ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 25-05-2020

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 57/2020 ಕಲಂ 287, 304(ಎ) ಐಪಿಸಿ :-

ದಿನಾಂಕ 24-05-2020 ರಂದು 0815 ಗಂಟೆಗೆ ಬೀದರ ಸರ್ಕಾರಿ ಆಸ್ಪತ್ರೆಯಿಂದ   ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಫಿರ್ಯಾದಿ ರಾಜಕುಮಾರ ತಂದೆ ಬಾಬುಲಾಲ ಚವ್ಹಾಣ ವಯ: 30 ವರ್ಷ, ಸಾ: ಪತಾರ್, ಜಿಲ್ಲಾ: ಶಿವಾರ್ (ಬಿಹಾರ) ರವರು ನೀಡಿದ ದೂರಿನ ಸಾರಾಂಶವೆನೆಂದರೆ ಮೋಹಿತಕುಮಾರ್ ವಯ: 21 ವರ್ಷ.  ಇತನು ಸಂಬಂಧಿಕನಿದ್ದು, ಇಬ್ಬರು ಬೀದರನಲ್ಲಿ 3 ವರ್ಷದಿಂದ ಕೆಲಸ ಮಾಡುತ್ತಿದ್ದು ಈಗ ಸುಮಾರು 5 ತಿಂಗಳಿಂದ ಮಾಡರ್ನ ಇಂಜಿನಿಯರಿಂಗ್ ಎಂಟರಪ್ರೈಸೆಸ್ ಎಂಬ ಹೆಸರಿನ ಕಂಪೆನಿಯಲ್ಲಿ ಕೆಲಸ ಗುತ್ತಿಗೆ ಪಡೆದಿದ್ದು ಸಾಯಿ ಕಂಪೆನಿಯವರು ಮಾಡರ್ನ್ ಇಂಜಿನಿಯರಿಂಗ್ ಕಂಪೆನಿಯವರಿಗೆ ಸಾಯಿಕಂಪೆನಿಯ ಪ್ರಿಮೆಸೆಸ್ ದಲ್ಲಿ ಒಂದು ವರ್ಕ ಶಾಪ್ ಹಾಕಿಕೊಟ್ಟಿದ್ದು ಸಾಯಿ ಕಂಪೆನಿಯವರು ನೀಡಿದ ಆರ್ಡರ್ ಪ್ರಕಾರ ಮಾಡರ್ನ್ ಇಂಜಿನಿಯರಿಂಗ್ ಕಂಪೆನಿಯವರು ಕೆಲಸ ಮಾಡುತ್ತಾರೆ. ಮೋಹಿತಕುಮಾರ್ ಇತನು ಫಿಟ್ಟರ್ ಕೆಲಸ ಮಾಡಿಕೊಂಡಿರುತ್ತಾನೆ. ಹಿಗಿರುವಲ್ಲಿ ಮೊಹಿತಕುಮಾರ ಇತನು ಸುಮಾರು ಒಂದು ವಾರದಿಂದ ಚಿಕನ್ ಪಾಕ್ಸ್ ರೋಗದಿಂದ ಬಳಲುತ್ತಿದ್ದು ಅವನು ದಿ: 18-05-2020 ರಂದು ಕೆಲಸಕ್ಕೆ ಹೊಗಿದ್ದು ಅವನು ಕೆಲಸಕ್ಕೆ ಹೋದ ನಂತರ ಸುಪರವೈಜರ್ ಮಹೇಶ ರವರು ಮೋಹಿತಕುಮಾರ ಇತನಿಗೆ ಸಾಯಿ ಲೈಫ್ ಸೈನ್ಸ್ ಕಂಪೆನಿಗೆ ಕೆಲಸಕ್ಕೆ ಕಳುಹಿಸಿದ್ದು ಮಧ್ಯಾಹ್ನ 1230 ಗಂಟೆಯ ಸುಮಾರಿಗೆ ಮೋಹಿತಕುಮಾರ ತನು ಕೆಲಸ ಮಾಡುವ ಕಾಲಕ್ಕೆ ಆತನ ಮೈಮೇಲೆ ಕೆಮಿಕಲ್ ಚೆಲ್ಲಿದ್ದು ಇದರಿಂದಾಗಿ ಆತನ ದೇಹದ ಮೇಲೆ ಮತ್ತು 2 ಕಾಲುಗಳ ಮೇಲೆ ಸುಟ್ಟಗಾಯಗಳಾಗಿರುತ್ತವೆ. ಅವನು ಕೆಲಸಮಾಡುವಾ ಕಾಲಕ್ಕೆ ಸುಪರವೈಜರ್ ಮಹೇಶ ರವರು ಸುರಕ್ಷತಾ ಸಾಧನಗಳಾದ ಹ್ಯಾಂಡ್ ಗ್ಲೌಸ್, ಜಾಕೇಟ್, ವಗೈರೆ  ನೀಡದ ನಿರ್ಲಕ್ಷ್ಯತನ ವಹಿಸಿರುವದು ಕಂಡುಬಂದಿರುತ್ತದೆ. ನಂತರ ನೌಬಾದನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸಿ ರೂಮಿಗೆ ಕಳುಹಿಸಿದ್ದು ಇರುತ್ತದೆ. ನಂತರ ದಿ: 25-05-2020 ರಂದು ನಸುಕಿನ ಜಾವ 0430 ಗಂಟೆಗೆ ಸುಮಾರಿಗೆ ಮೋಹಿತಕುಮಾರ ತನು ತುಂಬ ತಲೆನೋವು ಮತ್ತು ಮಾತನಾಡುವ ಸ್ಥಿತಿಯಲ್ಲಿ ಇರದಿದ್ದಾಗ 108 ಅಂಬುಲೆನ್ಸ್ ಮೂಲಕ ಬೀದರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದಾಗ ವೈದ್ಯಾಧಿಕಾರಿಗಳು ಪರೀಕ್ಷಿಸಿ  ಮೋಹಿತಕುಮಾರ ಇತನು ಮೃತಪಟ್ಟಿರುತ್ಥಾನೆ ಅಂತಾ ತಿಳಿಸಿರುತ್ತಾರೆ. ಅಂತಾ ಫಿರ್ಯಾದಿ ರವರು ಮೋಹಿತಕುಮಾರ ಇತನು ಕೆಲಸ ಮಾಡುವ ಕಾಲಕ್ಕೆ ಆತನ ಸೂಪರವೈಜರ್ ಮಹೇಶರವರು ಸುರಕ್ಷತಾ ಸಲಕರಣೆ ನೀಡದೆ ಇರುವುದರಿಂದ ಸಾವು ಸಂಭವಿಸರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.