ದಿನಂಪ್ರತಿ  ಅಪರಾಧಗಳ ಮಾಹಿತಿ ದಿನಾಂಕ: 13-05-2020

ನೂತನ ನಗರ ಪೊಲೀಸ್ ಠಾಣೆ ಬೀದರ ಅಪರಾಧ ಸಂಖ್ಯೆ 53/2020 ಕಲಂ 279, 304 [ಎ] ಐಪಿಸಿ ಜೊತೆ 187  ಐ.ಎಮ್.ವಿ. ಕಾಯ್ದೆ :-

ದಿನಾಂಕ 12/05/2020 ರಂದು 0730 ಗಂಟೆಗೆ ಫಿರ್ಯಾದಿ ಬಸವರಾಜ ತಂದೆ ಶರಣಪ್ಪ ಖ್ಯಾಮ ವಯ 45 ವರ್ಷ ಜ್ಯಾತಿ ಲಿಂಗಾಯತ ಉ/ ಒಕ್ಕಲುತನ ಸಾ/ ಕೊಳಾರ[ಕೆ] ತಾ/ ಬೀದರ ರವರು ಖುದ್ದಾಗಿ ಪೊಲೀಸ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಸಾರಾಂಶವೆನೆಂದರೆ  ದಿನಾಂಕ 12/05/2020 ರಂದು ಫಿರ್ಯಾದಿಯು ನಸುಕಿನ ಜಾವದಲ್ಲಿ ಬಕಚೌಡಿದಲ್ಲಿರುವ ತಮ್ಮ ಹೊಲಕ್ಕೆ ಬಂದು ಹೊಲದಲ್ಲಿ ತೊಗರೆ ಕೊಯ್ಲು ಆಯ್ಯುತ್ತಿರುವಾಗ ಅಂದಾಜು 0600 ಗಂಟೆಯ ಸೂಮಾರಿಗೆ ನನ್ನ ಅಣ್ಣನಾದ ಅಶೋಕ ಈತನು ಕೂಡಾ ಹೊಲದಲ್ಲಿ ಕೆಲಸ ಮಾಡುವ ಕುರಿತು ಕೊಳಾರ[ಕೆ] ಗ್ರಾಮದಿಂದ ಬೀದರ ಹುಮನಾಬಾದ ರೋಡಿನ ಮೂಲಕ ಹೊಲಕ್ಕೆ ರೋಡಿನ ಎಡಬದಿಯಿಂದ ನಡೆದುಕೊಂಡು ಬರುತ್ತಿದ್ದಾಗ ಬಕಚೌಡಿ ಕಮಾನ ಬಸ್ ನಿಲ್ದಾಣದ ಹತ್ತಿರ ಎದುರುಗಡೆಯಿಂದ ಅಂದರೆ ಹುಮನಾಬಾದ ಕಡೆಯಿಂದ ಒಂದು ಬುಲೆರೋ ಗೂಡ್ಸ್ ವಾಹನ ನೇದ್ದರ ಚಾಲಕನು ತಾನು ಚಲಾಯಿಸುತ್ತಿರುವ ವಾಹನ ಅತಿ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ತನ್ನ ಸೈಡನ್ನು ಬಿಟ್ಟು ರೋಡಿನ ಬಲಭಾಗಕ್ಕೆ ಬಂದು ರೋಡಿನ ಗಟಾರದಿಂದ ನಡೆದುಕೊಂಡು ಬರುತ್ತಿದ್ದ ನನ್ನ ಅಣ್ಣನಿಗೆ ಡಿಕ್ಕಿ ಮಾಡಿದ್ದು ತಕ್ಷಣ ನಾನು ಹೊಲದಲಿಂದ ಓಡುತ್ತಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣನ ತಲೆಯ ಹಿಂಬದಿಯಲ್ಲಿ ಮುಂದಿನ ಭಾಗದಲ್ಲಿ ಹತ್ತಿ ಭಾರಿ ರಕ್ತಗಾಯವಾಗಿದ್ದು, ಹೊಟ್ಟೆಯ ಬಲಭಾಗಕ್ಕೆ ತರಚಿದ ರಕ್ತಗಾಯ, ಗುಪ್ತಗಾಯವಾಗಿರುತ್ತದೆ. ಮತ್ತು ಎಡಕಾಲಿನ ಹಿಮ್ಮಡಿ ಮುರಿದಿರುತ್ತದೆ.  ಅಣ್ಣನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ  ಕಾರಣ ತಕ್ಷಣವೇ 108 ವಾಹನಕ್ಕೆ ಫೋನ ಮಾಡಿ ಕರೆಯಿಸಿದ್ದು ಅಲ್ಲಿಗೆ ಬಂದ ಅವರು ನಿಮ್ಮ ಅಣ್ಣ ಮೃತಪಟ್ಟಿದ್ದಾರೆಂದು ತಿಳಿಸಿರುತ್ತಾರೆ. ಘಟನೆ ನಡೆದ  ನಂತರ ಗೂಡ್ಸ ವಾಹನ ಚಾಲಕನು  ಸ್ಥಳದಲ್ಲಿಯೇ ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ. ವಾಹನದ ನಂಬರ ನೋಡಲಾಗಿ ಕೆಎ56/5020 ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 21/2020 ಕಲಂ 279, 304 (ಎ) ಐಪಿಸಿ :-

ದಿನಾಂಕ 12/05/2020 ರಂದು 1000 ಗಂಟೆಗೆ ಶ್ರೀ ಗಣಪತಿ ತಂದೆ ಬಾಲಪ್ಪಾ ಮೇಲಿನದೊಡ್ಡಿ ಸಾ|| ಅಮದಾಲಪಾಡ ಗ್ರಾಮ ತಾ|| ಜಿ || ಬೀದರ ರವರು  ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ಇವರ ಮಗ ಮೋಹನ ಈತನು ಒಂದು ವಾರದಿಂದ ಕಪಾಲಾಪೂರ (ಜೆ) ಗ್ರಾಮದ ಅಜ್ಬರನೂತಾ ರವರ ಹತ್ತಿರ ಟ್ರಾಕ್ಟರ್ ಮೇಲೆ ಚಾಲಕನಾಗಿ ಕೆಲಸ ಮಾಡುತ್ತಿದ್ದು   ದಿನಾಂಕ 10/05/2020 ರಂದು ಮುಂಜಾನೆ ಟ್ರಾಕ್ಟರ್ ಚಲಾಯಿಸಲು ತಮ್ಮ ಮಾಲಿಕರ ಹತ್ತಿರ ಕಪಾಲಪೂರ (ಜೆ) ಗ್ರಾಮಕ್ಕೆ ಹೊಗಿರತ್ತಾನೆ. ದಿನಾಂಕ 11/05/2020 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಕಾಪಾಲಾಪೂರ (ಜೆ) ಗ್ರಾಮದ ಶಿವಕುಮಾರ ತಂದೆ ಗೋಲಾ ಅಗಸಿ ರವರು ಫೋನ್ ಮಾಡಿ ನಿಮ್ಮ ಮಗ ಮೋಹನ ಈತನು ನಂದಗಾಂವ ಮಾಳೆಗಾಂವ ರೋಡಿನ ಮುರಳಿಧರ ಎಕಲಾರಕರ ರವರ ಹೊಲದ ಹತ್ತಿರ ರೋಡಿನ ಮೇಲೆ ಟ್ರಾಕ್ಟರ್ ಪಲ್ಟಿ ಮಾಡಿ ಆತನು ಟ್ರಾಕ್ಟರ್ ಕೆಳಗಡೆ ಸಿಕ್ಕಿಬಿದ್ದು ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ನಾನು ಸಹ ಟ್ರಾಕ್ಟರದಲ್ಲಿದ್ದು ನನಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಅಂತಾ ತಿಳಿಸಿದ ತಕ್ಷಣ ನಾನು ಮತ್ತು ನನ್ನ ಹೆಂಡತಿ ಗಂಗಮ್ಮಾ ಮಕ್ಕಳಾದ ಮಿಲಿಂದ, ಕಾಶೀನಾಥ, ಮತ್ತು ನಮ್ಮ ಸಂಬಂದಿಯಾದ ಗೌತಮ ತಂದೆ ಪ್ರಕಾಶ ಮೇಲಿನದೊಡ್ಡಿ ರವರು ಘಟನೆ ಸ್ಥಳಕ್ಕೆ ಬಂದು ನೋಡಲು ನನ್ನ ಮಗ ಟ್ರಾಕ್ಟರ್ ಕೆಳಗಡೆ ಸಿಕ್ಕಿಬಿದ್ದು ಜೆಸಿಬಿಯಿಂದ ಮೋಹನ ಈತನಿಗೆ ಟ್ರಾಕ್ಟರ್ ಎತ್ತಿ ಹೊರಗಡೆ ತೆಗೆದು ನೋಡಲು ಅವನ ಎದೆಯ ಮೇಲೆ ಕಂದುಗಟ್ಟಿದ ಭಾರಿ ಗುಪ್ತಗಾಯ, ತಲೆಯ ಬಲಭಾಗದಲ್ಲಿ ರಕ್ತಗಾಯವಾಗಿ ಬಲಕಿವಿಯಿಂದ ರಕ್ತಸ್ರಾವವಾಗಿ ಮೋಹನ ಈತನು ಗಾಯಗೊಂಡ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಪಘಾತದಿಂದ ಟ್ರಾಕ್ಟರ್  ನಂ ನೋಡಲು ಕೆಎ-38/ಟಿ-1000 ನೇದ್ದಾಗಿದ್ದು ಶೀವಕುಮಾರ ಈತನಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತವೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂಖ್ಯೆ 66/2020 ಕಲಂ 379 ಐಪಿಸಿ:-

ದಿನಾಂಕ:12/05/2020 ರಂದು 2000 ಗಂಟೆಗೆ ಫಿರ್ಯಾದಿ ನವೀನಕುಮಾರ ತಂದೆ ಶಂಕರ ದಾಡಗಿ, ವಯ: 29, ಜಾತಿ: ಲಿಂಗಾಯತ, ಉ: ಖಾಸಗಿ ಕೆಲಸ, ಸಾ/ ಮದರಗಾಂವ, ತಾ/ ಹುಮನಾಬಾದ, ದೂ.ನಂ:9108700720 ರವರು ನೀಡಿದ ದೂರಿನ ಸಾರಾಂಶವೆನೆಂದರೆ,   ದಿನಾಂಕ:11/05/2020 ರಂದು ಮಧ್ಯಾನ 12.00 ಗಂಟೆಯ ಸುಮಾರಿಗೆ ಚಿಟಗುಪ್ಪಾ ಪಟ್ಟಣದಲ್ಲಿರುವ ಗಾಂಧಿ ವೃತ್ತದ ಹತ್ತಿರ ಸಾಯಿ ಕೃಷ್ಣಾ ಡ್ರೇಸೆಸ್ ಎದುರು ಫಿರ್ಯಾದಿ ತಮ್ಮನಾದ ನಿತೀಶ ಹೆಸರಿಗೆ ಇರುವ ಹೊಂಡ ಸಿಡಿ ಶೈನ್ ನಂ:ಕೆ.ಎ.38.ಎಸ್.8093 ಅಂ.ಕಿ. ರೂ.34 ಸಾವಿರ ಬೆಲೆಬಾಳುವುದನ್ನು ನಿಲ್ಲಿಸಿ ಬಟ್ಟೆ ಖರೀದಿಗೆ ಹೋಗಿ ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು  ವಿನಂತಿ ಅಂತಾ ಕೊಟ್ಟ ಫಿರ್ಯಾದಿ ದೂರಿನ ಸಾರಾಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.