ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-04-2020

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 30/2020 ಕಲಂ 328, 273 ಐಪಿಸಿ ಕಲಂ 32 ಕೆಇ ಕಾಯ್ದೆ:-

ದಿನಾಂಕ: 14/04/2020 ರಂದು 0700 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ  ಅಳವಾಯಿ ಹರಿವಾಡಿ ರೋಡ ಫರೀದ ಸಕ್ಕರಿಗಂಜ ದಗರ್ಾ ರೋಡಿಗೆ ಇಬ್ಬರೂ ವ್ಯಕ್ತಿಗಳು ಕಳ್ಳಭಟ್ಟಿ  ಸಾರಾಯಿ ಇಟ್ಟುಕೊಂಡು ಮಾರಾಟಾ ಮಾಡುತ್ತಿದ್ದಾರೆ ಅಂತ ಖಚತಿ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಅಳವಾಯಿ ಗ್ರಾಮದಿಂದ ಹರಿವಾಡಿ ರೋಡಿಗೆ ಫರೀದ ಸಕ್ಕರಿಗಂಜ ದಗರ್ಾ ರೋಡಿನ  ಮಾರ್ಗವಾಗಿ ಹೋಗುವಾಗ ಅಲ್ಲಿ ಒಂದು ಬೇವಿನ ಮರದ ಕೆಳಗೆ ಅಂದಾಜು 10 ಲೀಟರ ಸಾಮಥ್ರ್ಯ ವುಳ್ಳ ಒಂದು ಪ್ಲಾಸ್ಟಿಕ ಕ್ಯಾನ  ಇಟ್ಟುಕೊಂಡು ಇಬ್ಬರೂ ವ್ಯಕ್ತಿಗಳು  ಸಾರಾಯಿ ಮಾರಾಟ ಮಾಡುತ್ತ  ಕುಳಿತ್ತಿದ್ದು ಅವರ ಮುಂದೆ ಇಬ್ಬರೂ ಮೂವರು ಜನರು ನಿಂತ್ತಿದ್ದು    ಪೊಲೀಸ ಜೀಪ ನೋಡಿ ನಿಂತ ವ್ಯಕ್ತಿಗಳೂ ಓಡಿಹೋಗಿದ್ದು  ದಾಳಿ ಮಾಡಿ ಹಿಡಿದುಕೊಂಡಿದ್ದು ಇವರಲ್ಲಿ  ಪ್ಲಾಸ್ಟಿಕ ಕ್ಯಾನನ್ನು ಹಾಗೂ ಇನ್ನೋಬ್ಬನು ಸ್ಟೀಲ್ ಗ್ಲಾಸನ್ನು ತಮ್ಮ ತಮ್ಮ ಕೈಗಳಲ್ಲಿ ಹಿಡಿದುಕೊಂಡು  ಕುಳಿತ್ತಿದ್ದು  ಅವರ ಹೆಸರು ಮತ್ತು  ವಿಳಾಸ ವಿಚಾರಿಸಿದಾಗ ಅವರಲ್ಲಿ 1.ರಾಜು @ ರಾಜಕುಮಾರ ತಂದೆ ವಿಶ್ವನಾಥ ಪರಶೆಟ್ಟೆ 40 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಸಾ: ಬೊಳೆಗಾಂವ ತಾ: ದೇವಣಿ ಜಿಲ್ಲಾ ಲಾತೂರ(ಎಮ್.ಹೆಚ್) ಇದ್ದು  ಇವನ ಕೈಯಲ್ಲಿ ಅಂದಾಜು 10 ಲೀಟರ ಸಾಮಥ್ರ್ಯ ವುಳ್ಳ ಪ್ಲಾಟಿಕ ಕ್ಯಾನಲ್ಲಿ ಅಂದಾಜು 5 ಲೀಟರದಷ್ಟು ಕಳ್ಳಭಟ್ಟಿ ಸರಾಯಿ ಇರುತ್ತದೆ. ಇವನಿಗೆ ಕ್ಯಾನನಲ್ಲಿದ್ದ ವಸ್ತುವಿನ ಬಗ್ಗೆ ವಿಚಾರಿಸಿದಾಗ ಇದು ಮತ್ತು ಬರಿಸುವ ಕಳ್ಳಭಟ್ಟಿ ಸಾರಾಯಿ ಇರುತ್ತದೆ ಅಂತ ಹೇಳಿರುತ್ತಾನೆ.  ನಂತರ ಪಂಚರ ಸಮಕ್ಷಮ ಇವನ ಅಂಗ ಜಡ್ತಿ ಮಾಡಲ ಇವನ ಬಳಿ 100/- ರೂ ಮುಖಬೆಲೆಯ 03 ನೋಟ್ಟುಗಳು ಒಟ್ಟು 300/- ರೂ ಇದ್ದುವು ಇವನ ಬಳಿ ಇವುಗಳ ಬಗ್ಗೆ ಕೇಳಿದಾಗ ಇವನು ಇದನ್ನು ಕಳ್ಳಭಟ್ಟಿ ಮಾರಾಟದಿಂದ ಮಾರಿದ್ದರಿಂದ ಬಂದ ಹಣ ಇರುತ್ತದೆ ಅಂತ ತಿಳಿಸಿರುತ್ತಾನೆ. ಇವನಿಗೆ ಓಡಿ ಹೋದ ಜನರ ಬಗ್ಗೆ ಕೇಳಿದಾಗ ಸದರಿಯವನು ಅವರು ಕಳ್ಳಭಟ್ಟಿ ಖರಿದೀಸಲು ಬಂದ ಸಾರ್ವಜನಿಕರು ಇರುವುದಾಗಿ ಹೇಳಿರುತ್ತಾನೆ. ನಂತರ ಇನ್ನೋಬ್ಬ ವ್ಯಕ್ತಿಗೆ ವಿಚಾರಣೆ ಮಾಡಲು ಅವನು ತನ್ನ ಹೆಸರು 2. ಮಾಣಿಕ ತಂದೆ ಮಾರುತಿ ಧೋತ್ರೆ 62 ವರ್ಷ ಜಾ: ಎಸ್.ಸಿ ಮಾದಿಗ ಉ: ಕೂಲಿ ಕೆಲಸ ಸಾ:ಬೊಳೆಗಾಂವ ತಾ: ದೇವಣಿ ಜಿಲ್ಲಾ ಲಾತೂರ(ಎಮ್.ಹೆಚ್)  ಅಂತ ಹೇಳಿರುತ್ತಾರೆ. ನಂತರ ಈತನ ಕೈಯಲ್ಲಿದ್ದ ಸ್ಟೀಲ್ ಗ್ಲಾಸ ಬಗ್ಗೆ ವಿಚಾರಿಸಲು  ಇದು ಒಂದು ಗ್ಲಾಸಗೆ 10/- ರೂ ಯಂತೆ ಕಳ್ಳ ಭಟ್ಟಿ ಮಾರಲು ಬಳಸಲಾಗುತ್ತಿದ್ದು ಗ್ಲಾಸ ಇರುತ್ತದೆ ಅಂತ ಹೇಳಿದ್ದು, ಪಂಚರ ಸಮಕ್ಷಮ ಈತನ ಅಂಗ ಜಡ್ತಿ ಮಾಡಲು ಇವನ ಬಳಿ 50/-ರೂ  ಮುಖಬೆಲೆಯ ಎರಡು ನೋಟುಗಳು ಒಟ್ಟು 100/- ಮತ್ತು 10/- ರೂ ಮುಖಬೆಲೆಯ 06 ನೋಟುಗಳು ಒಟ್ಟು 60/- ಹೀಗೆ 160/- ರೂ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 27/2020 ಕಲಂ 87 ಕೆಪಿ ಕಾಯ್ದೆ :

ದಿನಾಂಕ 14/04/2020 ರಂದು 1515 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಕರ್ತವ್ಯದ ಮೇಲೆ ಇದ್ದಾಗ  ಸಂತಪೂರ ಗ್ರಾಮದ ಭವಾನಿ ಮಂದಿರ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೇಲವರು ಕುಳಿತು ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿದ್ದ ಮೇರೆಗೆ ಸಿಬ್ಬಂದಿಯೊಂದಿಗೆ ಸಂತಪೂರ ದಿಪಾಲಯದ ಶಾಲೆಯ ಹಿಂದೆ  ಹೋಗಿ 1530 ಗಂಟೆಗೆ ಈದಗಾದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ದೀಪಾಲಯ ಶಾಲೆಯ ಹಿಂದೆ ಮರೆಯಾಗಿ ನಿಂತು ನೋಡಲು ಕೇಲವು ಜನರು ಗೋಲಾಗಿ ಕುಳಿತು ಇಸ್ಪಟ ಎಲೆಗಳಿಂದ ಅಂದರ ಬಾಹಾರ ನಸಿಬಿನ ಜೂಜಾಟ ಆಡುತ್ತಿದ್ದಾಗ ಖಚಿತ ಪಡಿಸಿಕೊಂಡು ಅವರ ಮೇಲೆ ದಿನಾಂಕ 14/04/2020 ರಂದು 1600 ಗಂಟೆಗೆ ದಾಳಿ, ಮಾಡಿ ಆರೋಪಿತರಾದ 1) ಇರಶಾದ ತಂದೆ ಜಾಕಿರಮಿಯ್ಯಾ ಖಾನ ವ/ 20 ವರ್ಷ ಜಾ/ ಮುಸ್ಲಿಂ ಉ/ ಡ್ರೈವರ ಸಾ/ ಸಂತಪೂರ ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 150/- ರೂ ಹಣ ಸಿಕ್ಕಿದ್ದು 2) ಆರಿಫ್ ತಂದೆ ಇಸ್ಮಾಯಿಲ್ ಶಾ ವ. 25 ವರ್ಷ ಜಾ/ ಮುಸ್ಲಿಂ ಉ. ಕೂಲಿ ಸಾ/ ಸಂತಪೂರ ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 100 /- ರೂ ಹಣ ಸಿಕ್ಕಿದ್ದು. 3) ನಾಗಪ್ಪಾ ತಂದೆ ತುಕಾರಾಮ ಮೇತ್ರೆ ವ/ 20 ವರ್ಷ ಜಾ/ ಎಸ್,ಸಿ ಮಾದಿಗ ಉ/ ಕೂಲಿ ಸಾ/ ಸಂತಪೂರ ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 250/- ರೂ ಹಣ ಸಿಕ್ಕಿದ್ದು. 4) ಅಶೋಕ ತಂದೆ ಮೋಗಲಪ್ಪಾ ಆಳೆ ವ/ 40 ವರ್ಷ ಜಾ/ ಎಸ್,ಸಿ ಮಾದಿಗ ಉ/ ಕೂಲಿ ಸಾ/ ಸಂತಪೂರ ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 150/- ರೂ ಹಣ ಸಿಕ್ಕಿದ್ದು 5) ಕಲ್ಲಪ್ಪಾ ತಂದೆ ನಾಗಪ್ಪಾ ಮೇತ್ರೆ ವ/ 45 ವರ್ಷ ಜಾ/ ಎಸ್,ಸಿ ಮಾದಿಗ ಉ/ ಕೂಲಿ ಸಾ/ ಸಂತಪೂರ ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 350/- ರೂ ಹಣ ಸಿಕ್ಕಿದ್ದು ಹಾಗೂ ಎಲ್ಲರ ಮಧ್ಯ ಒಟ್ಟು 100/-ರೂ. ಹಣ ಹಾಗೂ ಮಧ್ಯದಲ್ಲಿದ್ದ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

 ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 33/2020 ಕಲಂ 270, 353, 504 ಜೊತೆ 34 ಐಪಿಸಿ :

ದಿನಾಂಕ 14/04/2020 ರಂದು 1600 ಗಂಟೆಗೆ ಶ್ರೀಮತಿ ರೇಣುಕಾ ತಂದೆ ಬಲದೇವಸಿಂಗ ವಯ 32 ವರ್ಷ ಜ್ಯಾತಿ ಮರಾಠಾ ಉ// ಕಿರಿಯ ಆರೋಗ್ಯ ಸಹಾಯಕಿ (ಮಹಿಳಾ) ಪ್ರಾಥಮಿಕ ಆರೋಗ್ಯ ಕೇಂದ್ರ ಹೋಳಸಮುದ್ರ ಇವರು ಠಾಣೆಗೆ ಹಾಜರಾಗಿ ತನ್ನದೊಂದು ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನಂದರೆ  ದಿನಾಂಕ 13/04/2020 ರಂದು ಶ್ರೀ ಶ್ರೀಕಾಂತ ತಂದೆ ಸುರ್ಯಕಾಂತ ಹೆಡಗಾಪೂರೆ ಮತ್ತು ಪ್ರಿಯಂಕಾ ಗಂಡ ಶ್ರೀಕಾಂತ ರವರು ಹೈದ್ರಾಬಾದದಿಂದ ಸಾವಳಿ ಗ್ರಾಮಕ್ಕೆ ಬಂದಿದ್ದಾಗ ಅವರನ್ನು ಪರೀಶೀಲಿಸಿದ್ದಾಗ ಸಾಮನ್ಯಕಿಂತ ಹೆಚ್ಚಿನ ಜ್ವರದಿಂದ ಬಳಲುತ್ತಿದ್ದು ಮತ್ತು ಅವರಿಗೆ ಜ್ವರ ಪರಿಕ್ಷೆ ಮಾಡಲು ಸಮುದಾಯ ಆರೋಗ್ಯಕೇಂದ್ರ ಕಮಲನಗರಕ್ಕೆ ಕಳುಹಿಸಿದ್ದೇವೆ ಮತ್ತು 14 ದಿನ ಗೃಹ ಬಂಧನ ವಿರುವಂತೆ ಸೂಚಿಸಿದ್ದರು ಅವರು ದಿನಾಂಕ 14/04/2020 ರಂದು ಬೆಳಿಗ್ಗೆ 1130 ಗಂಟೆಗೆ ಹೊರಗೆ ಹೊಗಿ ನೀರು ತುಂಬುತ್ತಿದ್ದರು ಆಗ ಆಶಾಕಾರ್ಯಕರ್ತೆಯರು ಹೊರಗೆ ಬರಬಾರದೆಂದು ತಿಳಿ ಹೇಳಿದ್ದಾಗ ಅವರಿಗೆ ಅವಾಚ್ಯಶಬ್ದಗಳಿಂದ ನಿಂದಿಸಿದ್ದರು ಈ ಘಟನೆಯನ್ನು ಡಾ// ಅನೀಲಕುಮಾರ ರಾಯಿಪಳ್ಳಿ ವೈದ್ಯಾಧಿಕಾರಿಗಳು ಹಾಗು ಫಿರ್ಯಾದಿ ಸಾವಳಿ ಗ್ರಾಮಕ್ಕೆ ಹೊಗಿ ಗೃಹಬಂದನದಲ್ಲಿರುವ ಶ್ರೀ ಶ್ರೀಕಾಂತ ತಂದೆ ಸುರ್ಯಕಾಂತ ಹೆಡಗಾಪೂರೆ ಮತ್ತು ಪ್ರಯಂಕಾ ಗಂಡ ಶ್ರೀಕಾಂತ ಅವರನ್ನು ಭೇಟ್ಟಿ ನೀಡಿದ ಸಂಧರ್ಭದಲ್ಲಿ ಶ್ರೀ ಶ್ರೀಕಾಂತ , ಶ್ರೀ ಸುರ್ಯಕಾಂತ ತಂದೆ ಹಣಮಂತ, ಪ್ರಿಯಂಕಾ ಗಂಡ ಶ್ರೀಕಾಂತ ಮತ್ತು ಸಂಗಮ್ಮಾ ಗಂಡ ಸುರ್ಯಕಾಂತ ಹೆಡಗಾಪೂರೆ ಇವರು 4 ಜನ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುವುದಕ್ಕೆ ಪ್ರಯತ್ನಪಟ್ಟಿದ್ದಾರೆ ಇದನ್ನು ಕರ್ತವ್ಯದಲ್ಲಿ ಅಡ್ಡಿ ಪಡಿಸಿದ್ದಾರೆ.  ಅಂತಾ ನೀಡಿದ್ದ ದೂರಿನ ಸಾರಾಂಶದ ಮೇರೆಗೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.