ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-05-2020

ಬೇಮಳಖೇಡಾ  ಪೊಲೀಸ ಠಾಣೆ ಅಪರಾಧ ಸಂಖ್ಯೆ 16/2020 279.304(ಎ) ಐಪಿಸಿ ಜೊತೆ 187 ಐಎಮ.ವಿ ಎಕ್ಟ್  :-

ದಿನಾಂಕ: 16-05-2020 ರಂದು 0100 ಗಂಟೆಗೆ ಫಿರ್ಯಾದಿ ಎಮ್.ಡಿ. ಮುಸ್ತಾಫ್ ತಂದೆ ಮೊಹ್ಮದ್ ಮದಾರ ಪಟೆಲ ತಾದಲಾಪೂರವಾಲೆ  ವಯ 27 ವರ್ಷ  ಸಾ: ಮೊಗದಾಳ ಗ್ರಾಮ. ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 15-05-2020 ರಂದು ಫಿರ್ಯಾದಿ ಅಣ್ಣ ಮೌಲಾನಾ ತಂದೆ ಮದರ   ಪಟೇಲ ತಾದಲಾಪೂರವಾಲೆ  ವಯ 35 ವರ್ಷ  ತನ್ನ  ಮೋಟಾರ ಸೈಕಲ ನಂ ಕೆಎ-38 ಇ -5561 ನೇದರ ಮೇಲೆ ಮನ್ನಾಎಖೆಳ್ಳಿ ಗ್ರಾಮದ ಅವನ ಗೆಳೆಯನಾದ ಜಾವಿದ ಟ್ರಾಕ್ಟರ ಮೆಕ್ಯಾನಿಕ ಇವನ ಹತ್ತಿರ ಹೋಗಿ ಭೇಟಿಯಾಗಿ 15-05-2020  ರಾತ್ರಿ 23:00   ಗಂಟೆಗೆ ಮರಳಿ  ರಾ.ಹೆ.ನಂ 65 ರ ಮೇಲೆ ನಿಜಾಮೋದ್ದಿನ ರವರ ಹೊಲದ ಹತ್ತಿರ ಬರುತ್ತಿರುವಾಗ ಎದುರಿನಿಂದ ಅಂದರೆ ಮರಕುಂದಾ ಕಡೆಯಿಂದ ಯಾವುದೋ ಅಪರಿಚಿತ ವಾಹನ ಚಾಲಕನು ರೋಡಿನ ರಾಂಗ್ ಸೈಡಿನ ಬಲಭಾಗಕ್ಕೆ ಬಂದು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಅಣ್ಣನ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿರುತ್ತಾನೆ. ಇದರಿಂದ ಫಿರ್ಯಾದಿ ಅಣ್ಣ ಭಾರಿ ಗಾಯಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಾಗಿದೆ.