ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 19-12-2020

ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 107/2020 ಕಲಂ 279, 304 (ಎ) ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-

ದಿನಾಂಕ 18/12/2020ರಂದು 1230 ಗಂಟೆಗೆ ಫಿರ್ಯಾದಿ  ಶ್ರೀ ಮಹೇಶ  ತಂದೆ ಬಸವರಾಜ ವಚ್ಚಾ ವಯ 38 ವರ್ಷ ಜಾತಿಃ ನೇಕಾರ ಉಃ ವ್ಯಾಪಾರ ಸಾಃ ಮನ್ನಳ್ಳಿ ತಾಃ ಬೀದರ ಜಿಃ ಬೀದರ ಇವರು ಠಾಣೆಗೆ ಹಾಜರಾಗಿ  ತನ್ನ ಹೇಳಿಕೆ ಪಿಯರ್ಾದು ನೀಡಿದ್ದು, ಸಾರಾಂಶವೆನೆಂದ್ದರೆ, ಇವರ ಭಾವ ಲಿಂಗರಾಜ ತಂದೆ ನಾಗಬುಷಣ ಡಾವರಗಾಂವ ವಯ 29 ವರ್ಷ ಇವನು ರಿನಿವು ಪವರ ಪ್ಲಾಂಟ ನಿರ್ಣಾದಲ್ಲಿ ಸೂಪರ ವೈಜರ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು ಇತನು ತನ್ನ ಮೋಟಾರ ಸೈಕಲ ಮೇಲೆ ದಿನಾಲು ಕೆಲಸಕ್ಕೆ ಹೋಗುವುದು ಬರುವುದು ಮಾಡುತ್ತಿದ್ದನು. ಹೀಗಿರುವಲ್ಲಿ ದಿನಾಂಕ 18/12/2020 ರಂದು ತನ್ನ ಮೋಟಾರ ಸೈಕಲ ನಂ ಕೆ.ಎ.38- ಎಸ್.6718 ನೆದ್ದರ ಮೇಲೆ ಕುಳಿತು ಕೆಲಸಕ್ಕೆ ಹೋಗಿದ್ದು ಬೋರಾಳ ಕಡೆಯಿಂದ ತನ್ನ ಮೋಟಾರ ಸೈಕಲ ನಂ ಕೆ.ಎ.38- ಎಸ್.6718  ಹೊಗುತ್ತಿರವುವಾಗ ಬಸಲಾಪುರ ಕಡೆಯಿಂದ ಬಂದ  ಒಂದು ಅಪರಿಚೀತ ವಾಹನ ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯ ವಾಗುವಂತೆ ನಡೆಯಿಸುತ್ತಾ ಬಂದು ಫಿರ್ಯಾದಿಯ ಭಾವನ ಮೋಟಾರ ಸೈಕಲಗೆ ಡಿಕ್ಕಿ ಮಾಡಿದ್ದರಿಂದ ಅವರು ವಾಹನ ಸಮೇತ ರೋಡಿನ ಮೇಲೆ ಬಿದ್ದಿದ್ದು ಬಲಗಡೆ ಹಣೆ ತಲೆ ಓಡೆದು ಭಾರಿ ರಕ್ತಗಾಯ ಹಾಗು ಬಲಗಡೆ ಮುಖ ಮತ್ತು ತುಟಿಗೆ ಹತ್ತಿ ಭಾರಿ ರಕ್ತಗಾಯ ವಾಗಿದ್ದು ಮತ್ತು ಬಲಗಾಲ ಮೊಳಕಾಲು ಮುರಿದು ಭಾರಿ ಗಾಯ ಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತಾರೆ ಲಿಂಗರಾಜ ಇತನಿಗೆ   ಡಿಕ್ಕಿ ಪಡಿಸಿದ ಅಪರಿಚಿತ ವಾಹನ ಚಾಲಕೆ ಡಿಕ್ಕಿ ಮಾಡಿ ಓಡಿ ಹೋದ  ವಾಹನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನಿಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.