ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 17-04-2020

 

ಬ,ಕಲ್ಯಾಣ ನಗರ ಠಾಣೆ ಅಪರಾಧ ಸಂಖ್ಯೆ 47/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ:16/04/2020 ರಂದು 15:00 ಗಂಟೆಗೆ    ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ   ಬಸವಕಲ್ಯಾಣ ನಗರದ ಈಶ್ವರ ನಗರ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಕಳ್ಳಭಟ್ಟಿ ಸರಾಯಿವುಳ್ಳ ಬಾಟಲಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ  ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮಿಬಂದ ಮೇರೆಗೆ ಸಿಬ್ಬಂದಿಯೋಂದಿಗೆ   ಈಶ್ವರ ನಗರ ಹನುಮಾನ ಮಂದಿರ ದಿಂದ 50 ಅಡಿ ಅಂತರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನೋಡಲು ಭಾತ್ಮಿಯಂತೆ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಪ್ಲಾಸ್ಟೀಕ್ ಚೀಲವನ್ನು ಇಟ್ಟುಕೊಂಡು ಕುಳಿತಿದ್ದು ನೋಡಿ ನಾವೆಲ್ಲರೂ ನಡೆದು ಕೊಂಡು ಹೋಗಿ ಅವನ ಮೇಲೆ ಸಮಯ 15:40 ಗಂಟೆಗೆ ದಾಳಿ ಮಾಡಲು ಮಾಡಿ ಸಂತೊಷ ತಂದೆ ಮಹಾದೇವ ಜಾಧವ ವಯಸ್ಸು//41 ವರ್ಷ ಜಾತಿ//ಕೋರವೆ ಉ//ಕೂಲಿಕೆಲಸ ಸಾ//ಈಶ್ವರ ನಗರ ಬಸವಕಲ್ಯಾಣ ಇವರ ಹತ್ತಿರವಿದ್ದ ಕಳ್ಳಭಟ್ಟಿ ಸರಾಯಿವುಳ್ಳ ಬಾಟಲಗಳು ಪ್ಲಾಸ್ಟೀಕ್ ಚೀಲವನ್ನು ಪಂಚರೊಂದಿಗೆ ಪರಿಶೀಲಿಸಿ ನೋಡಲು ಒಂದು ಲೀಟರ ಗಾತ್ರದ 3 ಪ್ಲಾಸ್ಟಿಕ್ ಬಾಟಲಿಗಳಲ್ಲಿ ಕಳ್ಳಭಟ್ಟಿ ಸರಾಯಿ ಅಂದಾಜು 3 ಲೀಟರ್ ಇರುತ್ತದೆ ಅದರ ಅಂದಾಜು ಕಿಮ್ಮತ್ತು 300/-ರೂ ಇದ್ದು ನೇದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೋಳ್ಳಲಾಗಿದೆ.

ಔರಾದ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 273  L¦¹, PÀ®A 32 34 PÉE JPÀÖ :-

ದಿನಾಂಕ 16-04-2020 ರಂದು 1340 ಗಂಟೆಗೆ ಪಿಎಸ್ಐ ರವರಿ ಠಾಣೆಯಲ್ಲಿದ್ದಾಗ ಇಂದಿರಾನಗರ ತಾಂಡಾದ ಆಚೆಗೆ ಧನಸಿಂಗನಾಯಕ ತಾಂಡಕ್ಕೆ ಹೋಗುವ ಕಾಲುದಾರಿಯ ಮೇಲೆ ಅಕ್ರಮವಾಗಿ ಸಾರಾಯಿ ಮಾರಟ ಖರೀದಿ ನಡೆಯುತ್ತಿದೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ   ಮೊಹನ ತಂದೆ ದೇವಿದಾಸ ರಾಠೋಡ ವಯ 20 ವರ್ಷ ಜಾತಿ ಲಮಾಣಿ ಉದ್ಯೋಗ ವ್ಯಾಪಾರ ಸಾ: ಗಾಂಧಿನಗರ ತಾಂಡಾ ಮೆಡಪಳ್ಳಿ ಅಂತ ತಿಳಿಸಿದ್ದು ಹಾಗೂ ಓಡಿ ಹೋದವರು ತನ್ನ ಸಹೋದರ ಮಾವನಾಗಿದ್ದು ಅವರ ಹೆಸರು  ಶಿವಾಜಿ ತಂದೆ  ಲಚಮಣ ಸಾ: ಆಲೂರ(ಕೆ) ತಾಂಡಾ ಇರುತ್ತದೆ ಎಂದು ತಿಳಿಸಿರುತ್ತಾನೆ. ನಡೆದುಕೊಂಡು ಬಂದಿರುವವರು ತನ್ನ ಹೆಸರು 1] ಸುರೇಶ ತಂದೆ ಜಯಸಿಂಗ ಜಾಧವ ವಯ 32 ವರ್ಷ ಜಾತಿ ಲಮಾಣಿ ಸಾ:ಖಂಡೆಕೇರಿ ತಾಂಡಾ , 2] ಶಂಕರ ತಂದೆ ಪಿತಾರಾಮ ರಾಠೋಡ 68 ವರ್ಷ ಜಾತಿ ಲಮಾಣಿ ಸಾ: ಇಂದಿರಾನಗರ ತಾಂಡಾ ಎಂದು ತಿಳಿಸಿದ್ದು  ನಂತರ ಅವರ ವಶದಲ್ಲಿನ ಪ್ಲಾಸ್ಟೀಕ ಕ್ಯಾನಗಳು  ಪರಿಶೀಲಿಸಿ ನೋಡಲು 1] ಅಂದಾಜು 20 ಲಿಟರನಷ್ಟಿರುವ ಒಂದು ಕ್ಯಾನನಲ್ಲಿ ಅಂದಾಜು 18 ಲಿಟರ ನಷ್ಟು ಕಳ್ಳಭಟ್ಟಿ ಸರಾಯಿ ಇದ್ದು ಹಾಗೂ 2] ಇನ್ನೊಂದು 15 ಲಿಟರನಷ್ಟನಲ್ಲಿರುವ ಕ್ಯಾನನಲ್ಲಿ ಅಂದಾಜು 12 ಲಿಟರನಷ್ಟು ಕಳ್ಳ ಭಟ್ಟಿ  ಸರಾಯಿ  ಖರೀದಿಸಿದ ವ್ಯೆಕ್ತಿ  ಒಂದು ಲಿಟರಗೆ 100/- ರೂ. ಯಂತೆ ಒಟ್ಟು 2000/-ರೂ. ನಗದು ಕೊಟ್ಟು ಒಟ್ಟು 30 ಲಿಟರ ಸಾರಾಯಿ ಖರೀದಿಸಿ ಉಳೀದ ಹಣ ಮತ್ತೆ ಕೊಡುತ್ತೇವೆ ಎಂದು ಹೇಳಿ ಮಾರಾಟ ಮಾಡಲು    ಊರಿಗೆ ಸಾಗಿಸಿಕೊಂಡು ಹೋಗತ್ತಿದ್ದೇವೆ ಎಂದು ತಿಳಿಸಿರುತ್ತಾನೆ.  ಸರಾಯಿ ಮಾರಾಟ ಮಾಡಿದರಿಂದ ಹಣ ಪಡೆದ ವ್ಯ್ಯಕ್ತಿ ಸುರೇಶ ಇತನ ವಶದಿಂದ 2000/-ರೂ.  ಸಾರಾಯಿ ಸಾಗಿಸಿಕೊಂಡು ಹೋಗಲು ತಂದ ಮೊಟಾರ ಸೈಕಲ್  ನಂ  ನೋಡಲು ಕೆಎ-39/ಆರ್-2573 ನೇದು ಅಕಿ 30,000/-ರೂ ಬೆಲೆಯದ್ದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.