ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-02-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 27/2021, ಕಲಂ. 392 ಐಪಿಸಿ :-

ದಿನಾಂಕ 18-02-2021 ರಂದು 1900 ಗಂಟೆಗೆ ಫಿರ್ಯಾದಿ ನಿತಾ ಪಾಟೀಲ ಗಂಡ ಅಶೋಕ ಪಾಟೀಲ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 15-4-63/1 ಚನ್ನಬಸವ ನಗರ, ಬೀದರ ರವರು ನಿರ್ಮಲಾ ಜಾಬಶೇಟ್ಟಿ ಹಾಗೂ ಶಿವಲೀಲಾ (ಸೋನಿ) ಹೀಗೆ ಮೂವರು ಮಹಿಳೆಯರು ಕೂಡಿ ನಿರ್ಮಲಾ ಜಾಬಶೇಟ್ಟಿ ರವರ ಮನೆಗೆ ಹೋಗಿ ಮರಳಿ 1930 ಗಂಟೆಗೆ ವಾಕಿಂಗ ಮಾಡುತ್ತಾ ಬರುವಾಗ ಚನ್ನಬಸವ ನಗರ ಬಡಾವಣೆಯಲ್ಲಿ ಆಚಾರಿ ರವರ ಮನೆಯ ಹತ್ತಿರ ಬಂದಾಗ ಕರಂಟ ಹೋಗಿದ್ದು ಆ ಸಮಯದಲ್ಲಿ ಎದುರಗಡೆಯಿಂದ ಒಬ್ಬ ವ್ಯಕ್ತಿ ಅಂದಾಜು 30 ರಿಂದ 35 ವಯಸ್ಸಿನ ಕೆಂಪು ಬಣ್ಣದ ಹೊಂಡಾ ಎಕ್ಟಿವಾ ತರಹ ಕಾಣುವ ವಾಹನದ ಮೇಲೆ ಬಂದು ಫಿರ್ಯಾದಿಯವರ ಕೊರಳಿನಲ್ಲಿದ್ದ 18 ಗ್ರಾಂ ಬಂಗಾರದ ಶಾಟ ಗಂಟನ ಅ.ಕಿ 75,000/- ರೂಪಾಯಿ  ಬೆಲೆವುಳ್ಳದ್ದು ಕಿತ್ತುಕೊಂಡು ತನ್ನ ಮೋಟಾರ ಸೈಕಲ್ ಓಡಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 21/2021, ಕಲಂ. 457, 380 ಐಪಿಸಿ :-

ದಿನಾಂಕ 09-02-2021 ರಂದು ಫಿರ್ಯಾದಿ ಕಲಾವತಿ ಗಂಡ ಸಮ್ರತರಾವ ಬಿರಾದಾರ ಸಾ: ಕಳಸದಾಳ, ತಾ: ಭಾಲ್ಕಿ ರವರು ತನ್ನ ಗಂಡನಿಗೆ ಮೈಯಲ್ಲಿ ಉಷಾರ ಇಲ್ಲದ್ದರಿಂದ ಗಂಡನಿಗೆ ಚಿಕಿತ್ಸೆ ಕುರಿತು ಪೂನಾಕ್ಕೆ ಕರೆದುಕೊಂಡು ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯ ಕೀಲಿ ಮುರಿದು ಮನೆಯಲ್ಲಿ ಅಲಮಾರಾದಲ್ಲಿಟ್ಟ 1) 5 ಗ್ರಾಮ ಬಂಗಾರದ ಗುಂಡಿನ ಸಮೇತ ಮಂಗಳಸೂತ್ರ, ಅ.ಕಿ 24,000/- ರೂ., 2) 5 ಗ್ರಾಮವುಳ್ಳ 3 ಬಂಗಾರದ ಲಾಕೇಟಗಳು ಹೀಗೆ ಒಟ್ಟು 15 ಗ್ರಾಮವುಳ್ಳ ಬಂಗಾರದ ಲಾಕೇಟಗಳು ಅ.ಕಿ 60,000/- ರೂ., 3) 4 ಳಿ ಗ್ರಾಮವುಳ್ಳ 3 ಬಂಗಾರದ ಉಂಗುರುಗಳು ಅ.ಕಿ 11,000/- ರೂ., 4) 5 ಗ್ರಾಮವುಳ್ಳ ಒಂದು ಬಂಗಾರದ ಉಂಗುರು ಅ.ಕಿ 20,000/- ರೂ, 6) 2 ಗ್ರಾಂ ಒಂದು ಬಂಗಾರದ ಉಂಗುರು ಅ.ಕಿ 8000/- ರೂ., 7) 3 ಗ್ರಾಂ ನ ಒಂದು ಬಂಗಾರದ ಉಂಗುರು ಅ.ಕಿ 12,000/- ರೂ., 8) 5 ಗ್ರಾಂ  ಬಂಗಾರದ 2 ಝುಮಕಾ ಅ.ಕಿ 20,000/- ರೂ., 9) 4 ತೋಲೆ ಬೆಳ್ಳಿಯ ಕಡಗಗಳು ಅ.ಕಿ 2,000/- ರೂ ಹಾಗೂ 10) ನಗದು ಹಣ 10,000/- ರೂ. ಹೀಗೆ ಎಲ್ಲಾ ಒಟ್ಟು 1,67,000/- ರೂ ಬೆಲೆ ಬಾಳುವ ಬಂಗಾರ, ಬೆಳ್ಳಿ ಮತ್ತು ನಗದು ಹಣ ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.