ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-03-2020

 

ಬಗದಲ ಪೊಲೀಸ ಠಾಣೆ ಅಪರಾಧ ಸಂ. 25/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 21-03-2020 ರಂದು  ಔರಾದ (ಎಸ್) ಹನುಮಾನ ಗುಡಿ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಮೆಹಬೂಬ ಪಿ.ಎಸ್.ಐ [ಅ.ವಿ] ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಔರಾದ (ಎಸ್) ಗ್ರಾಮಕ್ಕೆ ಹೋಗಿ ಹನುಮಾನ ಮಂದಿರ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನೋಡಲು ಅಲ್ಲಿ ಔರಾದ (ಎಸ್) ಗ್ರಾಮದ ಹನುಮಾನ ಗುಡಿ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಆರೋಪಿತರಾದ 1) ಆನಂದ ತಂದೆ ವೈಜಿನಾಥ ಗುಪ್ತ ವಯ: 26  ವರ್ಷ, ಜಾತಿ: ಎಸ್.ಸಿ ಹೊಲೀಯಾ, 2) ಮಹೆಪಾಲರಡ್ಡಿ ತಂದೆ ಸಂಜುರೆಡ್ಡಿ ಚಿನ್ನರೆಡ್ಡಿ ಚಿನ್ನಾರಡ್ಡಿ ವಯ: 30 ವರ್ಷ, ಜಾತಿ: ರಡ್ಡಿ, 3) ತಾಹೇರ ತಂದೆ ಕಾಲೆಸಾಬ ಕಲರ ವಯ: 27 ವರ್ಷ, ಜಾತಿ: ಮುಸ್ಲಿಂ, 4) ತಿಪ್ಪಣ್ಣಾ ತಂದೆ ಹಣಮಂತಪ್ಪಾ ನಿರ್ಣಾ ವಯ: 37 ವರ್ಷ, ಜಾತಿ: ಎಸ್.ಟಿ ಗೊಂಡ, 5) ಅರ್ಜುನ ತಂದೆ ಶಂಕರ ತೂಕ್ಕನೋರ ವಯ: 44 ವರ್ಷ, ಜಾತಿ: ಎಸ್.ಸಿ ಹೊಲಿಯಾ, 6) ಮಾಣಿಕ ತಂದೆ ಮರೆಪ್ಪಾ ಕಲಮೂಡೆ ವಯ: 60 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಆರು ಜನ ಸಾ: ಔರಾದ (ಎಸ್), 7) ಮಹ್ಮದ ನಯುಮ್ ತಂದೆ ಜಮಾಲಸಾಬ ಪಟೇಲವಾಲೆ ವಯ: 21 ವರ್ಷ, ಜಾತಿ: ಮುಸ್ಲಿಂ, ಸಾ: ಭೈರನಳ್ಳಿ, 8) ಬಸವರಾಜ ತಂದೆ ನರಸಪ್ಪಾ ಕುದ್ರೆ ವಯ: 40 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮೈಲೂರ ಬೀದರ ಹಾಗೂ 9) ದೇವಿಂದ್ರ ತಂದೆ ಕಲ್ಲಪ್ಪಾ ವರ್ಮಾ ವಯ: 48 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಸಿಕೆಂದ್ರಪುರ ಇವರೆಲ್ಲರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಟುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ಎಲ್ಲರು ಸೇರಿ ಏಕ ಕಾಲಕ್ಕೆ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಒಟ್ಟು ನಗದು ಹಣ 4200/- ರೂ. ಮತ್ತು 52 ಇಸ್ಪೀಟ ಎಲೆಗಳನ್ನು ತಮ್ಮ ತಾಬೇಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 39/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 21-03-2020 ರಂದು ಬಸವಕಲ್ಯಾಣ ನಗರದ ಹರಳಯ್ಯಾ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುನೀಲ್ ಕುಮಾರ ಪಿ.ಎಸ.ಐ [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಕರೆ ಮುಖಾಂತರ ಖಚಿತ ಬಾತ್ಮಿ ತಿಳಿದು ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಹರಳಯ್ಯಾ ಚೌಕ್ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಹರಳಯ್ಯಾ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಇಮ್ರಾನ್ ತಂದೆ ಶೇರಖಾನ್ ಪಠಾಣ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಗಾಡವಾನ ಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದಾಗ ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 5,270/- ರೂ., ಮತ್ತು 01 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ಮತ್ತು ಇನ್ನೊಬ್ಬ ವ್ಯಕ್ತಿಗೆ ಹೆಸರು ವಿಚಾರಿಸಲು ಅವನು ತನ್ನ ಹೆಸರು ಜಾಕಿರ ತಂದೆ ಉಮರಸಾಬ ರಾಜೋಳೆ ವಯ: 21 ವರ್ಷ, ಜಾತಿ: ಮುಸ್ಲಿಂ, ಸಾ: ಕಾಳಿ ಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದಾಗ ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 3100/- ರೂ., ಮತ್ತು 01 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ, ಹೀಗೆ ಒಟ್ಟು ನಗದು ಹಣ 8,370/- ರೂ . ಮತ್ತು 02 ಮಟಕಾ ಚೀಟಿಗಳು ಮತ್ತು ಎರಡು ಬಾಲ್ ಪೆನ್ ನೇದ್ದವುಗಳು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.