ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-06-2020

 

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-

ಫಿರ್ಯಾದಿ ಬಾಲಿಕಾ ಗಂಡ ಹಣಮಂತ ಜಾಧವ ವಯ: 55 ವರ್ಷ, ಜಾತಿ: ಮರಾಠಾ, ಸಾ: ಜೊಳದಾಬಕಾ ರವರ ಮಗನಾದ ಮಚೆಂದ್ರ ವಯ: 24 ವರ್ಷ ಇತನು ಯಾವುದೋ ವಿಷಯ ಸಂಬಂಧ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 15-06-2020 ರಂದು ಫಿರ್ಯಾದಿಯವರ ಮೈದುನ ಭಿಮರಾವ ಜಾಧವ ಇವರ ಮನೆಯಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಆತನ ಸಾವಿನಲ್ಲಿ ನಮಗೆ ಕೆಲವು ರೀತಿಯ ಸಂಶಯ ಇರುತ್ತದೆ ಅಂತ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 39/2020, ಕಲಂ. 32, 34 ಕೆ. ಕಾಯ್ದೆ :-

ದಿನಾಂಕ 16-06-2020 ರಂದು ಸರಾಯಿ ಮಾರಾಟ ಮಾಡುವ ಬಗ್ಗೆ ಕು.ಸಂಗೀತಾ ಪಿಎಸ್ಐ (ಕಾಸೂ) ಮಾರ್ಕೆಟ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶಿವಾನಿ ಧಾಭಾದಲ್ಲಿ ಒಬ್ಬ ವ್ಯಕ್ತಿ ಅನಧಿಕ್ರತವಾಗಿ ಸರಾಯಿ ಮಾರಾಟ ಮಾಡುತ್ತಿರುವಾಗ ಸರಾಯಿ ಮಾರಾಟ ಮಾಡುತ್ತಿರುವ ಆರೋಪಿತನಾದ ಗೋಪಾಲರೆಡ್ಡಿ ತಂದೆ ಅಂಜಾರೆಡ್ಡಿ ವಯ: 38 ವರ್ಷ, ಸಾ: ಕಾಡವಾದ, ತಾ: & ಜಿ: ಬೀದರ ಇತನ ಮೇಲೆ ದಾಳಿ ಮಾಡಿ ಆತನಿಗೆ ದಸ್ತಗಿರಿ ಮಾಡಿ ಅವನ ಹತ್ತಿರವಿದ್ದ 1) ಟ್ಯೂಬೊರ್ಗ ಪ್ರೀಮಿಯಂ ಬೀಯರ 650 ಎಂ.ಎಲ್ ನ 30 ಬಾಟಲಿಗಳು ಅ.ಕಿ 4350/-ರೂ., 2) ಬಡವೈಸರ್ ಮ್ಯಾಗನೆಮ್ ಬೀಯರ 650 ಎಂ.ಎಲ್ ನ 02 ಬಾಟಲಿಗಳು ಅ.ಕಿ 390/- ರೂ., 3) ಕಿಂಗಫಿಶರ ಬೀಯರ 650 ಎಂ.ಎಲ್ 140/- ರೂ., 4) ಮ್ಯಾಕಡೊವೆಲ್ ವಿಸ್ಕಿ 180 ಎಂ.ಎಲ್ ನ 3 ಬಾಟಲಿಗಳು ಅ.ಕಿ 468/- ರೂ. ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 40/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 16-06-2020 ರಂದು ದೀನದಯಾಳ ನಗರ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾನೆಂದು ಕು.ಸಂಗೀತಾ ಪಿಎಸ್ಐ (ಕಾಸೂ) ಮಾರ್ಕೆಟ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ದೀನದಯಾಳ ನಗರ ಹತ್ತಿರ ಹೋಗಿ ಪಂಚರ ಸಮಕ್ಷಮ ಆರೋಪಿ ಅಶೋಕ ತಂದೆ ಸೂರ್ಯಬಾನ ಉಪಾಧ್ಯಾಯ ವಯ: 50 ವರ್ಷ, ಜಾತಿ: ಮಾಂಗರವಾಡಿ, ಸಾ: ದೀನದಯಾಳ ನಗರ ಬೀದರ ಇತನ ಮೇಲೆ ದಾಳಿ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿ ಸದರಿ ಆರೋಪಿತನಿಂದ 1) ನಗದು ಹಣ 2440/- ರೂ., 2) 3 ಮಟಕಾ ಚೀಟಿಗಳು ಹಾಗು 3) ಒಂದು ಬಾಲ ಪೆನ್ನು ಅ.ಕಿ 10/- ರೂ ನೇದವುಗಳನು್ನ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 137/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 16-06-2020 ರಂದು ಭಾಲ್ಕಿಯ ಪಾಪವ್ವ ಚೌಕ ಹ್ತತಿರ ಭೀಮನಗರದಲ್ಲಿ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಒಂದು ರೂ. ಗೆ 80/- ರೂ. ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಡಾ: ದೇವರಾಜ ಬಿ ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಡಿ.ಎಸ್.ಪಿ ರವರು ಇಬ್ಬರು ಪಂಚರನ್ನು ಬರಮಾಡಿಕೊಡು ತಮ್ಮ ಸಿಬ್ಬಂದಿಯವರೊಡನೆ ಭೀಮನಗರದಲ್ಲಿ ಹೋಗಿ ಅಂಬೇಡ್ಕರ ಚೌಕ ಹತ್ತಿರದಿಂದ ಮರೆಯಲ್ಲಿ ನಿಂತು ನೋಡಲು ಆರೋಪಿ ತಿಪ್ಪಣ್ಣ ತಂದೆ ಸಂಗಪ್ಪಾ ರಾಮಲೆ ವಯ: 57 ವರ್ಷ, ಜಾತಿ: ವಡ್ಡರ, ಸಾ: ಪಾಪವ್ವ ನಗರ ಭಾಲ್ಕಿ ಇತನು ಅಂಬೇಡ್ಕರ ಚೌಕ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತು ಒಂದು ರೂ. ಗೆ 80/- ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ 1) ನಗದು ಹಣ 300/- ರೂ., 2) 2 ಮಟಕಾ ಚೀಟಿಗಳು ಹಾಗೂ 3) ಒಂದು ಬಾಲ ಪೆನ್ನ ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿಯವನಿಗೆ ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಹಿಳಾ ಪೊಲೀಸ ಠಾಣೆ, ಬೀದರ ಅಪರಾಧ ಸಂ. 22/2020, ಕಲಂ. 3, 4, 6 ಪಿ..ಟಿ ಕಾಯ್ದೆ-1956 :-

ದಿನಾಂಕ 16-06-2020 ರಂದು ಸಾಯಿ ನಗರದ ಬಡಾವಣೆಯಲ್ಲಿ ಕೃಷ್ಣಾ ನಿವಾಸದಲ್ಲಿ ವೈಷಾವಾಟಿಕೆ ನಡೆಯುತ್ತಿದೆ ಅಂತ ಸಿ.ಪಿ.ಐ ಬೀದರ ನಗರ ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಪೊಲೀಸ ಉಪಾಧೀಕ್ಷಕರು ಬೀದರ ರವರ ಅನುಮತಿ ಪಡೆದುಕೊಂಡು ಇಬ್ಬರು ಪಂಚರನ್ನು ಬರಮಾಡಿಕೊಂಡು, ಬೀದರ ನೂತನ ನಗರ ಠಾಣೆಯ ಪಿಎಸ್.ಐ ಮತ್ತು ಸಿಬ್ಬಂದಿಯವರೊಡನೆ ಸಾಯಿ ನಗರಕ್ಕೆ ತಲುಪಿ ಅಲ್ಲಿ ಒಂದು ಮನೆಯಲ್ಲಿ ಒಬ್ಬ ಹೆಣ್ಣು ಮಗಳು ಮತ್ತು ಒಬ್ಬ ಪುರುಷನು ಅರೆ ಬೆತ್ತಲೆಯಾಗಿ ಮಲಗಿಕೊಂಡಿದ್ದು, ಮಹಿಳಾ ಸಿಬ್ಬಂದಿಯಿಂದ ಅವಳ ಹೆಸರು ವಿಳಾಸ ವಿಚಾರಿಸಲಾಗಿ, ವೈಶಾಲಿ ಗಂಡ ಮಾಂತೇಶ ಸಾ: ಭಾಲ್ಕಿ ಅಂತ ತಿಳಿಸಿದಳು ಹಾಗೂ ಅವಳ ಜೊತೆ ಇದ್ದ ವ್ಯಕ್ತಿಯ ಹೆಸರು ವಿಚಾರಿಸಲಾಗಿ ಶಿವರಾಜ ತಂದೆ ಮಾಣಿಕಪ್ಪಾ ಮಜಗೆ ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ಬಸವೇಶ್ವರ ಕಾಲೋನಿ ಭಾಲ್ಕಿ ಅಂತ ತಿಳಿಸಿದನು, ವೈಶಾಲಿ ಇವಳಿಗೆ ವಿಚಾರಿಸಲಾಗಿ ಮನೆಯ ಮಾಲಕಿ ಲಕ್ಷ್ಮಿಬಾಯಿ ಇವಳು ನನಗೆ ಪರಿಚಯ ಇದ್ದು ಅವಳು ವೈಶ್ಯವಾಟಿಕೆ ಗೋಸ್ಕರ ಸ್ಥಳಕ್ಕೆ ಅವಕಾಶ ಮಾಡಿಕೊಟ್ಟು ಹಣ ಪಡೆದು ನನಗೆ ವೈಶ್ಯವಾಟಿಕೆಯಲ್ಲಿ ತೊಡಗಿಸಿರುತ್ತಾಳೆ ಅಂತ ತಿಳಿಸಿರುತ್ತಾಳೆ, ವೈಶ್ಯವಾಟಿಕೆಯಲ್ಲಿ ತೊಡಗಿಸಿದ ಲಕ್ಷ್ಮಿಬಾಯಿ ಇವಳ ಹತ್ತಿರ 3,000/- ರೂಪಾಯಿ ಹಾಗು ವೈಶ್ಯವಾಟಿಕೆ ಮಾಡಲು ಬಂದ ಶಿವರಾಜ ರವರ ಹತ್ತಿರ 2,500/- ಹಾಗು ಒಂದು ವಿವೋ ಕಂಪನಿಯ ಮೊಬೈಲ್ ಅ.ಕಿ. 5,000/- ಮತ್ತು ಒಂದು ಸ್ಯಾಮಸಂಗ್ ಕಿಪ್ಯಾಡ್ ಮೊಬೈಲ್ ಅ.ಕಿ. 500/- ಮತ್ತು 3 ನಿರೋಧಗಳು ಹಾಗು ಒಂದು ಶಿಪ್ಟ್‌ ಕಾರ್ ನಂ. ಎಂ.ಹೆಚ್.-24/ಎಎಫ್-3498 ಅ.ಕಿ. 3 ಲಕ್ಷ ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ವೈಶಾವಾಟಿಕೆಗೆ ವವಸ್ಥೆ ಮಾಡಿ ಕೊಟ್ಟ ಮನೆಯ ಮಾಲಕಿಯಾದ ಲಕ್ಷ್ಮಿಬಾಯಿ ಮತ್ತು ಆರೋಪಿತನಾದ ಶಿವರಾಜ ತಂದೆ ಮಾಣಿಕಪ್ಪಾ ಮಜಗೆ ರವರಿಗೆ ದಸ್ತಗಿರಿ ಮಾಡಿ, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 84/2020, ಕಲಂ. 279, 338 ಐಪಿಸಿ ಜೊತೆ 187 .ಎಮ್.ವಿ ಕಾಯ್ದೆ :-

ದಿನಾಂಕ 16-06-2020 ರಂದು ಫಿರ್ಯಾದಿ ಸಂಗಮೇಶ ತಂದೆ ವಿಶ್ವನಾಥ ಘಟವಾಡಿ, ವಯ: 24 ವರ್ಷ, ಜಾತಿ: ಲಿಂಗಾಯತ, ಸಾ: ಕುನಬಿವಾಡಾ ಚಿಟಗುಪ್ಪಾ ರವರು ತಮ್ಮ ಹೋಲಕ್ಕೆ ತನ್ನ ಹೊಂಡಾ ಡ್ರೀಮ್ ಮೋಟರ್ ಸೈಕಲ್ ನಂ. ಕೆ.ಎ-39/ಆರ್-5412 ನೇದರ ಮೇಲೆ ಹೊಲಕ್ಕೆ ಹೋಗುವಾಗ ಚಿಟಗುಪ್ಪಾ-ಫಾತ್ಮಾಪೂರ ರೋಡ ಬಂಡೆಪ್ಪಾ ಮೊಗಲಪ್ಪನೊರ ರವರ ಹೋಲದ ಹತ್ತಿರ ರೋಡಿನ ಮೇಲೆ ಹಿಂದಿನಿಂದ ಬಂದ ಮೋಟಾರ ಸೈಕಲ್ ನಂ. ಎಮ್.ಎಚ್-12/ಎಫ್.ಬಿ-8472 ನೇದ್ದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಓಣಿಯ ಶಿವಕುಮಾರ ಅಡಕಿ ಮತ್ತು ಅನೀಲ ಗಡಮಿ ರವರು ಬಂದು 108 ಗೆ ಕರೆಮಾಡಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.