ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 19-10-2020

 

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 117/2020 ಕಲಂ 392 ಐಪಿಸಿ :-

 

ದಿನಾಂಕ 18/10/2020 ರಂದು 1945 ಗಂಟೆಗೆ ಫಿರ್ಯಾದಿ ಕುಮಾರಿ  ಶೃದ್ಧಾ ತಂದೆ ಸುಧಾಕರ ತುಕತೆವಾರ ವಯ:23 ವರ್ಷ ಜಾತಿ:ಕೊಮಟಿ ಉ:ವಿದ್ಯಾರ್ಥಿ ಸಾ/ಭಾವಸಾರ ಚೌಕ ಹತ್ತೀರ ಅನಿಕೇತ ನಗರ ನಾಂದೇಡ ಸಧ್ಯ ದೇವಿ ಕಾಲೋನಿ ಬೀದರ.  ರವರು ಠಾಣೆಗೆ ಹಾಜರಾಗಿ ಲಿಖಿತ ದೂರ ನೀಡಿದರ ಸಾರಾಂಶವೆನೆಂದರೆ  ಫಿರ್ಯಾದಿಯು   ಅಕ್ಕಮಹಾದೇವಿ ಅಯುರ್ವೇದಿಕ ಮೆಡಿಕಲ ಕಾಲೇಜಿನಲ್ಲಿ ಬಿ.ಎ.ಎಮ್.ಎಸ್. ಅಂತಿಮ ವರ್ಷದ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಇವರು 2019 ನೇ ಸಾಲಿನಲ್ಲಿ  ಒಂದು ನೀಲಿ ಬಣ್ಣದ ರೀಯಲಮಿ5 ಹೆಸರಿನ ಮೊಬೈಲ  ಖರೀದಿಸಿದ್ದು ಇರುತ್ತದೆ. ಅದರ ಐ.ಎಮ್.ಇ. ಐ. ಸಂಖ್ಯೆ. 867176040676652 ಮತ್ತು 867176040676645. ಇರುತ್ತದೆ. ಅದರ ಅ.ಕಿ. 11000/- ರೂ. ಆಗಿರುತ್ತದೆ. ಹೀಗಿರುವಾಗ ದಿನಾಂಕ 17/10/2020 ರಂದು 1100 ಗಂಟೆಯ ಸುಮಾರಿಗೆ   ಶಿವನಗರ ಬೀದರನಲ್ಲಿ ಸಬ್ಬಲ ಬರೀದ ಹತ್ತೀರ ಇರುವ ಫುಟ ಪಾಥ ಮೇಲೆ ಮೊಬೈಲ ಫೋನಿನಲ್ಲಿ ಮಾತಾಡುತ್ತಾ ನಡೆದುಕೊಂಡು ಹೋಗುವಾಗ ಹಿಂದಿನಿಂದ ಇಬ್ಬರು ವ್ಯಕ್ತಿಗಳು ಒಂದು ಸ್ಪ್ಲೆಂಡರ ಮೊಟರ ಸೈಕಲ ಮೇಲೆ ಬಂದು ಫಿರ್ಯಾದಿ ಕೈಯಲ್ಲಿದ್ದ ಮೊಬೈಲ ಕಸಿದುಕೊಂಡು ಹೋಗಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂಖ್ಯೆ 143/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ :18-10-2020 ರಂದು ಮಾಹಾಂತೇಶ ಲಂಬಿ ಪಿ.ಎಸ್.ಐ.(ಕಾ.ಸೂ) ರವರಿಗೆ ಕಲ್ಲೂರ ಶಿವಾರದ ಅರಣ್ಯ ಪ್ರದೇಶ /ಹೋಲದಲ್ಲಿ ಕೆಲವು ಜನರು ಹಣ ಹಚ್ಚಿ ಅಂದರ-ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರಾದ 1] ನಾಸೀರ ತಂದೆ ಅಬ್ದುಲ ಮುಕೀದ ಶೇಕ ವಯ: 28 ವರ್ಷ ಸಾ/ನೂರಖಾನ ಅಖಾಡಾ ಹುಮನಾಬಾದ ಇತನ ಜೇಬಿನಿಂದ ನಗದು ಹಣ-2030/- ಒಂದು ಫೋನ್ ಅಂ.ಕಿ. ರೂ.500/- ಹಾಗು 2] ಶಂಕರ ತಂದೆ ಬಾಬುರಾವ ಪರಶೇಟ್ಟಿ ವಯ 38 ವರ್ಷ ಜಾತಿ ಲಿಂಗಾಯತ ಸಾ/ ಮುಸ್ತಾಪೂರ, ಇತನ ಜೇಬಿನಿಂದ ನಗದು ಹಣ-4320/-  ಒಂದು ಫೋನ್ ಅಂ.ಕಿ. ರೂ.5 ಸಾವಿರ, ದೊರಕಿದ್ದು, ಆಟಕ್ಕೆ ಇಟ್ಟಿರುವ ನಗದು ಹಣ ರೂ.2000/- ಹೀಗೆ ಒಟ್ಟು ನಗದು ಹಣ ರೂ.8.350/- ಹಾಗು 52 ಇಸ್ಪಿಟ ಎಲೆಗಳು ಇರುತ್ತದೆ. ಓಡಿ ಹೋದವರ ಹೆಸರು ವಿಚಾರಿಸಿ ತಿಳಿದುಕೊಳ್ಳಲು 1]ಈರಪ್ಪಾ ತಂದೆ ಗೌಡಪ್ಪಾ ಮಾಲಿ ಪಾಟೀಲ ಸಾ/ ಪಂಡರಗೇರಾ ದೂ.ನಂ:8317366113, 2] ಸಂತೋಷ ತಂದೆ ಪುಂಡಲಿಕಪ್ಪಾ ಕಂದಗೂಳ ಸಾ/ಪಂಡರಗೇರಾ 3] ಮಂಜುನಾಥ ತಂದೆ ಗೊಗ್ಗೆ ಸಾ/ ಕೋಳಿವಾಡ ಹುಮನಾಬಾದ ದೂ.ನಂ:9590794494, 4] ಸಂಜು ತಂದೆ ಕಾಶೆಪ್ಪಾ ರಾಜೇಶ್ವರ ಸಾ/ ಕಲ್ಲೂರ ದೂ.ನಂ:9964533648, 5] ವೀರಯ್ಯಾ ಪೊಲೀಸ ಪಾಟೀಲ ಸಾ/ ಕಲ್ಲೂರ, 6] ಶರಣು ಮಾಲಿ ಪಾಟೀಲ ಸಾ/ ಕಲ್ಲೂರ ಅಂತಾ ತಿಳಿಸಿದ್ದು, ಇಸ್ಪೀಟ ಆಡುವ ಸ್ಥಳದಲ್ಲಿ ಮೂರು ಮೋಟರ ಸೈಕಲಗಳು ಇದ್ದು ಅವುಗಳ ನಂಬರ ನೋಡಲು 1] HH Spl Pro No:KA39K2520 ಅಂ.ಕಿ. ರೂ.40,000/-, 2] Hoda Shine M/c No:AP13P3667 ಅಂ.ಕಿ. ರೂ.40,000/- ಹಾಗು 3]Hero Spl+ M/C Chessi No:MBLHA10AMD9G13444 /Engine No:HA10EJD9G16337 ಅಂ.ಕಿ. ರೂ.40,000/- ದೊರಕಿರುತ್ತವೆ. ಪಿ.ಎಸ್.ಐ. ರವರು ನಗದು ಹಣ, 2 ಫೋನಗಳನ್ನು ಹಾಗು 52 ಇಸ್ಪಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 76/2020 ಕಲಂ 279, 283, 304(ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ: 18/10/2020 ರಂದು 2100 ಗಂಟೆಗೆ ಫಿರ್ಯಾದಿ ಶ್ರೀ ಜಗಪ್ಪಾ ತಂದೆ ಗುಂಡಪ್ಪಾ ಹಿತ್ತಾಪೂರ ಸಾ: ಹಸರಗುಂಡಗಿ ತಾ: ಚಿಂಚೋಳಿ ಜಿಲ್ಲೆ: ಕಲಬುರಗಿ ರವರು ಖುದ್ದಾಗಿ ಪೊಲೀಸ ಠಾಣೆಗೆ ಹಾಜರಾಗಿ ನೀಡಿದ ಮೌಖಿಕ ಹೇಳಿಕೆ ಸಾರಾಂಶವೆನೆಂದರೆ ಕಳೆದ ಒಂದು ತಿಂಗಳಿಂದ ಫೀರ್ಯಾದಿ ಮತ್ತು ಅವರ ತಂದೆ ಗುಂಡಪ್ಪಾ ತಾಯಿ ಶಾಂತಮ್ಮ ಮತ್ತು   ತಮ್ಮ ಸುದರ್ಶನ ಎಲ್ಲರೂ ಕೂಲಿ ಕೆಲಸ ಮಾಡಲು ಬಸಂತಪೂರದ ಗ್ರಾಮದ ರವಿ ತಂದೆ ನಾಗಪ್ಪಾ ಪಲ್ಲೇರಿ ರವರ ಹೊಲದಲ್ಲಿ ಬಂದು ವಾಸಿಸುತ್ತಿದ್ದು ಸುದರ್ಶನ ಇವನು ಹಳೆ ಆರ್.ಟಿ.ಓ ಚಕ್ ಪೋಸ್ಟ್ ಹತ್ತಿರದ ನಾಗೇಶ ರವರ ಹೋಟೆಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ದಿನಾಲು  ತಂದೆಯವರು ತನ್ನ ಮೋಟಾರ್ ಸೈಕಲ್ ಸಂಖ್ಯೆ: KA-32/EQ-9870. ನೇದರ ಮೇಲೆ ಕೂಡಿಸಿಕೊಂಡು ಹೋಗಿ ಬರುವುದು ಮಾಡುತ್ತಾರೆ.  ಹೀಗಿರುವಾಗ   ದಿನಾಂಕ: 18/10/2020 ರಂದು ರಾತ್ರಿ  ತಂದೆಯವರು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಸಂಖ್ಯೆ: KA-32/EQ-9870. ನೇದನ್ನು ಚಲಾಯಿಸಿಕೊಂಡು ಬಸಂತಪೂರದಿಂದ   ಹಳೆ ಆರ್.ಟಿ.ಓ ಚೆಕ್ ಪೋಸ್ಟ್ ಕಡೆಯಿಂದ ಬಸಂತಪೂರ ಕಡೆಗೆ ಬರುತ್ತಿದ್ದಾಗ  ತಂದೆಯವರು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದಾಗ    ಹುಮನಾಬಾದ – ಕಲಬುರಗಿ ರೋಡಿನ ಮೇಲೆ   ರಾತ್ರಿ 7:30 ಗಂಟೆಯ ಸುಮಾರಿಗೆ ಬಸಂತಪೂರ ಕ್ರಾಸ್ ಹತ್ತಿರ ಬಂದಾಗ ಅದೇ ಸಮಯಕ್ಕೆ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ರಾತ್ರಿಯ ಸಮಯದಲ್ಲಿ ರೋಡಿನ ಮೇಲೆ ನಿಲ್ಲಿಸಿ ಇಂಡಿಕೇಟರ್ ಹಾಕದೇ ಮತ್ತು ಯಾವುದೇ ರೀತಿಯ ಮುಂಜಾಗೃತೆ ಕ್ರಮವನ್ನು ವಹಿಸದೇ ನಿಲ್ಲಿಸಿದ ಲಾರಿಯ ಹಿಂದುಗಡೆ ಡಿಕ್ಕಿ ಹೊಡೆದು ಅಪಘಾತ ಪಡೆಸಿದರಿಂದ ಇಬ್ಬರೂ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿದ್ದು ಅಪಘಾತದಿಂದ ತಂದೆಯವರಿಗೆ ತಲೆಗೆ ತೀವ್ರ ರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.