ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-01-2020

 

ಹುಲಸೂರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 01/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ನಿವರ್ತಿ ತಂದೆ ದೇವರಾಯ ಮೇತ್ರೆ, ವಯ: 45 ವರ್ಷ, ಜಾತಿ: ಕುರುಬ ಸಾ: ಬೇಟ ಬಾಲಕುಂದಾ ರವರ ಮಗನಾದ ಸಚೀನ ಈತನು ತಮ್ಮೂರ ಗಣೇಶ ತಂದೆ ಧನಾಜಿ ಬಿರಾದಾರ ರವರ ಹತ್ತಿರ ಕೂಲಿ ಕೆಲಸ ಮಾಡುತ್ತಾನೆ, ದಿನಾಂಕ 11-01-2020 ರಂದು ಸಚೀನ ಈತನು ತಮ್ಮೂರ ಅಶೋಕ ಮೊಳಕೇರೆ ರವರ ಮನೆಯ ಹತ್ತಿರ ನೀರಿನ ಮೋಟಾರ ವೈರ್ ಜೋಡಿಸುವಾಗ ಆಕಸ್ಮಿಕವಾಗಿ ವಿದ್ಯುತ ತಗಲಿ ಬಲಗೈ ತೋರು ಬೇರಳಿಗೆ ವಿದ್ಯುತ ಹತ್ತಿ ಕೆಳಗೆ ಬಿದ್ದಾಗ ತಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ, ಸಚೀನ ಈತನ ಸಾವಿನಲ್ಲಿ ಯಾರ ಮೇಲು ಯಾವುzೇ ರೀತಿಯ ಸಂಶಯ ಇರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 07/2020, ಕಲಂ. 279, 304(ಎ) ಐಪಿಸಿ :-

ದಿನಾಂಕ 11-01-2020 ರಂದು ಫಿರ್ಯಾದಿ ವಿಶಾಲ ತಂದೆ ಮನ್ಮತಪ್ಪಾ ಪಟ್ನೆ, ವಯ: 36 ವರ್ಷ, ಜಾತಿ: ಲಿಂಗಾಯತ, ಸಾ: ಧನ್ನೂರ, ತಾ: ಭಾಲ್ಕಿ, ಸದ್ಯ: ಹಾರೂರಗೇರಿ ಬೀದರ ರವರು ತಮ್ಮ ಮಾಲಿಕರಾದ ಸಚಿನ ತಂದೆ ಶರಣಬಸಪ್ಪಾ ಭಿಮಳ್ಳಿ, ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಗುರುನಗರ ಬೀದರ ರವರು ಮತ್ತು ಸಾಯಿ ಪ್ರಸಾದ ತಂದೆ ದೇವೆಂದ್ರಕುಮಾರ ಪಾಖಲ ರವರು ಕೂಡಿಕೊಂಡು ಚಿಕ್ಕಪೇಟ ಹತ್ತಿರ ಊಟ ಮಾಡಿಕೊಂಡು ಬೀದರ ಕಡೆಗೆ ಸಚಿನ ರವರು ತಮ್ಮ ಮೊಟಾರ ಸೈಕಲ ನಂ. ಕೆಎ-05/ಹೆಚ್.ಡಬ್ಲು-1111 ನೇದ್ದರ ಮೇಲೆ ಹಾಗೂ ಫಿರ್ಯಾದಿ ಮತ್ತು ಸಾಯಿ ಪ್ರಸಾದ ಫಿರ್ಯಾದಿಯ ವಾಹನದಲ್ಲಿ ಬರುತ್ತಿರುವಾಗ ಸಚಿನ ಈತನು ಬೀದರ ಜನವಾಡ ರೋಡದಿಂದ ಗುರುದ್ವಾರಾ ಬೈಪಾಸ ರಸ್ತೆ ಮೂಲಕ ಬೀದರಕ್ಕೆ ಬರುವಾಗ ಮಣಗೆ ಲೇ ಔಟ್ ಹತ್ತಿರ ತನ್ನ ಮೊಟಾರ ಸೈಕಲನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ, ವೇಗ ಹತೋಟಿಯಲ್ಲಿ ಇಟ್ಟುಕೊಳ್ಳದೆ ರಸ್ತೆ ಡಿವೈಡರಗೆ ಡಿಕ್ಕಿ ಮಾಡಿ, ಮೊಟಾರ ಸೈಕಲ ಸಮೇತ ಬಿದ್ದಿರುತ್ತಾನೆ, ಪರಿಣಾಮ ಆತನ ತಲೆಗೆ ಭಾರಿ ರಕ್ತಗಾಯವಾಗಿ, ಮೂಗಿನಿಂದ ಕಿವಿಯಿಂದ ರಕ್ತ ಬಂದಿದ್ದು, ಬಲಗೈ ಮೊಳಕೈ ಹತ್ತಿರ ಭಾರಿ ಗುಪ್ತಗಾಯ ಮತ್ತು ಬಲಗಾಲ ಮೊಳಕಾಲ ಕೆಳಗೆ ಮತ್ತು ಪಾದದ ಹತ್ತಿರ ರಕ್ತಗಾಯವಾಗಿರುತ್ತದೆ, ಹಿಂದೆ ಬರುತ್ತಿದ್ದ ಫಿರ್ಯಾದಿ ಮತ್ತು ಸಾಯಿ ಪ್ರಸಾದ ನೋಡಿ ಕೂಡಲೆ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೆ ಸಚಿನ ಇತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 08/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 11-01-2020 ರಂದು ಬಸವಕಲ್ಯಾಣ ನಗರದ ಮಡಿವಾಳ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಮಾರುತಿ ಎ.ಎಸ್.ಐ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಕರೆ ಮುಖಾಂತರ ಖಚಿತ ಬಾತ್ಮಿ ತಿಳಿದು ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮಡಿವಾಳ ಚೌಕ ಹತ್ತಿರ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಮಡಿವಾಳ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ದತ್ತು ತಂದೆ ಜಗನ್ನಾಥ ಬೋಕ್ಕೆ ವಯ: 30 ವರ್ಷ, ಜಾತಿ: ಎಸ್.ಟಿ ಟೋಕ್ರಿ ಕೋಳಿ, ಸಾ: ತ್ರಿಪುರಾಂತ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೇಲೆ ದಾಳಿ ಮಾಡಿ ಆರೋಪಿಗೆ ಹಿಡಿದುಕೊಂಡು, ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 530/- ರೂ., ಮತ್ತು 01 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿದ್ದು, ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.