ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-11-2020

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 23/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ನರಸಾರಡ್ಡಿ ತಂದೆ ಹಣಮಂತರಡ್ಡಿ ಬಳಗಾರ, ವಯ: 58 ವರ್ಷ, ಜಾತಿ: ರಡ್ಡಿ, ಸಾ: ಮುಸ್ತರಿವಾಡಿ, ತಾ: ಚಿಟಗುಪ್ಪಾ ರವರ ಮಗನಾದ ಸಾಯಿರಡ್ಡಿ ವಯ: 35 ವರ್ಷ ಈತನ ಮದುವೆಯು ಹಂದ್ರಾಳ ಗ್ರಾಮದ ಜಗದೇವಿ ವಯ: 33 ವರ್ಷ ರವರೊಂದಿಗೆ 12 ವರ್ಷಗಳ ಹಿಂದೆ ಆಗಿರುತ್ತದೆ, ಮದುವೆಯಾಗಿ 12 ವರ್ಷವಾದರೂ ತನಗೆ ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದನು, ಹೀಗಿರುವಾಗ ದಿನಾಂಕ 23-11-2020 ರಂದು ಸಾಯಿರೆಡ್ಡಿ ಇತನು ತನಗೆ ಮದುವೆಯಾಗಿ 12 ವರ್ಷವಾದರೂ ಮಕ್ಕಳಾಗಲಿಲ್ಲವೆಂದು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ರಘುನಾಥ  ಮಜಕುರಿ ರವರ ಹೊಲದಲ್ಲಿನ ಕಟ್ಟೆ ಮೇಲಿರುವ ಬೇವಿನ ಗಿಡದ ಟೊಂಗೆಗೆ ಹಕ್ಕಿ ಹೊಡೆಯುವ ಕಾವಣಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಮೃತಪಟ್ಟಿದ್ದು ಇರುತ್ತದೆ, ತನ್ನ ಮಗನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 147/2020, ಕಲಂ. 279, 337, 304() ಐಪಿಸಿ :-

ದಿನಾಂಕ 22-11-2020 ರಂದು ಫಿರ್ಯಾದಿ ಜ್ಞಾನೇಶ್ವರ ತಂದೆ ಶ್ರೀಮಂತರಾವ ಬೆದ್ರೆ, ವಯ: 32 ವರ್ಷ, ಜಾತಿ: ಮರಾಠಾ, ಸಾ: ಕೆರೂರ, ತಾ: ಭಾಲ್ಕಿ ರವರು ತನ್ನ ರವರ ತಂದೆ ಶ್ರೀಮಂತರಾವ ಮುರಾರಿ ವಯ: 60 ವರ್ಷ ಇವರು ಗ್ರಾಮದ ಲಕ್ಷ್ಮಣರಾವ ಮುದಾಳೆರವರ ಹೊಲದ ಹತ್ತಿರದಿಂದ ನಡೆದುಕೊಂಡು ಮನೆಗೆ ಹೋಗುವಾಗ ಅವರ ಹಿಂದಿನಿಂದ ಮೊಟಾರ್ ಸೈಕಲ ನಂ. ಕೆಎ-39/ಕ್ಯೂ-5403 ನೇದ್ದರ ಚಾಲಕನಾದ ಆರೋಪಿ ಶ್ರೀಮಂತ ತಂದೆ ಸೂರ್ಯಕಾಂತ ವಯ: 25 ವರ್ಷ, ಸಾ: ಕೊಟಗ್ಯಾಳ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ತಂದೆಯ ಹಣೆಗೆ, ಮುಖಕ್ಕೆ, ಬಲಗಾಲ ಪಾದದ ಮೇಲ್ಭಾಗದ ಮೇಲೆ ಹಾಗೂ ಬಲ ಮುಂಗೈಗೆ ಗುಪ್ತಗಾಯವಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.