ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-06-2020

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 26/2020 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್.ವಿ ಕಾಯ್ದೆ :-

ದಿನಾಂಕ 13/06/2020 ರಂದು 1500 ಗಂಟೆಗೆ ಶಿವಲೀಲಾ ಗಂಡ ವಿಜಯಕುಮಾರ ಪೊಲೀಸ್ ಪಾಟೀಲ್ ಸಾ|| ಕೊಳಾರ (ಕೆ) ಗ್ರಾಮ ತಾ|| ಜಿ|| ಬೀದರ ರವರು ಖುದ್ದಾಗಿ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಗೆ ಬಸವರಾಜ ವಯ|| 15 ವರ್ಷ,ಮಲ್ಲಿಕಾರ್ಜುನ್ ವಯ|| 13 ವರ್ಷ ಅಂತಾ ಇಬ್ಬರೂ ಗಂಡು ಮಕ್ಕಳಿದ್ದು,  ದಿನಾಂಕ 13/06/2020 ರಂದು ಮುಂಜಾನೆ ಫಿರ್ಯಾದಿ ರವರು ತನ್ನ ಪತಿಯವರಾದ ವಿಜಯಕುಮಾರ ಪೊಲೀಸ್ ಪಾಟೀಲ್ ರವರೊಂದಿಗೆ ಹೀರೋ ಹೊಂಡಾ ಸ್ಪೆಲಂಡರ್ ಪ್ಲಸ್ ಮೋಟಾರ್ ಸೈಕಲ್ ನಂಬರ ಕೆಎ-38/ಎಲ್ – 4037 ನೇದರ ಮೇಲೆ ಕೊಳಾರ (ಕೆ) ಗ್ರಾಮದಿಂದ  ಹೊಲಕ್ಕೆ ಹೊಗಿದ್ದು ಮದ್ಯಾಹ್ನ 1: 45 ಗಂಟೆಯ ಸುಮಾರಿಗೆ   ವಿಜಯಕುಮಾರ ಅವರು ತಮ್ಮ ಮೋಟಾರ್ ಸೈಕಲನ್ನು ಕೆಎ-38/ಎಲ್ -4037 ನೇದರ ಮೇಲೆ ಕಿರಾಣಿ ತರುತ್ತೆನೆ ಅಂತಾ ಹೇಳಿ ಹೊಲದಿಂದ ಭಾಲ್ಕಿ ರೋಡ್ ಮುಖಾಂತರ ಬೀದರಕ್ಕೆ ಹೋದರು.ನಂತರ ಮದ್ಯಹ್ನ 2: 15 ಗಂಟೆಯ ಗ್ರಾಮದ ಅನೀಲ ತಂದೆ ಮಾಣಿಕಪ್ಪಾ ಕೋಟೆ ರವರು ನನಗೆ ಫೋನ್ ಮಾಡಿ ಭಾಲ್ಕಿ ಬೀದರ ರೋಡಿನ ಲಾಲಬಾಗ ಹತ್ತಿರ ನಾತಾಸಿಂಗ್ ಪೀರ್ ದರ್ಗಾದ ಹತ್ತಿರ ನಿಮ್ಮ ಗಂಡ ವಾಹನ ಅಪಘಾತದಲ್ಲಿ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ ತಕ್ಷಣ   ಘಟನಾ ಸ್ಥಳಕ್ಕೆ ಹೋಗಿ ನೋಡಲು ಫಿರ್ಯಾದಿ ಪತಿ ವಿಜಯಕುಮಾರ ಪೊಲೀಸ್ ಪಾಟೀಲ್ ರವರ ತಲೆಗೆ ಭಾರಿ ರಕ್ತಗಾಯ, ಮುಖದ ಮೇಲೆ ಭಾರಿ ರಕ್ತಗಾಯ, ಮತ್ತು ಗುಪ್ತಗಾಯ, ಎರಡು ಕೈಗಳಿಗೆ ಮತ್ತು ಕಾಲುಗಳಿಗೆ ತರಚಿದ ಗಾಯಗಳಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.   ವಿಜಯಕುಮಾರ ರವರು ತಮ್ಮ ಹೀರೋ ಹೊಂಡಾ ಸ್ಪೆಲಂಡರ್ ಪ್ಲಸ್ ಮೋಟಾರ್ ಸೈಕಲ್ ನಂಬರ ಕೆಎ-38/ಎಲ್ – 4037 ನೇದರ ಮೇಲೆ ನನ್ನ ಮುಂದುಗಡೆ ಬೀದರ ಕಡೆಗೆ ಹೊಗುತ್ತಿದ್ದು ಭಾಲ್ಕಿ ಬೀದರ ರೋಡಿನ ಲಾಲಬಾಗ ನಾತಸಿಂಗ್ ಪೀರ ದರ್ಗಾದ ಹತ್ತಿರ ಬಂದಾಗ ಎದರುಗಡೆಯಿಂದ ಬೀದರ ಕಡೆಯಿಂದ ಲಾರಿ ನಂಬರ ಎಪಿ-04/ವಾಯ್ – 3375 ನೇದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಮೋಟಾರ್ ಸೈಕಲ್ ಗೆ ಎದರುಗಡೆಯಿಂದ ಡಿಕ್ಕಿಪಡಿಸಿದ್ದರಿಂದ ವಿಜಯಕುಮಾರ ರವರು ಮೋಟಾರ ಸೈಕಲದೊಂದಿಗೆ ಕೆಳಗೆ ಬಿದ್ದಾಗ ಅವರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/2020 ಕಲಂ 174 ಸಿಆರ್.ಪಿ.ಸಿ:-

ದಿನಾಂಕ 13/06/2020 ರಂದು 09:30  ಗಂಟೆಗೆ ಬರೂರು ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಿ.ಮಹಮ್ಮದ್ ಮುಫಾಮ್ ತಂದೆ ಮೊಹಿಯೋದ್ದಿನ್ ವಯ||39 ಜಾತಿ|| ಮುಸ್ಲಿಂ  ಸಾ|| ಬರೂರ ರವರು ಠಾಣೆಯಲ್ಲಿ ಹಾಜರಾಗಿ ಒಂದು ದೂರು ಅರ್ಜಿ ನೀಡಿದ್ದು, ದೂರ ಅರ್ಜಿಯ ಸಾರಾಂಶವೆನೆಂದರೆ  ಮುಂಜಾನೆ ಸಮಯ 09:00 ಗಂಟೆಗೆ ಶ್ರೀನಿವಾಸ್ ರೆಡ್ಡಿ ತಂದೆ ರಾಮರೆಡ್ಡಿ ಇವರು ದೂರವಾಣಿ ಮುಖಾಂತರ ನನಗೆ ತಿಳಿಸಿದ್ದೆನೆಂದರೆ ಬರೂರು ಬಸ್ ನಿಲ್ದಾಣದ ಹತ್ತಿರ ಒಬ್ಬ ಅಪರಿಚಿತ ಹೆಣ್ಣು ಮಗಳು ಅಂದಾಜು ವಯ|| 50-55 ವರ್ಷ  ಇವಳು ಎರಡು ಮೂರು ದಿವಸಗಳಿಂದ ಸಂಗಣ್ಣಾ ಹೋಟೆಲ್ ಹತ್ತಿರ ಮತ್ತು ಬಸ್ ನಿಲ್ದಾಣದ ಹತ್ತಿರ ಒಡಾಡುತ್ತಿದ್ದಳು. ಇವರು  ದಿನಾಂಕ: 13/06/2020 ರಂದು ಮುಂಜಾನೆ 09:00 ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾಳೆ ಅಂತಾ ಮಾಹಿತಿ ತಿಳಿಸಿದಾಗ ಫಿರ್ಯಾದಿ ಮತ್ತು ನರಸಿಂಹಲು ತಂದೆ ಶಿವಪ್ಪಾ, ಪ್ರೇಮ್ದಾಸ್ ತಂದೆ ರಾಮಪ್ಪಾ ರವರು ಹೋಗಿ ನೋಡಲಾಗಿ ಬರೂರು ಬಸ್ ನಿಲ್ದಾಣದ ಗಿಡದ ಹತ್ತಿರ ಮೃತ ದೇಹ ಕಂಡು ಬಂದಿರುತ್ತದೆ.ಇವಳಿಗೆ ನೋಡಲು ಯಾವುದೊ ಒಂದು ಖಾಯಿಲೆಯಿಂದ ಬಳಲಿ ಮೃತ ಪಟ್ಟಿದ್ದು  ಇರುತ್ತದೆ.  ಈ ಬಗ್ಗೆ ಈ ಸಾವಿನಲ್ಲಿ ಯಾವುದೇ ರೀತಿಯ ಸಂಶಯ   ಇರುವುದಿಲ್ಲ. ಇವಳು ಭಿಕ್ಷುಕಿ ಆಗಿದ್ದು ಇವಳು ವಾರಸುದಾರರು ಯಾರೂ ಕಂಡುಬಂದಿರುವುದಿಲ್ಲ. ಈ ಬಗ್ಗೆ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರು ಅರ್ಜಿ ಸಾರಾಂಶದ ಮೇರೆಗೆ ಯು.ಡಿ.ಅರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.