ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-08-2020

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 94/2020, ಕಲಂ. 379 ಐಪಿಸಿ :-

ದಿನಾಂಕ 03-08-2020 ರಂದು 1430 ಗಂಟೆಗೆ ಫಿರ್ಯಾದಿ ಸುಧಾಕರ ತಂದೆ ಸಂಗಪ್ಪ ಸಾ: ಜಾಂಪಾಡ, ತಾ: ಬೀದರ ರವರು ತನ್ನ ಮೊಟರ ಸೈಕಲ ನಂ. ಕೆಎ-38/ಯು-6637 ನೇದನ್ನು ಬೀದರ ಕೆನರಾ ಬ್ಯಾಂಕ ಮುಖ್ಯ ಶಾಖೆಯ ಪಕ್ಕದಲ್ಲಿ ನಿಲ್ಲಿಸಿ ಬ್ಯಾಂಕಿನಲ್ಲಿ ತನ್ನ ಕರ್ತವ್ಯದ ಸಲುವಾಗಿ ಹೋಗಿ 1700 ಗಂಟೆಗೆ ಮರಳಿ ಹೊರಗೆ ಬಂದು ನೋಡಲು ಸದರಿ ಮೊಟರ ಸೈಕಲ ಇರಲಿಲ್ಲ, ಅಕ್ಕಪಕ್ಕದಲ್ಲಿ ನೋಡಿದರೂ ಎಲ್ಲಿಯೂ ಕಾಣಲಿಲ್ಲ, ನಂತರ ಫಿಯರ್ಾದಿಯು ತನ್ನ ಗೆಳೆಯರೊಂದಿಗೆ ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಕಳುವಾದ ಮೋಟಾರ್ ಸೈಕಲ್ ವಿವರ 1) ಹೀರೊ ಸ್ಪ್ಲೆಂಡರ ಪ್ಲಸ್  ಮೋಟರ ಸೈಕಲ  ನಂ. ಕೆಎ-38/ಯು-6637, 2) ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್.ಎ.ಆರ್.ಓ.78.ಹೆಚ್.ಹೆಚ್.ಹೆಚ್.35813, 3) ಇಂಜಿನ್ ನಂ. ಹೆಚ್.ಎ.10.ಎ.ಜಿ.ಹೆಚ್.ಹೆಚ್.ಹೆಚ್.36832, 4) ಮಾಡಲ್ 2017, 5) ಬಣ್ಣ: ಸಿಲ್ವರ್, 6) ಅ.ಕಿ 30,000/- ರೂ. ಆಗಿರುತ್ತದೆ ಅಂತ ಕೊಟ್ಟ ಫಿಯರ್ಾದಿಯವರ ದೂರಿನ ಹೇಳೀಕೆ ಸಾರಾಂಶದ ಮೇರೆಗೆ ದಿನಾಂಕ 25-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 128/2020, ಕಲಂ. 3, 14(ಎ) ಬಾಲ ಕಾರ್ಮಿಕ  ಕಾಯ್ದೆ :-

ದಿನಾಂಕ 25-08-2020 ರಂದು ಶ್ರೀ ಪ್ರಸನ್ನ, ಕಾರ್ಮಿಕ ನಿರೀಕ್ಷಕರು ಕಾರ್ಮಿಕ ಇಲಾಖೆ ಬೀದರ ರವರು ಠಾಣೆಗೆ ಹಾಜರಾಗಿ ಫಿರ್ಯಾದು ಸಲ್ಲಿಸಿದ್ದು ಸಾರಾಂಶವೇನೆಂದರೆ ದಿನಾಂಕ 31-07-2020 ರಂದು ಕಾಮರ್ಿಕರ ನಿರೀಕ್ಷಕರು, ಬೀದರ, ಜಿಲ್ಲಾ ಮಕ್ಕಳ ರಕ್ಷಣಾದಿಕಾರಿಗಳು ಬೀದರ, ಸಿ.ಡಿ.ಪಿ.ಓ ಬೀದರ, ಯೋಜನಾ ನಿದರ್ೇಶಕರು, ಬಾಲ ಕಾಮರ್ಿಕ ಕೋಶ ಬೀದರ ಹಾಗೂ ಮಕ್ಕಳ ಸಹಾಯವಾಣಿ ಬೀದರ ಜಂಟಿಯಾಗಿ ನಡೆಸಲಾದ ಬಾಲ ಕಾಮರ್ಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಚರಣೆಯಲ್ಲಿ ಐಶಾ ಅಲುಮಿನಿಯಂ ವರ್ಕ ಬಿವಿಬಿ ಕಾಲೇಜ ರೋಡ ಬೀದರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕು. ರೇಹಾನ ತಂದೆ ಶೇಕ ಅಹೆಮದ ವಯ: 12 ವರ್ಷ, ಸಾ: ಚಿಟ್ಟಾ ವಾಡಿ, ತಾ: ಬೀದರ ಎಂಬ ಬಾಲ ಕಾರ್ಮಿಕನು ಸದರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಬಾಲ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು, ಆರೋಪಿ ಅನ್ವರಶಾ ತಂದೆ ಖಾಜಾ ಶಾ ಚಿಟ್ಟಾ ಬೀದರ ಇವನು ಬಾಲ ಕಾರ್ಮಿಕ ನನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದು ಬಾಲ ಕಾರ್ಮಿಕ  ಮತ್ತು ಕಿಶೋರ ಕಾಮರ್ಿಕ (ನಿಷೇದ ಮತ್ತು ನಿಯಂತ್ರಣ) ಕಾಯಿದೆ 1986 ಹಾಗೂ ತಿದ್ದುಪಡಿ ಕಾಯಿದೆ 2016 ರ ಕಲಂ 3(ಎ) ಉಲ್ಲಂಘನೆಯಾಗಿರುತ್ತದೆ, ಮಗುವಿನ ವಯಸ್ಸಿನ ದೃಢಿಕರಣವನ್ನು ಶಾಲೆಯಿಂದ ಪಡೆಯಲು ವಿಳಂಬವಾಗಿದ್ದರಿಂದ ದೂರು ಸಲ್ಲಿಸಲು ವಿಳಂಬವಾಗಿರುತ್ತದೆ, ಸದರಿ ಉಲ್ಲಂಘನೆಯು ಸಜ್ಞೆಯ ಅಪರಾಧವಾಗಿದ್ದರಿಂದ ಆರೋಪಿ ಅನ್ವರಶಾ ಇವರ ವಿರುದ್ದ ಎಫ.ಐ.ಆರ್ ದಾಖಲಿಸಲು ವಿನಂತಿ ಅಂತ ನೀಡಿದ ದೂರಿನ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 129/2020, ಕಲಂ. 3, 14(ಎ) ಬಾಲ ಕಾಮರ್ಿಕ ಕಾ???? :-

ದಿನಾಂಕ 25-08-2020 ರಂದು ಶ್ರೀ ಪ್ರಸನ್ನ, ಕಾಮರ್ಿಕ ನಿರೀಕ್ಷಕರು ಕಾರ್ಮಿಕ ಇಲಾಖೆ ಬೀದರ ರವರು ಠಾಣೆಗೆ ಹಾಜರಾಗಿ ಫಿರ್ಯಾದು ಸಲ್ಲಿಸಿದ್ದು ಸಾರಾಂಶವೇನೆಂದರೆ ದಿನಾಂಕ 31-07-2020 ರಂದು ಕಾರ್ಮಿಕ ನಿರೀಕ್ಷಕರು, ಬೀದರ, ಜಿಲ್ಲಾ ಮಕ್ಕಳ ರಕ್ಷಣಾದಿಕಾರಿಗಳು ಬೀದರ, ಸಿ.ಡಿ.ಪಿ.ಓ ಬೀದರ, ಯೋಜನಾ ನಿರ್ದೇಶಕರು, ಬಾಲ ಕಾರ್ಮಿಕ ಕೋಶ ಬೀದರ ಹಾಗೂ ಮಕ್ಕಳ ಸಹಾಯವಾಣಿ ಬೀದರ ಜಂಟಿಯಾಗಿ ನಡೆಸಲಾದ ಬಾಲ ಕಾರ್ಮಿಕ ಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಚರಣೆಯಲ್ಲಿ ಮೇ: ಅಮರ ಸಾಯಿ ಸ್ಪೊರ್ಟ ಬೈಕ ಸವರ್ಿಸ್ ಸಂಟರ ಬಿ.ವಿ.ಬಿ ಕಾಲೇಜ ರೋಡ ಬೀದರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕು. ಪ್ರವೀಣ ತಂದೆ ವಸಂತ ವಯ: 15 ವರ್ಷ, ಸಾ: ಚಿಟ್ಟಾ, ತಾ: ಬೀದರ ಎಂಬ ಬಾಲ ಕಾಮರ್ಿಕನು ಸದರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಬಾಲ ಕಾಮರ್ಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು, ಆರೋಪಿ ಸಂದಾನಂತ ತಂದೆ ಮಲ್ಲಪ್ಪಾ ಮೇ: ಅಮರ ಸಾಯಿ ಸ್ಪೊರ್ಟ ಬೈಕ ಕಾರ್ಮಿಕ ಸಂಟರ ನ ಮಾಲೀಕ ಬೀದರ ಇವನು ಬಾಲ ಕಾರ್ಮಿಕ ಕನನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದು ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯಿದೆ 1986 ಹಾಗೂ ತಿದ್ದುಪಡಿ ಕಾಯಿದೆ 2016 ರ ಕಲಂ 3(ಎ) ಉಲ್ಲಂಘನೆಯಾಗಿರುತ್ತದೆ, ಮಗುವಿನ ವಯಸ್ಸಿನ ದೃಢಿಕರಣವನ್ನು ಶಾಲೆಯಿಂದ ಪಡೆಯಲು ವಿಳಂಬವಾಗಿದ್ದರಿಂದ ದೂರು ಸಲ್ಲಿಸಲು ವಿಳಂಬವಾಗಿರುತ್ತದೆ, ಸದರಿ ಉಲ್ಲಂಘನೆಯು ಸಜ್ಞೆಯ ಅಪರಾಧವಾಗಿದ್ದರಿಂದ ಆರೋಪಿ ಸಂದಾನಂತ ಇವರ ವಿರುದ್ದ ಎಫ.ಐ.ಆರ್ ದಾಖಲಿಸಲು ವಿನಂತಿ ಅಂತ ನೀಡಿದ ದೂರಿನ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 179/2020 ಕಲಂ 392 ಐಪಿಸಿ :-

 

ದಿನಾಂಕ 25/08/2020 ರಂದು 12:00 ಗಂಟೆಗೆ ಫಿರ್ಯಾದಿ ಶ್ರೀಮತಿ ಸರಸ್ವತಿ ಗಂಡ ಅಮೃತರಾವ ಬಿರಾದಾರ ಸಾ: ಗಣೇಶ ನಗರ ಲೇಕ್ಚರ ಕಾಲೋನಿ ಭಾಲ್ಕಿ  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ   ಪಿರ್ಯಾದಿಯವರು ದಿನಾಂಕ 25/08/2020 ರಂದು ನಸುಕಿನ ಜಾವ ಅಂದಾಜು 0500 ಗಂಟೆ ಸುಮಾರಿಗೆ ಎದ್ದು ಮನೆಯ ಹಾಲ ಸ್ವಚ್ಛ ಮಾಡಿ ನಂತರ ಅಂದಾಜು 0525 ಗಂಟ  ಸುಮಾರಿಗೆ ಮನೆಯ ಮುಂದೆ ಇರುವ ಗಣೇಶ ಮಂದೀರದ ಸುತ್ತಲು ಇರುವ ರೋಡಿನ ಮೇಲೆ ವಾಕಿಂಗ್ ಮಾಡಿ ನಂತರ ಅಂದಾಜು 0540 ಗಂಟೆ ಸುಮಾರಿಗೆ ಮರಳಿ ಮನೆಗೆ ಬಂದು ಮನೆಯ ಗೇಟ ಮುಂದೆ ಗೇಟ ಎಡಭಾಗಕ್ಕೆ ರಸ್ತೆಯ ಮೇಲಿದ್ದ ಕಸವನ್ನು ಕುಳಿತುಕೊಂಡು ಸ್ವಚ್ಛ ಗೋಳಿಸುತ್ತಿರುವಾಗ ಅಂದಾಜು 0545 ಗಂಟೆ ಸುಮಾರಿಗೆ ನನ್ನ ಹಿಂದಿನಿಂದ ಒಬ್ಬ ಅಪರಿಚೀತ ವ್ಯಕ್ತಿ ಬಂದು   ಸಿರೇಯಿಂದ ಇವರ ಬಾಯಿ ಒತ್ತಿ ಹಿಡಿದು ಇವರ ಕೋರಳಲ್ಲಿ ಕೈ ಹಾಕಿ  ಕೊರಳಲ್ಲಿನ ಬಂಗಾರದ ಆಭರಣಗಳಾದ 1] 35 ಗ್ರಾಂ ಬಂಗಾರದ ನಾನ ಅ:ಕಿ: 1,75,000 2] ಕೊರಳಲ್ಲಿನ ಬಂಗಾರದ ತಲಾ ಒಂದು ಗ್ರಾಂನ 2 ಮಂಗಳಸೂತ್ರ, ಮಂಗಳಸೂತ್ರದ ಜೋತೆ ಇರುವ ಒಂದು ಗ್ರಾಂ ಬಂಗಾರದ 8 ಗುಂಡುಗಳು, 6 ಗ್ರಾಂ ಬಂಗಾರದ 82 ಮಣಿಗಳು ಒಟ್ಟು 9 ಗ್ರಾಂ ಅ:ಕಿ: 45,000 ರೂ ಹೀಗೆ ಒಟ್ಟು 44 ಗ್ರಾಂ ಬಂಗಾರ ಅ:ಕಿ: 2,20,000 ರೂ ಬೆಲೆ ಬಾಳುವದನ್ನು ಕಿತ್ತುಕೊಂಡು ಮನೆಯ ಬಲಗಡೆ ಇರುವ ಖುಲ್ಲಾ ಜಾಗದ ಕಡೆಯಿಂದ ಓಡಿ ಹೋಗಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂಖ್ಯೆ 112/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ 25/08/2020 ರಂದು 1400 ಗಂಟೆಗೆ ಠಾಣೆಯಲ್ಲಿದ್ದಾಗ  ಖಚಿತ ಮಾಹಿತಿ ಬಂದಿದ್ದೇನೆಂದರೆ,  ಮೂವರು ವ್ಯಕ್ತಿಗಳು ಭಾತಂಬ್ರಾ  ರೋಡಿಗೆ ಇರುವ ಸಾಯಿ ಹೊಟಲ ಹತ್ತಿರ  ಸಾರ್ವಜನಿಕರಿಂದ 1 ರೂಪಾಯಿಗೆ 90 ರೂಪಾಯ ಕೊಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಮಟಕಾ ಚೀಟಿ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ಸದರಿ  ವ್ಯಕ್ತಿಗಳ ಮೇಲೆ ದಾಳಿ ಮಾಡಿದಾಗ ಜನರು ಓಡಿ ಹೋಗಿದ್ದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ 03 ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ವಿಕಾಶ ತಂದೆ ಜನಾರ್ಧನರಾವ ಜಗತಾಪ; ವಯ 28 ವರ್ಷ ಜಾ; ಮರಾಠಾ ಉ; ಡ್ರೈವರ ಸಾ; ಇಂಚೂರ ತಾ; ಭಾಲ್ಕಿ ಅಂತ ತಿಳಿಸಿದ್ದರು ಈತನ ಅಂಗ ಜಡತಿ ಮಾಡಲು  ಒಂದು ಕಾರಬನ ಕಂಪನಿಯ ಮೋಬಾಯಿಲ್ ಅ;ಕಿ- 500/- ರೂ, ನಗದು ಹಣ 1500/- ರೂ ಹಾಗೂ 3 ಮಟಕಾ ಚೀಟಿಗಳು ಇದ್ದು 2) ದಯಾನಂದ ತಂದೆ ವಿಜಯಕುಮಾರ ಪವಾರ ವಯ 34 ವರ್ಷ ಜಾ; ಮರಾಠಾ ಉ; ಡ್ರೈವರ ಸಾ; ಸಾಯಗಾಂವ ತಾ; ಭಾಲ್ಕಿ ಈತನ ಅಂಗ ಜಡತಿ ಮಾಡಲು ಆತನ ಹತ್ತಿರ ಒಂದು ವಿವೋ ಕಂಪನಿಯ ಮೋಬಾಯಿಲ್ ಅ;ಕಿ; 15000/- ರೂ, ಹಾಗೂ ನಗದು ಹಣ 1200/- ರೂ ಹಾಗೂ 2 ಮಟಕಾ ಚೀಟಿಗಳು ಇದ್ದು 3) ಸಂದೀಪ ತಂದೆ ಶಂಕರರಾವ ಜಗತಾಪ ವಯ 32 ವರ್ಷ ಜಾ; ಮರಾಠಾ ಉ; ಅಟೋ ಡ್ರೈವರ ಸಾ; ಇಂಚುರ ತಾ; ಭಾಲ್ಕಿ. ಈತನ ಅಂಗ ಜಡತಿ ಮಾಡಲು ಆತನ ಹತ್ತಿರ 1600/- ರೂ ಹಾಗೂ 3 ಮಟಕಾ ಚೀಟಿಗಳು ಇದ್ದು ಹೀಗೆ ಒಟ್ಟು ನಗದು ಹಣ 4300/- ರೂಪಾಯಿ, ಎರಡು ಮೋಬಾಯಿಲ್ ಅ;ಕಿ; 15, 500/- ರೂ, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.