ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-04-2021

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 48/2021, ಕಲಂ. 279, 337, 338 ಐಪಿಸಿ ಜೊತೆ 187 .ಎಂ.ವಿ ಕಾಯ್ದೆ :-

ದಿನಾಂಕ 24-04-2021 ರಂದು ಫಿರ್ಯಾದಿ ಮೋಯಿನ್ ತಂದೆ ನಬೀಸಾಬ್ ಖುರೇಷಿ ಸಾ: ಲಖನಗಾಂವ, ತಾ: ಭಾಲ್ಕಿ ರವರ  ಗಳೆಯನಾದ ದತ್ತಾತ್ರಿ ತಂದೆ ರಮೇಶ ಗೌಂಡಗಾವೆ ವಯ: 20 ವರ್ಷ, ಜಾತಿ: ಮರಾಠಾ, ಸಾ: ಲಖನಗಾಂವ ಈತನು ಫಿರ್ಯಾದಿಯ ಹತ್ತಿರ ಬಂದು ನಮ್ಮ ಹೊಲದಲ್ಲಿ ಇಂದು ರಾತ್ರಿ ಟ್ರಾಕ್ಟರ ಹೊಡೆಯುವುದು ಇದೆ ಆದ್ದರಿಂದ ನನ್ನ ಟ್ರಾಕ್ಟರನಲ್ಲಿ ಡಿಸೇಲ್ ಖಾಲಿಯಾಗಿದ್ದು ಭಾತಂಬ್ರಾ ಗ್ರಾಮಕ್ಕೆ ನನ್ನ ಜೊತೆ ಬಾ ಇಬ್ಬರು ಕೂಡಿಕೊಂಡು ನನ್ನ ಮೋಟಾರ್ ಸೈಕಲ ಮೇಲೆ ಡಿಸೇಲ್ ತೆಗೆದುಕೊಂಡು ಬರೋಣ ಅಂತಾ ಹೇಳಿದ್ದಕ್ಕೆ ಸರಿ ಆಯ್ತು ಹೋಗೋಣಾ ಅಂತಾ ದತ್ತಾತ್ರಿ ಈತನ ಮೋಟಾರ್ ಸೈಕಲ ನಂ. ಎಮ್.ಹೆಚ್-24/ಕೆ-2478 ಮೇಲೆ ಲಖನಗಾಂವ ಗ್ರಾಮದಿಂದ ಬಿಟ್ಟು ದತ್ತಾತ್ರಿ ಈತನು ವಾಹನ ಚಲಾಯಿಸುತ್ತಿದ್ದು ಇಬ್ಬರು ಭಾತಂಬ್ರಾ ಗ್ರಾಮಕ್ಕೆ ಬರುವಾಗ ಭಾತಂಬ್ರಾ – ಕಾಕನಾಳ ರಸ್ತೆಯ ಮೇಲೆ  ಮಾಣಿಕಪ್ಪಾ ಸೋಲಾಪೂರೆ ರವರ ಹೊಲದ ಹತ್ತಿರ ಎದುರಿನಿಂದ ಟವೇರಾ ವಾಹನ ಸಂ. ಎಪಿ-28/ಬಿಎನ್-6194 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ವಾಹನ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತ ವಾಹನಕ್ಕೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಾಲು ತೊಡೆಗೆ ಪೆಟ್ಟು ಬಿದ್ದು ಭಾರಿ ಗುಪ್ತಗಾಯ, ರಕ್ತಗಾಯ, ಹಣೆಗೆ ತರಚಿದ ಗಾಯ ಮತ್ತು ಬಲಗೈ ಭುಜದ ಹತ್ತಿರ ತರಚಿದ ಗಾಯವಾಗಿರುತ್ತವೆ ಹಾಗೂ ದತ್ತಾತ್ರಿ ಈತನ ಬಲಗಾಲ ಪಾದ ಹರಿದು ಭಾರಿ ರಕ್ತಗಾಯವಾಗಿರುತ್ತದೆ, ಅದೇ ಸಮಯಕ್ಕೆ ಅಲ್ಲೆ ಇದ್ದ ಪರಮೇಶ್ವರ ತಂದೆ ಪ್ರಕಾಶ ಸೋಲಾಪೂರೆ ಸಾ: ಭಾತಂಬ್ರಾ ಇವರು ಬಂದು ನೋಡಿ 108 ಅಂಬುಲೇನ್ಸಗೆ ಕರೆಯಿಸಿ ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.