ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-03-2020

 ಬೀದರ ನೂತನ ನಗರ ಠಾಣೆ ಅಪರಾಧ ಸಂಖ್ಯೆ 37/2020 ಕಲಂ 379 ಐಪಿಸಿ :-

ದಿನಾಂಕ 13/03/2020  ರಂದು 2100 ಗಂಟೆಗೆ ಫಿರ್ಯಾದಿ ಶ್ರೀ. ನಿವರ್ತಿ ತಂದೆ ಅಮೃತ  ಕೋರೆ ವಯ:35 ವರ್ಷ ಜಾತಿ;ಮರಾಠ ಉ:ಡಿಜೇಲ ಆಪರೆಟರ ಕೆಲಸ ಸಾ/ಖಾಸೆಂಪೂರ ತಾ/ಬೀದರ  ಸಧ್ಯ ಯಲ್ಲಾಲಿಂಗ ಕಾಲೋನಿ ನೌಬಾದ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನಂದರೆ, ಫಿರ್ಯಾದಿಯ ಹೀರೊ ಸ್ಪ್ಲೆಂಡರ ಪ್ಲಸ್  ಮೋಟರ ಸೈಕಲ ನಂ ಕೆಎ-39-ಕ್ಯೂ-5312  ನೇದನ್ನು ದಿನಾಂಕ 07/03/2020  ರಂದು  ಮದ್ಯಾಹ್ನ 1400  ಗಂಟೆಯ ಸುಮಾರಿಗೆ  ಮೊಟರ ಸೈಕಲನ್ನು ನೌಬಾದನಲ್ಲಿ ಇರುವ ವೆಂಕಟೇಶ್ವರ ವೈನ ಶಾಪ ಮುಂದೆ ನಿಲ್ಲಿಸಿ, ವೈನ ಶಾಪ ಪಕ್ಕದಲ್ಲಿ ಇರುವ ಚೈನಿಸ್ ಫಾಸ್ಟ ಫುಡ ಅಂಗಡಿಗೆ ತಿಂಡಿ ತಿನ್ನಲು ಹೋಗಿ, ತಿಂಡಿ ತಿಂದ ನಂತರ 1430  ಗಂಟೆಯ ಸುಮಾರಿಗೆ ಮರಳಿ ಬಂದು ನೋಡಿದಾಗ ನನ್ನ ಮೊಟರ ಸೈಕಲ ನಾನು ಇಟ್ಟಿದ್ದ ಜಾಗದಲ್ಲಿ ಇದ್ದಿರುವದಿಲ್ಲ. ಅಲ್ಲಿ ಅತ್ತ ಇತ್ತ ಹುಡುಕಾಡಿದ್ದು, ಅಲ್ಲಿ ಎಲ್ಲಿಯೂ ನನ್ನ ಮೊಟರ ಸೈಕಲ ಇದ್ದಿರುವದಿಲ್ಲ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಠಾಣೆ ಗುನ್ನೆ ನಂ 12/2020 ಕಲಂ 279, 337, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 13-03-2020 ರಂದು 1830 ಗಂಟೆಗೆ ಫಿರ್ಯಾದಿ ಶ್ರೀ ಸಂತೋಷರೆಡ್ಡಿ ತಂದೆ ಈರಪ್ಪಾ ಗಡವಂತಿ ವಯ 46 ವರ್ಷ ಜಾತಿ ರೆಡ್ಡಿ ಉದ್ಯೋಗ ಒಕ್ಕಲುತನ ಸಾ: ಇಸ್ಲಾಂಪೂರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸದರ ಸಾರಾಂಶವೆನೆಂದರೆ  ದಿನಾಂಕ 13-03-2020 ರಂದು  ರಾಜೇಶ್ವರ ಗ್ರಾಮದಲ್ಲಿ ವಾರದ ಸಂತೆ ಮಾಡಿ ತರಕಾರಿಯನ್ನು ತೆಗೆದುಕೊಂಡು ಮರಳಿ ಸಾಯಾಂಕಾಲ 1600 ಗಂಟೆಗೆ ಗ್ರಾಮಕ್ಕೆ ಹೋಗಲು ರಾಜೇಶ್ವರ ಗ್ರಾಮದ ಬಸವೇಶ್ವರ ಚೌಕ ಮುಂದೆ ಇಸ್ಲಾಂಪೂರ ಗ್ರಾಮಕ್ಕೆ ಹೋಗುವ ರಸ್ತೆ ಮೇಲೆ ಚೇತನ ತಂದೆ ಮಾಣಿಕ ಚೆಂಗಟೆ ಸಾ: ಇಸ್ಲಾಂಪೂರ ಇವರ ಬಜಾಜ ರಿಯರ ಆಟೋ ನಂಬರ ಕೆಎ-39-3846 ನೇದ್ದು ನಿಂತಾಗ ಇದರಲ್ಲಿ ನಾನು ಕುಳಿತುಕೊಂಡಿರುತ್ತೇನೆ ನಂತರ ಆಟೋದಲ್ಲಿ ನಮ್ಮೂರ ವಿಠಲ ತಂದೆ ಶಿವರಾಜ ವಾಡೇಕರ ವಯ 35 ವರ್ಷ, ಕಲ್ಯಾಣಿ ತಂದೆ ಚನ್ನಪ್ಪಾ ಅಮಂಗೆ ವಯ 75 ವರ್ಷ, ಮಸ್ತಾನ ತಂದೆ ಇಸ್ಲಾಯಿಲಸಾಬ ವಯ 12 ವರ್ಷ, ಸಮೀರಾ ತಂದೆ ಅಖೀಲಸಾ ಮುಲ್ಲಾ ವಯ 12 ವರ್ಷ ಎಲ್ಲರೂ ಕುಳಿತುಕೊಂಡಾಗ ಆಟೋ ಚಾಲಕನಾದ ಚೇತನ ಇತನು ಆಟೊವನ್ನು ಚಾಲು ಮಾಡಿ 1605 ಗಂಟೆಗೆ ರಾಜೇಶ್ವರ ಗ್ರಾಮದಿಂದ ಇಸ್ಲಾಂಪೂರ ಕಡೆಗೆ ಚಲಾಯಿಸಿಕೊಂಡು ಹೊರಟನು. ಅಂದಾಜು 1630 ಗಂಟೆಗೆ ಆಟೋ ಚಾಲಕನಾದ ಚೇತನ ಇತನು ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಇಸ್ಲಾಂಪೂರ ಶಿವಾರದ ಕಾಶೇಪ್ಪಾ ಚಾಂದೆ ಇವರ ಹೊಲದ ಮುಂದೆ ರಾಜೇಶ್ವರ ಇಸ್ಲಾಂಪೂರ ರೋಡಿನ ಮೇಲೆ ರೋಡಿನ ಬಲಬದಿಗೆ ಆಟೋ ಪಲ್ಟಿ ಮಾಡಿರುತ್ತಾನೆ. ನಂತರ ಚೇತನ ಇತನು ಅಲ್ಲಿಂದ ಓಡಿ ಹೋಗಿರುತ್ತಾನೆ. ಆಟೋ ಪಲ್ಟಿಯಾಗಿದರಿಂದ ಆಟೋದಲ್ಲಿ ಇದ್ದ ನನಗೆ ಮತ್ತು ವಿಠಲ ವಾಡೆಕರ ಇಬ್ಬರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ, ಕಲ್ಯಾಣಿ ಅಮಂಗೆ ಇವರಿಗೆ ನೋಡಲು ಇವರ ಬಲಗಡೆ ತಲೆಗೆ ಭಾರಿ ರಕ್ತಗಾಯ, ಬಲಭುಜಕ್ಕೆ ರಕ್ತಗಾಯ, ಬಲಗಡೆ ಹೊಟ್ಟೆಯ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ಮಸ್ತಾನ ತಂದೆ ಇಸ್ಲಾಯಿಲ ಇತನಿಗೆ ತಲೆಯಲ್ಲಿ ರಕ್ತಗಾಯವಾಗಿರುತ್ತದೆ. ಸಮೀರಾ ತಂದೆ ಅಖೀಲಮೀಯ್ಯಾ ಇವಳಿಗೆ ಬಲಗೈಗೆ ಗುಪ್ತಗಾಯವಾಗಿರುತ್ತದೆ.  ನಂತರ ಖಾಸಗಿ ಆಸ್ಪತೆಯಲ್ಲಿ ಕಲ್ಯಾಣಿ ಇವರಿಗೆ ಹಾಕಿಕೊಂಡು ಚಿಕಿತ್ಸೆ ಕುರಿತು ರಾಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ 108 ಅಂಬುಲೇನ್ಸದಲ್ಲಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ 1745  ಗಂಟೆಗೆ ಮೃತ ಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಠಾಣೆ ಅಪರಾಧ ಸಂಖ್ಯೆ:33/2020 ಕಲಂ 78 [3] ಕೆ.ಪಿ.ಎಕ್ಟ :-

ದಿನಾಂಕ:13/03/2020 ರಂದು 1000 ಗಂಟೆಗೆ  ಸುನೀಲ್ ಕುಮಾರ ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿ ರುವಾಗ ಬಸವ ಕಲ್ಯಾಣ ನಗರದ ಜಾಮೀಯಾ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಯನ್ನು ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ದಾಳಿಮಾಡಿ ಜಾಮೀಯಾ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 12:00 ಗಂಟೆಗೆ ಎಲ್ಲರು ಒಮ್ಮಲೆ ದಾಳಿಮಾಡಿದಾಗ ಮಲ್ಲಿಕಾಜರ್ುನ ಸಿಪಿಸಿ-1043 ರವರು ಹಿಡಿದು ಕೊಂಡಿದಾಗ ನಾನು ಪಿ.ಎಸ್.ಐ [ಕಾ&ಸು] ಸದರಿ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಮ್ಜದ್ ತಂದೆ ಅಶ್ರಫ್ ಖಾನ ಊಂಟವಾಲೆ ವಯಸ್ಸು//40 ವರ್ಷ ಜಾತಿ//ಮುಸ್ಲಿಂ ಉ//ಆಟೋ ಡ್ರೈವರ್ ಸಾ//ದೇಶಮುಖಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದಾಗ ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 5100/-ರೂ, ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್  ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/2020 ಕಲಂ 174 ಸಿ.ಆರ್.ಪಿ.ಸಿ :-

ದಿನಾಂಕ:13/03/2020 ರಂದು 1530 ಗಂಟೆಗೆ ಹೆಡಗಾಪೂರ ಗ್ರಾಮಕ್ಕೆ ಭೇಟಿ ನೀಡಿದ್ದು ಗ್ರಾಮದಲ್ಲಿ ಹಾಜರಿದ್ದ ಫಿರ್ಯಾದಿ ಶ್ರೀ ನೀಲಕಂಠ ತಂದೆ ವಿಶ್ವನಾಥ ಬಾವಗೆ ವ: 58 ವರ್ಷ ಉ: ಗ್ರಾಮ ಪಂಚಾಯತ ಸೆಕ್ರೆಟರಿ ಜಾ: ಲಿಂಗಾಯತ ಸಾ: ಠಾಣಾ ಕುಶನೂರ ಇವರನ್ನು ಭೇಟಿ ಮಾಡಿ ವಿಚಾರಣೆ ಮಾಡಿದ್ದು ಸದರಿಯವರು ಲಿಖಿತ ದೂರು ನೀಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿಯು ಹೆಡಗಾಪೂರ ಗ್ರಾಮ ಪಂಚಾಯತನಲ್ಲಿ ಸೆಕ್ರೆಟರಿ ಅಂತ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹೀಗಿರುವಲ್ಲಿ ದಿನಾಂಕ:12/03/2020 ರಂದು ಸಾಯಂಕಾಲ 1600 ಗಂಟೆ ಸುಮಾರಿಗೆ ನಿಟ್ಟೂರ(ಕೆ) ಗ್ರಾಮದ ಶಿವಾರದಲ್ಲಿ ಮಾಂಜ್ರಾ ನದಿಯ ಡಬರಿಯ ನಿರೀನಲ್ಲಿ ಒಬ್ಬ ಗಂಡು ವ್ಯಕ್ತಿಯ ಶವ ಇರುತ್ತದೆ ಅಂತ ಸುದ್ಧಿ ತಿಳಿದು ಫಿರ್ಯಾದಿ ಮತ್ತು ಹೆಡಗಾಪೂರ ಗ್ರಾಮದ ಶಿವಲಿಂಗ ತಂದೆ ಅಣೆಪ್ಪಾ ಚಿಟ್ಟೆ ಹಾಗು ಮಲ್ಲಪ್ಪಾ ತಂದೆ ಘಾಳೆಪ್ಪಾ ರಾಮಶೆಟ್ಟೆ ರವರುಗಳು ಕೂಡಿ ಮಾಂಜ್ರಾ ನದಿಯ ನೀರಿನ ಹತ್ತಿರ ಹೋಗಿ ನೋಡಲು ಆ ನೀರಿನ ದಡದಲ್ಲಿ ಒಬ್ಬ 25 ರಿಂದ 30 ವರ್ಷ ವಯಸ್ಸಿನ್ ಗಂಡು ವ್ಯಕ್ತಿಯ ಶವ ಇದ್ದು ಆ ಶವ ನೀರಿನ ದಡದಿಂದ ಮೇಲಕ್ಕೆ ತೆಗೆದು ನೋಡಲು ಶವದ ಮೇಲೆ ಕುತ್ತಿಗೆಯ ಮುಂಭಾಗದಲ್ಲಿ ಕಂದುಗಟ್ಟಿದ ಗಾಯ ಇದ್ದು, ತಲೆಯ ಮೇಲೆ ಎಡಭಾಗದಲ್ಲಿ ಭಾರೀ ರಕ್ತಗಾಯ ಆಗಿದ್ದು ಎರಡು ಕಣ್ಣುಗಳಿಗೆ ಪೆಟ್ಟಾಗಿ ಉಬ್ಬಿದಂತೆ ಕಂಡು ಬಂದಿರುತ್ತದೆ. ಮೃತ ವ್ಯಕ್ತಿಯು ದಿನಾಂಕ:11/03/2020 ರಂದು ರಾತ್ರಿ 8 ಗಂಟೆಯಿಂದ ದಿನಾಂಕ:12/03/2020 ರಂದು 0600 ಗಂಟೆಯ ಮಧ್ಯಾವಧಿಯಲ್ಲಿ ಮೃತ ಆಗಿರುವುದಾಗಿ ತಿಳಿದು ಬಂದಿರುತ್ತದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಕೊಂಡೆನು.