗಣೆ ಎಂದು ಹೇಳಿದೆ ಮಾಧ್ಯಮಗಳು ಹೇಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂಬುದನ್ನು ತೋರಿಸುತ್ತದೆ. ಇದರೊಂದಿಗೆ ಇಂತಹ ಕೋವಿಡ್-19 ಸಂಧರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ವೈದ್ಯರ ಮನೋಸ್ಥೈರ್ಯವು ಕುಗ್ಗುತ್ತದೆಆದ್ದರಿಂದ ಇಂತಹ ಸುಳ್ಳು ಸುದ್ದಿ ಹರಡುವಲ್ಲಿ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಯುಂಟು ಮಾಡಿರುವ ವ್ಯಕ್ತಿಗಳ ವಿರುದ್ದ ಕ್ರಮಗೊಳ್ಳುವಂತೆ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 39/2021 ಕಲಂ 269, 270 ಐಪಿಸಿ ಜೊತೆ 5(4) ಕರ್ನಾಟಕ ಸಾಂಕ್ರಮಿಕ ರೋಗಗಳ ಅಧಿನಿಯಮ 2020  :-

ದಿನಾಂಕ 26/04/221 ರಂದು 13:30 ಗಂಟೆಗೆ ಶ್ರೀ ರಮೇಶ ತಂದೆ ಧಾರು ರಾಠೋಡ ವಯ-40 ವರ್ಷ ಜಾತಿ-ಲಂಬಾಣಿ ಉದ್ಯೋಗ-ಪಂಚಾಯತ ಅಭಿವೃದ್ದಿ ಅಧಿಕಾರಿ ಸಾ: ಗಡಿನಿಂಗದಹಳ್ಳಿ ತಾ: ಚಿಂಚೋಳಿ ಜಿ:ಕಲಬುರಗಿ ಸದ್ಯ ಪಂಚಾಯತ ಅಭಿವೃದ್ದಿ ಅಧಿಕಾರಿ ಸಸ್ತಾಪೂರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ, ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿದ್ದರಿಂದ ಸರ್ಕಾರವು ಯಾವುದೇ ಜಾತ್ರೆ, ಸಾರ್ವಜನಿಕ  ಕಾರ್ಯಕ್ರಮಗಳಿಗೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಸರ್ಕಾರ ನಿರ್ಭಂದ ಮಾಡಿ ಆದೇಶ ಹೊರಡಿಸಿದ್ದು ಇರುತ್ತದೆ. ಅತಲಾಪೂರ ಗ್ರಾಮದಲ್ಲಿನ ಮಹಾದೇವ ಮಂದಿರ ಬಾರಸಿ ಕಾರ್ಯಕ್ರಮ ಆಚರಣೆ ಮಾಡುವವರಿದ್ದಾರೆ ಅಂತಾ ಮಾಹಿತಿ ಗೊತ್ತಾಗಿ ನಾನು ಮತ್ತು ಮಂಠಾಳ ಕಂದಾಯ ನಿರೀಕ್ಷಕರಾದ ಬಾಬುರಾವ ಅರಳಿ, ಹಾಗು ಅತಲಾಪೂರ ಗ್ರಾಂ ಲೇಕ್ಕಾಧಿಕಾರಿಯಾದ ಸುಧಾಕರ ತಂದೆ ರಾಜಕುಮಾರ ಗೌರಶೆಟ್ಟಿ ಮೂವರು ಕೂಡಿ ಅತಲಾಪುರ ಗ್ರಾಮಕ್ಕೆ ಹೋಗಿ ಈಗಾಗಲೇ ಯಾವುದೇ ರೀತಿಯಾದ ಕಾರ್ಯಕ್ರಮ ಮಾಡತಕ್ಕದ್ದಲ್ಲ ಹಾಗು ಹೇಚ್ಚಿನ ಜನ ಸೇರ ತಕ್ಕದ್ದಲ್ಲ ಕೋವಿಡ-19 ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ ಅಂತಾ ಸಕರ್ಾರದಿಂದ ಆದೇಶವಾಗಿದ್ದು ಆದ್ದರಿಂದ ನಿಮ್ಮ ಗ್ರಾಮದಲ್ಲಿ ಮಹಾದೇವ ಬಾರಿಸಿ ಕಾರ್ಯಕ್ರಮ ಮಾಡಬಾರದೆಂದು ಡೊಂಗುರ ಮೂಲಕ ಸಾರ್ವಜನಿಕರಿಗೆ ಮಾಹಿತಿ ತಿಳಿಸಲಾಗಿರುತ್ತದೆ. ಆದರೆ ಅತಲಾಪೂರ ಗ್ರಾಮದ ಪ್ರಮುಖ ಜನರಾದ 1) ಜ್ಞಾನೇಶ್ವರ ತಂದೆ ಶರಣಪ್ಪಾ ರಾಚಪ್ಪನೋರ ವಯ-30 ವರ್ಷ 2) ವಿಕಾಸ ತಂದೆ ಚಂದ್ರಕಾಂತ ಮರಪಳ್ಳೆ ವಯ-25 ವರ್ಷ 3) ಅನೀಲ ತಂದೆ ಶರಣಪ್ಪಾ ಪಾಂಚಾಳ ವಯ- 24 ವರ್ಷ 4) ರಾಜಕುಮಾರ ತಂದೆ ಸಿದ್ದಣ್ಣ ರಾಚಪ್ಪನೋರ ವಯ- 25 ವರ್ಷ 5) ಸಂಜುಕುಮಾರ ತಂದೆ ಅಣ್ಣೆಪ್ಪಾ ಪಿರಪ್ಪನೋರ ವಯ-32 ವರ್ಷ 6) ಲಕ್ಷ್ಮಣ ತಂದೆ ಬೀರಪ್ಪಾ ಕುದಂಡೆ ವಯ-40 ವರ್ಷ 7) ವಿಲಾಸ ತಂದೆ ಶಂಕ್ರೇಪ್ಪಾ ಪಿರಪ್ಪನೋರ ವಯ-35 ವರ್ಷ 8) ಬಸಣ್ಣ ತಂದೆ ಮಲ್ಲಪ್ಪಾ ಬೀರನೋರ ವಯ – 55 ವರ್ಷ 9) ಹಣಮಂತ ತಂದೆ ಮಾಣಿಕಪ್ಪಾ ಪೀರಾಜಿ ವಯ-58 ವರ್ಷ 10) ಮಹಾದೇವ ತಂದೆ ತುಕಾರಾಮ ಲಚ್ಚಮ್ಮನೋರ ವಯ-45 ವರ್ಷ 11) ಮಾರುತಿ ತಂದೆ ನಾಗಪ್ಪಾ ಜಮಾದಾರ ವಯ-35 ವರ್ಷ 12) ಜಗನ್ನಾಥ ತಂದೆ ಬೀಮಣ್ಣ ಗಣಪತನೋರ ವಯ-48 ವರ್ಷ ಇವರೆಲ್ಲರೂ ಕೂಡಿ ಗ್ರಾಮಸ್ಥರೆಲ್ಲರಿಗೆ ಒಂದೆ ಕಡೆ ಸೇರಿಸಿ ದಿನಾಂಕ 24/04/2021 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಅತಲಾಪೂರ ಗ್ರಾಮದಲ್ಲಿ ಮಹಾದೇವ ಮಂದಿರದಿಂದ ಹನುಮಾನ ಮಂದಿರದವರೆಗೆ ಮೇರವಣಿಗೆ ಬಾರಸಿ ಕಾರ್ಯಕ್ರಮ ಮಾಡಿರುತ್ತಾರೆ. ಈ ಮೇಲಿನ ಎಲ್ಲಾ ಜನರು ಕೂಡಿ ಅತಲಾಪೂರ ಗ್ರಾಮದಲ್ಲಿ ಕೋವಿಡ-19 ಸಾಂಕ್ರಾಮಿಕ ರೋಗ ಹರಡುತ್ತದೆ ಅಂತಾ ತಿಳಿದು ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ಸಂಭವವಿದೆ ಅಂತಾ ಗೊತ್ತಿದ್ದರ ಕೂಡಾ ಹಾಗು ಸರ್ಕಾರ ಯವುದೇ ರೀತಿ ಕಾರ್ಯಕ್ರಮ ಮಾಡಬಾರದೆಂದು ನಿರ್ಭಂದ ಹೇರಿ ಆದೇಶ ಹೊರಡಿಸಿದರು ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ಕಾರಣ ಇವರೆಲ್ಲರ ವಿರುದ್ದ ಕಾನೂನ ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.