ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 20-04-2020

ಮಾರ್ಕೇಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 24/2020 ಕಲಂ 379 ಐಪಿಸಿ :-

ದಿನಾಂಕ 19-04-2020 ರಂದು 1130 ಗಂಟೆಗೆ ಶ್ರೀ ಶರಣಪ್ಪಾ ತಂದೆ ವೈಜಿನಾಥ ಜೊನ್ನಿಕೇರಿ ಸಾ;ಅಕ್ಕಮಹಾದೇವಿ ಕಾಲೋನಿ ಹಾರೂರಗೇರಿ ಬೀದರ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಇವರು ತಮ್ಮ ಸ್ಪ್ಲೆಂಟರ್ ದ್ವಿಚಕ್ರವಾಹನದ ಮೇಲೆ ದಿನಾಂಕ 09-03-2020 ರಂದು ಸಾಯಂಕಾಲ 1700 ಗಂಟೆಯ ಸುಮಾರಿಗೆ ಬೀದರ ನಗರಸಭೆ ಕಛೇರಿಗೆ ಹೋಗಿ   ದ್ವಿಚಕ್ರವಾಹನವನ್ನು ಕಛೇರಿಯ ಆವರಣದಲ್ಲಿರುವ ವಾಹನಗಳು ನಿಲ್ಲಿಸುವ ಸ್ಥಳದಲ್ಲಿ ದ್ವಿಚಕ್ರವಾಹನ ನಿಲ್ಲಿಸಿ ಕಛೇರಿಗೆ ಹೋಗಿ  ಮರಳಿ ಸಾಯಂಕಾಲ 1715 ಗಂಟೆಯ ಸುಮಾರಿಗೆ ಕಛೇರಿಯಿಂದ ಹೊರಗೆ ಬಂದು ನೋಡಲಾಗಿ,   ದ್ವಿಚಕ್ರವಾಹನ ಇರಲಿಲ್ಲಾ.   ದ್ವಿಚಕ್ರವಾಹನವನ್ನು ದಿನಾಂಕ 09-03-2020 ರಂದು 1700 ಗಂಟೆಯಿಂದ 1715 ಗಂಟೆಯ ಅವಧಿಯಲ್ಲಿ ಯಾರೂ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು  ಕಳವು ಅದ ದ್ವಿಚಕ್ರವಾಹನದ ವಿವರ ಈ ಕೆಳಗಿನಂತೆ ಇರುತ್ತದೆ. 1) ಹಿರೊ ಸ್ಪಲೆಂಡರ್ ಪ್ಲಸ್ ದ್ವಿಚಕ್ರವಾಹನ.ನಂ.ಕೆ.ಎ-38-ಯು-1758 2) ಚೆಸ್ಸಿ.ನಂ. ಎಮ್ಬಿಎಲ್ಎಚ್ಎ10ಸಿಜಿಜಿಹೆಚ್ಎಮ್24409 3) ಇಂಜಿನ್.ನಂ. ಹೆಚ್ಎ10ಇಆರ್ಜಿಎಚ್ಎಮ್25730 ಕಪ್ಪು ಬಣ್ಣದು ಇರುತ್ತದೆ ಅಂತಾ ದಿ: 19-04-2020 ರಂದು ಠಾಣೆಗೆ ಹಾಜರಾಗಿ ದೂರು ನಿಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 48/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ:19/04/2020 ರಂದು 10:00 ಗಂಟೆಗೆ ನಾನು ಸುನೀಲ್ಕುಮಾರ ಪಿ.ಎಸ್.ಐ (ಕಾ & ಸೂ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ತ್ರೀಪೂರಾಂತ ಎಸ್.ಬಿ ಐ ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಯನ್ನು ತಿಳಿದು ಬಂದ ಮೇರೆಗೆ  ಸಿಬ್ಬಂದಿ ಮತ್ತು ಪಂಚರೊಂದಿಗೆ ಬಸವಕಲ್ಯಾಣ ನಗರದ ತ್ರೀಪೂರಾಂತ ಎಸ್.ಬಿ.ಐ ಬ್ಯಾಂಕ್ ಹಿಂದುಗಡೆ ರ ಸಾರ್ವಜನಿಕ ಸ್ಥಳಕ್ಕೆ ಹೋಗಿ ನೋಡಿದಾಗ  7 ಜನರು ಗುಂಪಾಗಿ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ನಡೆದು ಕೊಂಡು ಹೋಗಿ ಸಮಯ 12:00 ಗಂಟೆಗೆ   ದಾಳಿಮಾಡಿ ಹಿಡಿದುಕೊಂಡು ಸಾಲಾಗಿ ನಿಲ್ಲಿಸಿ ಮೊದಲನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು1] ಪ್ರವೀಣ ತಂದೆ ಸೂರ್ಯಕಾಂತ ಲಾಡೆ ವಯಸ್ಸು:24ವರ್ಷ ಜಾತಿ:ಎಸ್ಸಿ ಮಾದಿಗಾ ಉ:ಕೂಲಿಕೆಲಸ ಸಾ:ಧರ್ಮಪ್ರಕಾಶಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 3100/-ರೂ ಸಿಕ್ಕ್ಕಿರುತ್ತವೆ,2] ಎರಡನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ತೌಶಿಫ್ ತಂದೆ ಅಬ್ದುಲ್ಖಾದರ ಸೋಫವಾಲೆ ವಯಸ್ಸು:21ವರ್ಷ ಜಾತಿ:ಮುಸ್ಲಿಂ ಉ:ಕೂಲಿಕೆಲಸ ಸಾ:ಪಾಶಪೂರ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧಿನದಿಂದ ನಗದು ಹಣ 2300/-ರೂ ಸಿಕ್ಕ್ಕಿರುತ್ತವೆ,3] ಮೂರನೆಯವನಿಗೆ ಹೆಸರುಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಗಣೇಶ ತಂದೆ ಭಾಸ್ಕರರಾವ ಭೋಸ್ಲೆ ವಯಸ್ಸು:31ವರ್ಷ ಜಾತಿ:ಮರಾಠ ಉ:ವ್ಯಾಪಾರ ಸಾ:ಸವರ್ೋದಯ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 3000/-ರೂ ಸಿಕ್ಕ್ಕಿರುತ್ತವೆ, 4]ನಾಲ್ಕನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಂಜುನಾಥ ತಂದೆ ವೆಂಕಟರಾವ ವಲ್ಲೇಪೂರೆ ವಯಸ್ಸು:33ವರ್ಷ ಜಾತಿ:ಎಸ್.ಸಿ ವಡ್ಡರ ಉ:ವ್ಯಾಪಾರ ಸಾ:ನಿಟ್ಟೂರ ತಾ:ಭಾಲ್ಕಿ ಸದ್ಯ:ಆದರ್ಶ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 3200/-ರೂ ಸಿಕ್ಕ್ಕಿರುತ್ತವೆ,5] ಐದನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸುರೇಶ ತಂದೆ ಮಲ್ಲಣ್ಣಾ ರಾಂಪೂರೆ ವಯಸ್ಸು:42ವರ್ಷ ಜಾತಿ:ಲಿಂಗಾಯತ್ ಉ;ಎಲೇಕ್ಟ್ರಿಷನ್ ಕೆಲಸ ಸಾ:ಲಾಲತಾಲಬ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 2900/-ರೂ ಸಿಕ್ಕ್ಕಿರುತ್ತವೆ 6]ಆರನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಉಮರ ತಂದೆ ಗನಿ ಮಾಮು ವಯಸ್ಸು:24ವರ್ಷ ಜಾತಿ:ಮುಸ್ಲಿಂ ಉ:ವಿ ಕೂಲಿಕೆಲಸ ಸಾ:ಕಾಟೆವಾಡಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 2500/-ರೂ ಸಿಕ್ಕ್ಕಿರುತ್ತವೆ ಮತ್ತು 7] ಏಳನಿಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸುನೀಲ್ ತಂದೆ ಸಂಗಮನಾಥ ವಕಾರೆ ವಯಸ್ಸು:28ವರ್ಷ ಜಾತಿ:ಲಿಂಗಾಯತ್ ಉ:ಕೂಲಿಕೆಲಸ ಸಾ:ಹಿರೆಮಠ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 2300/-ರೂ ಸಿಕ್ಕ್ಕಿರುತ್ತವೆ ಹಾಗು ಅಪರಾಧ ಸ್ಥಳದಲ್ಲಿ ಪರಿಶಿಲಿಸಿ ನೋಡಲು ನಗದು ಹಣ 3,300/-ರೂ ಮತ್ತು 52 ಇಸ್ಪಿಟ್ ಎಲೆಗಳು ಸಿಕ್ಕಿರುತ್ತವೆ. ಸದರಿ ಅಪರಾಧ ಸ್ಥಳದಲ್ಲಿ ಸಿಕ್ಕಿರುವ ಮತ್ತು ಆರೋಪಿತರ ಆಧೀನದಲ್ಲಿ ಸಿಕ್ಕಿರುವ ಒಟ್ಟು ನಗದು ಹಣ 22,600/- ರೂ ಮತ್ತು 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 49/2020 ಕಲಂ 32, 34 ಕೆಇ ಕಾಯ್ದೆ ಜೊತೆ 273 ಐಪಿಸಿ :-

ದಿನಾಂಕ:19/04/2020 ರಂದು 14:00 ಗಂಟೆಗೆ  ನಾನು ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಭಾತ್ಮಿದಾರರಿಂದ ಪೋನ್ ಮುಖಾಂತರ ಖಚಿತ ಭಾತ್ಮಿ ತಿಳಿದುಬಂದಿದ್ದೆನೆಂದರೆ ಬಸವಕಲ್ಯಾಣ ನಗರದ ಲಾಲತಲಾಬ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮಗಳ ಹತ್ತಿರ ಕಳ್ಳಭಟ್ಟಿ ಸರಾಯಿವುಳ್ಳ ಕ್ಯಾನ್ಗಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಭಾತ್ಮಿಯಂತೆ ಇಬ್ಬರು ವ್ಯಕ್ತಿಗಳ ತಮ್ಮ ಹತ್ತಿರ ಎರಡು ಪ್ಲಾಸ್ಟಿಕ್ ಕ್ಯಾನಗಳು ಇಟ್ಟುಕೊಂಡು ಕುಳಿತಿದ್ದು ದಾಳಿ ಮಾಡಿ  ಆರೋಪಿತ ಅಜಗರ ತಮದೆ ಖಾಸಿಮಸಾಬ ಆಪದಾರ ವಯಸ್ಸು//30 ವರ್ಷ ಜಾತಿ//ಮುಸ್ಲಿಂ ಉ//ಸಾ-ಮಿಲ್ದಲ್ಲಿ ಕೆಲಸ ಸಾ//ಅಲ್ಲಾನಗರ ಬಸವಕಲ್ಯಾಣ  ಇತನ ಹತ್ತಿರವಿದ್ದ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಇಟ್ಟುಕೊಂಡಿದ್ದ  5 ಲೀಟರ ಗಾತ್ರದ ಪ್ಲಾಸ್ಟಿಕ್ ಕ್ಯಾನಗಳಲ್ಲಿ ಕಳ್ಳಭಟ್ಟಿ ಸರಾಯಿ ಅಂದಾಜು 10 ಲೀಟರ್ ಇರುತ್ತದೆ ಅದರ ಅಂದಾಜು ಕಿಮ್ಮತ್ತು 3000/-ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 50/2020 ಕಲಂ  87 ಕೆ.ಪಿ ಎಕ್ಟ ಜೊತೆ 269 ಐ.ಪಿ.ಸಿ :-

ದಿನಾಂಕ:19/04/2020 ರಂದು 1700 ಗಂಟೆಗೆ ನಾನು ಸುನೀಲ್ಕುಮಾರ ಪಿ.ಎಸ್.ಐ (ಕಾ & ಸೂ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ  ಫಂಕ್ಷನ ಹಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸರ್ಕಾರದ ಆದೇಶದಂತೆ ಲಾಕ್-ಡೌನ್ ಇದ್ದು ಕೊರೊನಾ ಸೊಂಕು ಹರಡುವ ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿ ಮೇರೆಗೆ ಸಿಬ್ಬಂದಿಯೊಂದಿಗೆ ಬಸವಕಲ್ಯಾಣ ನಗರದ ವಷರ್ಾ ಫಂಕ್ಷನ ಹಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 6 ಜನರು ಗುಂಪಾಗಿ ಕುಳಿತುಕೊಂಡು ಕೊರೊನಾ ಸೋಂಕು ಹರಡುವ ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತಿದ್ದಾಗ ಅವರುಗಳ ಮೇಲೆ ದಾಳಿ ಮಾಡಿ 1] ಆನಂದ ತಂದೆ ಶರಣಯ್ಯಾ ಮಠಮತಿ ವಯಸ್ಸು//29 ವರ್ಷ  ಇವನ ಅಧೀನದಿಂದ ನಗದು ಹಣ 300/-ರೂ ಸಿಕ್ಕ್ಕಿರುತ್ತವೆ, 2]   ಈಶ್ವರ ತಂದೆ ಗುಲಾಬರಾವ ತ್ರೀಮುಖೆ ವಯಸ್ಸು//30 ವರ್ಷ ಇವನ ಅಧಿನದಿಂದ ನಗದು ಹಣ 500/-ರೂ ಸಿಕ್ಕ್ಕಿರುತ್ತವೆ,3]  ಮೋತಿರಾಮ ತಂದೆ ಶಂಕರರಾವ ನಾಯ್ಕ ವಯಸ್ಸು//32 ವರ್ಷ ಇವನ ಅಧಿನದಿಂದ ನಗದು ಹಣ 600/-ರೂ ಸಿಕ್ಕ್ಕಿರುತ್ತವೆ, 4 ಹೆಸರು ಅಂಬರೀಶ ತಂದೆ ಪರಮೇಶ್ವರ ರಾವ ಸಿಂಧೆ ವಯಸ್ಸು//32 ವರ್ಷ ಇವನ ಅಧಿನದಿಂದ ನಗದು ಹಣ 900/-ರೂ ಸಿಕ್ಕ್ಕಿರುತ್ತವೆ,5] ಮಹೇಶ ತಂದೆ ರಾಮಚಂದರ ರಾಠೋಡ್ ವಯಸ್ಸು//34 ವರ್ಷ ಇವನ ಅಧಿನದಿಂದ ನಗದು ಹಣ 1000/-ರೂ ಸಿಕ್ಕ್ಕಿರುತ್ತವೆ ಮತ್ತು 6]  ದತ್ತಾತ್ರಿ ತಂದೆ ಪರಮೇಶ್ವರರಾವ ಸಿಂಧೆ ವಯಸ್ಸು//28 ವರ್ಷ ಇವನ ಅಧಿನದಿಂದ ನಗದು ಹಣ 800/-ರೂ ಸಿಕ್ಕ್ಕಿರುತ್ತವೆ ಹಾಗು ಅಪರಾಧ ಸ್ಥಳದಲ್ಲಿ ಪರಿಶಿಲಿಸಿ ನೋಡಲು ನಗದು ಹಣ 2200/-ರೂ ಮತ್ತು 52 ಇಸ್ಪಿಟ್ ಎಲೆಗಳು ಸಿಕ್ಕಿರುತ್ತವೆ.ಸದರಿ ಅಪರಾಧ ಸ್ಥಳದಲ್ಲಿ ಸಿಕ್ಕಿರುವ ಮತ್ತು ಆರೋಪಿತರ ಆಧೀನದಲ್ಲಿ ಸಿಕ್ಕಿರುವ ಒಟ್ಟು ನಗದು ಹಣ 6300/- ರೂ ಮತ್ತು 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.