ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-07-2020

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ನಂ. 16/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 13-07-2020 ರಂದು 2330 ಗಂಟೆಗೆ ಫಿರ್ಯಾದಿ ರಾಜೇಶ್ವರಿ ಗಂಡ ವಿಜಯರೆಡ್ಡಿ ವಯ: 35 ವರ್ಷ, ಸಾ: ಅಣದೂರ, ಸದ್ಯ: ಸಿದ್ಧಾರೂಢ ಆಸ್ಪತ್ರೆ ಹಿಂದುಗಡೆ ಗುಂಪಾ ಬೀದರ ರವರಿಗೆ ವಾಂತಿ ಮತ್ತು ಭೇದಿಯಾಗಿದ್ದರಿಂದ ಅವರಿಗೆ ತಕ್ಷಣ ಚಿಕಿತ್ಸೆ ಕುರಿತು ಒಂದು ವಾಹನದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಗಂಡನು ಮೃತಪಟ್ಟಿರುತ್ತಾರೆಂದು ವೈದ್ಯರು ತಿಳಿಸಿರುತ್ತಾರೆ, ತನ್ನ ಗಂಡನ ಮರಣದಲ್ಲಿ ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತಾ ನೀಡಿದ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 14-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 84/2020, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 13-07-2020 ರಂದು ಆರೋಪಿ ಆಕಾಶ ತಂದೆ ವೈಜಪ್ಪಾ ಮೇತ್ರೆ ವಯ: 22 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಲ್ಲೂರ ಇತನ ಸ್ಕಾರ್ಪಿಯೊ ವಾಹನ ನಂ. ಎಪಿ-31/ಟಿ.ವಿ-2884 ನೇದ್ದರಲ್ಲಿ ಫಿರ್ಯಾದಿ ಭದ್ರಪ್ಪಾ ತಂದೆ ಲಕ್ಷ್ಮಣ ಹೊನ್ನಗೊಂಡ ವಯ: 48 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಲ್ಲೂರ ರವರ ಮಗನಾದ ಸಿದ್ದಲಿಂಗ ಮತ್ತು ಗ್ರಾಮದ ಮಹೇಶ ಗದಗ ರವರಿಗೆ ಕೂಡಿಸಿಕೊಂಡು ಮನ್ನಾಏಖೇಳ್ಳಿಗೆ ಹೋಗುವಾಗ ನಿಂಬೂರ ಶಿವಾರ ಚಿಕ್ಕಪಾಟೀಲ ರವರ ಹೊಲದ ಹತ್ತಿರ ರೋಡಿನ ಮೇಲೆ ಆರೋಪಿಯು ಸದರಿ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿದ ಪರಿಣಾಮ ಹಿಡಿತ ತಪ್ಪಿ ರೋಡಿನ ಬದಿಗೆ ತಗ್ಗಿನಲ್ಲಿ ವಾಹನ ಪಲ್ಟಿ ಮಾಡಿದ್ದರಿಂದ ಫಿರ್ಯಾದಿಯವರ ಮಗನಾದ ಸಿದ್ದಲಿಂಗ ಇತನಿಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 14-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 54/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 14-07-2020 ರಂದು ಹಾರಕೂಡ ಗ್ರಾಮದ ಶಿವಾರದಲ್ಲಿ ಮೆಗರಾಜ ನಾಗರಾಳೆರವರ ಹೊಲದ ಹತ್ತಿರ ಗದಲೇಗಾಂವ ಹಾರಕೂಡ ರೋಡಿನ ಬದಿಯಲ್ಲಿ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಅರುಣಕುಮಾರ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಾರಕೂಡ ಗದಲೇಗಾಂವ ಕ್ರಾಸನ ರೋಡಿನ ಮೇಲೆ ಮೆಗರಾಜ ನಾಗರಾಳೆರವರ ಹೊಲದ ಹತ್ತಿರ ಹೋಗಿ ನೋಡಲು ಅಲ್ಲಿ ಆರೋಪಿತರಾದ 1) ಚನ್ನಪ್ಪ ತಂದೆ ಕಲ್ಯಾಣಿ ಕೂಡಂಬಲ ವಯ: 40 ವರ್ಷ, ಜಾತಿ: ಎಸ್.ಸಿ ಹೊಲೆಯ, 2) ಶಿವಶರಣಪ್ಪ ತಂದೆ ಕಲ್ಲಪ್ಪ ಪಾಟೀಲ ವಯ: 56 ವರ್ಷ, ಜಾತಿ: ಲಿಂಗಾಯತ, 3) ಸಿದ್ರಾಮ ತಂದೆ ಕಲ್ಯಾಣಿ ಹೆಗಡೆ ವಯ: 45 ವರ್ಷ, ಜಾತಿ: ಎಸ್.ಸಿ ಹೊಲೆಯ, 4) ಬಾಲಾಜಿ ತಂದೆ ಬಾಬುರಾವ ಬಿರಾದಾರ ವಯ: 40 ವರ್ಷ, ಜಾತಿ: ಮರಾಠಾ, 5) ಹಣಮಂತ ತಂದೆ ಮಹಾದೇವ ಶಿಲವಂತ ವಯ: 33 ವರ್ಷ, ಜಾತಿ: ಲಿಂಗಾಯತ 5 ಜನ ಸಾ: ಹಾರಕೂಡ, 6) ಶರಣಬಸಪ್ಪ ತಂದೆ ಅಂಬಾರಾವ ಶ್ರೀಚಂದ ವಯ: 38 ವರ್ಷ, ಜಾತಿ: ಲಿಂಗಾಯತ, 7) ಬಂಡೆಪ್ಪಾ ತಂದೆ ಅಪ್ಪರಾವ ಶ್ರೀಚಂದ ವಯ: 50 ವರ್ಷ, ಜಾತಿ: ಲಿಂಗಾಯತ, ಇಬ್ಬರು ಸಾ: ಸಿರಗಾಪುರ, 8) ದೇವರಾಜ ತಂದೆ ಭೊಜರಾಜ ಚವ್ಹಾಣ ವಯ: 45 ವರ್ಷ, ಜಾತಿ: ಲಮಾಣಿ, ಸಾ: ಹಾರಕೂಡ ತಾಂಡಾ ಹಾಗೂ 9) ಬಸವರಾಜ ತಂದೆ ಚಂದ್ರಶ್ಯಾ ಬಗದುರೆ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಬಾಗಹಿಪ್ಪರಗಾ, ಸದ್ಯ: ಹಾರಕೂಡ ಇವರೆಲ್ಲರೂ ದುಂಡಾಗಿ ಕುಳಿತು ಇಸ್ಪಿಟ ಆಡುತ್ತಿರುವುದನ್ನು ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಎಲ್ಲರಿಗು ಹಿಡಿದು ಅವರಿಂದ ಒಟ್ಟು ನಗದು ಹಣ 13,410/- ರೂ. ಹಾಗೂ 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 94/2020, ಕಲಂ. 87 ಕೆ.ಪಿ ಕಾಯ್ದೆ ಜೊತೆ 269 ಐಪಿಸಿ :-

ದಿನಾಂಕ 14-07-2020 ರಂದು ಬಸವಕಲ್ಯಾಣ ನಗರದ ಲಾಲತಲಾಬ ಓಣಿಯಲ್ಲಿರುವ ಮಹೆಬೂಬ ಸುಬಾನಿ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೊರೊನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಈ ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಕರೆ ಮುಖಾಂತರ ಸುನೀಲ್ಕುಮಾರ ಪಿ.ಎಸ್.ಐ (ಕಾ&ಸೂ) ಬಸವಕಲ್ಯಾಣ ನಗರ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಲಾಲತಲಾಬ ಓಣಿಯಲ್ಲಿರುವ ಮಹೆಬೂಬ ಸುಬಾನಿ ದರ್ಗಾದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ಲಾಲತಲಾಬ ಓಣಿಯಲ್ಲಿರುವ ಮಹೆಬೂಬ ಸುಬಾನಿ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಯುಸುಫ ತಂದೆ ಮಹೆತಾಬಸಾಬ ಗೋಕೆ ವಯ: 72 ವರ್ಷ, ಜಾತಿ: ಮುಸ್ಲಿಂ, 2) ಗನಿ ತಂದೆ ಮಹೆಬೂಬಸಾಬ ಜಿವಂಗಿ ವಯ: 58 ವರ್ಷ, ಜಾತಿ: ಮುಸ್ಲಿಂ, 3) ಗುಲಾಮೋದ್ದಿನ ತಂದೆ ಅಬ್ದುಲ ರಹೆಮಾನ ಕಮಲಾಪುರೆ ವಯ: 54 ವರ್ಷ, ಜಾತಿ: ಮುಸ್ಲಿಂ, ಮೂವರು ಸಾ: ಅಲ್ಲಾನಗರ ಬಸವಕಲ್ಯಾಣ, 4) ಅಬ್ದುಲ್ ಹಮೀದ ತಂದೆ ಅಬ್ದುಲ ಮಜೀದ ಭಂಗೆ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ಪಾಶಾಪುರ ಬಸವಕಲ್ಯಾಣ, 5) ನಾಜೀಮುದ್ದಿನ ತಂದೆ ಅಬ್ದುಲ್ ರಹೆಮಾನ ಬಾಗ ವಯ: 58 ವರ್ಷ, ಜಾತಿ: ಮುಸ್ಲಿಂ ಹಾಗೂ 6) ಸಲಿಮೋದ್ದಿನ ತಂದೆ ರಹೆಮತವುಲ್ಲಾ ಬಾಗ ವಯ: 51 ವರ್ಷ, ಜಾತಿ: ಮುಸ್ಲಿಂ, ಇಬ್ಬರು ಸಾ: ಧಾರಾಗಿರಿ ಬಸವಕಲ್ಯಾಣ ಇವರೆಲ್ಲರೂ ಗುಂಪಾಗಿ ಕುಳಿತುಕೊಂಡು ಕೊರೋನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಈ ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 21,960/- ರೂ. ಮತ್ತು 52 ಇಸ್ಪಿಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 58/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ  14-07-2020 ರಂದು ರಾಜೇಶ್ವರ ಗ್ರಾಮದ ಹನುಮಾನ ಮಂದಿರದ ಹತ್ತಿರ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ 1/- ರೂಪಾಯಿಗೆ 90/- ರೂಪಾಯಿ ಅಂತಾ ಕೂಗಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ವಸೀಮ ಪಟೇಲ್ ಪಿಎಸ್ಐ (ಕಾ&ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ರಾಜೇಶ್ವರ ಗ್ರಾಮದ ಹೈವೆ ರಸ್ತೆ ಮೇಲಿರುವ ಬಸ್ಸ ನಿಲ್ದಾಣದ ತಲುಪಿ ನೋಡಲು ಹನುಮಾನ ಮಂದಿರದ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಹ್ಮದಮೀಯ್ಯಾ ತಂದೆ ಖದೀರಮೀಯ್ಯಾ ಶೇಖ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ರಾಜೇಶ್ವರ ಇತನು ಜೋರಾಗಿ ಕುಗುತ್ತಾ 1/- ರೂಪಾಯಿಗೆ 90/- ರೂಪಾಯಿ ಅಂತಾ ಜೋರಾಗಿ ಕೂಗಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಅಲ್ಲಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಆರೋಪಿಗೆ ಹಿಡಿದು ಆತನ ಅಂಗ ಝಡ್ತಿ ಮಾಡಲು ಆತನ ಹತ್ತಿರ 2,500/- ರೂಪಾಯಿ, ಒಂದು ಬಾಲ ಪೇನ್ ಹಾಗೂ ಮಟಕಾ ಬರೆದ ಚೀಟಿ ಸಿಕ್ಕಿರುತ್ತವೆ, ಪುನಃ ಆರೋಪಿಗೆ ವಿಚಾರಿಸಲು ಆತನು ತಿಳಿಸಿದ್ದೆನೆಂದರೆ ನಾನು ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಂಡು ಬಂದ ಹಣವನ್ನು 100/- ರೂಪಾಯಿಗೆ 20/- ರೂಪಾಯಿ ಕಮೀಷನಂತೆ ನಮ್ಮೂರಿನ ಖದೀರ ತಂದೆ ಶರೀಫ ಶೇಕ ವಯ: 25 ವರ್ಷ, ಜಾತಿ: ಮುಸ್ಲಿಂ, ಇತನಿಗೆ ಕೊಡುತ್ತೇನೆ ಅಂತಾ ತಿಳಿಸಿದನು, ನಂತರ ನಗದು ಹಣ, ಮಟಕ ಚೀಟಿ, ಬಾಲ ಪೇನ ನೇದ್ದವುಗಳನ್ನು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 104/2020, ಕಲಂ. 279, 338 ಐಪಿಸಿ :-

ದಿನಾಂಕ 14-07-2020 ರಂದು ಫಿರ್ಯಾದಿ ಮಹಮ್ಮದ ಆರೀಫ್ ತಂದೆ ಶೇಕ ಮಹ್ಮದಅಲಿ, ವಯ: 29 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 12-1-486/1/8 ಕಿಸಾನ ನಗರ, ಆಸೀಪ್ ನಗರ ಹೈದ್ರಾಬಾದ ರವರು ಬುಲೇರೋ ಅಶೋಕ ಲಿಲ್ಯಾಂಡ ವಾಹನ ನಂ. ಟಿ.ಎಸ್-13/ಯು.ಬಿ-1136 ನೇದರಲ್ಲಿ ಹೈದ್ರಾಬಾದದಿಂದ ಕಲಬುರ್ಗಿಗೆ ಸೋಪಾ ತೆಗೆದುಕೊಂಡು ಹೋಗಿ ಮರಳಿ ಹೈದ್ರಾಬಾದಕ್ಕೆ ಹೋಗುವಾಗ ಹಳ್ಳಿಖೇಡ(ಕೆ) ಹತ್ತಿರ  ಕಲಬುರ್ಗಿ-ಹುಮನಾಬಾದ ರೋಡ ಹಳ್ಳಿಖೇಡ (ಕೆ) ಪೆಟ್ರೊಲ್ ಬಂಕ್ ಹತ್ತಿರ ಎದುರು ಗಡೆಯಿಂದ ಬಂದ ಟ್ಯಾಂಕರ ಲಾರಿ ನಂ. ಕೆಎ-56/4221 ನೇದರ ಚಾಲಕನಾದ ಆರೋಪಿಯು ತನ್ನ ಟ್ಯಾಂಕರ ಲಾರಿಯನ್ನು ಅತೀವೇಗ ಹಾಗು ನಿಷ್ಕಳಿಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ವಾಹನಕ್ಕೆ  ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ತೆಲೆಗೆ ರಕ್ತಗಾಯ, ಬಲಗೈ ಹಾಗು ಬಲಗಾಲಿಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿರುತ್ತದೆ, ನಂತರ ದಾರಿ ಹೊಕರು ನೋಡಿ ಫಿರ್ಯಾದಿಗೆ ಚಿಕಿತ್ಸೆ ಕುರಿತು 108 ಅಂಬುಲೇನ್ಸ ಮೂಲಕ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರ್ಗಿಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ಸಂ. 09/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಲಲೀತಾ ಗಂಡ ಗೋವಿಂದ ಚವ್ಹಾಣ ವಯ: 50 ವರ್ಷ, ಜಾತಿ: ಲಂಬಾಣಿ, ಸಾ: ಜನತಾ ಕಾಲೋನಿ ಔರಾದ(ಬಿ) ರವರ ಗಂಡ ಗೋವಿಂದ ಇವರು ಸರಾಯಿ ಕುಡಿಯುವ ಚಟದವರಿರುತ್ತಾರೆ, ದಿನಾಲು ಬೆಳ್ಳಗ್ಗೆಯಿಂದ ರಾತ್ರಿಯವರೆಗೆ ಸರಾಯಿ ಕುಡಿಯುತ್ತಲೆ ಇರುತ್ತಾರೆ, ಹೀಗಿರುವಾಗ ದಿನಾಂಕ 14-07-2020 ರಂದು ಫಿರ್ಯಾದಿಯು ಕೆಲಸಕ್ಕೆ ಹೋದಾಗ ಗಂಡ ಮನೆಯಲ್ಲಿಯ ಟೀನ್ ಶೆಡ್ಡಿನ ಕಬ್ಬಿಣ್ಣದ ರಾಡಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಆತನು ಸರಾಯಿ ಕುಡಿದ ನಶೆಯಲ್ಲಿ ನೇಣು ಹಕಿಕೊಂಡು ಮೃತಪಟ್ಟಿರುತ್ತಾನೆ, ಆತನ ಮರಣದಲ್ಲಿ ನನ್ನದು ನನ್ನ ಕುಟಂಬ ಸದಸ್ಯರದು ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 54/2020, ಕಲಂ. 392 ಐಪಿಸಿ :-

ದಿನಾಂಕ 14-07-2020 ರಂದು ಫಿರ್ಯಾದಿ ಅಂಬೀಕಾ ಗಂಡ ಕೃಷ್ಣಾ ಬಾಯನ್ ವಯ: 33 ವರ್ಷ, ಜಾತಿ: ಪದ್ಮಸಾಲಿ, ಸಾ: ಚಿಟ್ಟಗುಪ್ಪಾ, ಸದ್ಯ: ಸಂತಪುರ ರವರು ತಮ್ಮೂರಲ್ಲಿರುವ ಲಕ್ಷ್ಮೀ ದೇವಸ್ಥಾನಕ್ಕೆ ದೇವರಿಗೆ ನೈವೆದ್ಯ ಮಾಡಿಕೊಂಡು ಬರಲು ಮನೆಯಿಂದ ತನ್ನ ತಾಯಿ ರುಕ್ಮಿಣಿ ಇಬ್ಬರು ಲಕ್ಷ್ಮೀ ದೇವಸ್ಥಾನದ ಹತ್ತಿರ ಇರುವ ಹ್ಯಾಂಡ್ ಪಂಪಗೆ ತಂಬಿಗೆಯಲ್ಲಿ ನೀರು ತುಂಬಿಕೊಂಡು ಸ್ವಲ್ಪ ಮುಂದುಗಡೆ ದೇವಸ್ಥಾನದ ಹತ್ತಿರ ಹೋಗುವಾಗ ಲಕ್ಷ್ಮೀ ದೇವಸ್ಥಾನದ ಹತ್ತಿರ ಎರಡು ಮೋಟಾರ ಸೈಕಲಗಳ ಮೇಲೆ ಇಬ್ಬಿಬ್ಬರು 20 ರಿಂದ 25 ವರ್ಷ ವಯಸ್ಸಿನ ಹುಡುಗರು ದೇವಸ್ಥಾನಕ್ಕೆ ಸುತ್ತು ಹಾಕಿ ಫಿರ್ಯಾದಿಯು ದೇವಸ್ಥಾನದ ಒಳಗೆ ಹೊಗುವಷ್ಟರಲ್ಲಿ ಒಂದು ಯಮಾಹಾ ಮೋಟಾರ ಸೈಕಲ ಮೇಲೆ ಫಿರ್ಯಾದಿಯ ಹಿಂದೆ ನಿಂತಿದ್ದು ಇನ್ನೊಂದು ಪಲ್ಸರ್ ಮೋಟಾರ ಸೈಕಲ ಮೇಲೆ ಇಬ್ಬರು ಎದುರಿನಿಂದ ಬಂದು ಮೋಟಾರ ಸೈಕಲ ಹಿಂದೆ ಕುಳಿತ ಹುಡುಗ ಫಿರ್ಯಾದಿಯ ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ ಬಂಗಾರದ ಗಂಟನ ಸರವನ್ನು ಎಳೆದು ಕಿತ್ತುಕೊಂಡು ಅದೇ ಮೋಟಾರ ಸೈಕಲ ಮೇಲೆ ಓಡಿ ಹೋಗುವಾಗ ಫಿರ್ಯಾದಿಯು ತನ್ನ ಕೊರಳಲ್ಲಿನ ಚಿನ್ನದ ಸರವನ್ನು ಕಿತ್ತುಕೊಂಡು ಮೋಟಾರ ಸೈಕಲ ಮೇಲೆ ಓಡುತ್ತಿದ್ದಾರೆ ಹಿಡಿರಿ-ಹಿಡಿರಿ ಅಂತಾ ಚಿರಾಡುತ್ತಾ ಬೆನ್ನು ಹತ್ತಿದಾಗ ಸದರಿ ಮೋಟಾರ ಸೈಕಲ ನೋಡಲಾಗಿ ಅದು ಪಲ್ಸರ್ ಮೋಟಾರ ಸೈಕಲ್ ತರಹ ಇದ್ದು ಅದಕ್ಕೆ ನಂಬರ್ ಪ್ಲೇಟ್ ಇದ್ದಿರುವುದಿಲ್ಲ, ಕಪ್ಪು ಮತ್ತ ಬೂದಿ ಬಣ್ಣದ ಮೋಟಾರ ಸೈಕಲ್ ತರಹ ಇದ್ದು, ಕೊರಳಿನಿಂದ ಚಿನ್ನದ ಸರವನ್ನು ಕಿತ್ತಿದವನ ಚಹರೆ ಪಟ್ಟಿ ಸ್ವಲ್ಪ ಗಡ್ಡವನ್ನು ಬಿಟ್ಟಿದ್ದು ಆಕಾಶ ನೀಲಿ ಬಣ್ಣದ ತುಂಬುತೊಳಿನ ಟಿ.ಶರ್ಟ ಧರಿಸಿದ್ದು, ಮುಂದೆ ಮೋಟಾರ ಸೈಕಲ್ ನಡೆಸುತ್ತಿದ್ದವನ ಚಹರೆ ಗುರುತು ಆಘಾತದಲ್ಲಿದ್ದ ಫಿರ್ಯಾದಿಗೆ ಗೊತ್ತಾಗಿರುವುದಿಲ್ಲಾ, ಇನ್ನೊಂದು ಮೋಟಾರ ಮೋಟಾರ ಸೈಕಲ್ ಮೇಲೆ ಇಬ್ಬರು ವ್ಯಕ್ತಿಗಳು ಅವನ ಹಿಂದೆ ಜೋರಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದು, ಆಗ ಅದೇ ಓಣಿಯ ಅಮಜದ್ ತಂದೆ ಗಫರಖಾನ್, ಹುಲೆಪ್ಪಾ ತಂದೆ ವೆಂಕಟರಾವ ಸಾಳೆ ಹಾಗು ಹಣಮಂತ ತಂದೆ ನಾಮದೇವ ಕೋಳೆಕರ್ ಇವರೆಲ್ಲರು ಕೂಡಿ ಬೆನ್ನು ಹತ್ತಿದರು ಸಿಗದೆ ಎರಡು ಮೋಟಾರÀ ಸೈಕಲಗಳ ಮೇಲೆ ಕುಳಿತ ಹುಡುಗರು ಜೋಜನಾ ಕಡೆಗೆ ಓಡಿ ಹೋಗಿರುತ್ತಾರೆ, ಫಿರ್ಯಾದಿಯವರ 4 ತೊಲೆಯ ಬಂಗಾರ ಗಂಟನ ಅ.ಕಿ 1,20,000/- ಆಗಬಹುದು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.