ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-10-2019

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 16/2019, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 23-10-2019 ರಂದು ಫಿರ್ಯಾದಿ ಇಟಾಬಾಯಿ ಗಂಡ ಅಡೇಪ್ಪಾ ಉಪ್ಪಾರ ವಯ: 55 ವರ್ಷ, ಜಾತಿ: ಟೊಕರಿ ಕೊಳಿ, ಸಾ: ಮೈಸಲಗಾ ರವರ ಮಗಳಾದ ಬಂಗಾರಮ್ಮಾ ಗಂಡ ಸಂತೋಷ ದಂಡೆನೋರ ವಯ: 19 ವರ್ಷ ಇವಳಿಗೆ ಸುಮಾರು ವರ್ಷಗಳಿಂದ ಹೊಟ್ಟೆ ಬೇನೆ ಇದ್ದು ಚಿಕಿತ್ಸೆ ಮಾಡಿಸಿದರು ಕಡಿಮೆಯಾಗದೆ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬಂಗಾರಮ್ಮಾ ಇಕೆಯು ತನ್ನ ಮೈಮೇಲೆ ಸಿಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಆಕೆಯ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ, ದೂರು ಇರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 145/2019, ಕಲಂ. 379 ಐಪಿಸಿ :-

ದಿನಾಂಕ 05-08-2019 ರಂದು ಫಿರ್ಯಾದಿ ಸೈಯದ್ ಕಲೀಮೋದ್ದೀನ್ ತಂದೆ ಅಲ್ಲಾವೋದ್ದೀನ್, ವಯ: 34 ವರ್ಷ, ಜಾತಿ: ಮುಸ್ಲಿಂ, ಸಾ: ನೂರ್ ಖಾನ್ ಅಖಾಡ, ಹುಮನಾಬಾದ್ ರವರು ತನ್ನ ಕೆಲಸದಿಂದ ಮನೆಗೆ ತನ್ನ ಹೀರೊ ಹೊಂಡಾ ಸ್ಪ್ಲೈಂಡರ್ ಮೋಟಾರ್ ಸೈಕಲ್ ನಂ.ಕೆಎ-39/ಇ-4832 ನೇದರ ಮೇಲೆ ಮನೆಗೆ ಬಂದು ಮನೆಯ ಮುಂದೆ ಮೋಟಾರ್ ಸೈಕಲನ್ನು ಬೀಗ ಹಾಕಿ ನಿಲ್ಲಿಸಿ ಮನೆಯೊಳಗೆ ಹೋಗಿ ಊಟ ಮಾಡಿಕೊಂಡು ಮಲಗಿಕೊಂಡು ಮರು ದಿನ ದಿನಾಂಕ 06-08-2019 ರಂದು 0600 ಗಂಟೆಗೆ ಮನೆಯಿಂದ ಹೊರಗೆ ಬಂದು ನೋಡಲು ರಾತ್ರಿ ನಿಲ್ಲಿಸಿದ ಸದರಿ ಮೋಟಾರ್ ಸೈಕಲ್ ಇರಲಿಲ್ಲ. ಅಕ್ಕಪಕ್ಕದಲ್ಲಿ ಹುಡುಕಾಡಿ ನೋಡಲು ಸದರಿ ಮೋಟಾರ್ ಸೈಕಲ್ ಪತ್ತೆಯಾಗಲಿಲ್ಲ. ಯಾರೋ ಅಪರಿಚಿತ ಕಳ್ಳರು ಸದರಿ ಮೋಟಾರ್ ಸೈಕಲವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳ್ಳತನವಾದ ಮೋಟಾರ್ ಸೈಕಲ್ ವಿವರ 1) ಹೀರೊ ಹೊಂಡಾ ಸ್ಪ್ಲೈಂಡರ್ ಮೋಟಾರ್ ಸೈಕಲ್ ನಂ. ಕೆಎ-39/ಇ-4832, 2) ಚಾಸಿಸ್ ನಂ. 99.ಇ.19.ಎಫ್.08930, 3) ಇಂಜಿನ್ ನಂ. 99.ಇ.19.ಇ.08752, 4) ಮಾಡಲ್ 1999, 5) ಬಣ್ಣ: ಕೆಂಪು ಬಣ್ಣ, 6) ಅ.ಕಿ. 15,000/- ರೂ ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-10-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.