ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 22-05-2020
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 69/2020 ಕಲಂ 379 ಐಪಿಸಿ :-
ದಿನಾಂಕ 21/05/2020 ರಂದು 1330 ಗಂಟೆಗೆ ಫಿರ್ಯಾದಿ ಆಕಾಶ ತಂದೆ ಶ್ರಾವಣಕುಮಾರ ಸಾ. ಸಿಂಧನಕೇರಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ 2017 ನೇ ಸಾಲಿನಲ್ಲಿ ಹಿರೋ ಸ್ಪೇಲೆಂಡರ ಮೋಟಾರ ಸೈಕಲ ನಂ ಕೆ.ಎ 39. ಕ್ಯೋ. 7672 ಖರಿದಿ ಮಾಡಿದ್ದು ಇರುತ್ತದೆ. ದಿನಾಂಕ 19/05/2020 ರಂದು ಮುಂಜಾನೆ 1000 ಗಂಟೆಗೆ ಸಿಂಧನಕೆರಾ ಗ್ರಾಮದಿಂದ ಫಿರ್ಯಾದಿ ಮತ್ತು ಇವರ ತಮ್ಮ ಪುಂಡಲಿಂಕ ಇಬ್ಬರು ಹುಮನಾಬಾದ ಶಿವಾಜಿ ಚೌಕ ಹತ್ತಿರ ಇರುವ ಎಸ.ಬಿ.ಐ ಎ.ಟಿ.ಎಂ ದಲ್ಲಿ 10.30 ಗಂಟೆಗೆ ಹಣ ತೆಗೆದುಕೊಳ್ಳುವ ಕುರಿತು ಬಂದು ಬ್ಯಾಂಕಿನ ಎದುರುಗಡೆ ವಾಹನ ನಿಲ್ಲಿಸಿ ಎ.ಟಿ.ಎಂ ದಲ್ಲಿ ಲೈನ ಇರುವದರಿಂದ ಲೈನದಲ್ಲಿ ನಿಂತು ಹಣ ತೆಹೆದುಕೊಂಡು ಮರಳಿ ಬಂದು ನೋಡಲು ಅವರು ನಿಲ್ಲಿಸಿದ ಮೋಟಾರ ಸೈಕಲ ಇರಲಿಲ್ಲ ನಾನು ಎಲ್ಲಕಡು ಹಡಕಾಡಿನೋಡಲು ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಹುಮನಾಬಾದ ಶಿವಾಜಿ ಚೌಕ ಹತ್ತಿರ ಇರುವ ಎಸ.ಬಿ.ಐ ಬ್ಯಾಂಕ ಎ.ಟಿ.ಎಂ ಮುಂದಗಡೆ ನಿಲ್ಲಿಸಿದ ನನ್ನ ಈ ಮೇಲಿನ ಮೋಟಾರ ಸೈಕಲ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಮೋಟಾರ ಸೈಕಲ ಅಂ.ಕಿ. 33,000/- ರೂಪಾಯಿ ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 42/2020 ಕಲಂ 279, 304(ಎ) ಐಪಿಸಿ :-
ದಿನಾಂಕ 21/5/2020 ರಂದು 1200 ಗಂಟೆಗೆ ಠಾಣೆಯ ಸಿಎಚಸಿ 830 ರವರು ಎ.ಎಸ.ಐ. (ಡಿ) ರವರು ಹೈದ್ರಾಬಾದ ಉಸ್ಮಾನೀಯಾ ಆಸ್ಪತ್ರೆಯಲ್ಲಿ ಫಿರ್ಯಾದಿ ಓಂಕಾರ ತಂದೆ ಗಣಪತ ಸಾವಳೆ ವಯ// 30 ವರ್ಷ ಜಾ// ನಾವದೀಗ ಉ// ಕೂಲಿ ಕೇಲಸ ಸಾ// ಹಕ್ಯಾಳ ರವರ ಹೇಳಿಕೆ ಸಾರಾಂಶವೆನೆಂದರೆ ಫಿರ್ಯಾದಿಯ ತಮ್ಮನಾದ ಕೃಷ್ಣಾ ತಂದೆ ಗಣಪತ ವಯ// 27 ವರ್ಷದವನಿದ್ದು ಮಹಾರಷ್ಟ್ರದ ಹಾಳನಿ ಗ್ರಾಮದ ಜೈಶೀರಾ ಇವಳ ಜೋತೆ 2017 ನೇ ಸಾಲಿನಲ್ಲಿ ಮದುವೆ ಮಾಡಿದ್ದು ಫಿರ್ಯಾದಿ ತಮ್ಮನ ಹೇಂಡತಿಯು ತನ್ನ ತವರುಮನೆಯಾದ ಹಾಳಣಿ ಗ್ರಾಮದಲ್ಲಿ ಇದ್ದರಿಂದ ಹೆಂಡತಿ ಕಡೆಗೆ ಹೊಗಲು ಮೋಟಾರ ಸೈಕಲ ನಂ ಎಮ.ಎಚ. 42 ಎ.ಕೆ. 5703 ನೇದ್ದನ್ನು ದಿನಾಂಕ 19/5/2020 ರಂದು 1030 ಪಿ.ಎಂ ಗಂಟೆಗೆ ತೆಗೆದುಕೊಂಡು ಹೊಗಿದ್ದು ಮುರ್ಕಿ ದಾಟಿದ ನಂತರ ಬಸವನ ಖೋರಿ ಹತ್ತೀರ ಕೃಷ್ಣ ಇತನು ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ ಮೇಲಿಂದ ಬಿದ್ದಿದ್ದು ಅಂದು ರಾತ್ರಿ ಯಾರೂ ನೋಡದ ಕಾರಣ ಅಲ್ಲೆ ಬಿದ್ದಿದ್ದು ಅವನನ್ನು ದಿನಾಂಕ 20/5/2020 ರಂದು 0900 ಗಂಟೆಗೆ ವಿಠ್ಠಲ ಸಾ// ಹಂದಿಕೇರಾ ಇವರು ನೋಡಿ ನನಗೆ ಫೊನ ಮಾಡಿ ಬಸವನ ಖೋರಿ ಹತ್ತೀರ ನಿನ್ನ ತಮ್ಮ ಬಿದ್ದಿದ್ದು ತಲೆಗೆ ಗಾಯವಾಗಿದ್ದು ಮುಗಿನಿಂದ ಕಿವಿಯಿಂದ ರಕ್ತಸ್ರಾವವಾಗಿದ್ದರಿಂದ ಆಟೋದಲ್ಲಿ ಕಮಲನಗರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿದ್ದು ಅಲ್ಲಿನ ವೈದ್ಯರು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಬೀದರ ವೈದ್ಯಾಧಿಕಾರಿಯವರು ಹೈದ್ರಾಬದ ಉಸ್ಮನೀಯಾ ಆಸ್ಪತ್ರೆಗೆ ಕಳುಹಿಸಿದ್ದು ಉಸ್ಮಾನೀಯಾ ಆಸ್ಪತ್ರೆಗೆ ದಿನಾಂಕ 20/5/2020 ರಂದು 1400 ಗಂಟೆಗೆ ತಂದು ಸೇರಿಕ ಮಾಡಿದ್ದು 1410 ಗಂಟೆಗೆ ವೈದ್ಯರು ಕೃಷ್ಣಾ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.