ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-11-2019

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 73/2019, ಕಲಂ. 379 ಐಪಿಸಿ :-

ದಿನಾಂಕ 18-11-2019 ರಂದು ಫಿರ್ಯಾದಿ ಬಸವರಾಜ ತಂದೆ ಕಾಶಿರಾಯ ಕಟ್ಟಾಳೆ ವಯ: 58 ವರ್ಷ, ಜಾತಿ: ಲಿಂಗಾಯತ, ಸಾ: ಕೇಸರ ಜವಳಗಾ, ತಾ: ಭಾಲ್ಕಿ, ಜಿ: ಬೀದರ ರವರು ತನ್ನ ಅಂಗಡಿಗೆ ಮೋಟಾರ ಸೈಕಲ್ ನಂ. ಕೆಎ-39/ಕೆ-5412 ನೇದರ ಮೇಲೆ ಬಂದು 2130 ಗಂಟೆಗೆ ಅಂಗಡಿ ಮುಚ್ಚಿ ಮಳೆ ಬರುತ್ತಿದ್ದರಿಂದ ಮನೆಯ ಕಡೆ ಹೋಗುವ ದಾರಿಯಲ್ಲಿ ಕೆಸರು ಇರುವುದರಿಂದ ತನ್ನ ಮೋಟಾರ ಸೈಕಲ್ ಅಂಗಡಿಯ ಮುಂದೆ ಇಟ್ಟು ನಡೆದುಕೊಂಡು ಮನೆಗೆ ಹೋಗಿ ಮರುದಿನ ದಿನಾಂಕ 19-11-2019 ರಂದು 0700 ಗಂಟೆಯ ಸುಮಾರಿಗೆ ತನ್ನ ಕಿರಣಾ ಅಂಗಡಿ ತೆರೆಯಲು ಬಂದಾಗ ಅಂಗಸಿಯ ಮುಂದೆ ಖುಲ್ಲಾ ಜಾಗೆಯಲ್ಲಿಟ್ಟಿದ್ದ ಸದರಿ ಮೋಟಾರ ಸೈಕಲ್ ಇರಲಿಲ್ಲ, ನಂತರ ಫಿರ್ಯಾದಿಯು ತನ್ನ ಮೋಟಾರ ಸೈಕಲ್ ಬಗ್ಗೆ ತಮ್ಮ ಊರಿನವರಿಗೆ ಅಕ್ಕ ಪಕ್ಕದ ಅಂಗಡಿಯವರಿಗೆ ವಿಚಾರಿಸಿದರೂ ಯಾವ ಸುಳಿವು ಸಿಕ್ಕಿರುವುದಿಲ್ಲ, ಸದರಿ ವಾಹನವನ್ನು ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಮೋಟಾರ್ ಸೈಕಲ್ ನಂ. ಕೆಎ-39/ಕೆ-5412, 2) ಬಿಳಿ ಬಣ್ಣದ್ದು, 3) ಮಾಡಲ್: 2013 ಹಾಗೂ 4) ಅ.ಕಿ 25,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 109/2019, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 24-11-2019 ರಂದು ಕಮಲನಗರದ ಚನ್ನಬಸವೇಶ್ವರ ಚೌಕ ಹತ್ತಿರ ಇರುವ ಮಡೋಳಪ್ಪಾ ಮಹಾಜನರವರ ಅಂಗಡಿಗಳ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆ ಅಂತಾ ಚಿದಾನಂದ ಎಎಸ್ಐ ಪಿಎಸ್ಐ ಕಮಲನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಮಲನಗರದ ದನ್ನಬಸವೇಶ್ವರ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಮಹೇಶ ತಂದೆ ಚಂದ್ರಪ್ಪಾ ಮಹಾಜನ ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ಕಮಲನಗರ, 2) ಚೇತನ ತಂದೆ ಬಾಬುರಾವ ಕದಂ ವಯ: 48 ವರ್ಷ, ಜಾತಿ: ಮರಾಠಾ, ಸಾ: ಹೋಳಸಮುದ್ರ, 3) ಬಸ್ವರಾಜ ತಂದೆ ಮಹಾದೇವ ಗಡ್ಡೆ ವಯ: 31 ವರ್ಷ, ಜಾತಿ: ಲಿಂಗಾಯತ, ಸಾ: ಚೌಬಾರಾ ಬೀದರ ಇವರೆಲ್ಲರೂ ಲೈಟಿನ ಬೆಳಕಿನಲ್ಲಿ ಗೋಲಾಕಾರವಾಗಿ ಕುಳಿತು ಅಂದರ ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 1) ನಗದು ಹಣ 28,120/- ರೂ., 2) 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತಗರಿಗೆ ದಸ್ತಗಿರಿ ಮಾಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.