ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-09-2019

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 142/2019, ಕಲಂ. 279, 304(ಎ) ಐಪಿಸಿ ಜೋತೆ 187 ಐ.ಎಮ್.ವಿ ಕಾಯ್ದೆ :-
ದಿನಾಂಕ 19-09-2019 ರಂದು ವೈಜಿನಾಥ ತಂದೆ ನಾಗಪ್ಪಾ ಜನವಾಡೆ ಸಾ: ಕಟ್ಟಿತುಗಾಂವ ರವರ ಮಗನಾದ ಸತೀಷ ಈತನು ತನಗೆ ಆರಾಮ ಇಲ್ಲ ಕಾರಣ ತಾನು ಬ್ಯಾಲಹಳ್ಳಿ(ಕೆ) ಗ್ರಾಮಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತೆನೆ ಅಂತ ಮನೆಯಲ್ಲಿ ತಿಳಿಸಿ ಹೋಗುವಾಗ ಕಾರಾಂಜಾ ಡ್ಯಾಮ ಗೇಟ ಎದುರುಗಡೆ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ರೋಡಿನ ಮೇಲೆ ನಿಸ್ಕಾಳಜಿಯಿಂದ ವೇಗವಾಗಿ ಚಾಲನೆ ಮಾಡಿ ಸತೀಷಗೆ ಡಿಕ್ಕಿ ಮಾಡಿ ಭಾರಿಗಾಯಗಳು ಪಡಿಸಿ ತನ್ನ ವಾಹನದೊಂದಿಗೆ ಹೋಗಿರುತ್ತಾನೆ, ಈ ಘಟನೆಯಿಂದ ಮಗನ ಮೈಯೆಲ್ಲಾ ಚಿಂದಿಯಾಗಿ ಮೌಂಸಖಂಡಗಳು ಹೊರಬಂದು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 102/2019, ಕಲಂ. 379 ಐಪಿಸಿ ಮತ್ತು 4 (1), (21) ಎಮ್.ಎಮ್.ಆರ್.ಡಿ ಕಾಯ್ದೆ :-
ದಿನಾಂಕ 19-09-2019 ರಂದು ಹುಮನಾಬಾದ ಮಾರ್ಗವಾಗಿ ಚಿಟಗುಪ್ಪಾ ಕಡೆಗೆ ಒಂದು ಟಿಪ್ಪರ ಲಾರಿಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಿಸುತ್ತಿರುವ ಬಗ್ಗೆ ಸುರೇಶ ಭಾವಿಮನಿ ಪಿ.ಎಸ್.ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟಗುಪ್ಪಾ-ಹುಡಗಿ ರೋಡ ಚಿಟಗುಪ್ಪಾದ ರೆಡ್ಡಿ ಧಾಬಾ ಹತ್ತಿರ ರೋಡಿನ ಮೇಲೆ ಮರೆಯಾಗಿ ನಿಂತು ನೋಡಲು ಹುಡುಗಿ ಕಡೆಯಿಂದ ಬರುತ್ತಿದ್ದ ಟಿಪ್ಪರನ್ನು ನೋಡಿ ದಾಳಿ ಮಾಡಿ ತಡೆದು ನಿಲ್ಲಿಸಿ ಪರಿಶೀಲಿಸಿ ನೋಡಲು ಅದರ ನಂ. ಕೆಎ-32/ಬಿ-6588 ಇದ್ದು ಅದರಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಿಸುತ್ತಿರುವುದು ಕಂಡು ಬಂದಿದ್ದು, ವಾಹನ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಗೌತಮಬುದ್ಧ ತಂದೆ ಧೂಳಪ್ಪಾ ಸಿಡಲ, ವಯ: 33 ವರ್ಷ, ಜಾತಿ: ಎಸ್.ಸಿ, ಸಾ: ಹೊಳಕುಂದಾ, ತಾ: ಕಮಲಾಪೂರ ಅಂತಾ ತಿಳಿಸಿದ್ದು, ಸದರಿ ಮರಳು ಸಾಗಾಣಿಕೆ ಮಾಡುವ ಬಗ್ಗೆ ಕಾಗದ ಪತ್ರಗಳನ್ನು ವಿಚಾರಿಸಲಾಗಿ ಯಾವುದೇ ಕಾಗದ ಪತ್ರ ಹಾಜರು ಪಡಿಸಿರುವುದಿಲ್ಲ, ಸದರಿ ಟಿಪ್ಪರದಲ್ಲಿ ಮರಳು ಮಾರಾಟ ಮಾಡಲು ಮಾಲಿಕರಾದ ಇರ್ಶಾದ ಪಟೇಲ ಸಾ: ಕಲಬುರ್ಗಿ ರವರು ಟಿಪ್ಪರದಲ್ಲಿ ಮರಳು ತುಂಬಿಕೊಂಡು ಮಾರಾಟ ಮಾಡಲು ತಿಳಿಸಿದ್ದರಿಂದ ನಾನು ಸದರಿ ಟಿಪ್ಪರದಲ್ಲಿ ಮರಳು ತರುತ್ತಿರುವುದಾಗಿ ತಿಳಿಸಿರುತ್ತಾನೆ, ಸದರಿ ಟಿಪ್ಪರಿನ ಅ.ಕಿ ಮೂರು ಲಕ್ಷ ಹಾಗೂ ಸದರಿ ಟಿಪ್ಪರದಲ್ಲಿರುವ ಮರಳಿನ ಅ.ಕಿ 40,000/- ರೂಪಾಯಿ ಬೆಲೆಬಾಳುವ ಮರಳನ್ನು ಸದರಿ ಟಿಪ್ಪರಿನ ಮಾಲಕ ಮತ್ತು ಚಾಲಕನು ಸರಕಾರದ ಪರವಾನಿಗೆ ಪಡೆಯದೇ ಮತ್ತು ರಾಜ್ಯ ಧನ ಸಂದಾಯ ಮಾಡದೆ ನೈಸರ್ಗಿಕ ಸಂಪತ್ತಾದ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತೆಗೆದುಕೊಂಡು ಹೋಗುವುದು ಗುರುತಾಗಿ ಸದರಿ ಟಿಪ್ಪರ ಚಾಲಕನಿಗೆ ಮತ್ತು ಮರಳು ಸಮೇತ ಟಿಪ್ಪರನ್ನು ಪಿ.ಎಸ್.ಐ ರವರು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಧ ಸಂ. 131/2019, ಕಲಂ. 379 ಐಪಿಸಿ :-
ಫಿರ್ಯಾದಿ ಪವನಪ್ರೀಯ ಗಂಡ ಡೇವಿಡ್ ವಯ: 53 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ನಜರತ್ ಕಾಲೋನಿ ಕರ್ನಾಟಕ ಕಾಲೇಜ ಹತ್ತಿರ ಬೀದರ ರವರು ನೆಹರು ಕ್ರಿಡಾಂಗಣ ಹತ್ತಿರ ಇರುವ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ಪ್ರಾಚಾರ್ಯರರಾಗಿ 8 ವರ್ಷದಿಂದ ಕರ್ತವ್ಯ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 14-09-2019 ರಂದು 1700 ಗಂಟೆಗೆ ತಮ್ಮ ಶಾಲೆಯನ್ನು ಮುಚ್ಚಿ ಹೋಗಿದ್ದು, ನಂತರ ದಿನಾಂಕ 16-09-2019 ರಂದು 0800 ಗಂಟೆಗೆ ಶಾಲೆಯನ್ನು ಪುನಃ ತೆರೆದಾಗ ಶಾಲೆಯ ಆವರಣದಲ್ಲಿ ಹಚ್ಚಿದ 6 ಸಿ.ಸಿ. ಕ್ಯಾಮೆರಾಗಳು ಇದ್ದಿರುವದಿಲ್ಲ, ಸದರಿ ಕ್ಯಾಮೆರಾಗಳನ್ನು ಯಾರೋ ಕಳ್ಳರು ಶಾಲೆಯ ಕಂಪೌಂಡ ಗೋಡೆಯನ್ನು ಜಿಗಿದು ಬಂದು ಕಳವು ಮಾಡಿಕೊಂಡು ಹೋಗಿರಬಹುದು, ಕಳುವಾದ ಕ್ಯಾಮೆಗಳ ಒಟ್ಟು ಅ.ಕಿ 18,000/- ರೂ. ಆಗುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-09-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 165/2019, ಕಲಂ. 457, 380 ಐಪಿಸಿ :-
ದಿನಾಂಕ 19-09-2019 ರಂದು ಫಿರ್ಯಾದಿ ಸೊಲಾ ರಾಜೇಶ ತಂದೆ ತಾತಾರಾವ ವಯ: 31 ವರ್ಷ, ಸಾ: ವಿಶಾಖಾಪಟ್ನಂ ಮರಿಪಾಲಂ, ಸದ್ಯ: ಗಣೇಶ ಹೌಸ್ ಮನೆ ನಂ. 53 ನ್ಯೂ ಆದರ್ಶ ಕಾಲೋನಿ ಬೀದರ ರವರು ತನ್ನ ಹೆಂಡತಿಯೊಂದಿಗೆ ತಮ್ಮ ಮನೆಗೆ ಬೀಗ ಹಾಕಿಕೊಂಡು ತರಕಾರಿ ತರಲು ಹೊರಗಡೆ ಅಂಗಡಿಗೆ ಹೋಗಿ ತರಕಾರಿ ತೆಗೆದುಕೊಂಡು ಮರಳಿ ಮನೆಗೆ ಬಂದು ಮನೆಯ ಬೀಗ ನೋಡಿದಾಗ ಬೀಗ ಮುರಿದು ಬಿದ್ದಿತ್ತು ನಂತರ ಇಬ್ಬರು ಬೇಡ ರೋಮದಲ್ಲಿ ಹೋಗಿ ನೋಡಲು ಚಾರ್ಜ ಹಚ್ಚಿದ 1) ಐ.ಫೋನ್ 6 (ಎಸ) ಅ.ಕಿ. 62,000/- ರೂ., 2) ಓನ್ ಪ್ಲಸ್ ಫೋನ್ ಅ.ಕಿ. 12,000/- ರೂ., ಒಂದು ಬ್ಯಾಗದಲ್ಲಿ ಒಂದು ಡಬ್ಬಿಯಲ್ಲಿ ಇಟ್ಟ ಬಂಗಾರದ ಅಭರಣಗಳಾದ 3) ಕಿವಿಯ ಕಿಂಗ್ 10 ಗ್ರಾಮವುಳ್ಳ ಅ.ಕಿ. 35,000/- ರೂ., 4) ಲೇಡಿಸ್ ಚೈನ್ ಸರ್ 10 ಗ್ರಾಮವುಳ್ಳವದು ಅ.ಕಿ. 35,000/- ರೂ ಹೀಗೆ ಒಟ್ಟು 1,44,000/- ರೂ ಬೆಳೆ ಬಾಳುವ ಬಂಗಾರದ ಸಾಮಾನುಗಳು ಮತ್ತು 2 ಮೋಬೈಲಗಳು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂ. 100/2019, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಜಗದೇವಿ ಗಂಡ ಸಕಾರಾಮ ಗಂಗಾರಾಮ, ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ಮರಪಳ್ಳಿ, ತಾ: ಚಿಂಚೊಳ್ಳಿ, ಜಿಲ್ಲಾ: ಕಲಬುರ್ಗಿ ರವರ ಮಗಳಾದ ಸಪ್ನಾ ತಂದೆ ಸಕಾರಾಮ ಗಂಗಾರಾಮ ವಯ: 19 ವರ್ಷ ಇವಳಿಗೆ ತನ್ನ ತವರು ಮನೆಗೆ ಸುಮಾರು 3 ತಿಂಗಳ ಹಿಂದೆ ಕಳುಹಿಸಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 16-09-2019 ರಂದು ರಾತ್ರಿ 0100 ಗಂಟೆಯ ಸುಮಾರಿಗೆ ಫಿರ್ಯಾದಿಯವರ ತಮ್ಮನಾದ ರಮೇಶ ತಂದೆ ಅರ್ಜುನ ವಾಲಿಕಾರ ಇತನು ಕರೆ ಮಾಡಿ ತಿಳೀಸಿದ್ದೆನೆಂದರೆ ರಾತ್ರಿ ಪ್ರತಿನಿತ್ಯದಂತೆ ಊಟ ಮಾಡಿ ನಾನು ಮತ್ತು ನನ್ನ ಹೆಂಡತಿ ಹಾಗೂ ತಂದೆ ತಾಯಿ ಮಕ್ಕಳೆಲ್ಲರೂ ಮನೆಯಲ್ಲಿ ಮಲಗಿಕೊಂಡಾಗ ದಿನಾಂಕ 16-09-2019 ರಂದು ರಾತ್ರಿ 1100 ಗಂಟೆಯಿಂದ 1200 ಗಂಟೆಯ ಸುಮಾರಿಗೆ ಸಪ್ನಾ ಇಕೆಯು ಮನೆಯಲ್ಲಿ ಎಲ್ಲರು ಮಲಗಿದನ್ನು ನೋಡಿ ಯಾರಿಗೂ ಹೇಳದೆ ಕೆಳದೆ ಮನೆಯಿಂದ ಹೊಗಿರುತ್ತಾಳೆ ಆದರೆ ಇನ್ನೂ ಮನೆಗೆ ಬಂದಿಲ್ಲಾ ನಿಮ್ಮ ಕಡೆ ಬಂದಿದಾಳೆ ಹೇಗೆ ಅಂತಾ ತಿಳಿಸಿದ್ದು, ನಂತರ ಫಿರ್ಯಾದಿಯು ಮುಂಜಾನೆ ತನ್ನ ಗಂಡ ಇಬ್ಬರು ಮದರ್ಗಿ ಗ್ರಾಮಕ್ಕೆ ಬಂದು ವಿಚಾರಿಸಿ ತಿಳಿದುಕೊಳ್ಳಲು ತಿಳಿದುಬಂದಿದ್ದೆನೆಂದರೆ ಮಗಳು ಮನೆಯಲ್ಲಿ ಎಲ್ಲರೂ ಮಲ್ಲಗಿದಾಗ ಯಾರಿಗೂ ಹೇಳದೆ ಮನೆಯಿಂದ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ, ನಂತರ ಫಿರ್ಯಾದಿ ಮತ್ತು ತಮ್ಮ ಹಾಗೂ ಮಗ ರವರೆಲ್ಲರೂ ಕಾಣೆಯಾದ ಮಗಳ ಬಗ್ಗೆ ತಮ್ಮ ಸಂಬಂಧಿಕರಿಗೆ ವಿಚಾರಿಸಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಎಲ್ಲಾ ಹೋಗಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಕಾಣೆಯಾದ ಫಿರ್ಯಾದಿಯವರ ಮಗಳ ಚಹರೆ ಪಟ್ಟಿ 1) ರೇಣುಕಾಬಾಯಿ, 2) ವಯ: 19 ವರ್ಷ, 3) ಎತ್ತರ: 5’ 1’’, 4) ಚಹರೆ ಪಟ್ಟಿ: ಸಾಧರಣ ಮೈಕಟ್ಟು & ಗೊಧಿ ಬಣ್ಣ, 5) ಧರಿಸಿದ ಬಟ್ಟೆಗಳು : ಚಾಕಲೇಟ ಬಣ್ಣದ ಶರ್ಟ & ಶೆಲವರ, 6) ಮಾತನಾಡುವ ಭಾಷೆ : ಕನ್ನಡ, ಹಿಂದಿ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-09-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪುರ ಪೊಲೀಸ್ ಠಾಣೆ ಅಪರಾಧ ಸಂ. 87/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 19-09-2019 ರಂದು ಸಂತಪುರ ಗ್ರಾಮದ ಮಸ್ಕಲ್ ಕ್ರಾಸ ಹತ್ತಿರ ಇರುವ ಶಿವರಾಜ ಜಮಾಲಪುರೆ ರವರ ಟೆಲರ್ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಎರಡು ಜನರು ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದಾರೆ ಅಂತ ಅಲೀಮ್ ಪಿಎಸಐ ಸಂತಪುರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಂತಪುರ ಗ್ರಾಮದ ಗಂಗಾಧರ ಭಾಂಡೆ ರವರ ಅಂಗಡಿ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಆರೋಪಿತರಾದ 1) ಶಿವರಾಜ ತಂದೆ ರಾಮಣ್ಣಾ ಜಮಲಪುರೆ ವಯ: 40 ವರ್ಷ, ಜಾತಿ: ಕೋಳಿ, ಸಾ: ಮಸ್ಕಲ್, 2) ಅಶೋಕ ತಂದೆ ಮೋಹನರಾವ ಬಿರಾದಾರ ವಯ: 56 ವರ್ಷ, ಜಾತಿ: ಮರಾಠಾ, ಸಾ: ನಾಗೂರ(ಬಿ) ಇವರಿಬ್ಬರು 1 ರೂಪಾಯಿಗೆ 80 ರೂ ಅಂತ ಕನ್ನಡ ಭಾಷೆಯಲ್ಲಿ ಕುಗುವಾಗ ಒಮ್ಮೇಲೆ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಇಬ್ಬರಿಗೆ ಹಿಡಿದುಕೊಂಡು ಅವರ ಅಂಗ ಝಡ್ತಿ ಮಾಡಿ ನೋಡಲು ಅವರ ಹತ್ತಿರ 1160/- ರೂ. ನಗದು ಹಣ, 2 ಮಟಕಾ ಚೀಟಿ ಹಾಗು ಎರಡು ಬಾಲ ಪೆನ್ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.