ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 17-09-2020

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 108/2020 ಕಲಂ 379 ಐಪಿಸಿ :-

ದಿನಾಂಕ 16/09/2020  ರಂದು 1330  ಗಂಟೆಗೆ ಫಿರ್ಯಾದಿ  ರತಿಕಾಂತ  ತಂದೆ ರಾಜಪ್ಪ ವಯ:24 ವರ್ಷ  ಸಾ/ಸಿದ್ದೇಶ್ವರ ತಾ/ಭಾಲ್ಕಿ ಸಧ್ಯ ಸಿಧ್ಧಾರೂಡ ಮಠದ ಹತ್ತೀರ ಗುಂಪಾ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನಂದರೆ ಫಿರ್ಯಾದಿಯ ಮೋಟರ ಸೈಕಲ  ನಂ ಕೆ.ಎ.38ಎಕ್ಸ್-1455 ನೆದನ್ನು 2020 ನೇ ಸಾಲಿನಲ್ಲಿ  ಖರಿದಿಸಿದ್ದು ಇರುತ್ತದೆ.   ದಿನಾಂಕ 11/09/2020 ರಂದು ರಾತ್ರಿ 2300 ಗಂಟೆಗೆ ಮೊಟರ ಸೈಕಲನ್ನು ಕೆ.ಐ.ಡಿ.ಬಿ. ಕಾಲೋನಿಯಲ್ಲಿ ಇರುವ  ನಮ್ಮ  ಸಂಬಂಧಿಕರಾದ ಶ್ರೀ. ಪ್ರೇಮನಾಥ  ಇವರ  ಮನೆಯ ಎದುರಿಗೆ ನಿಲ್ಲಿಸಿ ಅವರ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 12/09/2020 ರಂದು ಮುಂಜಾನೆ 0600  ಗಂಟೆಗೆ ಎದ್ದು ನೋಡಿದಾಗ  ಮೊಟರ ಸೈಕಲ ನಾನು ಇಟ್ಟಿದ್ದ ಜಾಗದಲ್ಲಿ ಇದ್ದಿರುವದಿಲ್ಲ.   ದಿನಾಂಕ 11/09/2020 ರಂದು ರಾತ್ರಿ  2300 ಗಂಟೆಯಿಂದ  ದಿನಾಂಕ 12/09/2020 ರಂದು ಬೆಳೆಗ್ಗೆ 0600 ಗಂಟೆಯ ಅವಧಿಯಲ್ಲಿ  ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 117/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ:16/09/2020 ರಂದು 16:00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1/- ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 1800 ಗಂಟೆಗೆೆ ದಾಳಿಮಾಡಿ  ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು 1] ಜಿಶಾನ ಅಹ್ಮದ ತಂದೆ ಶೇರಅಲಿ ವಯಸ್ಸು//26 ವರ್ಷ ಜಾತಿ//ಮುಸ್ಲಿಂ  ಉ//ಮೆಕ್ಯಾನಿಕ ಕೆಲಸ ಸಾ//ರೀಕ್ಷಾ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಇವನ ಹತ್ತಿರ ನಗದು ಹಣ 1500/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 79/2020 ಕಲಂ 498(ಎ), 306 ಐಪಿಸಿ :-

ದಿನಾಂಕ:16/09/2020 ರಂದು 20:30 ಶ್ರಿ ಕಂಟೆಪ್ಪಾ ತಂದೆ ಗಂಗಾರಾಮ ಮಾಳಗೆ ವಯ; 55 ವರ್ಷ ಸಾ:ಬಾಬಳಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ  ಇವರ ಕಿರಿಯ ತಂಗಿ ಚಿನ್ನಮ್ಮಾ ಇವಳಿಗೆ 4 ವರ್ಷದ ಹಿಂದೆ ಔರಾದ ಬಿ ಪಟ್ಟಣದ ರಾಮನಗರನಲ್ಲಿ ರಾಹುಲ ತಂದೆ ಶಂಕರ ರಾಯ ಇತನಿಗೆ ಸಾಂಪ್ರದಾಯಿಕವಾಗಿ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಅವರಿಗೆ ಒಂದು ಗಂಡು ಮಗು ಸುಮೀತ 2 ವರ್ಷ 6 ತಿಂಗಳು. ಮತ್ತು  ಒಂದು ಹೆಣ್ಣು ಮಗು ಶಿವಾನಿ ವಯ: ಒಂದು ವರ್ಷ ಎರಡು ತಿಂಗಳು ಇದ್ದು, ಅವಳ ಗಂಡ ಮದುವೆಯಾದಾಗಿಂದ ಕುಡಿಯುವ ಚಟದವನಾಗಿದ್ದು ಆಗಾಗ  ಸರಾಯಿ ಕುಡಿದು ಬಂದು ಜಗಳ ತೆಗೆದು ಹೊಡೆ ಬಡೆ ಮಾಡುತಿದ್ದನು ಅಂತ ಫೀರ್ಯಾದಿಯ ತಂಗಿ ನಮ್ಮ ಮನೆಗೆ ಬಂದಾಗ ತಿಳಿಸುತ್ತಿದ್ದಳು ಆದರೆ ಫಿರ್ಯಾದಿ ಮನೆಯವರು ಅವಳಿಗೆ ಮತ್ತು ಭಾವನಿಗೆ ಮಕ್ಕಳಿವೆ ಸುಧಾರಿಸಿಕೊಂಡು ಹೋಗಬೇಕು ಅಂತ ಬುದ್ದಿವಾದ ಹೇಳುತ್ತಿದ್ದರು, ಆದರೆ ನಮ್ಮ ಭಾವ ಸರಾಯಿ ಕುಡಿದು ಬಂದು ದಿನಾಲು ಫೀರ್ಯಾದಿ ತಂಗಿಗೆ ವಿನಾ ಕಾರಣ ಹೊಡೆದು ಬಡೆದು ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾರೆ.    ದಿನಾಂಕ 16/09/2020 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ    ಚಿನ್ನಮ್ಮಾ ಇವಳು ತನ್ನ ಮನೆಯಲ್ಲಿ ತಗಡೆ ಕೆಳಗೆ ಇರುವ ಕಬ್ಬೀಣದ ಪೈಪಿಗೆ ಬಟ್ಟೆಯಿಂದ ನೇಣು ಹಾಕಿಕೊಂಡಿದ್ದು ಅವಳಿಗೆ ಔರಾದ ಸರಕಾರಿ ಆಸ್ಪತ್ರೆಗೆ ತಂದಾಗ ಮೃತ ಪಟ್ಟಿರುತ್ತಾಳೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.