ದಿನಂಪ್ರತಿ  ಅಪರಾಧಗಳ ಮಾಹಿತಿ ದಿನಾಂಕ: 18-07-2020

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 29/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 17/07/2020 ರಂದು 1410 ಗಂಟೆಗೆ  ಪಿಎಸ್ಐ ರವರು ಪೊಲೀಸ ಠಾಣೆಯಲ್ಲಿ ಇದ್ದಾಗ ಘೋಡಂಪಳ್ಳಿ ಗ್ರಾಮದಲ್ಲಿ ರಾಜಕುಮಾರ ತಂದೆ  ಮರೆಪ್ಪ ಬಂಧು ವಯ-45 ಜಾ|| ಎಸ್.ಸಿ ಉ|| ಕೂಲಿ ಸಾ|| ಘೋಡಂಪಳ್ಳಿ ಮತ್ತು ಅವನ ಹೆಂಡತಿ ಲಲಿತಾ @ ಲಕ್ಷ್ಮಿ ಗಂಡ ರಾಜಕುಮಾರ ಬಂಧು ವಯ-40 ಜಾ|| ಎಸ್.ಸಿ ಉ|| ಕೂಲಿ ಸಾ|| ಘೋಡಂಪಳ್ಳಿ ಇಬ್ಬರು ರವರು  ತನ್ನ ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ಕೋರೋನಾ ವೈರಸ್  ತಡೆಗಟ್ಟುವ ನಿಮಿತ್ಯ ಜಿಲ್ಲೆಯಲ್ಲಿ ಸರಾಯಿ ಮಾರಾಟ ನಿಷೇಧ ಇದ್ದರು ಸಹ ಅಕ್ರಮವಾಗಿ ಸರಾಯಿ ಮಾರಾಟ ,ಮಾಡಲು ಸಂಗ್ರಹ ಮಾಡಿ ಇಟ್ಟಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಹೋಗಿ ನೋಡಲಾಗಿ ಸದರಿಯವನ ಮೇಲೆ ಕಲಂ 32,34 ಕೆ.ಈ ಎಕ್ಟ ನೇದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 156/2020 ಕಲಂ 379 ಐಪಿಸಿ  :-

ದಿನಾಂಕ: 17/07/2020 ರಂದು 13:00 ಗಂಟೆಗೆ ಫಿರ್ಯಾದಿ ರಮೇಶ ತಂದೆ ಸುಭಾಷ ಹಾರಕೂಡೆ ಸಾ: ನಾಮದಾಪೂರವಾಡಿ ಸದ್ಯ:ಭಾಲ್ಕಿ ರವರು ಠಾಣೆಗೆ ಬಂದು ಕೊಟ್ಟ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಯು ಕೆ.ಎಸ.ಆರ.ಟಿ.ಸಿ ಡಿಪೊದಲ್ಲಿ ಬಸ್ಸ ಚಾಲಕನಾಗಿದ್ದು  ಇವರ ಹತ್ತಿರ ಹಿರೋ ಪ್ಯಾಶನ ಎಕ್ಸ ಪ್ರೋ ಮೊ.ಸೈಕಲ ನಂ .ಕೆಎ-39-ಎಲ್-7521 ನೇದ್ದು ಇರುತ್ತದೆ. ಸದರಿ ವಾಹನ ತಮ್ಮ ಸಂಬಂಧಿಕರಾದ ಸಂತೋಷ ತಂದೆ ಮಲ್ಲಿಕಾಜರ್ುನ ಧಬಾಲೆ ಸಾ: ಹಲಸಿ(ಎಲ್) ರವರ ಹೆಸರಿನಲ್ಲಿ ಇರುತ್ತದೆ. ಹೀಗಿರುವಲ್ಲಿ ದಿನಾಂಕ 16/07/2020 ರಂದು ಮದ್ಯಾಹ್ನ 4 ಗಂಟೆಗೆ ಭಾಲ್ಕಿಯ ಕೆ.ಎಚ.ಬಿ ಕಾಲೀನಿಯ ನಿವಾಸಿಯಾದ ಅಶೋಕ ಬಿರಾದಾರ ರವರ ಹತ್ತಿರ ಕೆಲಸ ಇರುವದರಿಂದ ತನ್ನ ಮೊ.ಸೈಕಲ ನಂ.ಕೆಎ-39-ಎಲ್-7521   ಚಲಾಯಿಸಿಕೊಂಡು ಹೋಗಿದ್ದು ಮೊ.ಸೈಕಲನ್ನು ಅವರ ಮನೆಯ ಮುಂದೆ ನಿಲ್ಲಿಸಿ ಹೋಗಿ ಕೆಲಸ ಮುಗಿಸಿಕೊಂಡು ಸಾಯಂಕಾಲ 5 ಗಂಟೆಗೆ ಹೊರಗಡೆ ಬಂದು ನೋಡಲು   ಮೊಸೈಕಲ ಇರುವದಿಲ್ಲ. ಸುತ್ತ ಮುತ್ತಲೂ ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರುದಿಲ್ಲ, ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಮೊ.ಸೈಕಲ ಅಂದಾಜು ರೂ. 35,000/- ಬೆಲೆ ಬಾಳುವದ್ದು ಇರುತ್ತದೆ  ಅಂತಾ ನೀಡಿದ ದೂರಿನ ಮೇರೆಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 54/2020 ಕಲಂ 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ 17.07.2020 ರಂದು 16:30 ಗಂಟೆಗೆ ಪಿಎಸ್ಐ ರವರು  ಮಂಠಾಳ ಪೊಲೀಸ್ ಠಾಣೆಯಲ್ಲಿರುವಾಗ ಖಿಚಿತ ಮಾಹಿತಿ ಬಂದಿದ್ದೆನೆಂದರೆ, ಆಲಗೂಡ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮದ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೋಡುತ್ತಿದ್ದಾನೆ ಅಂತ ಖಚಿತ ಬಾತ್ಮಿ  ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಆಲಗೂಡ ಗ್ರಾಮದ ಬಸನಿಲ್ದಾಣದ ಹತ್ತಿರ ಹೋಗಿ ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸರಾಯಿ ಪೌಚ್ಗಳು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಡುವುದನ್ನು ಕಂಡು ಅವನ ಮೇಲೆ  ದಾಳಿ ಮಾಡಿ ಅವನಿಗೆ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಬಾಲಾಜಿ ತಂದೆ ಧನರಾಜ ಮುದಗಲೆ ವಯಸ್ಸು 21 ವರ್ಷ, ಜಾತಿ-ಮರಾಠಾ ಉದ್ಯೋಗ-ಕೂಲಿಕೆಲಸ ಸಾ|| ಆಲಗೂಡ ತಾ|| ಬಸವಕಲ್ಯಾಣ ಅಂತ ತಿಳಿಸಿದನು. ಅವನ ತಾಬೆಯಲ್ಲಿದ್ದ ಸರಾಯಿ ರಟ್ಟಿನ ಪೌಚ್ಗಳು ಪರಿಶೀಲಿಸಿ ನೋಡಲು ಅವು 180 ಎಮ್ ಎಲ್ ನ 4 ಓಲ್ಡ್ ಟಾವರ್ನ ವಿಸ್ಕಿ ಸರಾಯಿ ರಟ್ಟಿನ್ ಪೌಚ್ಗಳು ಇದ್ದು ಅದರಲ್ಲಿನ ಒಂದು ಪೌಚ್ನಲ್ಲಿ ಅಂದಾಜು 90 ಎಮ್ಎಲ್ ನಷ್ಟು ಖಾಲಿಯಾದ ಸರಾಯಿ ರಟ್ಟಿನ್ ಪೌಚ್ ಇರುತ್ತದೆ ಇವುಗಳ ಒಟ್ಟು ಅ|| ಕಿ|| 302/-ರೂಪಾಯಿ ನೆದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.