ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 19-05-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 67/2020 ಕಲಂ 379 ಐಪಿಸಿ :-

ದಿನಾಂಕ 18/05/2020 ರಂದು 12:30 ಗಂಟೆಗೆ ಅರ್ಜಿದಾರರಾದ ಶ್ರೀ ಮಹ್ಮದ ಯಾಸೀನ ತಂದೆ ಮಹ್ಮದ ದಸ್ತೆಗೀರ ಖಾದಿವಾಲೆ ವಯ 29 ವರ್ಷ ಜಾತಿ ಮುಸ್ಲಿಂ ಉ// ಅಟೊ ಮೊಬೈಲ್ಸ್ ಅಂಗಡಿ ವ್ಯಾಪಾರ ಸಾ// ಮಹೇಬೂಬನಗರ ಬಸವಕಲ್ಯಾಣ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶ ಎನೆಂದರೆ ಇವರ ಹತ್ತಿರ ಒಂದು ಹೊಂಡಾ ಸಿಡಿ-110 ಡ್ರೀಮ್ ಮೋಟಾರ ಸೈಕಲ್ ನಂ ಕೆಎ-56/ಜೆ-2115 ಅದರ ಚೆಸ್ಸಿ ನಂ ಎಮ್.ಇ.4ಜೆಸಿ677ಸಿಜೆ8139918 ಮತ್ತು ಇಂಜಿನ್ ನಂ ಜೆಸಿ67ಇ84145073 ಅದರ ಮಾಡಲ್ 2018 ಇರುತ್ತದೆ.  ಬೈಕಿನ ಮೌಲ್ಯ ಅ.ಕಿ. 40,000/- ರೂಪಾಯಿ ಇರುತ್ತದೆ.   ದಿನಾಂಕ 16/03/2020 ರಂದು ರಾತ್ರಿ 9 ಗಂಟೆಗೆ ಕಿರಾಣಿ ಸಾಮಾನುಗಳು ತರುವಗೋಸ್ಕರ ನನ್ನ ಮೋಟಾರ ಸೈಕಲ್ ಕೆಎ-56/ಜೆ-2115 ನೆದ್ದರ ಮೇಲೆ ಹೋಗಿ  ಬಸವಕಲ್ಯಾಣ ನಗರದ ಬಸ್ ನಿಲ್ದಾಣ ಹತ್ತಿರ ಇರುವ ಕಿರಾಣಿ ಅಂಗಡಿಯ ಎದುರುಗಡೆ   ಮೋಟಾರ ಸೈಕಲ್ ನಿಲ್ಲಿಸಿ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮರಳಿ ಬಂದು ನೋಡಿದಾಗ ಮೋಟಾರ ಸೈಕಲ್ ಇರುವುದಿಲ್ಲ. ಎಲ್ಲಾ ಕಡೆ ಹುಡಿಕಾಡಿದರು ಮೋ.ಸೈ. ಸಿಕ್ಕಿರುವುದಿಲ್ಲ ಯಾರೋ ಅಪರಿಚಿತರು ಮೋ.ಸೈಕಲ್ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಮುಡುಬಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 37/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 18/05/2020 ರಂದು 1130 ಗಂಟೆಯ ಸುಮಾರಿಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಫೋನ್ ಮುಖಾಂತರ ಮಾಹಿತಿ ಬಂದಿದ್ದೇನೆಂದರೆ ಕಲಖೋರಾ ಗ್ರಾಮದಲ್ಲಿ ಮರಗೆಮ್ಮ ಮಂದೀರದ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ   ಸಿಬ್ಬಂದಿಯೊಂದಿಗೆ ಕಲಖೋರಾ ಗ್ರಾಮಕ್ಕೆ ಹೋಗಿ ಬಾಗಹಿಪ್ಪರಗಾ ರೋಡಿನ ಮೇಲೆ ಮರಗೆಮ್ಮ ಮಂದೀರದ ಇಚೆಗೆ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಮುಂದೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಬಾಗಹಿಪ್ಪರಗಾ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಚೀಲ ಇಟ್ಟುಕೊಂಡಿದ್ದು, ಸಂಶಯ ಬಂದು ಸದರಿ ವ್ಯಕ್ತಿಯ ಮೇಲೆ  ದಾಳಿ ಮಾಡಿ ಅವನಿಗೆ ಹಿಡಿದು ಅವನ ಹತ್ತೀರ ಇದ್ದ ಬಿಳಿ ಚೀಲ ಪರಿಶೀಲಿಸಿ ನೋಡಲಾಗಿ ಅದರಲ್ಲಿ 180 ಎಮ್ ಎಲ್ ನ 20 ಯು ಎಸ್ ಸರಾಯಿ ಬಾಟಲಗಳಿರುತ್ತವೆ. ಮತ್ತು 90 ಎಮ್ ಎಲ್ ನ 10 ಯು ಎಸ್ ವಿಸ್ಕಿ ಬಾಟಲ್ ಗಳಿದ್ದು, ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಂಜುಕುಮಾರ ತಂದೆ ಬಸವಣಪ್ಪ ಹುಳಗೇರಿ ವಯ 35 ವರ್ಷ ಉ: ಒಕ್ಕಲುತನ ಜಾ; ಲಿಂಗಾಯತ ಸಾ: ಕಲಖೋರಾ ಅಂತ ತಿಳಿಸಿದನು ಅವನ ಹತ್ತೀರ ಚೀಲದಲ್ಲಿದ್ದ 180 ಎಮ್ ಎಲ್ ನ 20 ಯು ಎಸ್ ಸರಾಯಿ ಬಾಟಲಗಳ ಒಟ್ಟು ಕ್ಕಿಮ್ಮತ್ತು 1212 ರೂ ಮತ್ತು 90 ಎಮ್ ಎಲ್ ನ 10 ಯು ಎಸ್ ವಿಸ್ಕಿ ಬಾಟಲ್ಗಳು ಅದರ ಕ್ಕಿಮ್ಮತ್ತು 303.20 ರೂ ಒಟ್ಟು 1515.20 ರೂಗಳಷ್ಟು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.