ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-04-2020

ಮುಡುಬಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2020 ಕಲಂ 279, 304 (ಎ) ಐಪಿಸಿ :-

ದಿನಾಂಕ 26/04/2020 ರಂದು 1930 ಗಂಟೆಗೆ ಶ್ರೀಮತಿ ಅನುಸಾಬಾಯಿ ಗಂಡ ಶಿವಶರಣ ಕೊಡಂಬಲೆ ವಯ 55 ವರ್ಷ ಜಾ: ಕುರುಬರು ಉ: ಮನೆಕೆಲಸ ಮು: ಚಿಕ್ಕನಾಗಾಂವವಾಡಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ   22 ವರ್ಷದ  ಮಗ ಅಬೀಷೇಕ ಈತನು ಒಕ್ಕಲುತನ ಕೆಲಸ ಮಾಡಿಕೊಂಡು ನಮ್ಮ ಜೋತೆ ಇರುತ್ತಿದ್ದನು.ಇಂದು ದಿನಾಂಕ 26/04/2020  ರಂದು ಮಧ್ಹಾನ 3:00 ಗಂಟೆಗೆ  ಫಿರ್ಯಾದಿಯ ಮೈದುನ ವೆಕಂಟ ತಂದೆ ಶಿವರಾಯ ಕೂಡಂಬಲೆ ಇವರಿಗೆ ತನ್ನ ಭಾವನ ಹೋಲದಲ್ಲಿ ಕೆಲಸಕ್ಕಾಗಿ ಹೋಗಲು ನನ್ನ ಮಗ ಅಭೀಷೇಕ ಈತನಿಗೆ ಮೋ.ಸೈಕಲ ಮೇಲೆ ಬಿಟ್ಟು ಬರಲು ಬಾ ಅಂದಾಗ   ಮಗ ಅಭೀಷೇಕ ಈತನು ತನ್ನ ಮೋ.ಸೈಕಲ ಸಂ: ಕೆಎ-56 ಜೆ-4206 ಇದರ ಮೇಲೆ ತನ್ನ ಚಿಕ್ಕಪ್ಪಾ ವೇಂಕಟ ಈತನಿಗೆ ತನ್ನ ಹಿಂದೆ ಕೂಡಿಸಿಕೊಂಡು ಬೈಕ ಚಲಾಯಿಸಿಕೊಂಡು ಖೆರ್ಡಾ(ಕೆ) ಗ್ರಾಮಕ್ಕೆ ಹೋಗಿರುತ್ತಾನೆ. ಸಮಯ ಸಾಯಾಂಕಾಲ 06:00 ಗಂಟೆಗೆ ಸುಮಾರಿಗೆ   ಮೈಸಲಗಾ ಥಾಂಡಾದ ಭಾಗ್ಯವಂತಿ ದೇವಿ ಮಂದಿರದ ಎದುರಿಗೆ ರೊಡಿನ ಮೇಲೆ ತನ್ನ ಮೋ.ಸೈಕಲ ಸಮೇತ ಬಿದ್ದು ಮೃತ್ತಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಪ್ರಕರಣ ಸಂಖ್ಯೆ 52/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ: 26-04-2020 ರಂದು   1300 ಗಂಟೆಗೆ  ಪಿ. ಎಸ್. ಐ ರವರು ಠಾಣೆಯಲ್ಲಿದ್ದಾಗ  ಅವರಿಗೆ ಖಚೀತ ಬಾತ್ಮಿ ಬಂದಿದ್ದೆನೆಂದರೆ, ಎರಡು ಜನರು ರಾಜಕುಮಾರ ಸಿರ್ಸೆ ರವರ ಕಬ್ಬಿನ ಹೊಲದ ಹತ್ತಿರ ಕಳ್ಳಭಟ್ಟಿ ಸರಾಯಿ ( ಕಲಬರಿಕೆ ಸರಾಯಿ) ಸಾರ್ವಜನಿಕರಿಗೆ ಮಾರಾಟ ಮಾಡಲು ತಯ್ಯಾರಿಸುತಿದ್ದಾರೆ ಅಂತ ಖಚೀತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಅಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಹತ್ತಿರ ಎರಡು ಬ್ಯಾರಲಗಳು, ಒಂದು ಸ್ಟೀಲ ಕೊಡ, ಒಂದು ಕೊಳವೆ ಇರುವ ಕಳ್ಳಭಟ್ಟಿ ಸರಾಯಿ ತಯ್ಯಾರಿಸುವ ಸಾಮಗ್ರಿ, ಬೆಲ್ಲಾ, ನವಳಸರಾ, ನೀರು, ಗೋಬ್ಬರು ಇಟ್ಟುಕೊಂಡು ಕಳ್ಳಭಟ್ಟಿ ಸರಾಯಿ ತಯ್ಯಾರಿಸುತಿದ್ದನ್ನು ನೋಡಿ ಖಾತ್ರಿ ಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು  ಅವರು ತನ್ನ  ಹೆಸರು 1) ಬಸವರಾಜ ತಂದೆ ವಾಸುದೇವ ಪವಾರ ವಯ 50 ವರ್ಷ ಜಾ; ಲಮಾಣಿ ಉ; ಕೂಲಿ ಕೆಲಸ ಸಾ; ಬೀರಿ ( ಬಿ ) ಥಾಂಡಾ , 2) ರಾಜಕುಮಾರ ತಂದೆ ಘೇಮಸಿಂಗ ರಾಠೋಡ ವಯ 35 ವರ್ಷ ಜಾ; ಲಮಾಣಿ ಉ; ಕೂಲಿ ಕೆಲಸ ಸಾ; ಬೀರಿ ( ಬಿ) ಥಾಂಡಾ ಅಂತ ತಿಳಿಸಿರುತ್ತಾರೆ. . ನಂತರ ಅವರ ಹತ್ತಿರ ಇದ್ದ ಬ್ಯಾರಲಗಳಲ್ಲಿ  ನೊಡಲು ಅದರಲ್ಲಿ ಸರಾಯಿ ವಾಸನೆ ಬರುತಿದನ್ನು ಕಂಡು ಆತನಿಗೆ ಬ್ಯಾರಲನಲ್ಲಿ ಎನು ಇದೆ ಅಂತ  ವಿಚಾರಿಸಿದಾಗ ಇದರಲ್ಲಿ ಕಲಬರಕೆ ಸರಾಯಿ (ಕಳ್ಳಭಟ್ಟಿ ಸರಾಯಿ ) ತಯ್ಯಾರ ಮಾಡುವ ಬೆಲ್ಲ, ನವಳಸರಾ, ಗೊಬ್ಬರು, ಮಿಶ್ರೀತ ಪದಾರ್ಥ ಇರುತ್ತದೆ ಅಂತ ತಿಳಿಸಿದನು. ಈ ಸರಾಯಿ ತಯ್ಯಾರಿಸುವ ಸಾಮಗ್ರಿಗಳು ಎಲ್ಲಿಂದ ತಂದಿದಿಯಾ ಅಂತ ವಿಚಾರಿಸಿದಾಗ ಕಾಳ ಸಂತೆಯಲ್ಲಿ ಖರೀದಿಸಿ ಸರಾಯಿ ತಯ್ಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ತೆಗೆದುಕೊಂಡು ಬಂದು ಸರಾಯಿ ತಯ್ಯಾರಿಸುತಿದ್ದೇವೆ ಅಂತ ತಿಳಿಸಿದರು.   ಈ ಸರಾಯಿ ಸೇವನೆ ಮಾಡಿದರೆ ಮಾನವ ಜಿವಕ್ಕೆ ಹಾನಿಯಾಗುವ ಸಂಬಂವ ಇರುತ್ತದೆ. ಈ ಸರಾಯಿ ವಿಷ ಪುರಿತವಾದದ್ದು ಈ ಸರಾಯಿ ತಯ್ಯಾರಿಸಲು  ಸರಕಾರದಿಂದ ಯಾವುದಾದರು ಕಾಗಪತ್ರಗಳು , ಪರವಾನಿಗೆ ಪತ್ರ ಇದೆಯೇ ಅಂತ ವಿಚಾರಿಸಿದಾಗ ಅವರು ತನ್ನ ಹತ್ತಿರ ಯಾವುದೆ ಪರವಾನಿಗೆ ಕಾಗದ ಪತ್ರಗಳು ರುವುದಿಲ್ಲಾ ಅಂತ ತಿಳಿಸಿರುತ್ತಾರೆ.  ಸದರಿ ನೀಲಿ ಬಣ್ಣದ ಪ್ಲಾಸ್ಟೀಕ ಬ್ಯಾರಲಗಳು  ಪರಿಶೀಲಿಸಿ ನೋಡಲು ಎರಡು ಬ್ಯಾರಲಗಳು ಇದ್ದು ಒಂದು ಬ್ಯಾರಲ ಅಂದಾಜು 100 ಲೀಟರದಷ್ಟು , ಮತ್ತು ಇನ್ನೊಂದು ಬ್ಯಾರಲ 50 ಲೀಟರದಷ್ಟು ಇದ್ದು ಎರಡು ಬ್ಯಾರಲಗಳಲ್ಲಿ ಕಳ್ಳಭಟ್ಟಿ ಸರಾಯಿ ತಯ್ಯಾರಿಸುವ, ಗೊಬ್ಬರ, ಬೆಲ್ಲ, ನವಳಸರಾ, ಮಿಶ್ರಿತ ರಾಡಿ ಪದಾರ್ಥ    ಒಂದು 5 ಲೀಟರಿನ ಪ್ಲಾಸ್ಟೀಕ ಕ್ಯಾನ ಇದ್ದು ಅದರಲ್ಲಿ 5 ಲೀಟರದಷ್ಟು ಕಳ್ಳಭಟ್ಟಿ ಸರಾಯಿ ಇರುತ್ತದೆ ಮತ್ತು 2 ಲಿಟರನ ಎರಡು ಪ್ಲಾಸ್ಟಿಕ ಬಾಟಲಗಳಲ್ಲಿ 4 ಲಿಟರ ಸರಾಯಿ ಮತ್ತು ಒಂದು ಲಿಟರ ಪ್ಲಾಸ್ಟಿಕ ಬಾಟಲನಲ್ಲಿ  1 ಲಿಟರ ಕಳ್ಳಭಟ್ಟಿ ಸರಾಯಿ  ಹೀಗೆ ಒಟ್ಟು 10 ಲೀಟರ  ಕಳ್ಳಭಟ್ಟಿ ಸರಾಯಿ ಇರುತ್ತದೆ. ಪ್ರತಿಯೊಂದು ಲೀಟರ ಸರಾಯಿಯ ಕಿ;; 100/- ರೂ ಇದ್ದು ಹೀಗೆ 10 ಲೀಟರ ಸರಾಯಿ ಅಕಿ;; 1000/- ರೂ ಇರುತ್ತದೆ     ಮತ್ತು  ಇನ್ನೊಂದು  50 ಲೀಟರಿನ ನೀಲಿ ಬಣ್ಣದ ಬ್ಯಾರಲ, ಅಕಿ;; 100/- ರೂ, ಎರಡು ಕೆಜಿ.ಬೆಲ್ಲಾ., 2 ಕೆ. ಜಿ. ಗೊಬ್ಬರ, ಒಂದು ಕೆಜಿ. ನವಳಸರಾ. ಒಂದು ಸ್ಟೀಲ ಕೊಡಾ, ಒಂದು ಕೊಳವೆ ಇರುವ ಸರಾಯಿ ತಯ್ಯಾರಿಸುವ ಸಾಮಗ್ರಿ,  ಹೀಗೆ ಒಟ್ಟು 1500/- ರೂ ಬೆಲೆಬಾಳು ಕಳ್ಳಭಟ್ಟಿ ( ಕಲಬೆರಿಕೆ ) ಸರಾಯಿ, ನಗದು ಹಣ, , ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಕುಶನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 33/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ  ಮತ್ತು 273 ಐಪಿಸಿ:-

ದಿನಾಂಕ:26/04/2020 ರಂದು ಪಿಎಸ್ಐ ರವರಿಗೆ ಮಹಾಡೊಣಗಾಂವ ತಾಂಡದಿಂದ ಕಾಲು ದಾರಿಯ ಮುಖಾಂತರ ಮಸ್ಕಲ್ ಗ್ರಾಮದ ಮಾರ್ಗವಾಗಿ ಕೆಲವು ಜನರು ಮೋಟಾರ ಸೈಕಲ್ಗಳ ಮೇಲೆ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡಲು ತೆಗೆದುಕೊಂಡು ಹೋಗುವವರಿದ್ದಾರೆ ಅಂತ ಬಂದ ಖಚಿತ ಬಾತ್ಮಿ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು, ಮೊದಲನೆ ಮೋಟಾರ ಸೈಕಲ್ ನಂ. 39 ಕ್ಯು 0376 ಇದ್ದು ಅದರ ಮೇಲೆ ಇಬ್ಬರು ವ್ಯಕ್ತಿಗಳು ಕುಳಿತಿದ್ದು ಸದರಿಯವರಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಚಾಲಕನ ಹೆಸರು ರಾಜು ತಂದೆ ರಾಮು ರಾಠೋಡ ವ: 30 ವಷ ಉ:ಗಿಲಾವ್ ಕೆಲಸ ಜಾ: ಲಮಾಣಿ ಸಾ:ಮಸ್ಕಲ್ ತಾಂಡ ತಿಳಿಸಿದ್ದು, ಹಿಂದುಗಡೆ ಕುಳಿತಿದ್ದ ವ್ಯಕ್ತಿಗೆ ವಿಚಾರಿಸಲು ಆತ ತನ್ನ ಹೆಸರು ಗಣೇಶ ತಂದೆ ಕಾಶಿರಾಮ ಜಾಧವ ವ: 25 ವರ್ಷ ಉ:ಗಿಲಾವ್ ಕೆಲಸ ಜಾ:ಲಮಾಣಿ ಸಾ; ಮಸ್ಕಲ್ ತಾಂಡ ಅಂತ ತಿಳಿಸಿದರು. ಗಣೇಶ ಈತನ ಎರಡು ಕೈಯಲ್ಲಿ 5 ಲೀಟರನ್ ಪ್ಲಾಸ್ಟಿಕ್ ಕ್ಯಾನ್   ಕಳ್ಳಭಟ್ಟಿ ಸರಾಯಿ  ಇನ್ನೊಂದು ಮೋಟಾರ ಸೈಕಲ್, ನಂ. ಕೆಎ 22 ಡಬ್ಲು 7923 ಇದ್ದು ಇದರ ಮೇಲೆ ಮೂರು ಜನರಿದ್ದು ಇದ್ದು ಅದರ ಮೇಲಿದ್ದವರಿಗೆ ವಿಚಾರಿಸಲು ಮೋಟಾರ ಸೈಕಲ್ ಚಾಲಕ ತನ್ನ ಹೆಸರು ಕಲ್ಲಪ್ಪಾ ತಂದೆ ಮಾದಪ್ಪಾ ಸೇಲೆ ವ: 45 ವರ್ಷ ಉ:ಡ್ರೈವರ ಜಾ: ಎಸ್ಸಿ ದಲಿತ ಸಾ: ಮಸ್ತಾಪೂರ ಅಂತ ತಿಳಿಸಿದ್ದು, ಮೋಟಾರ ಸೈಕಲ್ ಮಧ್ಯ ಕುಳಿತಿದ್ದ ವ್ಯಕ್ತಿಗೆ ವಿಚಾರಿಸಲು ಈತ ತನ್ನ ಹೆಸರು ಕಮಲಾಕರ್ ತಂದೆ ಪಾಂಡುರಂಗ ಕ್ಯುಂಡೆ ವ; 32 ವರ್ಷ ಉ:ಕೂಲಿಕೆಲಸ ಜಾ: ಎಸ್ಸಿ ದಲಿತ ಸಾ:ಡೊಣಗಾಪೂರ ತಾ: ಭಾಲ್ಕಿ ಅಂತ ತಿಳಿಸಿದ್ದು, ಮೋಟಾರ ಸೈಕಲ್ ಹಿಂದುಗಡೆ ಕುಳಿತಿದ್ದ ವ್ಯಕ್ತಿಗೆ ವಿಚಾರಿಸಲು ರಾಜು ತಂದೆ ಚಂದ್ರಪ್ಪಾ ಕೋಳಿ ವ: 32ವರ್ಷ ಉ:ಕೂಲಿಕೆಲಸ ಜಾ:ಕೋಳಿ ಸಾ:ಸಂತಪೂರ ಅಂತ ತಿಳಿಸಿದನು. ಕಮಲಾಕರನ ಕೈಯಲ್ಲಿ 10 ಲೀಟರನ ಪ್ಲಾಸ್ಟಿಕ್ ಕ್ಯಾನ್ ಇದ್ದು ಅದರಲ್ಲಿ 8 ಲೀಟರನಷ್ಟು ಕಳ್ಳಭಟ್ಟಿ ಸರಾಯಿ ಇದ್ದು, ಹಿಂದೆ ಕುಳಿತಿದ್ದ ರಾಜುನ ಕೈಯಲ್ಲಿ 5 ಲೀಟರನ ಎರಡು ಪ್ಲಾಸ್ಟಿಕ್ ಕ್ಯಾನ್ ಇದ್ದು ಅದರಲ್ಲಿ ಒಟ್ಟು 10 ಲೀಟರನಷ್ಟು ಕಳ್ಳಭಟ್ಟಿ ಸರಾಯಿ    ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದರಿಂದ ಐದು ಜನ ಆರೋಪಿತರಿಗೆ ದಸ್ತಗಿರಿ ಮಾಡಿಕೊಂಡು ಇದರ ಪ್ರತಿ ಲೀಟರಕ್ಕೆ 100/- ರೂಪಾಯಿಯಂತೆ 28 ಲೀಟರ್ ಕಳ್ಳಭಟ್ಟಿ ಅ.ಕಿ. ಒಟ್ಟು 2,800/- ರೂಪಾಯಿ ಬೆಲೆಯುಳ್ಳದು ಆಗಬಹುದು. ಹಾಗು ಆರೋಪಿಗಳು ಕಳ್ಳಭಟ್ಟಿ ಸರಾಯಿ ಸಾಗಾಟ ಮಾಡಲು ಬಳಸಿದ ಎರಡು ಮೋಟಾರ ಸೈಕಲ ಪರಿಶೀಲಿಸಲಾಗಿ ನಂ. 1] ಕೆಎ 39 ಕ್ಯು 0376 ಇದ್ದು ಬಜಾಜ್ ಡಿಸ್ಕಾವರ್ ಕಪ್ಪು-ಕೆಂಪು ಬಣ್ಣದು ಇದ್ದು, ಅ.ಕಿ. 20,000/- ರೂ. ಹಾಗು 2] ಕೆಎ 22 ಡಬ್ಲು 7923 ಹಿರೊ ಹೊಂಡಾ ಫ್ಯಾಷನ್ ಪ್ಲಸ್ ಕಪ್ಪು-ನೀಲಿ ಬಣ್ಣದು ಇದ್ದು ಅ.ಕಿ. 22,000/- ರೂ. ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 106/2020 ಕಲಂ 87 ಕೆಪಿ ಕಾಯ್ದೆ ;-

ಇಂದು ದಿನಾಂಕ 26/04/2020 ರಂದು 16:00 ಗಂಟೆಗೆ ಬೀದರ ಭಾಲ್ಕಿ ರೋಡಿನ ಬದಿಯಲ್ಲಿ ಆನೆ ಹಳ್ಳದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ  ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶೀಬಿನ ಇಸ್ಪೆಟ ಜೂಜಾಟ ಆಡುತ್ತಿರುವಾಗ ಸದರಿಯವರ ಮೇಲೆ ದಾಳಿ ಮಾಡಿ   1] ಸಂಜೀವಕುಮಾರ ತಂದೆ ಹರೀಬಾರಾವ ಧೂರವೆ 2] ಅನೀಲಕುಮಾರ ತಂದೆ ಸುಭಾಷರಾವ ಗಾಯಕವಾಡ 3] ಸಹಾದೇವ ತಂದೆ ಈಶ್ವರರಾವ ಚಂದಾಪೂರೆ 4] ಧನಾಜಿ ತಂದೆ ಸೋಮನಾಥ ಚವ್ಹಾಣ ಎಲ್ಲರು ಸಾ: ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವರು ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 2350 ರೂ ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮಾಡಿಕೊಂಡು ಆರೋಪಿತರ ವಿರುದ್ದ ಗುನ್ನೆ ನಂ. 106/2020 ಕಲಂ 87 ಕೆಪಿ ಎಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 33/2020 ಕಲಂ 379 ಐಪಿಸಿ :-

ದಿನಾಂಕ 26-04-2020 ರಂದು 09:00 ಗಂಟೆಗೆ ಫೀಯರ್ಾದಿ ಶ್ರೀ ಶರಣಪ್ಪಾ ತಂದೆ ಪಾಂಡಪ್ಪಾ ಸಾ: ಬಗದಲ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ: 19-04-2020 ರಂದು ಮುಂಜಾನೆ 05:40 ಗಂಟೆಯ ಸುಮಾರಿಗೆ   ಬಗದಲ ಗ್ರಾಮದಿಂದ ಮನ್ನಾಎಖೇಳ್ಳೀ ಗ್ರಾಮಕ್ಕೆ ಕೀರಾಣಿ ಸಾಮಗ್ರಿಗಳನ್ನು ತೆಗೆದುಕೋಂಡು ಬರಲು   ದ್ವೀಚಕ್ರ ವಾಹನ ಸಂಖ್ಯೆ ಕೆಎ32 ಕ್ಯೂ 7086 ನೇದನ್ನು ತೆಗೆದುಕೊಂಡು ಮನ್ನಾಎಖೇಳ್ಳೀ ಗ್ರಾಮಕ್ಕೆ ಸಮಯ 0550 ಗಂಟೆಯ ಸುಮಾರಿಗೆ ಶ್ರೀ ದತ್ತು ರಾಸುರೆ ರವರ ಕೀರಾಣಾ ಅಂಗಡಿ ಹತ್ತಿರ ನನ್ನ ದ್ವೀಚಕ್ರ ವಾಹನವನ್ನು ನೀಲ್ಲಿಸಿ ಕೀರಾಣಾ ಸಾಮಾಗ್ರಿಗಳನ್ನು ಖರಿದಿ ಮಾಡಲು ಅಂಗಡಿಗೆ ಹೊಗಿ ಕೀರಾಣಾ ಸಾಮಗ್ರಿಗಳನ್ನು ಖರಿದಿ ಮಾಡಿ ಒಂದು ಚಿಲದಲ್ಲಿ ಹಾಕಿಕೊಂಡು ಮರಳಿ ನನ್ನ ವಾಹನದ ಕಡೆಗೆ ಬಂದಾಗ ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವೀ ಚಕ್ರ ವಾಹನ ಕಾಣಿಸಿರುವುದಿಲ್ಲಾ,  ಕಳೆದುಕೊಂಡಿರುವ ವಾಹನವನ್ನು ಎಲ್ಲಾ ಕಡೆ ಹುಡುಕಾಡಿ ಮನೆಯಲ್ಲಿ ವಿಚಾರಮಾಡಿಕೊಂಡು ನನ್ನ ವಾಹನ ಕಳುವಾದ ಬಗ್ಗೆ ಖಚಿತಪಡಿಸಿಕೊಂಡು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೋಳ್ಳಲಾಗಿದೆ.