ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-06-2020

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 41/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 21-06-2020 ರಂದು ಸರಾಯಿ ಮಾರಾಟ ಮಾಡುವ ಬಗ್ಗೆ ಕು.ಸಂಗೀತಾ ಪಿಎಸ್ಐ (ಕಾಸೂ)  ಮಾರ್ಕೆಟ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಎಸ.ಎಸ.ಎಸ್ ಧಾಭಾದಲ್ಲಿ ಕೌಂಟರ ಹತ್ತಿರ ಆರೋಪಿ ಮಾದಪ್ಪಾ ತಂದೆ ಪುಂಡಲಿಕರಾವ ಗುನಮುಖೆ ವಯ: 36 ವರ್ಷ, ಸಾ: ಚಟನಾಳ, ತಾ: ಔರಾದ ಇತನು ಅನಧೀಕ್ರತವಾಗಿ ಸರಾಯಿ ಮಾರಾಟ ಮಾಡುತ್ತಿರುವಾಗ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಅವನ ಹತ್ತಿರವಿದ್ದ 1) ಕಿಂಗಫಿಶರ ಬೀರ 650 ಎಮ.ಎಲ ನ 18 ಬಾಟಲಗಳು ಅ.ಕಿ 2700/- ರೂ., 2) ಕಿಂಗಫಿಶರ ಸ್ಟ್ರಾಂಗ ಬೀರ 650 ಎಮ.ಎಲ ನ 12 ಬಾಟಲಗಳು ಅ.ಕಿ 1800/- ರೂ., 3) ಟ್ಯೂಬರ್ಗ ಪ್ರೀಮಿಯಂ ಬೀರ 650 ಎಮ.ಎಲ ನ 3 ಬಾಟಲಗಳು 435/- ರೂ., 4) ರಾಯಲ್ ಸ್ಟ್ಯಾಗ ವಿಸ್ಕಿ 180 ಎಮ.ಎಲ ನ 3 ಬಾಟಲಗಳು ಅ.ಕಿ 960/- ರೂ., 5)ಮ್ಯಾಕ ಡೊವೆಲ್ ವಿಸ್ಕಿ 180 ಎಮ.ಎಲ ನ ಒಂದು ಬಾಟಲ ಅ.ಕಿ 198/- ರೂ. ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 11/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 21-06-2020 ರಂದು 1730 ಗಂಟೆಗೆ ಫಿರ್ಯಾದಿ ರಾಹುಲ್ ತಂದೆ ಗಣಪತಿ ತಾಂಡೂರಕರ ವಯ: 22 ವರ್ಷ, ಜಾತಿ: ದಲಿತ, ಸಾ: ಮೈಲೂರ ಬೀದರ ರವರ ತಂದೆಯಾದ ಗಣಪತಿ ತಂದೆ ಸಾಯಪ್ಪಾ ತಾಂಡೂರಕರ ವಯ: 54 ವರ್ಷ, ಜಾತಿ: ದಲಿತ, ಸಾ: ಮೈಲೂರ ಬೀದರ ರವರು ಮನೆಯ ಬಾತರೂಮಿನಲ್ಲಿ ಕೈ-ಕಾಲು ಮುಖ ತೊಳೆದುಕೊಳ್ಳುವಾಗ ಬಾತರೂಮಿನ ಗೋಡೆಯಲ್ಲಿ ಆಕಸ್ಮಿಕವಾಗಿ ಕರೆಂಟ್ ಬಂದು ಗೋಡೆಗೆ ಕೈ ಹಚ್ಚಿದ್ದರಿಂದ ಕರೆಂಟ್ ಹತ್ತಿ ಫಿರ್ಯಾದಿಯವರ ತಂದೆಯವರು ಮೃತಪಟ್ಟಿರುತ್ತಾರೆ, ಅವರ ಮರಣದ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 52/2020, ಕಲಂ. 457, 380, 511 ಐಪಿಸಿ :-

ದಿನಾಂಕ: 20,21-06-2020 ರಂದು ರಾತ್ರಿ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ತುಗಾಂವ (ಹೆಚ್) ಗ್ರಾಮದ ಹನುಮಾನ ಮಂದಿರ ದಾನಪೆಟ್ಟಿಗೆ ಒಡೆದು ಕಳ್ಳತನ ಮಾಡಲು ಪ್ರಯತ್ನ ಮಾಡಿದ್ದು ಇರುತ್ತದೆ, ಸದರಿ ಮಂದಿರದ ದಾನ ಪೆಟ್ಟಿಗೆ ಈ ವರ್ಷ ಫೆಬ್ರುವರಿ ತಿಂಗಳಲ್ಲಿ ಒಡೆದು ಅದರಲ್ಲಿ ಹುಂಡಿ ಹಣ ತೆಗೆದುಕೊಂಡು ಪುನಃ ಕೂಡಿಸಿದ್ದು ನಂತರ ಸ್ವಲ್ಪ ದಿವಸದಲ್ಲಿ ಲಾಕಡೌನ ಆಗಿದ್ದರಿಂದ ಯಾರು ಭಕ್ತರು ಬಂದಿರುವುದಿಲ್ಲ, ಸದರಿ ದಾನ ಪೆಟ್ಟಿಯಲ್ಲಿ ಹಣ ಇರಲಿಲ್ಲ ಅಂತ ಫಿರ್ಯಾದಿ ಚಂದ್ರಶೇಖರ ತಂದೆ ಮಾಧವರಾವ ಪಾಟೀಲ ವಯ: 55 ವರ್ಷ, ಜಾತಿ: ಮರಾಠಾ, ಉ: ಅಧ್ಯಕ್ಷರು ಹನುಮಾನ ಮಂದಿರ ಕಮಿಟಿ ತೂಗಾಂವ (ಹೆಚ್), ಸಾ: ಹಲಸಿ ತೂಗಾಂವ ರವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.