ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-07-2020

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 17/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಚಿತ್ರಮ್ಮಾ ಗಂಡ ಝೇರೆಪ್ಪಾ ಭಂಗಿ, ವಯ: 38 ವರ್ಷ, ಜಾತಿ: ಎಸ್.ಟಿ ಟೊಕರಿ ಕೊಳಿ, ಸಾ: ಉಡಬಾಳ ರವರ ಗಂಡನಾದ ಝೇರೆಪ್ಪಾ ತಂದೆ ಭೀಮಣ್ಣಾ @ ನರಸಪ್ಪಾ ಭಂಗಿ, ವಯ: 43 ವರ್ಷ ರವರು ಸುಮಾರು 2 ತಿಂಗಳಿನಿಂದ ಸ್ವಲ್ಪ ಮಾನಸೀಕವಾಗಿ ವರ್ತನೆ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 23-07-2020 ರಂದು 19:30 ಗಂಟೆಯ ಸುಮಾರಿಗೆ ಗಂಡ ಮನೆಯಿಂದ ಹೊರಗೆ ಹೋಗಿ ಬರುತ್ತೇನೆಂದು ಹೇಳಿ ತಮ್ಮ ಹಳೆಯ ಮನೆಯಲ್ಲಿ ಹೋಗಿ ತಗಡದ ಕೆಳಗಿರುವ ಕಟ್ಟಿಗೆ ದಂಟಕ್ಕೆ ಓಡನಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಗಂಡನು ಮಾನಸೀಕವಾಗಿ ವರ್ತನೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-07-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 87/2020, ಕಲಂ. 379 ಐಪಿಸಿ :-

ದಿನಾಂಕ 29-06-2020 ರಂದು ರಾತ್ರಿ 00:30 ಗಂಟೆಯಿಂದ ಮುಂಜಾನೆ 07:00 ಗಂಟೆಯ ಮದ್ಯದ ಅವಧಿಯಲ್ಲಿ ಬೀದರ ರಾಘವೇಂದ್ರ ಕಾಲೋನಿಯಲ್ಲಿರುವ ಫಿರ್ಯಾದಿ ರಾಜೇಶ ತಂದೆ ಸೂರ್ಯಕಾಂತ ಮೇಟಿ ವಯ: 28 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಬ್ಯಾಂಕ ಕಾಲೋನಿ ಕುಂಬಾರವಡಾ ರೋಡ ಬೀದರ ರವರು ತನ್ನ ಗೆಳೆಯನಾದ ಪ್ರವೀಣ ರವರ ಮನೆಯ ಮುಂದೆ ನಿಲ್ಲಿಸಿದ ತಮ್ಮ ಯಾಮಹಾ ಎಫ್.ಝಡ್ ಮೋಟರ ಸೈಕಲ ನಂ. ಕೆಎ-38/ವಿ-7878, ಚಾಸಿಸ್ ನಂ. ಎಮ್.ಇ.1.ಆರ್.ಜಿ.4477.ಜೆ.0011418, ಇಂಜಿನ್ ನಂ. ಜಿ.3.ಜೆ.3.ಇ.0318300, ಮಾಡಲ್ 2018, ಬಣ್ಣ ಬೂದು ಬಣ್ಣ ಹಾಗೂ ಅ.ಕಿ 49,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 34/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 23-07-2020 ರಂದು ಚಾಂಗಲೇರಾ ಗ್ರಾಮದಲ್ಲಿನ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆಂದು ಗಂಗಮ್ಮ ಪಿ.ಎಸ.ಐ ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಚಾಂಗಲೇರಾ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ನಾಗಪ್ಪಾ ತಂದೆ ಬಸಪ್ಪಾ ಮುಚ್ಚಳಂಬಿ ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ಪೊಲಕಪಳ್ಳಿ ಇತನು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 100/- ರೂಪಾಯಿಗಳು ಕೊಡುತ್ತೇನೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2330/- ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 2 ಮಟಕಾ ಚೀಟಿ ಹಾಗು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 98/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 23-07-2020 ರಂದು ಭಾತಂಬ್ರಾ ಗ್ರಾಮದ ಗ್ರಾಮ ಪಂಚಾಯತ ಕಛೇರಿಯ ಹತ್ತಿರ ಒಬ್ಬ ವ್ಯಕ್ತಿ ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಜನರಿಂದ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಮಹೇಂದ್ರಕುಮಾರ ಪಿಎಸ್ಐ (ಕಾ&ಸು) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭಾತಂಬ್ರಾ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ಹೋಗಿ ಮರೆಯಾಗಿ ನೋಡಲು ಒಬ್ಬ ವ್ಯಕ್ತಿ ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಜೋರಾಗಿ ಕೂಗುತ್ತಾ ಜನರಿಂದ ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿದಾಗ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದು ಆತನ ಹೆಸರು ವಿಚಾರಿಸಲು ಧನರಾಜ ತಂದೆ ಮಲ್ಲಿಕಾರ್ಜುನ ಬಿರಾದಾರ ವಯ: 37 ವರ್ಷ, ಜಾತಿ: ಲಿಂಗಾಯತ, ಸಾ: ಭಾತಂಬ್ರಾ, ತಾ: ಭಾಲ್ಕಿ ಅಂತಾ ತಿಳಿಸಿದನು, ನಂತರ ಧನರಾಜ ಇತನ ಅಂಗ ಝಡ್ತಿ ಮಾಡಲು ಆತನ ಹತ್ತಿರ 4900/- ರೂಪಾಯಿ ಹಾಗೂ ನಾಲ್ಕು ಬಿಳಿ ಹಾಳೆಯಲ್ಲಿ ಮಟಕಾ ಬರೆದ ನಂಬರವುಳ್ಳ ಚೀಟಿ ಮತ್ತು ಒಂದು ಬಾಲ ಪೆನ್ನ ಮತ್ತು ಸ್ಯಾಮಸಂಗ್ ಮೋಬೈಲ್ ಮೋಬೈಲ್ ಅ.ಕಿ 5000/- ರೂ.ಗಳು ಸಿಕ್ಕಿದ್ದು, ಮಟಕಾ ಚೀಟಿ, ಬಾಲ ಪೆನ್ನ, ಹಣ ಮತ್ತು ಮೋಬೈಲ್ ತಾಬೆಗೆ ತೆಗೆದುಕೊಂಡು, ಆರೋಪಿ ಧನರಾಜ ಈತನಿಗೆ ಮಟಕಾ ಚೀಟಿ ಬರೆದುಕೊಂಡು ಬುಕ್ಕಿ ಹಣ ಯಾರಿಗೆ ಕೊಡುತ್ತಿ ಅಂತ ವಿಚಾರಿಸಿದಾಗ ಕಾಳಿದಾಸ ಸಾ: ಶಾಹಾಜಾನಿ ಔರಾದ  (ಎಂ.ಎಸ್.) ರವರಿಗೆ ಕೊಡುತ್ತೇನೆ ಅಂತ ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 108/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 23-07-2020 ರಂದು ಹುಮನಾಬಾದ ಪಟ್ಟಣದ ಬಾಲಾಜಿ ಮಂದಿರ ಹತ್ತಿರ ರೊಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರೋಡಿನ ಮೇಲೆ ಹೊಗಿ ಬರುವ ಜನರಿಗೆ ಒಂದು ರೂಪಾಯಿಗೆ 80/- ರೂಪಾಯಿ ಬರುತ್ತವೆ ಅಂತಾ ಅವರಿಂದ ಹಣ ಪಡೆದು ಅವರಿಗೆ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಡುತ್ತಿದ್ದಾನೆಂದು ಮಲ್ಲಿಕಾರ್ಜುನ ಯಾತನೂರ ಸಿಪಿಐ ಹುಮನಾಬಾದ ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಹೋಗಿ ಮಟಕಾ ಚೀಟಿ ಬರೆದುಕೊಡುತ್ತಿದ್ದ ಆರೋಪಿ ಗಣೇಶ ತಂದೆ ಅಶೋಕ ಪ್ರಸಾದ, ವಯ: 31 ವರ್ಷ, ಜಾತಿ: ರಜಪೂತ, ಸಾ: ಬಾಲಾಜಿ ಮಂದಿರ ಹತ್ತಿರ ಹುಮನಾಬಾದ ಇತನ ಮೇಲೆ ದಾಳಿ ಮಾಡಿ ಹಿಡಿದು ಅವನಿಗೆ ಚೇಕ ಮಾಡಲು ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 1) ನಗದು ಹಣ 4500/- ರೂ. ಹಾಗೂ 2) ಒಂದು ಬಾಲ ಪೇನ್ನ, 3) 27 ಮಟಟಾ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಸಿಕ್ಕಿದ್ದು, ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.