ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 26-03-2020

ನೂತನ ನಗರ ಪೊಲೀಸ್ ಠಾನೆ ಅಪರಾಧ ಸಂಖೈ 40/2020 ಕಲಂ 406, 415, 420 ಐಪಿಸಿ :-

ದಿನಾಂಕ 25/03/2020 ರಂದು 1915 ಗಂಟೆಗೆ ಫಿರ್ಯಾದಿ ಶ್ರೀ ಬ್ರಿಜ್ಪಾಲಸಿಂಗ್ ತಂದೆ ಶಿವಪಾಲಸಿಂಗ್, ವಯಸ್ಸು-31 ವರ್ಷ, ಉದ್ಯೋಗ-ವ್ಯಾಪಾರ ಮತ್ತು ಮಾಲಿಕರು ಹಿಟಾಚಿ, ಜಾತಿ-ರಾಜಪೂತ, ಸಾ-ಹಲಬಗರ್ಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನಂದರೇ, ಫಿಯರ್ಾದಿಯು 2019 ನೇ ಮಾರ್ಚ ತಿಂಗಳಲ್ಲಿ ಗುಲಬಗರ್ಾದ ಶ್ರೀ ಸಾಯಿ ಅರ್ಥ ಮೂವರ್ಸ್, ಶೋ ರೂಮ್ದಲ್ಲಿ ಒಂದು ಜೆಸಿಬಿ, ಹಿಟಾಚಿ 205, ಇಂಜಿನ್ ನಂ-84848604, ಚೆಸ್ಸಿಸ್ ನಂ-ಪಿಯುಎನ್ಜೆಡಿ20ಬಿಹೆಚಕೆ2752618 ನೇದನ್ನು ಖರಿದಿ ಮಾಡಿದ್ದು ಖರಿದಿ ಮಾಡಿದ ನಂತರ ಅದನ್ನು ಎಲ್ಲಾದರೂ ಗುತ್ತಿಗೆ ಆಧಾರದ ಮೇಲೆ ಯಾವೂದಾದರು ಕಾಂಟ್ರಾಕ್ಟರ್ ರವರಿಗೆ ಕೋಡಬೇಕೆಂದು ವಿಚಾರ ಮಾಡುತ್ತಿದ್ದಾಗ, ಪರಿಚಯವಿರುವ ನಿಲಂಗಾದ ಲತೀಫ ರವರಿಂದ ಪೂನಾ ಬಳಿಯಲ್ಲಿ ರಾಯಗಡ ಎಂಬ ಸ್ಥಳದಲ್ಲಿ ರೋಡ್ ಕನ್ಸಟ್ರಕ್ಷನ್ ಕೆಲಸ ನಡೆಸುತ್ತಿದ್ದ ಪಿಯುಷ ಪಟೇಲ ರವರ ಪರಿಚಯವಾಗಿದ್ದು ಅವರಿಗೆ ಹಿಟಾಚಿಯ ಅಗತ್ಯವಿದೆ ಎಂದು ತಿಳಿದು ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದು ಪ್ರತಿ ತಿಂಗಳಿಗೆ 1,80,000/- ರೂ ಹಣ ಕೊಡುವ ಬಗ್ಗೆ ಮಾತನಾಡಿದ್ದು, ಅದರಂತೆ ಪಿಯುಷ ಪಟೇಲ ರವರಿಗೆ 2019 ನೇ ಸಾಲಿನ ಮಾರ್ಚ ತಿಂಗಳಲ್ಲಿ ಹಿಟಾಚಿಯನ್ನು ಬೀದರ ನಗರದ ನೌಬಾದ ಬಳಿಯಲ್ಲಿ ಕೊಟ್ಟಿದ್ದು ಅದನ್ನು ತೆಗೆದುಕೊಂಡು ಹೋದ ನಂತರ ಅವರು ಫಿಯರ್ಾದಿಗೆ ಹಣವನ್ನು ಕೋಡದೇ ವಂಚಿಸಿ ಮೋಸ ಮಾಡಿ ಹಿಟಾಚಿಯನ್ನು ಝಾನ್ಸಿಗೆ ತೆಗೆದುಕೊಂಡು ಹೋಗಿದ್ದು, ಹಣ ಕೊಡದೇ ಮತ್ತು ಫಿಯರ್ಾದಿಯು ಹಿಟಾಚಿಯನ್ನು ಸಹ ಮರಳಿ ಕೊಡದೇ ಸತಾಯಿಸುತ್ತಿದ್ದಾನೆ ಅಂತಾ ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/2020 ಕಲಂ 174 ಸಿಆರ್ಪಿಸಿ :-

ದಿನಾಂಕ 25-03-2020 ರಂದು ಬೆಳಗ್ಗೆ ಫಿಯರ್ಾದಿ ಮಾರುತಿರಾವ ತಂದೆ ನಾರಾಯಣರಾವ ದೇವಕತೆ ಸಾ: ಎಕಂಬಾ ಮತ್ತು ಇವರ ಮಗ ಪಂಡರಿ ಇಬ್ಬರೂ ಹೊಲ ಸವರ್ೆ ನಂ 172/2 ನೇದರಲ್ಲಿ ಜೊಳದ ಬೆಳೆಗೆ ನೀರು ಬಿಡಲು ಹೋಗಿ ಬೊರವೇಲ್ ಸ್ಟ್ರಾಟ ಮಾಡಿ ಹೊಲದಲ್ಲಿ ನೀಡು ಬಿಡುತ್ತಿದ್ದಾಗ ಅಂದಾಜು 0730 ಗಂಟೆಗೆ ಫಿಯರ್ಾದಿ ಮಗ ಪಂಡರಿ ಇತನು ತನ್ನ ಕಾಲಿಗೆ ಹಾವು ಕಚ್ಚಿದರಿಂದ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಔರಾದ ಸರಕಾರಿ ಆಸ್ಪತ್ರೆಗೆ 0830 ಗಂಟೆಗೆ ತಂದಾಗ ವೈಧ್ಯಾಧಿಕಾರಿಯವರು ಪರೀಕ್ಷಿಸಿ ಪಂಡರಿ ಇತನು ದಾರಿಯಲ್ಲಿಯೆ ಮೃತ ಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ ಅಂತಾ ನೀಡಿದ ಫಿಯರ್ಾದಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.