ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 20-10-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 157/2020 ಕಲಂ 379 ಐಪಿಸಿ :-

ದಿನಾಂಕ 19/10/2020 ರಂದು 2100 ಗಂಟೆಗೆ ಫಿರ್ಯಾದಿ ಶ್ರೀ ಗುಂಡರೆಡ್ಡಿ ಗಂಡ ಭೀಮರೆಡ್ಡಿ ರೆಡ್ಡಿ ವಯ- 41 ವರ್ಷ ಜಾ/ ರೆಡ್ಡಿ ಉ-ವಕಿಲರು ಸಾ. ಕರೋಡಿಮಲ ಲೇಔಟ ಮನ್ನಹಳ್ಳಿ ರಸ್ತೆ ಬೀದರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಯು ಸದ್ಯ ವಾಸವಿದ್ದ ಬಡಾವಣೆಯ ಪಕ್ಕದಲ್ಲಿ ಫಿರ್ಯಾದಿ ಹೊಸದಾಗಿ ಮನೆ ಕಟ್ಟುತ್ತಿದ್ದು ಮನೆ ಕಟ್ಟುತ್ತಿರುವ ಪ್ಲಾಟ ಸಂ, 42 ನಗರ ಸಭೆ ಸಂ, 17/5/301-136 ಇರುತ್ತದೆ . ಹಿಗಿರುವಲ್ಲಿ ದಿನಾಂಕ 18/10/2020  ಮತ್ತು 19/10/2020 ರಂದು ರಾತ್ರಿ ಸಮಯದಲ್ಲಿ ಯಾರೊ ಕಳ್ಳರು ತಮ್ಮ ಬಾವಿಯ ಯಲ್ಲಿನ  ನೀರು ಎಳೆಯುವ ಮೋಟಾರ  ಮತ್ತು ಕೇಬಲ ವೈರು ಕಳುವು  ಮಾಡಿಕೊಂಡು ಹೊಗಿರುತ್ತಾರೆ. ಸದರಿ ಮೋಟಾರ ಹಾಗು ಕೇಬಲ ವೈರ ಅಂ, ಕಿ, 11000=00 ರೂಪಾಯಿ ಇರುತ್ತದೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 87/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ: 19/10/2020 ರಂದು 16:30 ಗಂಟೆಗೆ ಪಿಎಸ್.ಐ. ರವರು ಠಾಣೆಯಲ್ಲಿದ್ದಾಗ ಮುಚಳಂಬ ಗ್ರಾಮದ ಭವಾನಿ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣವನ್ನು ಪಡೆದುಕೊಂಡು 1 ರೂ ಗೆ 80 ರೂಪಾಯಿ ಕೊಡುತ್ತೇನೆ. ಅಂತಾ ಜನರಿಗೆ ಮಟಕಾ ನಂಬರ ಚೀಟಿ ಬರೆದು ಕೊಡುತಿದ್ದಾನೆ, ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ದಾಳಿ ಮಾಡಿ ಹಿಡಿದು   ವಿಚಾರಿಸಲು ತನ್ನ ಹೆಸರು ಸಂಜುಕುಮಾರ ತಂದೆ ಕಾಶೀನಾಥ ಗೊಡಬೋಲೆ ವಯ;47 ವರ್ಷ ಜಾತಿ:ಎಸ,ಸಿ ಹೊಲಿಯಾ ಉ; ಕೂಲಿಕೆಲಸ ಸಾ; ಭೀಮ ನಗರ ಮುಚಳಂಬ ಅಂತಾ ತಿಳಸಿದನು ಸದರಿಯವನ ಅಂಗ ಜಡ್ತ ಮಾಡಲು ಇತನ ಹತ್ತಿರ 1) ನಗದು ಹಣ 2620/-2) ನಾಲ್ಕು ಮಟಕಾ ನಂಬರ ಬರೆದ ಚೀಟಿಗಳು 3) ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹಳ್ಳಿಖೇಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 128/2020 ಕಲಂ 292, 505(2)

ದಿನಾಂಕ: 19/10/2020 ರಂದು ರಾತ್ರಿ 2130 ಗಂಟೆ ಸುಮಾರಿಗೆ ಫಿರ್ಯಾದಿ ಮಧುಕರ ತಂದೆ ಲಕ್ಷ್ಮಣ ತೋಗರೆ ಸಾ: ಹಿಲಾಲಪೂರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸದರ  ಸಾರಾಂಶವೆನೆಂದ್ದರೆ,  . ಹಳ್ಳಿಖೇಡ(ಬಿ) ಪಟ್ಟಣದ ಮಲ್ಲಿಕಾರ್ಜುನ ಪ್ರಭಾ ರವರು ನನ್ನ ಗೆಳೆಯ ಇರುತ್ತಾರೆ. ಹಳ್ಳಿಖೇಡ(ಬಿ) ಪಟ್ಟಣದ ಎಮ್.ಡಿ ಸಿದ್ದಿಕ್ ತಂದೆ ಎಮ್.ಡಿ ಇಬ್ರಾಹಿಂ ಮಹೇಸುಲ್ದಾರ ರವರು ಮತ್ತು ಫಿರ್ಯಾದಿಯು ಇಬ್ಬರು ಪೇಸಬುಕ್ ಪ್ರೇಂಡ್ ಆಗಿದ್ದು  ಹೀಗಿರುವಾಗ ದಿನಾಂಕ: 18/10/2020 ರಂದು ಸಾಯಂಕಾಲ 0600 ಗಂಟೆ ಸುಮಾರಿಗೆ ನಾನು ನನ್ನ ಮೊಬಾಯಿಲನಲ್ಲಿ ನನ್ನ ಪೇಸಬುಕ್ ಅಕೌಂಟ ಓಪನ ಮಾಡಿ ನೋಡಿದಾಗ ನನ್ನ ಪೇಸಬುಕ್ ಅಕೌಂಟ ಪ್ರೇಂಡ್ ಆದ Siddiq Mahesuldar ರವರು ದಿನಾಂಕ: 11/06/2020 ರಂದು ಎಮ್.ಡಿ ಸಿದ್ದಿಕ್ ತಂದೆ ಎಮ್.ಡಿ ಇಬ್ರಾಹಿಂ ಮಹೇಸುಲ್ದಾರ ರವರು ತನ್ನ ಪೇಸಬುಕ ಅಕೌಂಟನಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಪ್ರಧಾನ ಮಂತ್ರಿಗಳು ಭಾರತ ಸರಕಾರ ರವರ ಪೋಟೋ ಯಾವುದೊ ಒಂದು ಹೆಣ್ಣು ಮಗಳ ಜೊತೆ ನಗ್ನ ರೀತಿಯಲ್ಲಿ ಅಶ್ಲೀಲವಾಗಿ ಕಾಮ ಪ್ರಚೋದಕ ರೀತಿಯಲ್ಲಿ ಹೆಣ್ಣು ಮಗಳ ಮೇಲೆ ಮಲಗಿದ ಪೋಟೋ ಪೋಸ್ಟ ಮಾಡಿದ್ದು, ಫಿರ್ಯಾದಿಯು ಪೇಸಬುಕ್ ಪ್ರೇಂಡ ಇದ್ದುದ್ದರಿಂದ  ದಿನಾಂಕ: 18/10/2020 ರಂದು ಸಾಯಂಕಾಲ 0600 ಗಂಟೆ ಸುಮಾರಿಗೆ ನಾನು ನನ್ನ ಮೊಬಾಯಿಲನಲ್ಲಿ Siddiq Mahesuldar ಪೇಸಬುಕ್ ಅಕೌಂಟನಲ್ಲಿ ಪೋಸ್ಟ ಮಾಡಿದ ಪೋಟೋ ನೋಡಿರುತ್ತೇನೆ. ನಂತರ   ದಿನಾಂಕ: 19/10/2020 ರಂದು ಹಳ್ಳಿಖೇಡ(ಬಿ) ಪಟ್ಟಣಕ್ಕೆ ಬಂದಾಗ ಹಳ್ಳಿಖೇಡ(ಬಿ) ಪಟ್ಟಣದಲ್ಲಿ   ಗೆಳೆಯರಾದ ಮಲ್ಲಿಕಾರ್ಜುನ ಪ್ರಭಾ ರವರು ನನಗೆ ಭೇಟಿಯಾದಾಗ ನಾನು ನನ್ನ ಮೊಬಾಯಿಲ್ ಪೇಸಬುಕನಲ್ಲಿದ್ದ ಎಮ್.ಡಿ ಸಿದ್ದಿಕ್ ರವರು ತನ್ನ ಪೇಸಬುಕ್ ಅಕೌಂಟಾದ Siddiq Mahesuldar ಎಂಬ ಅಕೌಂಟನಿಂದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ರವರ ಪೋಟೋವನ್ನು ಯಾವುದೊ ಒಬ್ಬ ಹೆಣ್ಣು ಮಗಳ ಜೊತೆ ನಗ್ನ ರೀತಿಯಲ್ಲಿ ಮಲಗಿರುವ ಪೋಟೊವನ್ನು ಪೋಸ್ಟ್ ಮಾಡಿ ಮತ್ತು ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಪ್ಲೇಟಿನಲ್ಲಿ ಯಾವುದೊ ಸಗಣಿಯಂತಿರುವ ಪದಾರ್ಥ ತಿನ್ನುವ ರೀತಿಯಲ್ಲಿ ತನ್ನ ಪೇಸಬುಕ್ ಸ್ಟೋರಿಯಲ್ಲಿ ಪೋಟೋಗಳನ್ನು ಪೋಸ್ಟ್ ಮಾಡಿ ಸಾರ್ವಜನಿಕರ ಯಾವುದೆ ವರ್ಗಕ್ಕೆ ಅಪಾಯ ಅಥವಾ ಬೀತಿಯನ್ನು ಹುಟ್ಟಿಸಿ ಆ ಮೂಲಕ ಯಾವುದೆ ವ್ಯಕ್ತಿಯು ಸರಕಾರದ ವಿರುದ್ದ ಅಥವಾ ಸಾರ್ವಜನಿಕ ನೆಮ್ಮದಿಯ ವಿರುದ್ದ ಕೇಡಿಗೆ ಕಾರಣವಾಗುವ ರೀತಿಯಲ್ಲಿ ತನ್ನ ಪೇಸಬುಕ್ ಸ್ಟೋರಿಯಲ್ಲಿ ಪೋಟೋಗಳನ್ನು ಪೋಸ್ಟ್ ಮಾಡಿ ಬಿಟ್ಟಿದ್ದನ್ನು ನಾನು ತೋರಿಸಿರುತ್ತೇನೆ. ನಂತರ ನಾನು ಈ ಬಗ್ಗೆ ಇವರ ಜೊತೆ ವಿಚಾರಣೆ ಮಾಡಿಕೊಂಡು ಇಂದು ಠಾಣೆಗೆ ಬಂದು ಈ ನನ್ನ ಫಿರ್ಯಾದು ನೀಡಲು ತಡವಾಗಿರುತ್ತದೆ. ಈ ಬಗ್ಗೆ ಎಮ್.ಡಿ ಸಿದ್ದಿಕ್ ತಂದೆ ಎಮ್.ಡಿ ಇಬ್ರಾಹಿಂ ಮಹೆಸುಲ್ದಾರ ಇವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 142/2020 ಕಲಂ 457, 380 ಐಪಿಸಿ :-

ದಿನಾಂಕ 19/10/2020 ರಂದು 1900 ಗಂಟೆಗೆ ಫಿಯರ್ಾದಿ ಶ್ರೀ ರಾಜಕುಮಾರ ತಂದೆ ಬಸವಣಪ್ಪಾ ಮುಲಗೆ, ವಯ 25 ವರ್ಷ, ಜಾ. ಲಿಂಗಾಯತ, ಉ. ಒಕ್ಕಲುತನ, ಸಾ. ಲಿಂಗದಳ್ಳಿ ತಾ. ಬಸವಕಲ್ಯಾಣ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಯ ಅಣ್ಣ ನಾಗೇಶ ಇವನು ಹುಮನಾಬಾದ ಪಟ್ಟಣದ ಭೀಮರಾವ ಪಾಟೀಲ ಇವರ ಅಭಿಷೇಕ ಬಾರದಲ್ಲಿ 12 ವರ್ಷಗಳಿಂದ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 18/10/2020 ರಂದು ನಮ್ಮ ಅಣ್ಣ ಅವನ ಮಗನಿಗೆ ಅನಾರೋಗ್ಯ ಇರುವುದರಿಂದ ಆಸ್ಪತ್ರೆಗೆ ಹೋಗುವದು ಇರುವದರಿಂದ ದಿನಾಂಕ 18/10/2020 ರಂದು  ಅಭಿಷೇಕ ಬಾರದಲ್ಲಿ ಫಿರ್ಯಾದಿ ಅಣ್ಣನ ಜಾಗಕ್ಕೆ ಒಂದು ದಿವಸ ಕೆಲಸ ಮಾಡಲು ಹೋಗಿದ್ದು ಇವರ ಜೊತೆ 1] ಸಚೀನ ಸೈಡ ಮ್ಯಾನೇಜರ, 2] ಅಮುಲ, 3] ಸಂದೀಪ, 4] ಆಕಾಶ, 5] ಸಮೀರ, 6] ಮೂಟು ಮತ್ತು 7] ಕಮಂಡೋ ಅಂತಾ ಕೆಲಸ ಮಾಡಿಕೊಂಡಿದ್ದು ದಿನಾಲು ಬಾರ ಮುಂಜಾನೆ 10.00 ಗಂಟೆಗೆ ತೆರೆದು ರಾತ್ರಿ 10.30 ಗಂಟೆಗೆ ಬಂದ್ ಮಾಡುತ್ತಿದ್ದು  ದಿನಾಂಕ 18/10/2020 ರಂದು ಮುಂಜಾನೆ 10.00 ಗಂಟೆಗೆ ಫೀರ್ಯಾದಿಯು ಬಾರ ತೆಗೆದು ವ್ಯಾಪಾರ ಮಾಡಿ ಗಲ್ಲದಲ್ಲಿ 97,000/- ರೂಪಾಯಿ ಇದ್ದು   ರಾತ್ರಿ 11.35 ಗಂಟೆಗೆ ಬಾರ ಬಂದ್ ಮಾಡಿ  ಫೀರ್ಯಾದಿ  ಹಾಗು ಜೊತೆ ಸಚೀನ, ಅಮುಲ, ಮತ್ತು ಸಮೀರ ನಾವು 4 ಜನ ಕೌಂಟರ ಬಿಟ್ಟು ಸ್ವಲ್ಪ ದೂರದಲ್ಲಿ ಇದ್ದ ಒಂದು ಎ.ಸಿ ರೋಮಿನಲ್ಲಿ ಮಲಗಿಕೊಂಡಿದಾಗ ರಾತ್ರಿವೇಳೆಯಲ್ಲಿ ಯಾರೋ ಅಪರಿಚಿತರು ಬಾರದ ಶೇಟರ ರಾಡದಿಂದ ಎತ್ತಿ ಒಳಗೆ ಪ್ರವೇಶ ಮಾಡಿ ಫಿರ್ಯಾದಿ ಅಣ್ಣ ನಾಗೇಶ ಇವನು 5 ದಿನ ಒಟ್ಟು ಕಲೇಕ್ಷನ 683000/- ರೂಪಾಯಿ  ಕೌಂಟರದ ಕೇಳಗಡೆ ಡ್ರಾದಲ್ಲಿ ಇಟ್ಟಿದ್ದು ಅದಕ್ಕೆ ಯಾವದೇ ಕೀಲಿ ವಗೈರೆ ಹಾಕಿದ್ದು ಇರುವುದಿಲ್ಲ ಮತ್ತು ಫಿರ್ಯಾದಿ ವ್ಯಾಪಾರ ಮಾಡಿ ಇಟ್ಟ 97,000/- ರೂಪಾಯಿ ಡ್ರಾಕ್ಕೆ ಕೊಡ ಕೀಲಿ ಹಾಕಿರುವುದಿಲ್ಲ.  ಬಾರ ಪರಿಶೀಲಿಸಿ ನೋಡಲು ಬಾರದ ಕೌಂಟರದಲ್ಲಿ ಇದ್ದ ಒಟ್ಟು 7 ಲಕ್ಷ 80 ಸಾವಿರ ರೂಪಾಯಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 208/2020 ಕಲಂ 457, 380 ಐಪಿಸಿ :-

ದಿನಾಂಕ 19/10/2020 ರಂದು 10:30 ಗಂಟೆಗೆ ದೂರುದಾರ ಲಕ್ಷ್ಮಿಕಾಂತ ತಂದೆ ಶಿವರಾಜ ವೈರಾಗೆ ಸಾ:ಖಂಡ್ರೆ ಗಲ್ಲಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಸಾರಾಂಶವೆನೆಂದರೆ ಭಾಲ್ಕಿಯ ಅಂಬೇಡ್ಕರ ಚೌಕ ಹತ್ತಿರ ಫೀರ್ಯಾದಿಯ ಒಂದು ಅಂಗಡಿ ಇದ್ದು ಅದರಲ್ಲಿ ದಿನಾಲು ತಾನು, ತನ್ನ ತಂದೆ, ತಮ್ಮ ಶಶಿಕಾಂತ ಹಾಗೂ ನೌಕರಿ ಮನುಷ್ಯ ಸಾಯಿನಾಥ ತಂದೆ ಸಂತೋಷ ಸಾ:ಭಿಮ ನಗರ ಭಾಲ್ಕಿ ಕೂಡಿ ಕೆಲಸ ಮಾಡುತ್ತಿದ್ದು ಅದರಂತೆ ದಿನಾಂಕ 18/10/2020 ರಂದು 21:30 ಗಂಟೆಗೆ ಅಂಗಡಿಯನ್ನು ಬಂದ್ ಮಾಡಿ ಮನೆಗೆ ಹೋಗಿದ್ದು ದಿನಾಂಕ 19/10/2020 ರಂದು 0800 ಗಂಟೆಗೆ ಯಥಾ ಪ್ರಕಾರ ಅಂಗಡಿಗೆ ಬಂದು ಶೇಟರ ತೆಗೆಯಲು ಹೋದಾಗ ಅಂಗಡಿಯ ಎರಡು ಕೀಲಿ ಮುರಿದಿದ್ದು ಶೇಟರ ಸ್ವಲ್ಪ ಮೇಲೆ ಎತ್ತಿದ್ದು ಕಂಡು ಬಂದಿದ್ದು ಒಳಗೆ ಹೋಗಿ ನೋಡಲು ಗಿರಾಕಿ ಮಾಡಿ ಕೌಂಟರನಲ್ಲಿ ಇಟ್ಟು ಹೊದ 20000 ರೂಪಾಯಿ ಇರಲಿಲ್ಲಾ ನಂತರ ಅಂಗಡಿಯಲ್ಲಿ ಕೂಡಿಸಿದ ಸಿಸಿ ಕ್ಯಾಮರಾ ಪರೀಶೀಲಿಸಿ ನೋಡಲು ರಾತ್ರಿ 2:30 ಗಂಟೆಗೆ ಯಾರೋ ಅಪರಿಚಿತ ಕಳ್ಳ ಕಳವು ಮಾಡುವ ದೃಶಾವಳಿ ಸೇರೆಯಾಗಿದ್ದು ಇರುತ್ತವೆ ದಿನಾಂಕ 18/10/2020 ರಂದು ರಾತ್ರಿ   ಯಾರೋ ಅಪರಿಚಿತ ಕಳ್ಳರು   ಮೇಡಿಕಲ್ಲ ಅಂಗಡಿಯ ಶಟರ ಕಿಲಿ ಮುರಿದು ಒಳಗೆ ಪ್ರವೇಶ ಮಾಡಿ ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.