ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-11-2019

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 193/2019, ಕಲಂ. 380, 457 ಐಪಿಸಿ :-

ದಿನಾಂಕ 19-11-2019 ರಂದು 0145 ಗಂಟೆಯಿಂದ 0430 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಪಿüರ್ಯಾದಿ ಸಂಜೀವನರಾವ ತಂದೆ ನರಸಿಂಗರಾವ ಕುಲಕರ್ಣಿ ವಯ: 70 ವರ್ಷ,  ಸಾ: ರಾಮಪುರೆ ಕಾಲೋನಿ ಬೀದರ ರವರ ಮನೆಯಲ್ಲಿ ಪ್ರವೇಶ ಮಾಡಿ ಅಲಮಾರಾದಲ್ಲಿದ್ದ 1) ನಗದು ಹಣ 10,000/- ರೂ., 2) 2 ಬಂಗಾರದ ರಿಂಗಗಳು ಒಟ್ಟು 9 ಗ್ರಾಂ ಅ.ಕಿ 36,000/- ರೂ., 3) 4 ತೊಲೆ ಬಂಗಾರದ ಚೈನ್ ಸರ ಅ.ಕಿ 1,52,000/- ರೂ., 4) 1 ರೆಡ್ ಮಿ ಮೋಬೈಲ್ ಹಾಗೂ 2 ಸಾಮಸಾಂಗ ಮೋಬೈಲಗಳು ಅ.ಕಿ 8000/- ರೂ. ಹೀಗೆ ಒಟ್ಟು 2,06,000/- ರೂ ಬೆಲೆ ಬಾಳುವ ನಗದು ಹಣ ಮತ್ತು ಬಂಗಾರದ ಆಭರಣಗಳು ಹಾಗೂ ಮೋಬೈಲಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2019, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 19-11-2019 ರಂದು ಪಿüರ್ಯಾದಿ ರೂಪಾ ಗಂಡ ಭೀಮಶ್ಯಾ @ ಭೀಮಣ್ಣಾ ಭಂಗೂರೆ ವಯ: 38 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಪಾತರಪಳ್ಳಿ ರವರ ಗಂಡನಾದ ಭೀಮಶ್ಯಾ@ ಭೀಮಣ್ಣಾ ತಂದೆ ಬಸಗೊಂಡ ವಯ: 40 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಪಾತರಪಳ್ಳಿ ರವರು ಸಾಲದ ಬಾಧೆ ತಾಳಲಾರದೇ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಸದರಿ ಸಾವಿನಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲ, ತನ್ನ ಗಂಡ ಸಾಲ ಬಾಧೆಯಿಂದ ಬೇಸತ್ತು ಮೃತಪಟ್ಟಿದ್ದು ರೈತ ಆತ್ಮಹತ್ಯೆಯಲ್ಲಿ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ ಅಂತ ಕೊಟ್ಟ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 162/2019, ಕಲಂ. 454, 457, 380 ಐಪಿಸಿ :-

ದಿನಾಂಕ 18-11-2019 ರಂದು 1730 ಗಂಟೆಯಿಂದ ದಿನಾಂಕ 19-11-2019 ರಂದು 0945 ಗಂಟೆಯ ಅವಧಿಯಲ್ಲಿ ಪ್ರತಾಪನಗರ ನೌಬಾದದಲ್ಲಿಯ ರೈತ ಸಂಪರ್ಕ ಕೇಂದ್ರ ಬೀದರ (ಉ) ದಲ್ಲಿ ಕಛೆರಿಯ ಬೀಗ ಮುರಿದು ಕಛೇರಿಯಲ್ಲಿದ್ದ ಸರಕಾರಿ ಸಾಮಾನುಗಳಾದ 1) ಒಂದು ಸ್ಯಾಮಸಂಗ ಮೊಬೈಲ ಅ.ಕಿ. 7000/- ರೂ., 2) ಒಂದು ಜೆನ ಮೊಬೈಲ ಅ.ಕಿ. 7000/- ರೂ., 3) ಎರಡು ಕಂಪ್ಯೂಟರಿನ ಥಿನ ಕ್ಲೈಂಟ (ಸಿಪಿಯು) ಅ.ಕಿ. 30,000/- ರೂ., 4) ಎರಡು ಪಾಮ ಟ್ಯಾಬ ಅ.ಕಿ 40,000/- ರೂ., 5) ಎರಡು ಸೊನಿ ಡಿಜಿಟಲ ಕ್ಯಾಮರಾಗಳು ಅ.ಕಿ. 10,000/- ರೂ., 6) ಒಂದು ಸಿಸಿ ಕ್ಯಾಮರಾ ಹಾಗು ಅದರ ಇತರೆ ಉಪಕರಣಗಳು ಅ.ಕಿ. 10,000/-ಹೀಗೆ ಒಟ್ಟು ಒಂದು ಲಕ್ಷ ನಾಲ್ಕು ಸಾವಿರ ರೂಪಾಯಿಯ ಸಾಮಾನುಗಳನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 91/2019, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 19-11-2019 ರಂದು ಜೋಗೆವಾಗಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ನಸಿಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಸಲಿಂಗಪ್ಪಾ ಪಿ.ಎಸ್.ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜೋಗೆವಾಡಿ ಗ್ರಾಮದ ಹನುಮಾನ ಮಂದಿರ ಕಡೆಗೆ ಹೋಗಿ ರೋಡಿನ ಪಕ್ಕದಲ್ಲಿರುವ ಅಂಗಡಿಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಹನುಮಾನ ಮಂದಿರ ಹತ್ತಿರ ಸಾರ್ವಜನಿಕರ ರೋಡಿನ ಮೇಲೆ ಆರೋಪಿತರಾದ 1) ಕಿರಣ @ ಕೀಶನ ತಂದೆ ಬಳಿರಾಮ ಜೋಗೆ ವಯ: 33 ವರ್ಷ, ಜಾತಿ: ಟೊಕರಿ ಕೋಳಿ, ಸಾ: ಜೋಗೆವಾಡಿ, 2) ಗೋವಿಂದ ತಂದೆ ಸುಗ್ರಿವ್ ಬಕ್ಕೆ ವಯ: 38 ವರ್ಷ, ಜಾತಿ: ಟೊಕರಿ ಕೋಳಿ, ಸಾ: ಮದರವಾಡಿ ಇವರಿಬ್ಬರು ಸಾರ್ವಜನಿಕರಿಗೆ ಮಟಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆಯಿಸಿರಿ ಒಂದು ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತ ಕೂಗುತ್ತಾ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವದನ್ನು ಸ್ವಲ್ಪ ದೂರದಿಂದ ಗಮನಿಸಿ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದಾಗ ಮಟಕಾ ಬರೆಯಿಸುತ್ತಿದ್ದ ಜನರು ಓಡಿ ಹೋಗಿದ್ದು, ನಂತರ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತರಿಗೆ ವಿಚಾರಿಸಲು ಅವರು ತಿಳಿಸಿದ್ದೆನೆಂದರೆ ನಾವಿಬ್ಬರೂ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇವೆಂದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ನಸಿಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದೇವೆಂದು ತಿಳಿಸಿದರು, ನಂತರ ಪಂಚರ ಸಮಕ್ಷಮ ಸದರಿ ಆರೋಪಿತರಿಂದ 2200/- ರೂ. ನಗದು ಹಣ, 2 ಮಟಕಾ ಚೀಟಿ ಹಾಗೂ 4 ಬಾಲ್ ಪೆನಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.