ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ; 27-03-2020

ಬಸವಕಲ್ಯಾಣ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 16/2020 ಕಲಂ 15(ಎ), 32(3) ಕೆ.ಇ. ಕಾಯ್ದೆ :-

ದಿನಾಂಕ 26-03-2020 ರಂದು 2030 ಗಂಟೆಗೆ ವಸೀಮ್ ಪಟೇಲ್ ಪಿಎಸ್ಐ(ಕಾ&ಸು) ಬಸವಕಲ್ಯಾಣ  ಗ್ರಾಮೀಣ ಠಾಣೆ ರವರು ಠಾಣೆಯಲ್ಲಿ   ಜಾಜನಮುಗಳಿ ಗ್ರಾಮದ ಶಿವಾಜಿ ಚೌಕ ಮುಂದೆ ಇರುವ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡುವ ಕುರಿತು ತನ್ನ ಹತ್ತಿರ ಸರಾಯಿವುಳ್ಳ ಬಾಟಲಿಗಳನ್ನು ಇಟ್ಟುಕೊಂಡು ಕುಳಿತಿದ್ದಾನೆ ಮತ್ತು ಅದೆ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೋಡುತ್ತಿದ್ದನೆ.ಅಂತಾ ಭಾತ್ಮಿ ಬಂದ ಮೇರೆಗೆ 1715 ಗಂಟೆಗೆ  ಒಂದು ಕಾಟೂನದಲ್ಲಿ ಸರಾಯಿ ಇಟ್ಟಿಕೊಂಡು ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡುವ ಕುರಿತು ತನ್ನ ಹತ್ತಿರ ಸರಾಯಿವುಳ್ಳ ಬಾಟಲಿಗಳನ್ನು ಇಟ್ಟುಕೊಂಡು ಕುಳಿತಿದ್ದಾನೆ ಮತ್ತು ಅದೆ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೋಡುತ್ತಿದ್ದನ್ನು ನೊಡಿ ಖಚಿತ ಪಡಿಸಿಕೊಂಡು ವ್ಯಕ್ತಿಯ ಮೇಲೆ ದಾಳಿ ಮಾಡಿ  ವ್ಯಕ್ತಿಗೆ ಹಿಡಿದು ನಾನು ಪಂಚರ ಸಮಕ್ಷಮ ಅತನ ಹೆಸರು ವಿಚಾರಿಸಲು  ಆತನು ತನ್ನ ಹೆಸರು ದಿಲೀಪ ತಂದೆ ದತ್ತು ಕೊಲೆ ವಯ 62 ವರ್ಷ ಜಾತಿ ಮರಾಠಾ ಉದ್ಯೋಗ ಒಕ್ಕಲುತನ ಸಾ: ಜಾಜನಮುಗಳಿ ಅಂತಾ ತಿಳಿಸಿದನು.   1] ಯುವರ ಚಾಯಿಸ್ ಸೂಪರ ವಿಷ್ಕಿ 90 ಎಂಎಲ ನ 10 ಪ್ಲಾಸ್ಟೀಕ ಬಾಟಲಗಳು ಒಂದರ ಬೆಲೆ 23 ರೂಪಾಯಿ 10ರ ಬೆಲೆ 230 ರೂಪಾಯಿ. ನೆದ್ದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 29/2020 32, 34 ಕೆ.ಇ. ಕಾಯ್ದೆ :-

ದಿನಾಂಕ 26/03/2020 ರಂದು 1630 ಗಂಟೆಗೆ ತೋರಣಾ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಡೋಣಗಾಂವ(ಎಮ್‌) ಕಡೆಗೆ ರೋಡಿಗೆ ಅನಧಿಕೃತ ಸರಾಯಿ ಮಾರಾಟಾ ಮಾಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ  ದಾಳಿ ಮಾಡಿ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಚಂದ್ರಕಾಂತ ತಂದೆ ಸೊಪಾನ ಕಾಳೆ ವಯ 32 ವರ್ಷ್ ಜ್ಯಾತಿ ಹೊಲಿಯಾ ಉ// ಕೂಲಿ ಸಾ// ತೋರಣಾ ಅಂತಾ ತಿಳಿಸಿದ್ದು ಅವನ ಹತ್ತಿರ ನೋಡಲು ಓರಿಜಿನಲ್‌ ಚ್ವಾಯಿಸಿ ಡಿಲೇಕ್ಸ್ ವಿಸ್ಕಿ 90 ಎಮ್‌ ಎಲ್‌ ನ 41 ಪೇಪರ ಪೌಚಗಳು ಅ, ಕಿ 1243 ರೂ. ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ನಗರ ಠಾಣೆ ಅಪರಾಧ ಸಂಖ್ಯೆ 88/2020 ಕಲಂ 78(3) ಕೆ.ಪಿ. ಕಾಯ್ದೆ ;-

 

ದಿನಾಂಕ 26/03/2020 ರಂದು 11:30 ಗಂಟೆಗೆ ಡಿಎಸ್ಪಿ ರವರು ತಮ್ಮ ಕಛೇರಿಯಲ್ಲಿದ್ದಾಗ ಭಾಲ್ಕಿಯ ನ್ಯೂ ಭೀಮನಗರದಲ್ಲಿರುವ ಸಮುದಾಯ ಭವನದ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ  ಸಿಬ್ಬಂದಿಯವರೊಂದಿಗೆ ಹೋಗಿ  ನೋಡಿದಾಗ ಸಮುದಾಯ ಭವನದ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತು ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಕೊಡುವದನ್ನು ನೋಡಿ 12:45 ಗಂಟೆಗೆ ಪಂಚರ ಸಮಕ್ಷಮ ಅವನ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಬಬಲು @ ಧಮರ್ೆಂದ್ರ ತಂದೆ ಶ್ಯಾಮರಾವ ಕಾಂಬಳೆ ವಯ: 36 ವರ್ಷ ಜಾತಿ: ಎಸ್.ಸಿ ಹೋಲಿಯಾ ಉ: ಕೂಲಿ ಕೆಲಸ ಸಾ: ನ್ಯೂ ಭೀಮನಗರ ಭಾಲ್ಕಿ ಅಂತ ತಿಳಿಸಿದನು ಸದರಿಯವನ ವಶದಿಂದ 1) ನಗದು ಹಣ 720 ರೂ 2) 3 ಮಟಕಾ ಚೀಟಿಗಳು 3) ಒಂದು ಬಾಲ ಪೆನ್ನ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.