ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-11-2019

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 99/2019, ಕಲಂ. 279, 338, 304() ಐಪಿಸಿ ಮತ್ತು 187 ಐಎಂವಿ ಕಾಯ್ದೆ :-

ದಿನಾಂಕ 17-11-2019 ರಂದು ಫಿರ್ಯಾದಿ ಸಚಿನ ತಂದೆ ಶಿವಶರಣಪ್ಪಾ ಬಿರಾದಾರ ವಯ: 21 ವರ್ಷ, ಜಾತಿ: ಲಿಂಗಾಯತ, ಸಾ: ಆದರ್ಶ ಕಾಲೋನಿ ಬೀದರ ಕರ್ನಾಟಕ ಫಾರ್ಮಿಸಿ ಕಾಲೇಜದಲ್ಲಿ ರವರು ತಮ್ಮ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುವ ರಶಿಕಾ ಇಬ್ಬರು ಕೂಡಿ ಯಮಹಾ ಎಫ್.ಝಡ್ ದ್ವಿಚಕ್ರ ವಾಹನ ನಂ. ಕೆ.ಎ-38/ವ್ಹಿ-7944 ನೇದರ ಮೇಲೆ ಬೀದರ ನಗರದ ನರಸಿಂಹ ಝರಣಿ ದೇವಸ್ಥಾನಕ್ಕೆ ಹೋಗಿ ಮರಳಿ ಬರುವಾಗ ಸದರಿ ದ್ವಿಚಕ್ರ ವಾಹನವನ್ನು ರಶಿಕಾ ಇವಳು ಚಲಾಯಿಸಿಕೊಂಡು ದೇವ ದೇವ ವನದ ಹತ್ತಿರ ಇರುವ ರಿಂಗ್ ರೋಡ್ ಹತ್ತಿರ ಬಂದಾಗ ಬೀದರ ಕಡೆಯಿಂದ ಒಂದು ಕ್ರೋಸರ್ ವಾಹನ್ ನಂ. ಕೆ.ಎ-39/ಎಂ-0912 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಬಲಗಾಲಿನ ತೋಡೆ ಮೇಲೆ, ಎಡಗೈ ಮುಂಗೈಗೆ ಭಾರಿ ಗುಪ್ತಗಾಯ ಹಾಗೂ ಎಡಗಡೆ ತಲೆ ಹಿಂದೆ, ಎಡಗಡೆ ಹಣೆ ಮೇಲೆ ರಕ್ತಗಾಯ, ಬಲಗಾಲಿನ ಮೊಳಕಾಲು ಕೆಳಗೆ ಗುಪ್ತಗಾಯವಾಗಿರುತ್ತದೆ, ರಶೀಕಾ ಇವಳಿಗೆ ಎರಡು ಕಾಲಿನ ತೋಡ ಮೇಲೆ ಭಾರಿ ಗುಪ್ತಗಾಯ, ತಲೆಗೆ ಭಾರಿ ರಕ್ತಗಾಯ, ಎಡಗಡೆ ಹೊಟ್ಟೆಯಲ್ಲಿ ಗುಪ್ತಗಾಯ ಹಾಗೂ ಎರಡು ಕಡೆಗೆ ಸೊಂಟಕ್ಕೆ ಭಾರಿ ಗುಪ್ತಗಾಯಗಳಾಗಿದ್ದು, ಚಿಕಿತ್ಸೆ ಕಾಲಕ್ಕೆ ರಶಿಕಾ ಬೀದರ ಜಿಲ್ಲಾ ಸರಕಾರಿ ಆ¸À್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ ಪೊಲೀಸ್ ಠಾಣೆ ಯು.ಡಿ.ಆರ್ ನಂ. 15/2019, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 14-11-2019 ರಂದು ಫಿರ್ಯಾದಿ ಗುಂಡೇರಾವ ತಂದೆ ವಿಠೋಬಾ ಶೆಡೋಳೆ ಸಾ: ಸುಲ್ತಾನಬಾದ ವಾಡಿ ಗ್ರಾಮ ರವರ ಹೊಲದಲ್ಲಿ ತೊಗರಿ ಬೆಳೆಗೆ ಫಿರ್ಯಾದಿಯವರ ಮಗನಾದ ಲಹು ತಂದೆ ಗುಂಡೇರಾವ ಶೆಡೋಳೆ ಸಾ: ಸುಲ್ತಾನಬಾದ ವಾಡಿ ಇತನು ಕ್ರಿಮಿನಾಶಕ ಔಷಧ ಹೊಡೆಯುವಾಗ ಔಷಧ ಗಾಳಿಯ ಮೂಲಕ ದೇಹದಲ್ಲಿ ಸೇರಿದ್ದರಿಂದ ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಲಹು ಇತನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ತನ್ನ ಮಗನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-11-2019 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 121/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 17-11-2019 ರಂದು ಫಿರ್ಯಾದಿ ಉದಯರಾಜ ತಂದೆ ಗುರುಬಸಪ್ಪ ರಾಜೋಳೆ, ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಬೇಲೂರ ಹಾಗೂ ತೇಜಪ್ಪ ತಂದೆ ಕಲ್ಲಪ್ಪ ವಯ: 23 ವರ್ಷ ಸಾ: ಬೇಲೂರ ಇಬ್ಬರೂ ಕೂಡಿ ರಾಯಲ್ ಎನ್ಫೀಲ್ಡ್ ಮೋಟಾರ ಸೈಕಲ ನಂ. ಕೆಎ-56/ಜೆ-5160 ನೇದ್ದರ ಮೇಲೆ ಬಂಗ್ಲಾ ಕಡೆಯಿಂದ ಬಸವಕಲ್ಯಾಣ ಕಡೆಗೆ ಬರುತ್ತಿರುವಾಗ ತ್ರಿಪೂರಾಂತ ಹರಳಯ್ಯ ಚೌಕ ರೋಡಿನ ಮೇಲೆ ಎಬಿಸಿ ಹೋಟೇಲ್ ಎದುರಿಗೆ ಹೋಗುತ್ತಿರುವಾಗ ಎದುರಿನಿಂದ ಒಂದು ಕ್ರೂಜರ್ ಜೀಪ್ ನಂ. ಕೆಎ-28/ಎನ್-1651  ನೇದ್ದರ ಚಾಲಕನಾದ ಆರೋಪಿ ಸಂದೀಪ ತಂದೆ ಜ್ಞಾನೋಬಾ ಮತಗಡೆ ಸಾ: ಜಾನಾಪೂರ, ಸದ್ಯ: ಯದಲಾಪೂರ, ತಾ: ಬಸವಕಲ್ಯಾಣ ಇತನು ತನ್ನ ಜೀಪನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ತೇಜಪ್ಪ ಈತನಿಗೆ ಎಡಗಾಲು ಮೊಳಕಾಲ ಕೆಳಗೆ ಭಾರಿ ರಕ್ತಗುಪ್ತಗಾಯ, ಎರಡು ಮೊಳಕಾಲಿಗೆ ಹಾಗೂ ಮೋಳಕೈಗೆ ತರಚಿದ ರಕ್ತಗಾಯವಾಗಿರುತ್ತದೆ, ಫಿರ್ಯಾದಿಗೆ ಯಾವುದೇ ಗಾಯವಾಗಿರುವದಿಲ್ಲ, ನಂತರ ಗಾಯಗೊಂಡ ತೇಜಪ್ಪನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿಎದೆ.