ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-06-2020

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 48/2020, ಕಲಂ. 279, 338 .ಪಿ.ಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 25-06-2020 ರಂದು ಫಿರ್ಯಾದಿ ಉಮೇಶಕುಮಾರ ತಂದೆ ಆನಂದ ದುಬೆ ವಯ: 37 ವರ್ಷ, ಜಾತಿ: ಬ್ರಾಹ್ಮಣ, ಸಾ: ಸಾಯಿ ನಗರ ನೌಬಾದ, ಬೀದರ ರವರು ತನಗೆ ಪರಿಚಯದ ರವಿಕುಮಾರ ತಂದೆ ರಾಮಭಜನಸಿಂಗ್ ಠಾಕೂರ, ವಯ: 19 ವರ್ಷ, ಜಾತಿ: ರಜಪೂತ, ಸಾ: ಸಾಯಿನಗರ ನೌಬಾದ ಬೀದರ ರವರ ಜೊತೆಯಲ್ಲಿ ಮೊಟಾರ ಸೈಕಲ ನಂ. ಕೆಎ-38/ಡಬ್ಲೂ-7455 ನೇದರ ಮೇಲೆ ನೌಬಾದ ಕಡೆಯಿಂದ ಸಾಯಿ ನಗರ ಕಡೆಗೆ ಹೋಗುತ್ತಿರುವಾಗ ಮೊಟಾರ ಸೈಕಲ ಫಿರ್ಯಾದಿ ಚಲಾಯಿಸುತ್ತಿದ್ದು, ಇಬ್ಬರು ನೌಬಾದ ಚೌಳಿ ಕಮಾನ ಹತ್ತಿರ ಇರುವ ಬಕ್ಕಪ್ಪ ಹೊಟೆಲ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ನೌಬಾದ ಕಡೆಯಿಂದ ಲಾರಿ ನಂ. ಕೆಎ39/4562 ನೇದ್ದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ರವಿಕುಮಾರ ಈತನ ಬಲಗಾಲ ತೊಡೆಯ ಮೇಲೆ, ಬಲಗೈ ರಟ್ಟೆಯ ಮೇಲೆ ಭಾರಿ ರಕ್ತಗಾಯ, ಬಲಗಾಲ ಪಾದದ ಮೇಲೆ, ಬಲ ಹಣೆಯ ಮೇಲೆ, ಬಾಯಿಯ ಮೇಲೆ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಫಿರ್ಯಾದಿಗೆ ತರಚಿದ ಗಾಯವಾಗಿದ್ದು, ನಂತರ ಫಿರ್ಯಾದಿಯು 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ರವಿಕುಮಾರ ಇತನಿಗೆ ಹಾಕಿಕೊಂಡು ಅಪೆಕ್ಸ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 45/2020, ಕಲಂ. 379 ಐಪಿಸಿ :-

ದಿನಾಂಕ 24-06-2020 ರಂದು 1600 ಗಂಟೆಗೆ ಫಿರ್ಯಾದಿ ರಾಜಕುಮಾರ ತಂದೆ ವಿಶ್ವನಾಥ ಹುಡಗೆ ವಯ: 50 ವರ್ಷ, ಸಾ: ಬ್ಯಾಕಸೈಡ ಬಿವಿಬಿ ಕಾಲೇಜ ಸಾಯಿನಗರ ಮೈಲೂರ ಬೀದರ ರವರು ತನ್ನ ದ್ವಿಚಕ್ರ ವಾಹನ ಸಂ. ಕೆ.ಎ-38/ಕೆ-6538 ಅ.ಕಿ 25000/- ರೂಪಾಯಿ ಬೆಲೆಬಾಳುವದನ್ನು ನ್ಯಾಯಾಲಯದ ಮೇನಗೇಟ್ ಹತ್ತಿರ ಕಂಪೌಂಡ ಹೊರಗಡೆ ನಿಲ್ಲಿಸಿ ಹೋಗಿ ನಂತರ 1830 ಗಂಟೆಯ ಸುಮಾರಿಗೆ ಬಂದು ನೋಡಲು ಸದರಿ ದ್ವೀಚಕ್ರ ವಾಹನ ಇರಲಿಲ್ಲಾ, ಫಿರ್ಯಾದಿಯು ಎಲ್ಲಾ ಕಡೆ ಹುಡುಕಾಡಿದರೂ ಸಹ ಫಿರ್ಯಾದಿಯವರ ದ್ವೀಚಕ್ರ ವಾಹನ ಸಿಕ್ಕಿರುವದಿಲ್ಲಾ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ದಿನಾಂಕ 25-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 99/2020, ಕಲಂ. 379 ಐಪಿಸಿ :-

ದಿನಾಂಕ 22-06-2020 ರಂದು 2300 ಗಂಟೆಯ ಸುಮಾರಿಗೆ ಫಿರ್ಯಾದಿ ಆತೇಶ ಕುಮಾರ ತಂದೆ ರಾಜಗೌಡಾ ವಯ: 24 ವರ್ಷ, ಜಾತಿ: ಜೈನ, ಸಾ: ಬೇಡಕಿಹಾಳ ಗ್ರಾಮ, ತಾ: ನಿಪ್ಪಾಣಿ, ಜಿ: ಬೆಳಗಾವಿ, ಸದ್ಯ: ಹೊಸ ಆದರ್ಶ ಕಾಲೋನಿ ಬೀದರ ರವರು ತನ್ನ ರಾಯಲ್ ಎನ್ಫಿಲ್ಡ 350 ಕ್ಲಾಸಿಕ್ ಮೋಟಾರ್ ಸೈಕಲ್ ನಂ. ಕೆಎ-23/ಇ.ಕ್ಯೂ-4572, ಚಾಸಿಸ್ ನಂ. ಎಮ್.ಇ.3.ಯು.3.ಎಸ್.5.ಸಿ.1.ಹೆಚ್.ಸಿ.102962, ಇಂಜಿನ್ ನಂ. ಯು.3.ಎಸ್.5.ಸಿ.1.ಹೆಚ್.ಸಿ.0102926, ಅ.ಕಿ 80,000/- ನೇದನ್ನು ತಾನು ಬಾಡಿಗೆಯಿಂದ ವಾಸವಾಗಿರುವ ರಾಜಕುಮಾರ ಎ.ಇ.ಇ ರವರ ಮನೆಯ ಪಕ್ಕದಲ್ಲಿರುವ ಖುಲ್ಲಾ ಪ್ಲಾಟದಲ್ಲಿ ನಿಲ್ಲಿಸಿ  ಮನೆಯಲ್ಲಿ ಊಟ ಮಾಡಿ ಮಲಗಿಕೊಂಡು ದಿನಾಂಕ 23-06-2020 ರಂದು 0630 ಗಂಟೆಯ ಸುಮಾರಿಗೆ ಎದ್ದು ಹೊರಗೆ ಬಂದು ನೋಡಲಾಗಿ ಫಿರ್ಯಾದಿಯು ನಿಲ್ಲಿಸಿದ ಸದರಿ ಮೋಟಾರ ಸೈಕಲ ಇರಲಿಲ್ಲಾ, ಫಿರ್ಯಾದಿಯು ಎಲ್ಲಾ ಕಡೆ ಹುಡುಕಾಡಿದರು ಮೋಟಾರ ಸೈಕಲ ಇಲ್ಲಿಯವರೆಗೆ ಸಿಕ್ಕಿರುವದಿಲ್ಲಾ, ಕಾರಣ ಫಿರ್ಯಾದಿಯವರೆ ಸದರಿ ಮೋಟಾರ ಸೈಕಲವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 38/2020, ಕಲಂ. 394 ಐಪಿಸಿ :-

ದಿನಾಂಕ 24-06-2020 ರಂದು 2200 ಫಿರ್ಯಾದಿ ಸಿದ್ದಲಿಂಗ ತಂದೆ ಲಿಂಗರಾಜ ಮಾನೆ ವಯ: 32 ವರ್ಷ, ಜಾತಿ: ಮರಾಠಾ, ಉ: ಲಾರಿ ನಂ. ಎಮ್.ಹೆಚ್-25/ಎ.ಜೆ-9134 ನೇದರ ಚಾಲಕ, ಸಾ: ನಾರಂಗವಾಡಿ, ತಾ: ಉಮರ್ಗಾ, ಜಿ: ಉಸ್ಮಾನಾಬಾದ, ಮಹಾರಾಷ್ಟ್ರ ರಾಜ್ಯ ರವರು ತಾಂಡೂರದಲ್ಲಿ ಕಲ್ಲು (ಫರ್ಸಿ) ಲಾರಿಯಲ್ಲಿ ಲೋಡ್ ಮಾಡಿಕೊಂಡು ಉಮರ್ಗಾ ಕಡೆಗೆ ಹೊಗುವಾಗ ದಿನಾಂಕ 25-06-2020 ರಂದು 00:30 ಗಂಟೆಯಿಂದ 01:00 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯು ಮೀನಕೇರಾ ಕ್ರಾಸದಿಂದ ಹುಮನಾಬಾದ ಕಡೆಗೆ ಹೊಗುವ ಬ್ರೀಡ್ಜ್ ಕೇಳಗಡೆಯ ಎಡಭಾಗದ ರಸ್ತೆಯಿಂದ ಲಾರಿ ತಿರುಗಿಸಿಕೊಂಡು ಮೀನಕೇರಾ ಕ್ರಾಸನಿಂದ ಸ್ವಲ್ಪ ದೂರದಲ್ಲಿ ಲಾರಿಯಲ್ಲಿದ್ದ ಫರ್ಸಿ ಕಲ್ಲು ಸರಿಪಡಿಸಲು ನಿಲ್ಲಿಸಿದಾಗ ಹಿಂದಿನಿಂದ ಮೂರು ಜನ ಅಪರಿಚಿತ ಯುವಕರು ಸುಮಾರು 20-25 ವರ್ಷ ವಯಸ್ಸಿನವರು ಮೊಗದಾಳ ಕಡೆಯಿಂದ ಮೊಟರ ಸೈಕಲ್ ನಂ. ಟಿ.ಎಸ್-12/ಇ.ಎಫ್-2637 ನೇದ್ದರ ಮೇಲೆ ಬಂದು ಫಿರ್ಯಾದಿಗೆ ಹಿಂದಿ ಭಾಷೆಯಲ್ಲಿ ಹಮಾರೆ ಲಡಕೆ ಕೊ ಹುಮನಾಬಾದ ತಕ್ ಛೋಡೊ ಎಂದು ಹೇಳಿದಾಗ ಫಿರ್ಯಾದಿಯು ಅವರಿಗೆ ಮೈ ಉಸ್ಕೊ ನಹಿ ಲೇಕರ ಜಾತೂ ಎಂದು ಹೇಳೀದಾಗ ಹಮ್ಕೋ ಉದರ ತಕ್ ಛೋಡೊ ಎಂದು ಹೇಳಿದ್ದು, ಅದಕ್ಕೆ  ಮೈ ಅಬ್ ನಹಿ ಜಾತಾ ರಾತ್ ಹೂವಾ ಹೈ  ಅಂತ ಹೇಳಿದ್ದು, ಆಗ ಸದರಿ 3 ಜನ ಅಪರಿಚಿತರು ಫಿರ್ಯಾದಿಯೊಂದಿಗೆ ಜಗಳ ತೇಗೆದು ಬೀರ್ ಬಾಟಲದಿಂದ ಹೇದರಿಸಿ ಒಂದು ಕಟ್ಟಿಗೆ ಹಾಗೂ ಕೈಯಿಂದ ಹೊಡೆದು ಗಾಯ ಪಡಿಸಿ ನಂತರ ಫಿರ್ಯಾದಿಯವರ ಹತ್ತಿರವಿದ್ದ 5000/- ರೂ. ಕಿತ್ತುಕೊಂಡು ಮೊಗದಾಳ ಕಡೆಗೆ ಓಡಿ ಹೊಗಿರುತ್ತಾರೆ, ಇಂದರಿಂದ ಫಿರ್ಯಾದಿಗೆ ಎಡಗೈ ಭುಜದ ಮೇಲೆ ಗುಪ್ತಗಾಯ ಮತ್ತು ಬೆನ್ನಿನ ಮೇಲೆ ರಕ್ತಗಾಯಗಳಾಗಿರುತ್ತವೆ, ಅವರು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 52/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ  25-06-2020 ರಂದು ಹಳ್ಳಿ ಗ್ರಾಮದ ಬೌದ್ಧ ವಿಹಾರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಕೂಗುತ್ತಿದ್ದು ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ವಸೀಮ್ ಪಟೇಲ್ ಪಿಎಸ್ಐ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೌದ್ಧ ವಿಹಾರದಿಂದ ಸ್ವಲ್ಪ ದೂರದಿಂದ ಮರೆಯಾಗಿ ನೋಡಲು ಬೌದ್ಧ ವಿಹಾರ ಮುಂದೆ ಇರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಭಿಜೀತ ತಂದೆ ರಂಜೀತ ಗಾಯಕವಾಡ ವಯ: 20 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಹಳ್ಳಿ ಗ್ರಾಮ ಇತನು ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಜೋರಾಗಿ ಕೂಗುತ್ತಿದ್ದು ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಅವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಅಲ್ಲಿದ್ದ ಜನರು ಓಡಿ ಹೋಗಿರುತ್ತಾರೆ, ಆರೋಪಿಗೆ ಹಿಡುದು ಅಂಗ ಝಡ್ತಿ ಮಾಡಲು ಆತನಿಂದ ನಗದು ಹಣ 2,500/- ರೂಪಾಯಿ, ಒಂದು ಬಾಲ ಪೇನ್ ಹಾಗೂ ಮಟಕಾ ಬರೆದ ಚೀಟಿ ಸಿಕ್ಕಿದ್ದು, ನಂತರ ಆತನು ತಿಳಿಸಿದ್ದೆನೆಂದರೆ ನಾನು ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಂಡು ಬಂದ ಹಣವನ್ನು 100/- ರೂಪಾಯಿಗೆ 20/- ರೂಪಾಯಿ ಕಮೀಷನಂತೆ ತ್ರೀಪೂರಾಂತ ಬಸವಕಲ್ಯಾಣನ ಮೋಹನ ತಂದೆ ಮಧುಕರ ಸೂರ್ಯವಂಶಿ ವಯ: 28 ವರ್ಷ, ಜಾತಿ: ಎಸ್.ಸಿ ಮಾದಿಗ, ಇತನಿಗೆ ಕೊಡುತ್ತೇನೆ ಅಂತಾ ತಿಳಿಸಿದನು, ನಂತರ ಪಿಎಸ್ಐ ರವರು ನಗದು ಹಣ, ಮಟಕಾ ಚೀಟಿ, ಬಾಲ ಪೇನ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 53/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 25-06-2020 ರಂದು ಸುಂಠಾಣ ಗ್ರಾಮದ ಸರಕಾರಿ ಶಾಲೆಯ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ರಾಜಕುಮಾರ ತಂದೆ ಶರಣಪ್ಪ ಜಮಾದಾರ ಎಂಬುವವನು ಮಟಕಾ ಎಂಬ ನಸೀಬಿನ ಜೂಜಾಟದ ನಂಬರಗಳು ಬರೆದುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಬರೆದುಕೊಳ್ಳುವದು ಮಾಡುತ್ತಿದ್ದಾನೆ ಅಂತ ಅರುಣಕುಮಾರ ಪಿ.ಎಸ್.ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸುಂಠಾಣ ಗ್ರಾಮಕ್ಕೆ ಹೋಗಿ ಶಾಲೆಯ ಬೆನ್ನು ಗೋಡೆಯ ಹಿಂದೆ ಮರೆಯಾಗಿ ನಿಂತು ನೋಡಲು ಅಲ್ಲಿ ರೋಡಿನ ಬದಿಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಾಜಕುಮಾರ ತಂದೆ ಶರಣಪ್ಪ ಜಮಾದಾರ ಸಾ: ಸುಂಠಾಣ ಇತನು ಸಾರ್ವಜನಿಕರಿಗೆ ಕೂಗುತ್ತಾ ಮಟಕಾ ನಂಬರಗಳು ಬರೆಯಿಸಿರಿ ಒಂದು ರೂಪಯಿಗೆ 90/- ರೂಪಾಯಿ ಪಡೆಯಿರಿ ಅಂತ ಕೂಗಾಡುತ್ತಿರುವಾಗ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವನನ್ನು ಹಿಡಿದು ಪಂಚರ ಸಮಕ್ಷಮ ಆತನ ಅಂಗ ಜಡ್ತಿ ಮಾಡಲು ಅವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 5000/- ರೂಪಾಯಿ ನಗದು ಹಣ ಮತ್ತು ಒಂದು ಬಾಲ್ ಪೆನ್ನು ಹಾಗೂ ಎರಡು ನೋಟಬುಕ್ ಹಾಳೆಯ ಎರಡು ಚೀಟಿಗಳು ಅದರ ಮೇಲೆ ಮಟಕಾ ನಂಬರ ಬರೆದದ್ದು ಅವುಗಳನ್ನು ಕಂಡು ಅದರ ಬಗ್ಗೆ ವಿಚಾರಿಸಲಾಗಿ ನಾನು ಮಟಕಾ ನಂಬರಗಳು ಬರೆದುಕೊಂಡ ಚೀಟಿ ಹಾಗೂ ಹಣ ಇದ್ದು ನಾನು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಂಡು ನಂತರ ಬಂದ ಹಣವನೆಲ್ಲಾ ಬಸವಕಲ್ಯಾಣ ತ್ರೀಪುರಾಂತನ ಮೋಹನ ತಂದೆ ಮಧುಕಾರ ಸೂರ್ಯವಂಶೀ ಇತನಿಗೆ ಕೋಡುತ್ತೇನೆ ಅವನು ನನಗೆ ಅದರಲ್ಲಿ ಕಮೀಶನ ಕೊಡುತ್ತಾನೆ ಹೀಗೆ ಇಬ್ಬರೂ ಕೂಡಿ ವ್ಯವಹಾರ ಮಾಡುತ್ತೇವೆ ಅಂತಾ ತಿಳಿಸಿದನು, ನಂತರ ಆತನಿಂದ ನಗದು ಹಣ, ಬಾಲ ಪೆನ್ ಹಾಗೂ ಮಟಕಾ ಚೀಟಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 93/2020, ಕಲಂ. 148, 323, 504, 506(2), 354, 498 (), 307 ಜೊತೆ 149 ಐಪಿಸಿ ಮತ್ತು 3 & 4 ಡಿ.ಪಿ ಕಾಯ್ದೆ :-

ಫಿರ್ಯಾದಿ ಶಹನಾಜ ಫಾತಿಮಾ ಗಂಡ ಮಹ್ಮದ ಅಫ್ಸರ ಖಾನ ಸಾ: ನೀರಿನ ಟ್ಯಾಂಕ ಹತ್ತಿರ ವಾಂಜ್ರಿ ಹುಮನಾಬಾದ ರವರಿಗೆ ಮಹ್ಮದ ಅಪ್ಸರ ಖಾನ ಇವನೊಂದಿಗೆ ಫಿರ್ಯಾದಿಯ ತಂದೆ ತಾಯಿಯವರು ವರದಕ್ಷಣೆ 2551/- ರೂ. ಮತು್ತ ಮದುವೆ ಖರ್ಚು 8,00,000/- ರೂ. ಮತ್ತು 4 ತೋಲೆ ಬಂಗಾರ ಮತ್ತು ಜೋಡೆಕೆ ರಖಂ ಹಣ 35,051/- ರೂಪಾಯಿ ಕೊಟ್ಟು ಹುಮನಾಬಾದ ಫಜ್ಜಲ ಫಂಕ್ಷನ ಹಾಲ ಹುಮನಾಬಾದದಲ್ಲಿ ದಿನಾಂಕ 12-04-2010 ರಂದು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಮರು ದಿವಸ ವಲಿಮಾ ಹುಮನಾಬಾದದ ಸ್ಟಾರ ಫಂಕ್ಷನ ಹಾಲದಲ್ಲಿ ಮಾಡಿದ್ದು ಇರುತ್ತದೆ, ನಂತರ ಗಂಡ ಸರಾಯಿ ಕುಡಿಯುವ ಚಟಕ್ಕೆ ಬಿದ್ದು ಫಿರ್ಯಾದಿಗೆ ಹೊಡೆಯುವದು, ಮಾನಸಿಕ ತೊಂದರೆ ಕೊಡುವದು ಮಾಡುತ್ತಿದ್ದು, ಆರೋಪಿ ನಂ. 1 ಗಂಡ ಅಫ್ಸರ್ ಖಾನ್ ಇತನ ಜೊತೆ ಆರೋಪಿತರಾದ 2) ಅತ್ತೆ ಫರಜಾನ ಬೀ ಗಂಡ ಸರದಾರ ಖಾನ ಸಾ: ಹುಮನಾಬಾದ, 3) ಖೈರುನಿಸಾ ಗಂಡ ಮಹೇಬೂಬು ಖಾಣ ಸಾ: ಕುಮಾರ ಚಿಂಚೋಳಿ, 4) ನವಾಜಖಾನ ತಂದೆ ಹುಸೇನ ಖಾನ್ ಸಾ: ಹುಮನಾಬಾದ ಹಾಗೂ 5) ಮಹಿಬೀಬುಖಾನ ತಂದೆ ಅಬ್ಬಾಸ ಖಾನ ಸಾ: ಕುಮಾರ ಚಿಂಚೋಳಿ ಇವರೆಲ್ಲರೂ ತೊಂದರೆ ಕೊಡಲು ಪ್ರಾರಂಭಿಸಿರುತ್ತಾರೆ, ನಂತರ ದಿನಾಂಕ 06-03-2020 ರಂದು ಫಿರ್ಯಾದಿ ಹುಮನಾಬಾದ ವಾಂಜ್ರಿಯಲ್ಲಿರುವ ತನ್ನ ತಾಯಿ ಮನೆಯಲ್ಲಿದ್ದಾಗ ಆರೋಪಿತರೆಲ್ಲರು ತಮ್ಮ ಕೈಯಲ್ಲಿ ಮಾರಕ ಆಯುಧಗಳನ್ನು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿರುತ್ತಾರೆ ಮತ್ತು ಫಿರ್ಯಾದಿಗೆ ತನ್ನ ತವರು ಮನೆಯಿಂದ ಇನ್ನೂ 5 ಲಕ್ಷ ತೆಗೆದುಕೊಂಡು ಬಾ ನಮಗೆ ಲಾರಿ ಖರೀದಿ ಮಾಡುವದು ಇದೆ ಮತ್ತು ಲಾರಿ ಕೆಲಸ ಮಾಡುವದು ಇದೆ ಅಂತಾ ಆರೋಪಿತರು ಡಿಮಾಂಡ ಮಾಡುತ್ತಿದ್ದರು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 25-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 42/2020, ಕಲಂ. 306 ಐಪಿಸಿ :-

ಫಿರ್ಯಾದಿ ರಾಧಾ @ ವಿನಂತಾ ಗಂಡ ಕೃಷಾಜಿ ಬಿರಾದಾರ ವಯ: 45 ವರ್ಷ, ಜಾತಿ: ಮರಾಠಾ, ಸಾ: ಗುತ್ತಿ ರವರ ಗಂಡನಾದ ಕೃಷ್ಣಾಜಿ ತಂದೆ ಗೋವಿಂದರಾವ ಬಿರಾದಾರ ವಯ: 48 ವರ್ಷ ರವರ ಮಗಳಾದ ಸೋನಾಲಿ ಇವಳ ಮದುವೆ ಸಲುವಾಗಿ ಹಣ ಬೇಕಾಗಿದ್ದರಿಂದ ಹೊಲ ಸರ್ವೆ ನಂ. 58 ರಲ್ಲಿನ ಒಂದು ಎಕರೆ ಭೂಮಿ ಖಂಡಾಳ ಗ್ರಾಮದ ಕಾಶಪ್ಪಾ ತಂದೆ ರಾಮಣ್ಣಾ ಮೇತ್ರೆ ವಯ: 50 ವರ್ಷ, ಜಾತಿ: ಕುರುಬ ರವರಿಗೆ ಮಾರಾಟ ಮಾಡಿದ್ದು, ಕಾಶೇಪ್ಪಾ ರವರು 4 ಲಕ್ಷ ರೂಪಾಯಿಗಳು ಕೊಟ್ಟಿರುತ್ತಾರೆ, ಹೊಲ ಅವರ ಹೆಸರಿಗೆ ಆದ ನಂತರ ಉಳಿದ ಹಣ ಕೊಡುತ್ತೆನೆಂದು ಹೇಳಿರುತ್ತಾರೆ, ಹೀಗಿರುವಾಗ ಫಿರ್ಯಾದಿಯು ತನ್ನ ಗಂಡನಾದ ಕೃಷ್ಣಾಜಿ ಹಾಗು ಭಾವನಾದ ಉದ್ಧವ ತಂದೆ ಗೋವಿಂದರಾವ ಬಿರಾದಾರ ವಯ: 46 ವರ್ಷ, ಜಾತಿ: ಮರಾಠಾ, ಎಲ್ಲರೂ ದಿನಾಂಕ 20-06-2020 ರಂದು ಹೊಲ ಸರ್ವೆ ನಂ. 58 ರಲ್ಲಿನ ಹೊಲಕ್ಕೆ ಹೋದಾಗ ಖಂಡಾಳ ಗ್ರಾಮದ ಕಾಶೇಪ್ಪಾ ಮೇತ್ರೆ ಈತನು ಕೂಡ ಅಲ್ಲಿಯೇ ಇದ್ದು  ಕಾಶೇಪ್ಪಾ ಮೇತ್ರೆ ಈತನು ಹೊಲ ಸರ್ವೆ ನಂ. 58 ರಲ್ಲಿನ ಒಟ್ಟು 2 ಎಕರೆ 5 ಗುಂಟೆ ಜಮೀನಿನಲ್ಲಿ ಬಿತ್ತಣಿಕೆ ಮಾಡಿರುವುದನ್ನು ಕಂಡ ಗಂಡನಾದ ಕೃಷ್ಣಾಜಿ ಈತನು ಕಾಶೇಪ್ಪಾ ಮೇತ್ರೆ ಇತನಿಗೆ ನಿನಗೆ ನಾವು ಹೊಲ ಸರ್ವೆ ನಂ. 58 ರಲ್ಲಿನ ಒಂದು ಎಕರೆ ಭೂಮಿ ಮಾರಾಟ ಮಾಡಿರುತೆ್ತವೆ, ಆದರೆ ನೀನು ಹೊಲ ಸರ್ವೆ ನಂ. 58 ರಲ್ಲಿನ ಒಟ್ಟು 2 ಎಕರೆ 5 ಗುಂಟೆ ಜಮೀನಿನಲ್ಲಿ ಯಾಕೆ ಬಿತ್ತಣಿಕೆ ಮಾಡಿರುವೆ ಅಂತ ಕೇಳಿದಾಗ ಕಾಶೇಪ್ಪಾ ಮೇತ್ರೆ ಈತನು ಗಂಡನಾದ ಕೃಷ್ಣಾಜಿ ಈತನಿಗೆ ನಾನು ಪುರ್ತಿ ಹೊಲದಲ್ಲಿ ಬಿತ್ತಣಿಕೆ ಮಾಡಿರುತ್ತೆನೆ ನಿನಗೆ ಹಣವನ್ನು ಕೊಡುವುದಿಲ್ಲ ಮತ್ತು ಹೊಲ ಕೂಡ ಬಿಡಿವುದಿಲ್ಲ, ನೀನು ಅದೇನು ಮಾಡಕೊತಿಯೋ ಮಾಡಕೋ ಇಲ್ಲಾ ಅಂದರೆ ಎಲ್ಲಾದರೂ ಹೋಗಿ ಸತ್ತು ಹೋಗು ಅಂತ ದುಷ್ಪ್ರೆರಣೆ ಮಾಡಿರುತ್ತಾನೆ, ಫಿರ್ಯಾದಿಯ ಗಂಡನಾದ ಕೃಷ್ಣಾಜಿ ಈತನಿಗೆ ಆರೋಪಿ ಕಾಶೇಪಾ್ಪ ತಂದೆ ರಾಮಣ್ಣಾ ಮೇತ್ರೆ ವಯ: 50 ವರ್ಷ, ಜಾತಿ: ಕುರುಬ, ಸಾ: ಖಂಡಾಳ ಈತನು ನಾನು ಹೊಲ ಸರ್ವೆ ನಂ. 58 ರಲ್ಲಿನ 2 ಎಕರೆ 5 ಗುಂಟೆ ಜಮೀನಿನಲ್ಲಿ ಬಿತ್ತಣಿಕೆ ಮಾಡಿರುತ್ತೆನೆ, ನಿನಗೆ ಹಣವನ್ನು ಕೊಡುವುದಿಲ್ಲ ಮತ್ತು ಹೊಲ ಕೂಡ ಬಿಡಿವುದಿಲ್ಲ, ನೀನು ಅದೇನು ಮಾಡಕೊತ್ತಿಯೋ ಮಾಡಕೊ ಇಲ್ಲಾ ಅಂದರೆ ಎಲ್ಲಾದರೂ ಹೋಗಿ ಸಾಯಿ ಅಂತ ದುಷ್ಪ್ರೇರಣೆ ಮಾಡಿದ್ದರಿಂದ ಫಿರ್ಯಾದಿಯವರ ಗಂಡ ಕೃಷ್ಣಾಜಿ @ ಕೃಷ್ಣಾನಾಥ ರವರು ದಿನಾಂಕ 25-06-2020 ರಂದು 0700 ಗಂಟೆಯಿಂದ 0900 ಗಂಟೆಯ ಅವಧಿಯಲ್ಲಿ ಹೊಲ ಸರ್ವೆ ನಂ. 94 ರಲ್ಲಿನ ಹೊಲದ ಬಂದಾರಿಯ ಮೇಲಿನ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.