ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-09-2020

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 76/2020, ಕಲಂ. 498(), 304(ಬಿ) ಜೂತೆ 149 .ಪಿ.ಸಿ ಮತ್ತು 3 & 4 ಡಿ.ಪಿ ಕಾಯ್ದೆ :-

ದಿನಾಂಕ 11-09-2020 ರಂದು ಫಿರ್ಯಾದಿ ಮಧುಕರ ತಂದೆ ಸಕಾರಾಮ ಪಾಚುಂದೆ ವಯ: 55 ವರ್ಷ, ಜಾತಿ: ಮರಾಠಾ, ಸಾ: ಹೊಕ್ರಾಣಾ ರವರು ತನ್ನ ಮಗಳಾದ ಅನೀತಾ ವಯ: 22 ವರ್ಷ ಇವಳು ಮದುವೆಯಾದಾಗಿನಿಂದ ಆರೋಪಿತರಾದ 1) ಪಾಂಡುರಂಗ ತಂದೆ ಬಾಬುರಾವ ಕಾಳೆ ವಯ: 23 ವರ್ಷ (ಗಂಡ), 2) ಸಂಗ್ರಾಮ ತಂದೆ ಬಾಬುರಾವ ಕಾಳೆ(ಭಾವ), 3) ಬಾಬುರಾವ ತಂದೆ ವಿಠಲರಾವ ಕಾಳೆ ವಯ: 60 ವರ್ಷ (ಮಾವ), 4) ಗಂಗಾಬಾಯಿ ಗಂಡ ಬಾಬುರಾವ ಕಾಳೆ ವಯ: 55 ವರ್ಷ (ಅತ್ತೆ), 5) ಸುಭಾಂಗಿ @ ಸುಮನ ಗಂಡ ವೆಂಕಟ ಗುಂಡುರೆ(ನಾದನಿ), 6) ಸುನೀತಾ ಗಂಡ ಗಂಗಾರಾಮ ಬಿರಾದಾರ (ನಾದನಿ), 7) ಅಶ್ವಿನಿ ಗಂಡ ಸಂಗ್ರಾಮ ಕಾಳೆ ಹಾಗೂ 8) ಬಾಲಾಜಿ ತಂದೆ ಸೋಪಾನರಾವ ಜಬಾಡೆ (ಗಂಡನ ಸೋದರತ್ತೆಯ ಮಗ) ಸಾ: ಎಲ್ಲರೂ ಗಣೇಶಪುರ (ಎ) ಇವರೆಲ್ಲರೂ ಫಿರ್ಯಾದಿಯವರ ಮಗಳಾದ ಅನಿತಾ ಇವಳಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ದೈಹಿಕ ಹಾಗು ಮಾನಸಿಕ ಕಿರುಕುಳ ನೀಡಿದ್ದು ಅಲ್ಲದೆ ಅಳಿಯ ಕೂಡಾ ಗ್ರಾಮದ ಬೇರೆ ಹೆಣ್ಣು ಮಕ್ಕಳ ಜೋತೆಯಲ್ಲಿ ಅನೈತಿಕ ಸಂಭಂಧ ಇಟ್ಟುಕೊಂಡಿದ್ದರಿಂದ ಗಂಡನ ಮನೆಯವರ ಕಿರುಕುಳ ತಾಳಲಾರದೆ ತಾನಾಜಿ ಕಾಳೆ ರವರರ ಹೋಲದಲ್ಲಿರುವ ಬಾವಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 76/2020, ಕಲಂ. 498(), 323, 504, 506 ಜೋತೆ 34 ಐಪಿಸಿ :-

ಫಿರ್ಯಾದಿ ಕೌಸರ ಬೇಗಂ ಗಂಡ ಎಂ.ಡಿ ದಸ್ತಗಿರ ಸಾಲಿವಾಲೆ ವಯ: 29 ವರ್ಷ, ಜಾತಿ: ಮುಸ್ಲಿಂ, ಸಾ: ಬಸವಂತಪುರ, ತಾ: ಚಿಂಚೋಳ್ಳಿ ರವರಿಗೆ 2017 ರಲ್ಲಿ ಬಸವಂತಪುರ ಗ್ರಾಮದ ಎಂ.ಡಿ ದಸ್ತಗಿರ ತಂದೆ ಪಾಶಾಮಿಯ್ಯಾ ಸಾಲಿವಾಲೆ ಇವರ ಜೊತೆ ಮದುವೆ ಮಾಡಿಕೊಟ್ಟಿದ್ದು ಸದ್ಯ 2 ವರ್ಷದ ಗಂಡು ಮಗು ಇರುತ್ತಾನೆ, ಮದುವೆಯಾಗಿ 1 ವರ್ಷ ಗಂಡನ ಮನೆಯಲ್ಲಿ ಚೆನ್ನಾಗಿ ಸಂಸಾರ ಮಾಡಿದ್ದು ನಂತರ ಗಂಡ ದಸ್ತಗೀರ ಈತನು ದಿನಾಲು ನೀನು ನೋಡಲು ಚೆನ್ನಾಗಿಲ್ಲ ನನ್ನ ಮನೆ ಬಿಟ್ಟು ಹೋಗು ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಮಾನಸೀಕ ಹಾಗೂ ದೈಹೀಕ ಕಿರುಕುಳ ನೀಡುತ್ತಾ ಬಂದಿದ್ದು, ಅವರಿಗೆ ಬೆಂಬಲವಾಗಿ ದಿನಾಲು ಅತ್ತೆ ಪಾಶಾಬೀ ಹಾಗೂ ಮಾವ ಪಾಶಾಮಿಯ್ಯಾ ಇವರು ಕೂಡ ಮಾನಸೀಕ ಹಾಗೂ ದೈಹೀಕ ಕಿರುಕುಳ ನೀಡಿ  ತು ಮೇರೆ ಬೇಟೆಕೋ ಬಹುತ್ ತಕಲೀಪ್ ದೇರಹಿ ಹೈ ತುಜೇ ಖಾನಾ ಬಾನಾನೇ ನಹೀ ಅತಾ ತು ಹಮಾರಾ ಘರ ಛೋಡಕೇ ಜಾ ಅಂತಾ ಅವಾಚ್ಯವಾಗಿ ಬೈದು ಹೊಡೆಯುವುದು ಮಾಡುತ್ತಾ ಬಂದಿದ್ದು ಇರುತ್ತದೆ, ಹೀಗಿರುವಲ್ಲಿ  ದಿನಾಂಕ 11-09-2020 ರಂದು ಫಿರ್ಯಾದಿಯು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿತರಾದ ಗಂಡ ದಸ್ತಗೀರ, ಮಾವ ಪಾಶಾಮಿಯ್ಯಾ ಹಾಗೂ ಅತ್ತೆ ಪಾಶಾಬೀ ಇವರು ನೀನು ನಿನ್ನ ತವರು ಮನೆಗೆ ಹೋಗು ಇಲ್ಲಿಯಾಕೆ ಉಳಿದಿರುವೆ ಇಲ್ಲಿಂದ ಜಾಗ ಖಾಲಿ ಮಾಡು ಅಂದಾಗ ಫಿರ್ಯಾದಿಯು ನಿರ್ಣಾ ಗ್ರಾಮದಲ್ಲಿದ್ದ ತನ್ನ ತಂದೆ ತಾಯಿಗೆ ಈ ವಿಷಯ ಕರೆ ಮಾಡಿ ತಿಳಿಸಿದಾಗ ತಂದೆ ಮತ್ತು ತಾಯಿ ಇಬ್ಬರೂ ಬಸವಂತಪುರ ಗ್ರಾಮಕ್ಕೆ ಬಂದಾಗ ಫಿರ್ಯಾದಿಯು ತನ್ನ 2 ವರ್ಷದ ಮಗು ಜೊತೆಯಲ್ಲಿ ನಿರ್ಣಾ ಗ್ರಾಮಕ್ಕೆ ಬಂದಿದ್ದು, ನಂತರ ಗಂಡ ಕರೆ ಮಾಡಿ ನೀನು ಯಾರಿಗೆ ಕೇಳಿ ತವರು ಮನೆಗೆ ಹೋಗಿರುವೆ ನಿನಗೆ ನಾನು ನಿರ್ಣಾ ಗ್ರಾಮಕ್ಕೆ ಬಂದು ನೋಡಿಕೊಳ್ಳುತ್ತೇನೆ, ನನ್ನ ಮಗುವಿಗೆ ಕರೆದುಕೊಂಡು ಹೋಗುತ್ತೇನೆ, ನೀನು ತವರು ಮನೆಯಲ್ಲಿ ಬಿದ್ದು ಸತ್ತು ಹೋಗು ಅಂತಾ ಕರೆ ಮಾಡಿದ್ದು ಇರುತ್ತದೆ, ನಂತರ ಸದರಿ ಆರೋಪಿತರು ಫಿರ್ಯಾದಿಯ ತವರು ಮನೆಗೆ ಬಂದು ಗಂಡ ತನ್ನ ಕೈಯಿಂದ ಬಲ ಕಪಾಳಿಗೆ ಜೋರಾಗಿ ಹೊಡೆದು ಗುಪ್ತಗಾಯ ಪಡಿಸಿ ನೀನು ಯಾರಿಗೆ ಕೇಳಿ ತವರು ಮನೆಗೆ ಬಂದಿದ್ದಿ ಇವತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಪುನ: ತನ್ನ ಕೈಯಿಂದ ಬೆನ್ನ ಮೇಲೆ ಒಂದೇ ಸಮನೇ ಮೂರು ಬಾರಿ ಬೆನ್ನಲ್ಲಿ ಹೊಡೆದು ಗುಪ್ತಗಾಯ ಪಡಿಸಿದ್ದು ಅಲ್ಲದೇ ಮಾವ ಕಿಸಕೋ ಪುಚಕರ ಆಯೀ ತೇರೆ ಮಾಕೇ ಘರಕೋ ತೇರೆಕೋ ಜಿಂದಾಗ ಘಾಡದುಂಗಾ ಅಂತಾ ಬೈದಿರುತ್ತಾನೆ, ಅತ್ತೆ ತೇರೆ ಬಾಪ್ ಕೇ ಘರಮೇ ಮರ್ಝಾ ಮೇರೆ ಪೋತರೇಕೋ ದೇ ಅಂತಾ ಮಗುವಿಗೆ ಎಳೆದುಕೊಂಡು ಹೋಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಠಾಣೆ ಅಪರಾಧ ಸಂ. 106/2020, ಕಲಂ. 379 ಐಪಿಸಿ :-

ದಿನಾಂಕ 16-08-2020 ರಂದು 2200 ಗಂಟೆಯಿಂದ  ದಿನಾಂಕ 17-08-2020 ರಂದು 0600 ಗಂಟೆಯ ಅವಧಿಯಲ್ಲಿ  ಆಟೊನಗರ ನೌಬಾದನಲ್ಲಿರುವ ಫಿರ್ಯಾದಿ ಗುಣವಂತ ತಂದೆ ವೀರಬಸಪ್ಪ ಸಾ: ನೌಬಾದ ಬೀದರ ರವರ ಮನೆಯ ಎದುರಿಗೆ ನಿಲ್ಲಿಸಿದ ಫಿರ್ಯಾದಿಯವರ ಹೀರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. KA-38/U-3019, ಚಾಸಿಸ್ ನಂ. MLBHAR087HHBG0222, ಇಂಜಿನ್ ನಂ. HA10AGHHB94365, ಮಾಡಲ್: 2017, ಬಣ್ಣ: ಸಿಲ್ವರ ಬಣ್ಣ ಹಾಗೂ ಅ.ಕಿ 25,000/- ರೂ ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 11-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 107/2020, ಕಲಂ. ಮಹಿಳೆ ಕಾಣೆ :-

ದಿನಾಂಕ 09-09-2020 ರಂದು ಫಿರ್ಯಾದಿ ನಸರಿನ್ ಬೇಗಂ ಗಂಡ ಎಮ್.ಡಿ ಇಸಾಖ ಸಾ: ಮಲ್ಕಾಪೂರ ಗ್ರಾಮ, ತಾ: ಬೀದರ ರವರ ಮಗಳಾದ ರಿಯಾಜ ಬಾನು ವಯ: 19 ವರ್ಷ ಇವಳ ಉಳಿತಾಯ ಖಾತೆ ತೆಗೆಯಲು ಮೂಲ ದಾಖಲಾತಿಗಳೊಂದಿಗೆ ತಮ್ಮ ಗ್ರಾಮದಿಂದ ಬೀದರ ನಗರಕ್ಕೆ ಕಾಮತ ಹೊಟೆಲ ಹತ್ತಿರ ಇರುವ ಇಂಡಿಯಾ ಬ್ಯಾಂಕಗೆ ಅಂದಾಜು 1500 ಗಂಟೆಗೆ ಬಂದು ಅಲ್ಲಿ ರಿಯಾಜ ಬಾನು ಇವಳು ಫಿರ್ಯಾದಿಗೆ ಬ್ಯಾಂಕಿನಲ್ಲಿ ಕೂಡಿಸಿ ಖಾತೆ ತೆರೆಯಲು ಬೇಕಾಗುವ ದಾಖಲಾತಿ ಝೆರಾಕ್ಷ ಮಾಡಿಕೊಂಡು ಬರುತ್ತೆನೆಂದು ಹೇಳಿ ಹೋದವಳು ಸಾಯಂಕಾಲ ಆದರೂ ಮರಳಿ ಬ್ಯಾಂಕಿನ ಕಡೆಗೆ ಬಂದಿರುವುದಿಲ್ಲಾ, ನಂತರ ಫಿರ್ಯದಿಯು ಅವಳಿಗೆ ಬೀದರ ನಗರದ ಎಲ್ಲಾ ಕಡೆಗೆ ಹುಡಕಾಡಿ, ಎಲ್ಲಾ ಸಂಬಂಧಿಕರಿಗೆ ಕರೆ ಮಾಡಿ ತನ್ನ ಮಗಳ ಬಗ್ಗೆ ವಿಚಾರಣೆ ಮಾಡಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ರಿಯಾಜ ಬಾನು ಇವಳ ವಿವರ 1) ಹೆಸರು: ರಿಯಾಜ ಬಾನು, 2) ತಂದೆ ಹೆಸರು: ಎಮ್.ಡಿ ಇಸಾಖಮಿಯ್ಯಾ, 3) ವಯ: 19 ವರ್ಷ, 4) ಎತ್ತರ: 5-2  ಫೀಟ, 5) ಚಹರೆ ಪಟ್ಟಿ: ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ, 6) ಧರಿಸಿದ ಬಟ್ಟೆಗಳು: ಒಂದು ಫಿಕಾ ಆಕಾಶ ಕಲರ ಬುರಖಾ, ಕೆಂಪು ಬಣ್ಣದ ಕಾರ್ಪ ಹಾಗೂ 7) ಮಾತನಾಡುವ ಭಾಷೆ: ಹಿಂದಿ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 35/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 11-09-2020 ರಂದು ಖಾಜಾನಗರ ಚಟನಳ್ಳಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಮತ್ತು ಕಲ್ಯಾಣ ಮಟ್ಕಾ ಎಂಬ ನಸೀಬಿನ ಮಟ್ಕಾ ಚೀಟಿ ನಡೆಸುತ್ತಿದ್ದಾನೆಂದು ಕೃಷ್ಣಕುಮಾರ ಪಿ.ಎಸ್.ಐ ಮನ್ನಳ್ಳಿ ಪೊಲೀಸ್ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಖಾಜಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿಂದುಗಡೆ ಮರೆಯಾಗಿ ನಿಂತು ನೋಡಲಾಗಿ ಖಾಜಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹತ್ತಿರ ಆರೋಪಿ ಮೋಸಿನ್ ಖಾನ ತಂದೆ ಮºೇಬೂಬ ಕಾನ್ ಕಮಠಾಣೆವಾಲೆ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಖಾಜಾ ನಗರ ಚಟನಳ್ಳಿ ಇತನು ಸಾರ್ವಜನಿಕರಿಗೆ ಬಾಂಬೆ ಮಟ್ಕಾ ನಸೀಬಿನ ಜೂಜಾಟ ಒಂದು ರೂಪಾಯಿಗೆ 80/- ಅಂತಲೂ ಮತ್ತು 10/- ರೂ. ಗೆ 800/- ರೂ. ಅಂತಾ ಹೇಳುತ್ತಾ ಸಾರ್ವಜನಿಕರಿಂದ ದುಡ್ಡು ಪಡೆದುಕೊಳ್ಳುತ್ತಾ ಅವರಿಗೆ ಮಟ್ಕಾ ಚೀಟಿ ಬರೆದುಕೊಡುತ್ತಾ ಅವರಿಂದ ಹಣ ಪಡೆದುಕೊಳ್ಳುತ್ತಿರುವಾಗ ಒಮ್ಮೇಲೆ ಆತನ ಮೇಲೆ ದಾಳಿ ಮಾಡಿ ಆತನಿಗೆ ಹಿಡಿದುಕೊಂಡಾಗ ಹಣ ಕೊಟ್ಟು ಮಟ್ಕಾ ಚೀಟಿ ಪಡೆಯುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಒಪಿತನ ಅಂಗ ಝಡ್ತಿ ಮಾಡಲಾಗಿ ಅವನ ಹತ್ತಿರ ಒಟ್ಟು 1180/- ರೂ. ನಗದು ಹಣ ಮತ್ತು 5 ಮಟ್ಕಾ ಚೀಟಿಗಳು, ಒಂದು ಬಾಲ್ ಪೆನ್ ಸಿಕ್ಕಿದ್ದು, ಸದರಿಯವುಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 65/2020, ಕಲಂ. 279, 337, 338 .ಪಿ.ಸಿ :-

ದಿನಾಂಕ 11-09-2020 ರಂದು ಫಿರ್ಯಾದಿ ವಿಷ್ಣುವರ್ಧನ ತಂದೆ ರವಿಕುಮಾರ, ವಯ: 21 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಬೇಮಳಖೇಡಾ, ಸದ್ಯ: ಬ್ಯಾಂಕ ಕಾಲೋನಿ, ಬೀದರ ರವರು ನರಸಿಂಹ ಝರನಾ ಕಡೆಗೆ ಹೋಗಿ ಬೀದರ ಕಡೆಗೆ ಬರುತ್ತಿರುವಾಗ ರವರ ಮುಂದೆ ಅಣ್ಣನಾದ ಜೈಸೂರ್ಯ ತಂದೆ ರವಿಕುಮಾರ, ವಯ: 24 ವರ್ಷ, ಇತನು ಮತ್ತು ಶಶಿಕಾಂತ ತಂದೆ ಶ್ರೀನಿವಾಸ, ವಯ: 22 ವರ್ಷ, ಸಾ: ಮಂಗಲಪೇಟ ಬೀದರ ಇಬ್ಬರು ಕೂಡಿ ಮೊಟಾರ ಸೈಕಲ ನಂ. ಕೆಎ-38/ಕೆ-0200 ನೇದರ ಮೇಲೆ ಮಲ್ಕಾಪೂರ ರಿಂಗ ರೋಡ ಕಡೆಯಿಂದ ಮಂಗಲಪೇಟ ಕಡೆಗೆ ಬರುತ್ತಿದ್ದು, ಅಣ್ಣ ಜೈಸೂರ್ಯ ಮೊಟಾರ ಸೈಕಲ ಹಿಂದೆ ಕುಳಿತ್ತಿದ್ದನು, ಶಶಿಕಾಂತ ಈತನು ಮೊಟಾರ ಸೈಕಲ ಚಲಾಯಿಸುತ್ತಿದ್ದನು, ಆರೋಪಿ 1) ಶಶಿಕಾಂತ ಈತನು ಮೊಟಾರ ಸೈಕಲನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ನರಸಿಂಹ್ ಝರನಾ ದೇವಸ್ಥಾನದ ಹತ್ತಿರದ ಕ್ರಾಸ ರೋಡ ದಾಟಿ ಮುಂದೆ ಬಂದಾಗ ಎದುರಿನಿಂದ ಅಂದರೆ ಮಂಗಲಪೇಟ ಕಡೆಯಿಂದ ನರಸಿಂಹ್ ಝರನಾ ಕಡೆಗೆ ಮೊಟಾರ ಸೈಕಲ ನಂ. ಕೆಎ-38/ಇ-2169 ನೇದ್ದರ ಚಾಲಕನಾದ ಆರೋಪಿ 2) ಮಹ್ಮದ ಮುತ್ತೇಬೀರ ತಂದೆ ಹುಸೇನ ಸಾಬ ಸಾ: ಮಲ್ಕಾಪೂರ ಇತನು ಸಹ ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಇಬ್ಬರು ಎದುರು ಬದುರು ಡಿಕ್ಕಿ ಮಾಡಿಕೊಂಡಿರುತ್ತಾರೆ, ಸದರಿ ಡಿಕ್ಕಿಯ ಪರಿಣಾಮ ಅಣ್ಣ ಜೈಸೂರ್ಯ ಈತನಿಗೆ ತಲೆಯಲ್ಲಿ ಭಾರಿ ರಕ್ತಗಾಯ, ಬಲಗಣ್ಣಿನ ಮೇಲೆ ರಕ್ತಗಾಯವಾಗಿ ಎಡ ಕಿವಿಯಿಂದ ರಕ್ತ ಬಂದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಶಶಿಕಾಂತ ಈತನಿಗೆ ಮುಖದ ಮೇಲೆ ರಕ್ತಗಾಯವಾಗಿರುತ್ತದೆ, ಮಹ್ಮದ ಮುತ್ತೇಬೀರ ಇತನ ಬಾಯಿಯ ಮೇಲೆ, ಬಲಗಣ್ಣಿನ ಕೆಳಗೆ ರಕ್ತಗಾಯ, ಮೂಗಿನ ಮೇಲೆ, ಬಲಗೈ ಮುಂಗೈ ಮೇಲೆ ಗುಪ್ತಗಾಯವಾಗಿರುತ್ತದೆ, ಆಗ ಫಿರ್ಯಾದಿಯು 108 ಅಂಬುಲೆನ್ಸಗೆ ಕರೆಯಿಸಿ ಗಾಯಗೊಂಡ ಎಲ್ಲರಿಗೂ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ  ಸಂ. 115/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 10-09-2020 ರಂದು ಬಸವಕಲ್ಯಾಣ ನಗರದ ಮಡಿವಾಳ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂವರು ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಸುನೀಲಕುಮಾರ ಪಿ.ಎಸ.ಐ [ಕಾ&ಸು] ಬಸವಕಲ್ಯಾ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಮಡಿವಾಳ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಮಡಿವಾಳ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಎಜಾಜಅಲಿ ತಂದೆ ಅಲಿಮೋದ್ದಿನ್ ಕಬಡಿ ವಯ: 29 ವರ್ಷ, ಜಾತಿ: ಮುಸ್ಲಿಂ, ಸಾ: ಮದಿನಾ ಕಾಲೋನಿ ಬಸವಕಲ್ಯಾಣ, 2) ಮುದಾಸಿರ ತಂದೆ ಅಬ್ದುಲ್ ಶೇಖ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ತಾಜ ಕಾಲೋನಿ ಬಸವಕಲ್ಯಾಣ ಹಾಗೂ 3) ಸೈಯದ ಖಾಜಾ ತಂದೆ ಖಾಷಿಂ ಗುತ್ತೇದಾರ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ದೇಶಮುಖ ಗಲ್ಲಿ ಬಸವಕಲ್ಯಾಣ ಇವರೆಲ್ಲರೂ ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 10,450/- ರೂ., 5 ಮಟಕಾ ಚಿಟಿಗಳು ಹಾಗೂ 3 ಬಾಲ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.