ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 24-04-2020

ಬೀದರ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 16/2020 ಕಲಂ 379 ಐಪಿಸಿ :-

ದಿನಾಂಕ 23/04/2020  ರಂದು ಮುಂಜಾನೆ   1130  ಗಂಟೆಗೆ  ಸಂಜೀವಕುಮಾರ ತಂದೆ ಅಣ್ಣೆಪ್ಪಾ ಜೆಟಗೊಂಡ್ ವಯ-41 ಉ|| ಶಾಖಾಧಿಕಾರಿ ಜೆಸ್ಕಾಂ ಕಮಠಾಣಾ ರವರು ಠಾಣೆಗೆ  ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 17/04/2020 ರಂದು ಸಾಯಾಂಕಾಲ  ಯದಲಾಪೂರ ಗ್ರಾಮದ ಪ್ರಕಾಶ ಕೋಟೆ ಎಂಬುವವರು  ಫೋನ ಮಾಡಿ ತಮ್ಮ ಹೋಲದಿಂದ ಬ್ರಹ್ಮಕುಮಾರಿ ಆಸ್ರಮದ ವರೆಗೆ ಅಳವಡಿಸಿದ ವಿದ್ಯುತ ತಂತಿಯನ್ನು ಕಳುವು ಆಗಿರುತ್ತದೆ ಅಂತ ತಿಳಿಸಿದ ಮೇರೆಗೆ ದಿನಾಂಕ 18/04/2020 ರಂದು ಮುಂಜಾನೆ ನಾನು ಮತ್ತು ನಮ್ಮ ಲೈನಮ್ಯಾನ ಮೋಹ್ಮದ ಅಹ್ಮದ ರವರು ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಯದಲಾಪೂರ ಶಿವಾರದಲ್ಲಿನ ಪ್ರಕಾಶ ಕೋಟೆ ರವರ ಟ್ರಾನ್ಸಫಾರಮದಿಂದ ಬ್ರಹ್ಮಕುಮಾರಿ ಆಸ್ರಮದ ವರೆಗೆ 10 ವಿದ್ಯುತ ಕಂಬಕ್ಕೆ ಅಳವಡಿಸಿದ  ವಿದ್ಯುತ ತಂತಿ ಕಳುವು ಮಾಡಿಕೊಂಡು ಹೋಗಿದ್ದು ಕಂಡು ಬಂದಿರುತ್ತದೆ ಕಳವು ಮಾಡಿಕೊಂಡು ಹೋದ ವಿದ್ಯುತ ತಂತಿಯ ಅಂದಾಜು ಕಿಮತ್ತು ರು 40000/-ಆಗುತ್ತದೆ. ದಿನಾಂಕ 16,17/04/2020 ರ ರಾತ್ರಿ ವೇಳೆಯಲ್ಲಿ  ಯಾರೋ ಅಪರಿಚಿತ ಕಳ್ಳರು 10 ವಿದ್ಯುತ ಕಂಬಕ್ಕೆ ಅಳವಡಿಸಿದ  ವಿದ್ಯುತ ತಂತಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಳುವಾದ ತಂತಿಯನ್ನು ಹುಡುಕಾಡಟಲು ಹೋಗಿದರಿಂದ ಮತ್ತು ನಮ್ಮ ಮೇಲಾಧಿಕಾರಿಗಳಿಗೆ ವಿಚಾರಿಸಿ ಠಾಣೆಗೆ ಬಂದು ದೂರು ಕೋಡಲು ತಡವಾಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 52/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ ಜೊತೆ 273 ಐಪಿಸಿ :-

ದಿನಾಂಕ:23/04/2020 ರಂದು 10;00ಗಂಟೆಗೆ    ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಭಾತ್ಮಿದಾರರಿಂದ ಪೋನ್ ಮುಖಾಂತರ ಖಚಿತ ಭಾತ್ಮಿ ತಿಳಿದುಬಂದಿದ್ದೆನೆಂದರೆ ಬಸವಕಲ್ಯಾಣ ನಗರದ ಭೀಮನಗರ ಓಣಿಯಲ್ಲಿ ಲಕ್ಷ್ಮಿ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಕಳ್ಳಭಟ್ಟಿ ಸರಾಯಿವುಳ್ಳ ಬಿಳಿ ಬಣ್ಣದ ಕ್ಯಾನ್ ಇಟ್ಟುಕೊಂಡು ಸಾರ್ವಜ ನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಬಂದ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ   ರಾಕೇಶ ತಂದೆ ಪ್ರಲ್ಹಾದ  ಗೋಡಬೋಲೆ  ವಯಸ್ಸು:32 ವರ್ಷ ಜಾತಿ:ಎಸ್.ಸಿ  ದಲಿತ  ಉ:ಪೆಂಟರ ಕೆಲಸ ಸಾ: ಭೀಮ ನಗರ   05 ಲೀಟರ್ ಕಳ್ಳಭಟ್ಟಿ ಸರಾಯಿ ಇರುತ್ತದೆ. ಅದರ ಅಂದಾಜು ಕಿಮ್ಮತ್ತು 1500/-ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 52/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ ಜೊತೆ 273 ಐಪಿಸಿ :-

ದಿನಾಂಕ:23/04/2020 ರಂದು 16:00 ಗಂಟೆಗೆ  ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಭಾತ್ಮಿದಾರರಿಂದ ಪೋನ್ ಮುಖಾಂತರ ಖಚಿತ ಭಾತ್ಮಿ ತಿಳಿದುಬಂದಿದ್ದೆನೆಂದರೆ ಬಸವಕಲ್ಯಾಣ ನಗರದ ಧರ್ಮಪ್ರಕಾಶಗಲ್ಲಿಯಲ್ಲಿರುವ ಮಹಾದೇವ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಕಳ್ಳಭಟ್ಟಿ ಸರಾಯಿವುಳ್ಳ ಬಿಳಿ ಬಣ್ಣದ ಕ್ಯಾನ್ ಇಟ್ಟುಕೊಂಡು ಸಾರ್ವಜ ನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಓಂಕಾರ ತಂದೆ ಅಮೃತ ಹಲಗೆ ವಯಸ್ಸು//19 ವರ್ಷ ಜಾತಿ//ಎಸ್/ಸಿ ಮಾದಿಗ ಉ//ಕೂಲಿಕೆಲಸ ಸಾ//ಧರ್ಮಪ್ರಕಾಶಗಲ್ಲಿ ಬಸವಕಲ್ಯಾಣ  ಇತನ ಹತ್ತಿರವಿದ್ದ ಅಂದಾಜು 05 ಲೀಟರ್ ಕಳ್ಳಭಟ್ಟಿ ಸರಾಯಿ  ಅಂದಾಜು ಕಿಮ್ಮತ್ತು 1500/-ರೂ ಇದ್ದು ನೇದನ್ನು ಜಪ್ತಿ ಮಾಡಿಕೊಂಡು  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 105/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ ಜೊತೆ 273, 284 ಐಪಿಸಿ :-

ದಿನಾಂಕ 23-04-2020 ರಂದು 16:00 ಗಂಟೆಗೆ ಪಿ.ಐ. ರವರು  ಠಾಣೆಯಲ್ಲಿದ್ದಾಗ ಭಾಲ್ಕಿಯ ಜನತಾ ಕಾಲೋನಿಯ ಹನುಮಾನ ಮಂದೀರದ ಹತ್ತಿರ ಇಬ್ಬರು ತಮ್ಮ ಹತ್ತಿರ ಸಂಬಂಧಪಟ್ಟ ಇಲಾಖೆಯಿಂದ ಯಾವುದೆ ಅನುಮತಿ ಇಲ್ಲದೆ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುವ ಕುರಿತು ತಮ್ಮ ವಶದಲ್ಲಿ ಇಟ್ಟುಕೊಂಡು ಕುಳಿತಿರುತ್ತಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ಅವರುಗಳ ಮೇಲೆ ದಾಳಿ ಮಾಡಿ ಇಬ್ಬರು ವ್ಯಕ್ತಿಗಳ  ಹತ್ತಿರದ ಇದ್ದ ಮದ್ಯದ ಕ್ಯಾನಗಳು ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡು ಓಡಿ ಹೋದರು. ಅವರು ಬಿಟ್ಟು ಹೋದ ಕ್ಯಾನಗಳು ಪರಿಶೀಲಿಸಿ ನೋಡಲು ಒಂದು 10 ಲೀಟರಿನ ಮತ್ತು ಒಂದು 5 ಲೀಟರಿನ ಕ್ಯಾನ ತುಂಬಿದ್ದು ಇದ್ದವು, ಒಟ್ಟು 15 ಲೀಟರಿನಷ್ಟು ಕಳ್ಳ ಭಟ್ಟಿ ಸರಾಯಿ ತುಂಬಿದ್ದು ಇದ್ದು ಅದರ ಅ/ಕಿ 3,000=00 ರೂಪಾಯಿ ದಷ್ಟು ಇರುತ್ತದೆ, ಓಡಿ ಹೋದವರ ಹೆಸರು 1) ವಿಶಾಲ ಅಲಿಯಾಸ್ ವಿಕ್ಕಿ ತಂದೆ ಕಾಶಿನಾಥ ಬಾಜೋಳಗೆ ವಯ: 21 ವರ್ಷ, ಜಾತಿ: ಎಸ್.ಸಿ. ದಲೀತ ಉ: ವಿಧ್ಯಾಥರ್ಿ, ಸಾ: ಜನತಾ ಕಾಲೋನಿ ಭಾಲ್ಕಿ ಮತ್ತು 2) ಅರವಿಂದ ಅಲಿಯಾಸ್ ಕೆ. ಕೆ. ತಂದೆ ಸುಭಾಷರಾವ ಕಾಸಲೆ ವಯ: 26 ವರ್ಷ, ಜಾತಿ: ವಡ್ಡರ ಉ: ಕೂಲಿ ಕೆಲಸ ಸಾ: ಜನತಾ ಕಾಲೋನಿ ಭಾಲ್ಕಿ ಅಂತ ತಿಳಿದು ಬಂದಿರುತ್ತದೆ ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂಕ್ಯೆ 61/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ 23-04-2020 ರಂದು 1500 ಗಂಟೆಗೆ  ಕಾಳಪ್ಪಾ ಎಂ ಬಡಿಗೇರ  ಪಿಎಸ್ಐ (ಕಾ.ಸು)  ರವರು  ಠಾಣೆಯಲ್ಲಿದ್ದಾಗ ಜ್ಯಾಂತಿ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅನಧೀಕ್ರತವಾಗಿ ಸರಾಯಿ ಬಾಟಲಿಗಳು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ  ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ನೋಡಿದಾಗ ಅಂಬೇಡ್ಕರ ಚೌಕದಿಂದ  ಮಲ್ಲಿಕಾರ್ಜುನ ದೇವಸ್ಥಾನದ ಕಡೆಗೆ ಹೋದಾಗ ದೇವಸ್ಥಾನದ ಮುಂದೆ ಅರಳಿ ಮರದ ಹತ್ತಿರ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಒಂದು ಪ್ಲಾಸ್ಟೀಕ ಕ್ಯಾರಿ ಬ್ಯಾಗ ಹಿಡಿದುಕೊಂಡು ಜನರಿಗೆ ಗ್ಲಾಸದಲ್ಲಿ ಸರಾಯಿ ಹಾಕಿ ಮಾರಾಟ ಮಾಡುತ್ತಿದ್ದನ್ನು ಕಂಡು 1330 ಗಂಟೆಗೆ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದುಕೊಳ್ಳಲು ಸರಾಯಿ ಕುಡಿಯಲು ಬಂದ ಕೆಲವು ಜನರು ಅಲ್ಲಿಂದ ಓಡಿ ಹೋದರು. ಹಿಡಿದುಕೊಂಡ ವ್ಯಕ್ತಿಯ ಹೆಸರು ವಿಚಾರಿಸಲು ಅವನು ತನ್ನ ಹೆಸರು ಶೆರಣಪ್ಪಾ ತಂದೆ ಪ್ರಭು ಮುದುಕ ವಯ 22 ಜಾ. ಲಿಂಗಾಯ್ತ ಸಾ. ಜ್ಯಾಂತಿ ಅಂತಾ ತಿಳಿಸಿದನು ದೇಶದಲ್ಲಿ ಕೋರೋನಾ ವೈರಸ ಹರಡಿದ ಸರಕಾರದಿಂದ ಪ್ರಯುಕ್ತ ಎಲ್ಲಾ ಮಧ್ಯದಂಗಡಿಗಳು ಮುಚ್ಚಿಸಿದ್ದು ಆದರೂ ಸಹ ತನ್ನ ಲಾಭಕ್ಕಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಖಚಿತ ಪಡಿಸಿಕೊಂಡು ಆತನ ಹತ್ತಿರ ಇದ್ದ ಕ್ಯಾರಿ ಬ್ಯಾಗ ನೋಡಲು ಅದರಲ್ಲಿ 180 ಎಂ.ಎಲ. ವುಳ್ಳ  8 ಐ.ಬಿ. ಸರಾಯಿ ಬಾಟಲ ಇದ್ದು ಒಂದರ ಅ.ಕಿ. 200/- ರೂ, ಒಟ್ಟು 8 ಬಾಟಲಗಳ ಅ,ಕಿ.1600/-ರೂ ಮತ್ತು ಆತನ ಅಂಗ ಝಡ್ತಿ  ಮಾಡಲು ಆತನ ಹತ್ತಿರ ಸಾರ್ವಜನಿಕರಿಗೆ ಸರಾಯಿ ಮಾರಾಟ ಮಾಡಿ ಬಂದ ಹಣದ ಪೈಕಿ 1600/-ರೂ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.